Site icon Vistara News

IPL 2023 : ಟಾಸ್ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಿಂದ ಬ್ಯಾಟಿಂಗ್​ ಆಯ್ಕೆ

chennai-super-kings-won-the-toss-and-elected-to-bat-first

#image_title

ಚೆನ್ನೈ: ಹಾಲಿ ಆವೃತ್ತಿಯ ತವರಿನ ಕೊನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ಟಾಸ್​ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇದು ಐಪಿಎಲ್​ 16ನೇ ಅವೃತ್ತಿಯ 61ನೇ ಪಂದ್ಯವಾಗಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಹಾಲಿ ಆವೃತ್ತಿಯ ಐಪಿಎಲ್​ನ ಅಂಕಪಟ್ಟಿಯಲ್ಲಿ ಪ್ರಸ್ತುತ 2ನೇ ಸ್ಥಾನದಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ ಏಳು ಗೆಲವು, ಒಂದು ಪಂದ್ಯ ರದ್ದಾಗುವುದರೊಂದಿಗೆ 15 ಅಂಕಗಳನ್ನು ಗಳಿಸಿಕೊಂಡಿದೆ. ಅತ್ತ ಕೋಲ್ಕೊತಾ ನೈಟ್​ ರೈಡರ್ಸ್​ ಬಳಗ 12 ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 10 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಟಾಸ್​ ಗೆದ್ದ ಬಳಿಕ ಮಾತನಾಡಿದ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತನಾಡಿ, ಪಿಚ್​ನ ಗುಣದ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ಟೂರ್ನಮೆಂಟ್​ ಸಾಗುತ್ತಿದ್ದಂತೆ ಪಿಚ್​ಗಳ ನಿಧಾನಗತಿಯಲ್ಲಿ ವರ್ತಿಸಲು ಆರಂಭಿಸಿವೆ. ಹೀಗಾಗಿ ಆರಂಭದಲ್ಲಿ ಉತ್ತಮ ರನ್​ಗಳಿಸಿ ಬಳಿಕ ಚೆಂಡು ಹೊಳಪು ಕಳೆದುಕೊಳ್ಳುತ್ತಿರುವಂತೆಯೇ ತಿರುವಿಗೆ ಪೂರಕವಾಗಿ ಆಡುವುದೇ ನಮ್ಮ ಉದ್ದೇಶ. ಟೂರ್ನಿಯಲ್ಲಿ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : IPL 2023: ಆರ್​ಸಿಬಿ ವಿರುದ್ಧ ರಾಜಸ್ಥಾನ್​ಗೆ ಹೀನಾಯ ಸೋಲು

ನಾವು ಕೂಡ ಮೊದಲು ಬ್ಯಾಟ್​ ಮಾಡುವಂಥ ಉದ್ದೇಶವನ್ನು ಹೊಂದಿದ್ದೆವು. ಪಿಚ್​ ಸ್ವಲ್ಪ ಜಿಗುಟುತನ ತೋರುವ ಲಕ್ಷಣವಿರುವ ಕಾರಣ ನಮ್ಮ ಸ್ಪಿನ್ನರ್​​ಗಳನ್ನು ಬಳಸಿಕೊಳ್ಳುತ್ತೇವೆ. ಈ ಪಿಚ್​ನಲ್ಲಿ ನಮಗೆ ಒತ್ತಡ ಹೆಚ್ಚಿದೆ. ಹೀಗಾಗಿ ಈ ಪಂದ್ಯವನ್ನು ನಾವು ಅಷ್ಟೊಂದು ಹಗುರವಾಗಿ ಪರಿಗಣಿಸಿಲ್ಲ. ಯಾವುದೇ ವಿಭಾಗ ವೈಫಲ್ಯ ಕಂಡರು ನಮ್ಮ ಕಡೆಯಿಂದ ಶೇಕಡಾ 90ರಷ್ಟು ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ನಮ್ಮ ಫೀಲ್ಡಿಂಗ್​ ವಿಭಾಗವೂ ಹೆಚ್ಚು ಬಲಿಷ್ಠವಾಗಬೇಕಾಗಿದೆ ಎಂದು ಹೇಳಿದರು.

ತಂಡಗಳು:
ಕೋಲ್ಕತಾ ನೈಟ್ ರೈಡರ್ಸ್: ಜೇಸನ್ ರಾಯ್, ನಿತೀಶ್ ರಾಣಾ (ನಾಯಕ), ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ, ವರುಣ್ ಚಕ್ರವರ್ತಿ.

ಚೆನ್ನೈ ಸೂಪರ್ ಕಿಂಗ್ಸ್ : ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಸಿ & ವಿಕೆ), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ.

Exit mobile version