Site icon Vistara News

CSK vs GT IPL 2023 Final Live Score : ಸತತವಾಗಿ ಸುರಿದ ಮಳೆ, ಪಂದ್ಯ ಸೋಮವಾರಕ್ಕೆ ಮುಂದೂಡಿಕೆ

IPL 2023 Final Dhoni, Hardik pandya

#image_title

ಅಹಮದಾಬಾದ್​: ಐಪಿಎಲ್​ 16ನೇ ಆವೃತ್ತಿಯ ಫೈನಲ್​ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಇರುವಂತೆಯೇ ಅಹಮದಾಬಾದ್​​ನಲ್ಲಿ ಜೋರು ಮಳೆಯಾಗಿತ್ತು. ರಾತ್ರಿ 11 ಗಂಟೆಯ ತನಕವೂ ಗುಡುಗು ಸಹಿತ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಿಕೆ ಮಾಡಲು ರೆಫರಿಗಳು ನಿರ್ಧರಿಸಿದರು. ಅದಕ್ಕಿಂತ ಮೊದಲು 9 ಗಂಟೆಯ ವೇಳೆಗೆ ಮಳೆ ಸಂಪೂರ್ಣ ನಿಂತಿದೆ. ಹೀಗಾಗಿ ಪಂದ್ಯ ಆರಂಭಕ್ಕೆ ಮೈದಾನದ ಸಿಬ್ಬಂದಿ ಸಜ್ಜಾಗುತ್ತಿದೆ. ಪೂರ್ಣ 20 ಓವರ್​​ಗಳ ತನಕ ಪಂದ್ಯವನ್ನು ಆಡಿಸಲು ಸುಮಾರು 10 ಗಂಟೆಯ ತನಕ ಸಮಯವಿದೆ. ಹೀಗಾಗಿ ಮೈದಾನ ಒಣಗಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.

ಈ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಹಾಲಿ ಚಾಂಪಿಯನ್​ ಗುಜರಾತ್​ ಜೈಂಟ್ಸ್​ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಕಾದಾಡಲಿವೆ. ಹಾಲಿ ಆವೃತ್ತಿಯಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದ್ದು ಜಿದ್ದಾಜಿದ್ದಿನ ಕಾದಾಟದ ನಿರೀಕ್ಷೆಯಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್​ ಎನಿಸಿಕೊಂಡಿರುವ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಲಿದೆ.

ಫೈನಲ್ ಪಂದ್ಯಕ್ಕೆ ಮೊದಲು ವರ್ಣರಂಜಿತ ಸಮಾರೋಪ ಸಮಾರಂಭಗಳು ನಡೆಯಲಿವೆ. ದೇಶ ವಿದೇಶದ ಹಲವಾರು ಗಣ್ಯರು ಹಾಗೂ ಜಗದ್ವಿಖ್ಯಾತ ಕಲಾವಿದರು ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಈ ಕ್ಷಣದ ವೀಕ್ಷಣೆಗಾಗಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರರಾಗಿ ಕುಳಿತಿದ್ದಾರೆ.

Sukhesha Padibagilu

9. 40ಕ್ಕೆ ಪಂದ್ಯ ಆರಂಭಗೊಂಡರೆ ಪೂರ್ತಿ ಪಂದ್ಯ ನಡೆಯುತ್ತದೆ. ಒಂದು ವೇಳೆ 11.56ರ ಒಳಗೆ ಆರಂಭಗೊಂಡರೆ 5 ಓವರ್​ಗಳ ಪಂದ್ಯ ಮಾತ್ರ ನಡೆಯುತ್ತದೆ.

Sukhesha Padibagilu

ಪಂದ್ಯ 9.34ಕ್ಕೆ ಆರಂಭಗೊಂಡರೂ, 20 ಓವರ್​ಗಳ ಪಂದ್ಯವೇ ನಡೆಯಲಿದೆ. ಒಂದು ವೇಳೆ 9.35 ರಬಳಿಕ ಆರಂಭಗೊಂಡರೆ ಓವರ್​​ಗಳ ಸಂಖ್ಯೆ ಇಳಿಕೆಯಾಗಲಿದೆ.

Sukhesha Padibagilu

ಮೊಟೆರಾದಲ್ಲಿ ಇನ್ನೂ ಕಡಿಮೆಯಾಗದ ಮಳೆ. ನಿರಂತರವಾಗಿ ಸುರಿಯತ್ತಿರುವ ಕಾರಣ ಮೈದಾನದಲ್ಲಿ ನೀರು ತುಂಬಿಕೊಂಡಿದೆ..

Sukhesha Padibagilu

ಮಳೆ ಬರುವುದಕ್ಕಿಂತ ಮೊದಲು ಟಾಸ್​ ಗೆದ್ದ ತಂದ ಮೊದಲು ಬ್ಯಾಟ್​ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಬದಲಾದ ಪರಿಸ್ಥಿತಿಯಲ್ಲಿ ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು.

Sukhesha Padibagilu

ಅಹಮದಾಬಾದ್​ನಲ್ಲಿ ಮಳೆ ಬರಬಹುದು ಎಂದು ಹವಾಮಾನ ವರದಿಗಳು ಹೇಳಿದ್ದವು. ಅಂತೆಯೇ ಪಂದ್ಯ ಆರಂಭಕ್ಕೆ ಇನ್ನೇನು ಒಂದು ಗಂಟೆ ಬಾಕಿ ಇದೆ ಎನ್ನುವಷ್ಟರಲ್ಲಿ ಮಳೆ ಶುರುವಾಯಿತು. ಹೀಗಾಗಿ ಸಮಾರೋಪದ ಸಮಾರಂಭ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಅಡಚಣೆ ಉಂಟಾಯಿತು. ಸ್ಟೇಡಿಯಮ್​ನ ಪಿಚ್​ಗೆ ಟಾರ್ಪಾಲ್​ ಹಾಕಿ ಮುಚ್ಚಲಾಗಿದೆ.

Exit mobile version