Cheteshwar Pujara was dismissed for zero in the hundredth match INDvsAUS : ಶತಕದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಚೇತೇಶ್ವರ್​ ಪೂಜಾರ, ಜೀವದಾನ ಸಿಕ್ಕರೂ ಬಳಸಿಕೊಳ್ಳಲಿಲ್ಲ! - Vistara News INDvsAUS : ಶತಕದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಚೇತೇಶ್ವರ್​ ಪೂಜಾರ, ಜೀವದಾನ ಸಿಕ್ಕರೂ ಬಳಸಿಕೊಳ್ಳಲಿಲ್ಲ! INDvsAUS : ಶತಕದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಚೇತೇಶ್ವರ್​ ಪೂಜಾರ, ಜೀವದಾನ ಸಿಕ್ಕರೂ ಬಳಸಿಕೊಳ್ಳಲಿಲ್ಲ!

ಕ್ರಿಕೆಟ್

INDvsAUS : ಶತಕದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಚೇತೇಶ್ವರ್​ ಪೂಜಾರ, ಜೀವದಾನ ಸಿಕ್ಕರೂ ಬಳಸಿಕೊಳ್ಳಲಿಲ್ಲ!

ಅಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ (INDvsAUS) ಮೊದಲ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್​ ಚೇತೇಶ್ವರ್​ ಪೂಜಾರ ಶೂನ್ಯಕ್ಕೆ ಔಟಾಗಿ ನಿರಾಸೆ ಎದುರಿಸಿದ್ದಾರೆ.

VISTARANEWS.COM


on

Cheteshwar Pujara
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಟೆಸ್ಟ್​ ಸರಣಿಯ (INDvsAUS) ಎರಡನೇ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಟೆಸ್ಟ್​ ಸ್ಪೆಷಲಿಷ್ಟ್​ ಚೇತೇಶ್ವರ್​ ಪೂಜಾರ (Cheteshwar Pujara) ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಅವರು 100ನೇ ಪಂದ್ಯದಲ್ಲಿ ನಿರಾಸೆ ಎದುರಿಸಿದ್ದಾರೆ. ಏಳು ಎಸೆತಗಳನ್ನು ಎದುರಿಸಿದ ಅವರು ನೇಥನ್​ ಲಿಯಾನ್ ಅವರ ಎಸೆತಕ್ಕೆ ಎಲ್​ಬಿಡಬ್ಲ್ಯು (LBW) ಆಗಿ ಪೆವಿಲಿಯನ್​ಗೆ ನಡೆದರು. 100ನೇ ಪಂದ್ಯವನ್ನಾಡುತ್ತಿರುವ ಚೇತೇಶ್ವರ್​ ಪೂಜಾರ ಅವರು ಶತಕದ ದಾಖಲೆ ಮಾಡುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ ಅವರು ಖಾತೆ ತೆರೆಯಲೂ ವಿಫಲಗೊಂಡರು. ಇದು ಅವರ ವೃತ್ತಿ ಕ್ರಿಕೆಟ್​ ಪಾಲಿನ ಕೆಟ್ಟ ದಾಖಲೆ ಎನಿಕೊಂಡಿತು.

ಕೆ. ಎಲ್​ ರಾಹುಲ್ ಔಟಾದ ಬಳಿಕ ಬ್ಯಾಟಿಂಗ್ ಬಂದ ಚೇತೇಶ್ವರ್​ ಪೂಜಾರ ನಿಧಾನಗತಿಯ ಬ್ಯಾಟಿಂಗ್​ಗೆ ಮೊರೆ ಹೋದರು. 18ನೇ ಓವರ್​ನ ಮೂರನೇ ಎಸೆತದಲ್ಲಿಯೇ ಚೆಂಡು ಅವರ ಕಾಲಿಗೆ ಬಡಿಯಿತು. ಎದುರಾಳಿ ತಂಡದ ಆಟಗಾರರು ಔಟ್​ಗಾಗಿ ಮನವಿ ಮಾಡಿದರೂ ಅಂಪೈರ್ ಪುರಸ್ಕರಿಸಲಿಲ್ಲ. ಆಗಲೇ ಎರಡು ರಿವ್ಯೂ ಅವಕಾಶ ಕಳೆದು ಕೊಂಡಿದ್ದ ಆಸೀಸ್​ ಬಳಗ ಡಿಆರ್​ಎಸ್​ಗೆ ಮನವಿ ಸಲ್ಲಿಸಲಿಲ್ಲ. ಆದರೆ ಟಿವಿ ರಿಪ್ಲೈ ಪ್ರಕಾರ ಚೆಂಡು ವಿಕೆಟ್​ ಲೈನ್​ನಲ್ಲಿತ್ತು. ಹೀಗಾಗಿ ಪೂಜಾರ ಬಚಾವಾದರು. ಆದರೆ, ಈ ಅವಕಾಶವನ್ನು ಅವರು ಮತ್ತೆ ಬಳಸಿಕೊಳ್ಳಲಿಲ್ಲ. ನೇಥನ್​ ಲಿಯಾನ್​ ಅವರನ್ನು ಮತ್ತೆ ಸ್ಪಿನ್​ ಬಲೆಗೆ ಬೀಳಿಸಿದರು.

ಚೇತೇಶ್ವರ್​ ಬೇಗನೆ ವಿಕೆಟ್​ ಒಪ್ಪಿಸಿದ ಕಾರಣ ಭಾರತ ತಂಡ 53 ರನ್​ಗಳಿಗೆ ಎರಡು ವಿಕೆಟ್​ ಕಳೆದುಕೊಳ್ಳುವಂತಾಯಿತು. ಬಳಿಕ ಬಂದ ಶ್ರೇಯಸ್ ಅಯ್ಯರ್​ ಕೂಡ 4 ರನ್​ಗಳಿಗೆ ಔಟಾದರು. ಹೀಗಾಗಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತು. ಅತ್ಯುತ್ತಮ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸಿದರೆ ಪೂಜಾರಗೆ ಈ ಪಂದ್ಯ ಸ್ಮರಣೀಯ ಎನಿಸುತ್ತಿತ್ತು.

ಇದನ್ನೂ ಓದಿ : Cheteshwar Pujara : ನೂರನೇ ಟೆಸ್ಟ್​ ಪಂದ್ಯಕ್ಕೆ ಸತತ ಅಭ್ಯಾಸ ನಡೆಸಿದ ಚೇತೇಶ್ವರ್​ ಪೂಜಾರ

ಚೇತೇಶ್ವರ್​ ಪೂಜಾರ ಭಾರತ ತಂಡದ ಪರವಾಗಿ ಟೆಸ್ಟ್​ ಆಡುತ್ತಿರುವ 13ನೇ ಆಟಗಾರ. ಆದರೆ, ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಲು ವಿಫಲಗೊಂಡರು. ಅಲ್ಲದೆ, ಟೀಕಾಕಾರರಿಗೆ ಅಸ್ತ್ರಗಳನ್ನು ನೀಡಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

IND vs PAK: ಇಂದು ಇಂಡೋ-ಪಾಕ್​ ರೋಚಕ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಭಾರತ

IND vs PAK: ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ಭಾನುವಾರ ನ್ಯೂಯಾರ್ಕ್​ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಸುಮಾರಿಗೆ ಶೇ. 51 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರೀಡಾ ಲೋಕವೇ ಕಾದು ಕುಳಿತಿರುವ ಭಾರತ(IND vs PAK) ಮತ್ತು ಪಾಕಿಸ್ತಾನ ನಡುವಣ ರೋಚಕ ಟಿ20 ವಿಶ್ವಕಪ್​ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು(ಭಾನುವಾರ) ರಾತ್ರಿ ಇತ್ತಂಡಗಳ ಮಧ್ಯೆ ಈ ಪಂದ್ಯ ನಡೆಯಲಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆಯನ್ನು ಮೀರಿವೆ. ಜಗತ್ತಿನ ಇತರೆ ಯಾವುದೇ ದೇಶಗಳ ನಡುವಿನ ಕ್ರಿಕೆಟ್‌ ಸಮರದಲ್ಲಿ ಈ ತೀವ್ರತೆಯನ್ನು ನೀವು ಕಾಣಲು ಸಾಧ್ಯವೇ ಇಲ್ಲ. ಭಾರತ ಮತ್ತು ಪಾಕ್​ ಪಂದ್ಯಗಳಲ್ಲಿ ಗೆಲುವಿನ ರೂವಾರಿಗಳು ಕ್ರಿಕೆಟಿನ ದೊಡ್ಡ ಹೀರೋಗಳಾಗಿ ಮೆರೆಯುತ್ತಾರೆ. ಹಾಗೆಯೇ ಕೆಲವು ವಿಲನ್‌ಗಳೂ ಹುಟ್ಟಿ ಕೊಳ್ಳುತ್ತಾರೆ. ಪಾಕಿಸ್ತಾನ ಸೋತರೆ ಅಲ್ಲಿ ಇವರ ಪ್ರತಿಕೃತಿ ದಹನವಾಗಲಿದೆ; ಮನೆಗೆ ಕಲ್ಲು ಬೀಳಲಿದೆ. ಇದರಿಂದ ಬಚಾವಾಗುವುದು ಪಾಕ್‌ ಕ್ರಿಕೆಟಿಗರ ಪಾಲಿಗೆ ಇನ್ನೂ ದೊಡ್ಡ ಸವಾಲು.

ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ರೋಹಿತ್​ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಒತ್ತಡವೂ ಇದೆ. ಗೆದ್ದರಷ್ಟೇ ಮುಂದಿನ ಹಂತಕ್ಕೇರಬಹುದು. ಹೀಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಹೆಚ್ಚು. ಆದರೆ ಪಂದ್ಯಕ್ಕೆ ಮಳೆಯ ಭೀತಿ ಕೂಡ ಎದುರಾಗಿದೆ.

ಭಾರತವೇ ಪೇವರಿಟ್​

ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್‌ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್​, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ ಸೋಲು ಕಂಡಿರುವುದೇ ಉತ್ತಮ ನಿದರ್ಶನ. ಏಕದಿನ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತ ಅಜೇಯವಾಗಿದ್ದರೂ ಕೂಡ, ಟಿ20ಯಲ್ಲಿ ಅಜೇಯವಲ್ಲ. ಭಾರತದ ಆತಿಥ್ಯದಲ್ಲೇ ದುಬೈನಲ್ಲಿ 2021ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. 2022ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಟಿ20ಯಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಪೈಪೋಟಿ ನೀಡುತ್ತಿದೆ. ಹೀಗಾಗಿ ಎಚ್ಚರದಿಂದ ಆಡಬೇಕು.

ಇದನ್ನೂ ಓದಿ Rohit Sharma Injury: ಪಾಕ್​ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ; ಅಭ್ಯಾಸದ ವೇಳೆ ರೋಹಿತ್​ಗೆ ಗಾಯ

ಪಾಕ್‌ ತಂಡವೂ ಬಲಿಷ್ಠ


ಭಾರತ ತಂಡದಂತೆ ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗಲ್ಲಿ ವೈವಿಧ್ಯಮಯವಾಗಿ ಗೋಚರಿಸಿದೆ. ಬ್ಯಾಟಿಂಗ್‌ನಲ್ಲಿ ಮೊಹಮ್ಮದ್‌ ರಿಜ್ವಾನ್‌, ನಾಯಕ ಬಾಬರ್‌ ಅಜಂ, ಇಫ್ತಿಕರ್​, ಫಕಾರ್​ ಜಮಾನ್​ ಬಲವಾದರೆ ಅತ್ತ ಬೌಲಿಂಗ್‌ನಲ್ಲಿ ಶಾಹೀನ್‌ ಅಫ್ರಿದಿ, ಶದಾಬ್‌, ಆಮೀರ್​, ರವೂಫ್‌ ಮತ್ತು ನಶೀಮ್​ ಶಾ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಅದರಲ್ಲೂ ಹೊಸ ಚೆಂಡಿನಲ್ಲಿ ಅಫ್ರಿದಿ ಬೆಂಕಿ ಎಸೆತಗಳನ್ನು ಎಸೆಯುವುದರಲ್ಲಿ ಎತ್ತಿದ ಕೈ.

ಮಳೆ ಭೀತಿ


ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ಭಾನುವಾರ ನ್ಯೂಯಾರ್ಕ್​ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಸುಮಾರಿಗೆ ಶೇ. 51 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ.

Continue Reading

T20 ವಿಶ್ವಕಪ್

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

NED vs RSA: ಡೇವಿಡ್​ ಮಿಲ್ಲರ್​ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ಯಾವುದೇ ಹಾನಿಯಾಗದಂತೆ ನೋಡಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಮಿಲ್ಲರ್​ 51 ಎಸೆತ ಎದುರಿಸಿ ಅಜೇಯ 59 ರನ್​ ಬಾರಿಸಿದರು

VISTARANEWS.COM


on

NED vs RSA
Koo

ನ್ಯೂಯಾರ್ಕ್​: ಡೇವಿಡ್​ ಮಿಲ್ಲರ್(59)​ ಅವರ ಅಜೇಯ ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ ಶನಿವಾರ ನಡೆದ ಟಿ20 ವಿಶ್ವಕಪ್​ ಟೂರ್ನಿಯ 16ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್​ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಸತತ 2 ಗೆಲುವು ದಾಖಲಿಸಿ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ.

ಇಲ್ಲಿನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Nassau County International Cricket Stadium) ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ನೆದರ್ಲೆಂಡ್ಸ್(NED vs RSA) ತಂಡ ಮಧ್ಯಮ ಕ್ರಮಾಂಕದ ಬ್ಯಾಟರ್​ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್(40) ಉಪಯುಕ್ತ ಬ್ಯಾಟಿಂಗ್​ ನರೆವಿನಿಂದ 9 ವಿಕೆಟ್​ಗೆ 103 ರನ್​ ಬಾರಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ ಈ ಸಣ್ಣ ಮೊತ್ತವನ್ನು ಬಾರಿಸಲು 6 ವಿಕೆಟ್​ ಕಳೆದುಕೊಂಡು ಕೊನೆಗೂ 106 ರನ್​ ಬಾರಿಸಿ ಗೆಲುವು ದಾಖಲಿಸಿತು.

ಬ್ಯಾಟಿಂಗ್​ಗೆ ಯೋಗ್ಯವಲ್ಲದ ಪಿಚ್​ನಲ್ಲಿ ಉಭಯ ತಂಡಗಳ ಬ್ಯಾಟರ್​ಗಳು ರನ್​ ಗಳಿಸಲು ಪರದಾಟ ನಡೆಸಿದರು. ಚೀಸಿಂಗ್​ ವೇಳೆ ದಕ್ಷಿಣ ಆಫ್ರಿಕಾ ಮೊದಲ ಎಸೆತದಲ್ಲೇ ಕ್ವಿಂಟನ್​ ಡಿ ಕಾಕ್(0) ಅವರ ವಿಕೆಟ್​ ಕಳೆದುಕೊಂಡಿತು. ಸಂವಹನ ಕೊರತೆಯಿಂದಾಗಿ ಇಲ್ಲದ ರನ್​ ಗಳಿಸುವ ಯತ್ನದಲ್ಲಿ ರನೌಟ್​ಗೆ ಬಲಿಯಾದರು. ಈ ವಿಕೆಟ್​ ಪತನಗೊಂಡು 3 ರನ್​ ಆಗುವಷ್ಟರಲ್ಲಿ ಮತ್ತೆರಡು ವಿಕೆಟ್​ ಕೂಡ ಪತನಗೊಂಡಿತು. ರೀಜಾ ಹೆಂಡ್ರಿಕ್ಸ್(3) ಮತ್ತು ನಾಯಕ ಐಡೆನ್ ಮಾರ್ಕ್ರಾಮ್(0) ವಿಕೆಟ್​ ಕೈಚೆಲ್ಲಿದರು. 3 ರನ್​ಗೆ 3 ವಿಕೆಟ್​ ಕಳೆದುಕೊಂಡ ಹರಿಣ ಪಡೆ ಆರಂಭಿಕ ಆಘಾತ ಎದುರಿಸಿತು.

ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಒಂದು ಹಂತದಲ್ಲಿ ಆಸರೆಯಾಗುವ ಸೂಚನೆ ನೀಡಿದ್ದ ಅಪಾಯಕಾರಿ ಬ್ಯಾಟರ್​ ಹೆನ್ರಿಚ್​ ಕ್ಲಾಸೆನ್​ ಕೂಡ 4 ರನ್​ಗೆ ಆಟ ಮುಗಿಸಿದರು. ನಾಟಕೀಯ ಕುಸಿತ ಕಂಡ ದಕ್ಷಿಣ ಆಫ್ರಿಕಾಗೆ ಆಸರೆಯಾದದ್ದು ಡೇವಿಡ್​ ಮಿಲ್ಲರ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್. ಉಭಯ ಆಟಗಾರರು ತಾಳ್ಮೆಯುತ ಬ್ಯಾಟಿಂಗ್​ ನಡೆಸಿ 5ನೇ ವಿಕೆಟ್​ಗೆ 65 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಈ ಜೋಡಿ ನಿಂತು ಆಡದೇ ಹೋಗಿದ್ದರೆ ಹರಿಣ ಪಡೆಗೆ ಸೋಲು ಖಚಿತವಾಗುತ್ತಿತ್ತು.

ಇದನ್ನೂ ಓದಿ French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

ಟ್ರಿಸ್ಟಾನ್ ಸ್ಟಬ್ಸ್ 37 ಎಸೆತಗಳಿಂದ 33 ರನ್​ ಬಾರಿಸಿ ಬಾಸ್ ಡಿ ಲೀಡೆಗೆ ವಿಕೆಟ್​ ಒಪ್ಪಿಸಿದರು. ಇವರ ವಿಕೆಟ್​ ಪತನದ ಬಳಿಕ ಬಂದ ಮಾರ್ಕೊ ಜಾನ್ಸೆನ್​ 3 ರನ್​ ಗಳಿಸಿ ವಿಕೆಟ್​ ಕಳೆದುಕೊಂಡರು. ಈ ವೇಳೆ ತಂಡಕ್ಕೆ ಕೊಂಚ ಆತಂಕ ಎದುರಾದರೂ ಕೂಡ ಡೇವಿಡ್​ ಮಿಲ್ಲರ್​ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ಯಾವುದೇ ಹಾನಿಯಾಗದಂತೆ ನೋಡಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಿದರು. ಮಿಲ್ಲರ್​ 51 ಎಸೆತ ಎದುರಿಸಿ ಅಜೇಯ 59 ರನ್​ ಬಾರಿಸಿದರು. ಅವರ ಈ ಅರ್ಧಶತಕದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 4 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಯಿತು. ಪಂದ್ಯ ಸೋತರೂ ಕೂಡ ನೆದರ್ಲೆಂಡ್ಸ್​ ತಂಡದ ಹೋರಾಟವನ್ನು ಮೆಚ್ಚಲೇ ಬೇಕು.

ಮೊದಲು ಬ್ಯಾಟಿಂಗ್​ ನಡೆಸಿದ ನೆದರ್ಲೆಂಡ್ಸ್​ ಕೂಡ 17 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿತು. ಇನ್ನೇನು 50ರ ಒಳಗೆ ಗಂಟು ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಮತ್ತು 8ನೇ ಕ್ರಮಾಂಕದಲ್ಲಿ ಆಡಿದ ವ್ಯಾನ್ ಬೀಕ್ ನಡೆಸಿದ ಸಣ್ಣ ಮಟ್ಟಿನ ಬ್ಯಾಟಿಂಗ್​ ಹೋರಾಟದಿಂದ ತಂಡ 100ರ ಗಡಿ ದಾಟಿತು. ಎಂಗಲ್‌ಬ್ರೆಕ್ಟ್ 2 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 40 ರನ್​ ಬಾರಿಸಿದರೆ, ವ್ಯಾನ್ ಬೀಕ್ 3 ಬೌಂಡರಿ ನೆರವಿನಿಂದ 23 ರನ್​ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಒಟ್ನೀಲ್ ಬಾರ್ಟ್ಮನ್ ಘಾತಕ ಬೌಲಿಂಗ್​ ನಡೆಸಿ ಕೇವಲ 11 ರನ್​ ವೆಚ್ಚದಲ್ಲಿ ಪ್ರಮುಖ 4 ವಿಕೆಟ್​ ಕಿತ್ತರು. ಉಳಿದಂತೆ ಮಾರ್ಕೊ ಜಾನ್ಸೆನ್​ ಮತ್ತು ಅನ್ರಿಚ್​ ನೋರ್ಜೆ ತಲಾ 2 ವಿಕೆಟ್​ ಪಡೆದರು.

Continue Reading

ಕ್ರೀಡೆ

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

IND vs PAK:ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರಿಕೆಟ್​ ಅಭಿಮಾನಿಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಹೈವೋಲ್ಟೇಜ್​ ಪಂದ್ಯ ನಡೆಯುವುದು ಅನುಮಾನ ಎನ್ನುವಂತಿದೆ. ಪಂದ್ಯಕ್ಕೆ(IND vs PAK match Weather Reports) ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ.

ಮಳೆ ಭೀತಿ


ಸದ್ಯದ ಮುನ್ಸೂಚನೆಯಂತೆ ಪಂದ್ಯ ನಡೆಯುವ ಭಾನುವಾರ ನ್ಯೂಯಾರ್ಕ್​ನಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಅಕ್ಯುವೆದರ್‌ನ ಮುನ್ಸೂಚನೆಯ ಪ್ರಕಾರ ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 11 ಸುಮಾರಿಗೆ ಶೇ. 51 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಭಾರತದಲ್ಲಿ ಈ ಪಂದ್ಯ ರಾತ್ರಿ ಪ್ರಸಾರವಾಗುತ್ತದೆ. ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಏಕೆಂದರೆ ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇಲ್ಲ.

ಪಂದ್ಯದ ಪ್ರಸಾರ


ನ್ಯೂಯಾರ್ಕ್​ನಲ್ಲಿ ಈ ಪಂದ್ಯ ಹಗಲು ನಡೆದರೂ ಕೂಡ ಭಾರತದಲ್ಲಿ ರಾತ್ರಿ 8 ಗಂಟೆಗೆ ಪಂದ್ಯ ಪ್ರಸಾರಗೊಳ್ಳಲಿದೆ. ಸ್ಟಾರ್​ ಸ್ಪೋರ್ಟ್ಸ್​ ಮತ್ತು ಡಿಡಿ ದೂರದರ್ಶನದಲ್ಲಿ ಪಂದ್ಯಗಳು ನೇರಪ್ರಸಾರ ಇರಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ ಮೊಬೈಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಇದನ್ನೂ ಓದಿ IND vs PAK: ಬಾಬರ್‌ ಪಡೆಯನ್ನು ಬೆಂಡೆತ್ತಲಿ ರೋಹಿತ್​ ಸಾರಥ್ಯದ ಟೀಮ್​ ಇಂಡಿಯಾ

ಮುಖಾಮುಖಿ


ಒಟ್ಟು 7 ಬಾರಿ ಇತ್ತಂಡಗಳು ಟಿ20 ವಿಶ್ವಕಪ್​ನಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 6 ಪಂದ್ಯ ಗೆದ್ದರೆ, ಪಾಕಿಸ್ತಾನ ಒಂದು ಪಂದ್ಯ ಗೆದ್ದಿದೆ. ಭಾರತಕ್ಕೆ ಸೋಲು ಎದುರಾದದ್ದು 2021ರಲ್ಲಿ ದುಬೈನಲ್ಲಿ ನಡೆದಿದ್ದ ಟೂರ್ನಿಯಲ್ಲಿ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. ಒಟ್ಟಾರೆಯಾಗಿ ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಲೆಕ್ಕಾಚಾರದಲ್ಲಿ ಭಾರತ ಬಲಿಷ್ಠವಾಗಿದ್ದರೂ ಕೂಡ ಪಾಕ್​ ಸವಾಲನ್ನು ಅಷ್ಟು ಹಗುರವಾಗಿ ಕಡೆಗಣಿಸುವಂತಿಲ್ಲ.

ಪಿಚ್​ ರಿಪೋರ್ಟ್​


ನಾಸ್ಸೌ ಕ್ರಿಕೆಟ್​ ಸ್ಟೇಡಿಯಂನ ಪಿಚ್​ನಲ್ಲಿ ಹಲವು ಬಿರುಕು ಇರುವುದರಿಂದ ಇದು ಬೌಲರ್​ಗಳಿಗೆ ಯೋಗ್ಯವಾಗಿದೆ. ಆದರೆ ಬ್ಯಾಟರ್​ಗಳು ರನ್​ ಗಳಿಸಲು ಪರದಾಡುವ ಜತೆಗೆ ಗಾಯಗೊಳ್ಳುವ ಸಾಧ್ಯತೆಯೂ ಅಧಿಕವಾಗಿದೆ. ಇಲ್ಲಿ ಇದುವರೆಗೆ ನಡೆದ ಎಲ್ಲ ಪಂದ್ಯಗಳು ಕೂಡ ಕನಿಷ್ಠ ಮೊತ್ತದ ಪಂದ್ಯಗಳಾಗಿವೆ. ಪಿಚ್​ ಬಗ್ಗೆ ಈಗಾಗಲೇ ಹಲವು ತಂಡಗಳ ಆಟಗಾರರು ಅಸಮಾಧಾನ ಹೊರಹಾಕಿದ್ದಾರೆ.

ಸಂಭ್ಯಾವ್ಯ ತಂಡಗಳು


ಭಾರತ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕಟ್​ ಕೀಪರ್​), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್​ಪ್ರೀತ್​ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್​ ಕೀಪರ್​), ಉಸ್ಮಾನ್ ಖಾನ್, ಫಖರ್ ಜಮಾನ್, ಅಜಮ್ ಖಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಮೊಹಮ್ಮದ್ ಅಮೀರ್, ಹಾರಿಸ್ ರೌಫ್.

Continue Reading

ಕ್ರೀಡೆ

IND vs PAK: ಬಾಬರ್‌ ಪಡೆಯನ್ನು ಬೆಂಡೆತ್ತಲಿ ರೋಹಿತ್​ ಸಾರಥ್ಯದ ಟೀಮ್​ ಇಂಡಿಯಾ

IND vs PAK: ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್‌ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್​, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ ಸೋಲು ಕಂಡಿರುವುದೇ ಉತ್ತಮ ನಿದರ್ಶನ.

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರೀಡಾ ಲೋಕವೇ ನ್ಯೂಯಾರ್ಕ್​ನತ್ತ ಮುಖ ಮಾಡಿ ಸೂಪರ್‌ ಸಂಡೆಯ ಕ್ಷಣಗಣನೆಯಲ್ಲಿ ತೊಡಗಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆಯನ್ನು ಮೀರಿವೆ. ಇದಕ್ಕೆಲ್ಲ ಒಂದೇ ಕಾರಣ, ಭಾರತ- ಪಾಕಿಸ್ತಾನ(IND vs PAK) ನಡುವಿನ ಟಿ20 ವಿಶ್ವಕಪ್‌ ಪಂದ್ಯ(T20 World Cup 2024).

ಭಾನುವಾರ ರಾತ್ರಿ ನಡೆಯುವ ‘ಎ’ ವಿಭಾಗದ ಪಂದ್ಯದಲ್ಲಿ ಬುದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂದ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಜೋಶ್‌ ದೊಡ್ಡ ಮಟ್ಟದಲ್ಲೇ ಇರುತ್ತದೆ. ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ರೋಹಿತ್​ ಪಡೆಯ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಅಮೆರಿಕ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಒತ್ತಡವೂ ಇದೆ. ಗೆದ್ದರಷ್ಟೇ ಮುಂದಿನ ಹಂತಕ್ಕೇರಬಹುದು. ಹೀಗಾಗಿ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಹೆಚ್ಚು.

ಭಾರತ ಬಲಿಷ್ಠ ಆದರೆ…


ಮೇಲ್ನೋಟಕೆ ಭಾರತ ಈ ಬಾರಿಯ ಕೂಟದಲ್ಲಿ ಫೇವರಿಟ್‌ ಆಗಿ ಗುರುತಿಸಿಕೊಂಡಿದೆ. ಆದರೆ ಅತಿಯಾದ ಆತ್ಮವಿಶ್ವಾಸ ಸಲ್ಲದು. ಎಲ್ಲ ಪಂದ್ಯದಲ್ಲಿಯೂ ಎಚ್ಚರ ಅಗತ್ಯ. ಅದರಂತೆ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ. ಇದಕ್ಕೆ ಅಮೆರಿಕ ವಿರುದ್ಧ ಪಾಕ್​, ಅಫಘಾನಿಸ್ತಾನ ವಿರುದ್ಧ ನ್ಯೂಜಿಲ್ಯಾಂಡ್​ ಸೋಲು ಕಂಡಿರುವುದೇ ಉತ್ತಮ ನಿದರ್ಶನ. ಏಕದಿನ ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತ ಅಜೇಯವಾಗಿದ್ದರೂ ಕೂಡ, ಟಿ20ಯಲ್ಲಿ ಅಜೇಯವಲ್ಲ. ಭಾರತದ ಆತಿಥ್ಯದಲ್ಲೇ ದುಬೈನಲ್ಲಿ 2021ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ 10 ವಿಕೆಟ್​ಗಳ ಹೀನಾಯ ಸೋಲು ಕಂಡಿತ್ತು. 2022ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತ್ತು. ಟಿ20ಯಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಪೈಪೋಟಿ ನೀಡುತ್ತಿದೆ. ಹೀಗಾಗಿ ಎಚ್ಚರದಿಂದ ಆಡಬೇಕು.

ಇದನ್ನೂ ಓದಿ IND vs PAK: ಪಾಕ್​ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಲು ಕೊಹ್ಲಿ ಸಜ್ಜು; ಯಾವುದು ಈ ದಾಖಲೆ?

ಬುಮ್ರಾ ಮೇಲೆ ತಂಡ ಅವಲಂಬಿತ


ವೇಗಿ ಮೊಹಮ್ಮದ್​ ಶಮಿ ಗೈರಿನಲ್ಲಿ ಜಸ್​ಪ್ರೀತ್​ ಬುಮ್ರಾ ಬೌಲಿಂಗ್‌ ಮೇಲೆ ಇಡೀ ತಂಡ ಅವಲಂಬಿತವಾಗಿದೆ! ಹಾಗಾಗಿ ಬುಮ್ರಾ ಬೌಲಿಂಗ್‌ನಲ್ಲಿ ಪೂರ್ಣ ಭಾರವನ್ನು ಹೊರಲೇಬೇಕಾಗಿದೆ. ಅವರಿಗೆ ವೇಗಿ ಸಿರಾಜ್​, ಅರ್ಶ್‌ದೀಪ್‌ ಸಿಂಗ್‌, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಸ್ಪಿನ್ನರ್‌ಗಳಾದ ಜಡೇಜಾ​, ಅಕ್ಷರ್​ ನೆರವು ನೀಡಬೇಕಾಗಿದೆ. ಇವರೆಲ್ಲ ಒಂದಾಗಿ ತಮ್ಮ ಬೌಲಿಂಗ್‌ ಸಾಮರ್ಥ್ಯವನ್ನು ತೋರಿದರೆ ಭಾರತದ ಅಶ್ವಮೇಧವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

ಕೊಹ್ಲಿ ಮೇಲೆ ನಂಬಿಕೆ


ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಒಂದು ರನ್​ಗೆ ಸೀಮಿತರಾದರೂ ಕೂಡ ಪಾಕ್‌ ವಿರುದ್ಧ ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. ಈ ನಿಟಿನಲ್ಲಿ ಕೊಹ್ಲಿ ಬ್ಯಾಟಿಂಗ್‌ ಅಬ್ಬರ ಇಲ್ಲೂ ನಿರೀಕ್ಷಿಸಬಹುದು. ಟಿ20 ನಂ.1 ಬ್ಯಾಟರ್​ ಸೂರ್ಯಕುಮಾರ್​ ಬ್ಯಾಟ್​ ಮಂಕಾದಂತೆ ಕಾಣುತ್ತಿದೆ. ಈ ಬಾರಿಯ ಐಪಿಎಲ್​ನಲ್ಲಿಯೂ ಒಂದೆರಡು ಪಂದ್ಯಗಳನ್ನು ಬಿಟ್ಟರೆ ಬಹುತೇಕ ಪಂದ್ಯಗಳಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರು ಬ್ಯಾಟಿಂಗ್​ ಫಾರ್ಮ್​ಗೆ ಮರಳುವ ಅನಿವಾರ್ಯತೆ ಇದೆ. ಉಳಿದಂತೆ ಯಾವುದೇ ಸಮಸ್ಯೆಗಳಿಲ್ಲ.

ಪಾಕ್‌ ತಂಡವೂ ಬಲಿಷ್ಠ


ಭಾರತ ತಂಡದಂತೆ ಪಾಕಿಸ್ತಾನ ಕೂಡ ಬಲಿಷ್ಠವಾಗಿದೆ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡೂ ವಿಭಾಗಲ್ಲಿ ವೈವಿಧ್ಯಮಯವಾಗಿ ಗೋಚರಿಸಿದೆ. ಬ್ಯಾಟಿಂಗ್‌ನಲ್ಲಿ ಮೊಹಮ್ಮದ್‌ ರಿಜ್ವಾನ್‌, ನಾಯಕ ಬಾಬರ್‌ ಅಜಂ, ಇಫ್ತಿಕರ್​, ಫಕಾರ್​ ಜಮಾನ್​ ಬಲವಾದರೆ ಅತ್ತ ಬೌಲಿಂಗ್‌ನಲ್ಲಿ ಶಾಹೀನ್‌ ಅಫ್ರಿದಿ, ಶದಾಬ್‌, ಆಮೀರ್​, ರವೂಫ್‌ ಮತ್ತು ನಶೀಮ್​ ಶಾ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಅದರಲ್ಲೂ ಹೊಸ ಚೆಂಡಿನಲ್ಲಿ ಅಫ್ರಿದಿ ಬೆಂಕಿ ಎಸೆತಗಳನ್ನು ಎಸೆಯುವುದರಲ್ಲಿ ಎತ್ತಿದ ಕೈ.

Continue Reading
Advertisement
Narendra Modi
ದೇಶ11 mins ago

Narendra Modi: 3ನೇ ಬಾರಿ ಪ್ರಧಾನಿಯಾಗಿ ಇಂದು ಸಂಜೆ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವಗುರುತನಕದ ಜೀವನ ಚಿತ್ರಣ

5:2 Diet
ಆರೋಗ್ಯ12 mins ago

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

IND vs PAK
ಕ್ರೀಡೆ42 mins ago

IND vs PAK: ಇಂದು ಇಂಡೋ-ಪಾಕ್​ ರೋಚಕ ಟಿ20 ಕದನ; ವಿಜಯ ಪತಾಕೆ ಹಾರಿಸಲಿ ಭಾರತ

Dina Bhavishya
ಭವಿಷ್ಯ1 hour ago

Dina Bhavishya : ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಇರಲಿ ಎಚ್ಚರಿಕೆ

NED vs RSA
T20 ವಿಶ್ವಕಪ್7 hours ago

NED vs RSA: ಹೋರಾಡಿ ಸೋತ ನೆದರ್ಲೆಂಡ್ಸ್​; ಹರಿಣ ಪಡೆಗೆ ಪ್ರಯಾಸದ ಗೆಲುವು

Karnataka police
ಕರ್ನಾಟಕ8 hours ago

Davanagere News: ದಾವಣಗೆರೆಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ; ನಾಲ್ವರ ಬಂಧನ

French Open Final 2024
ಪ್ರಮುಖ ಸುದ್ದಿ8 hours ago

French Open Final 2024: 4ನೇ​ ಫ್ರೆಂಚ್‌ ಓಪನ್‌ ಟ್ರೋಫಿ ಗೆದ್ದ ಇಗಾ ಸ್ವಿಯಾಟೆಕ್‌

Govt Employees
ಕರ್ನಾಟಕ9 hours ago

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Kisan Samman Nidhi
ಪ್ರಮುಖ ಸುದ್ದಿ9 hours ago

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

IND vs PAK
ಕ್ರೀಡೆ9 hours ago

IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಪಂದ್ಯದ ಹವಾಮಾನ ವರದಿ, ಆಡುವ ಬಳಗ ಹೇಗಿದೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ7 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌