ನವ ದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್ ಸರಣಿಯ (INDvsAUS) ಎರಡನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೆಸ್ಟ್ ಸ್ಪೆಷಲಿಷ್ಟ್ ಚೇತೇಶ್ವರ್ ಪೂಜಾರ (Cheteshwar Pujara) ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಅವರು 100ನೇ ಪಂದ್ಯದಲ್ಲಿ ನಿರಾಸೆ ಎದುರಿಸಿದ್ದಾರೆ. ಏಳು ಎಸೆತಗಳನ್ನು ಎದುರಿಸಿದ ಅವರು ನೇಥನ್ ಲಿಯಾನ್ ಅವರ ಎಸೆತಕ್ಕೆ ಎಲ್ಬಿಡಬ್ಲ್ಯು (LBW) ಆಗಿ ಪೆವಿಲಿಯನ್ಗೆ ನಡೆದರು. 100ನೇ ಪಂದ್ಯವನ್ನಾಡುತ್ತಿರುವ ಚೇತೇಶ್ವರ್ ಪೂಜಾರ ಅವರು ಶತಕದ ದಾಖಲೆ ಮಾಡುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ ಅವರು ಖಾತೆ ತೆರೆಯಲೂ ವಿಫಲಗೊಂಡರು. ಇದು ಅವರ ವೃತ್ತಿ ಕ್ರಿಕೆಟ್ ಪಾಲಿನ ಕೆಟ್ಟ ದಾಖಲೆ ಎನಿಕೊಂಡಿತು.
ಕೆ. ಎಲ್ ರಾಹುಲ್ ಔಟಾದ ಬಳಿಕ ಬ್ಯಾಟಿಂಗ್ ಬಂದ ಚೇತೇಶ್ವರ್ ಪೂಜಾರ ನಿಧಾನಗತಿಯ ಬ್ಯಾಟಿಂಗ್ಗೆ ಮೊರೆ ಹೋದರು. 18ನೇ ಓವರ್ನ ಮೂರನೇ ಎಸೆತದಲ್ಲಿಯೇ ಚೆಂಡು ಅವರ ಕಾಲಿಗೆ ಬಡಿಯಿತು. ಎದುರಾಳಿ ತಂಡದ ಆಟಗಾರರು ಔಟ್ಗಾಗಿ ಮನವಿ ಮಾಡಿದರೂ ಅಂಪೈರ್ ಪುರಸ್ಕರಿಸಲಿಲ್ಲ. ಆಗಲೇ ಎರಡು ರಿವ್ಯೂ ಅವಕಾಶ ಕಳೆದು ಕೊಂಡಿದ್ದ ಆಸೀಸ್ ಬಳಗ ಡಿಆರ್ಎಸ್ಗೆ ಮನವಿ ಸಲ್ಲಿಸಲಿಲ್ಲ. ಆದರೆ ಟಿವಿ ರಿಪ್ಲೈ ಪ್ರಕಾರ ಚೆಂಡು ವಿಕೆಟ್ ಲೈನ್ನಲ್ಲಿತ್ತು. ಹೀಗಾಗಿ ಪೂಜಾರ ಬಚಾವಾದರು. ಆದರೆ, ಈ ಅವಕಾಶವನ್ನು ಅವರು ಮತ್ತೆ ಬಳಸಿಕೊಳ್ಳಲಿಲ್ಲ. ನೇಥನ್ ಲಿಯಾನ್ ಅವರನ್ನು ಮತ್ತೆ ಸ್ಪಿನ್ ಬಲೆಗೆ ಬೀಳಿಸಿದರು.
ಚೇತೇಶ್ವರ್ ಬೇಗನೆ ವಿಕೆಟ್ ಒಪ್ಪಿಸಿದ ಕಾರಣ ಭಾರತ ತಂಡ 53 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಳ್ಳುವಂತಾಯಿತು. ಬಳಿಕ ಬಂದ ಶ್ರೇಯಸ್ ಅಯ್ಯರ್ ಕೂಡ 4 ರನ್ಗಳಿಗೆ ಔಟಾದರು. ಹೀಗಾಗಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತು. ಅತ್ಯುತ್ತಮ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸಿದರೆ ಪೂಜಾರಗೆ ಈ ಪಂದ್ಯ ಸ್ಮರಣೀಯ ಎನಿಸುತ್ತಿತ್ತು.
ಇದನ್ನೂ ಓದಿ : Cheteshwar Pujara : ನೂರನೇ ಟೆಸ್ಟ್ ಪಂದ್ಯಕ್ಕೆ ಸತತ ಅಭ್ಯಾಸ ನಡೆಸಿದ ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ ಭಾರತ ತಂಡದ ಪರವಾಗಿ ಟೆಸ್ಟ್ ಆಡುತ್ತಿರುವ 13ನೇ ಆಟಗಾರ. ಆದರೆ, ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಲು ವಿಫಲಗೊಂಡರು. ಅಲ್ಲದೆ, ಟೀಕಾಕಾರರಿಗೆ ಅಸ್ತ್ರಗಳನ್ನು ನೀಡಿದರು.