Site icon Vistara News

Claudia Mancinelli : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್​ ಕೋಚ್​​ ಈಗ ಇಂಟರ್ನೆಟ್​ ಸೆನ್ಷೇಷನ್​

Claudia Mancinelli

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಸ್ಪರ್ಧೆಯೊಂದರ ರೆಫರಿಗಳ ಮುಂದೆ ನಿರ್ಭೀತಿಯಿಂದ ನಿಂತಿರುವ ಮಹಿಳಾ ಕೋಚ್​ ಒಬ್ಬರ ವಿಡಿಯೊ ವೈರಲ್ ಆಗಿತ್ತು. ಅವರೇ ಮಾಜಿ ನಟಿ ಮತ್ತು ಇಟೆಲಿಯ ರಿಥಮಿಕ್ ಜಿಮ್ನಾಸ್ಟಿಕ್ಸ್ ತಂಡದ ಕೋಚ್​ ಕ್ಲಾಡಿಯಾ ಮನ್ಸಿನೆಲ್ಲಿ (Claudia Mancinelli, ಅವರೀಗ ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಆಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ಸಮಯದಲ್ಲಿ ಅವರ ಆತ್ಮವಿಶ್ವಾಸದ ಪ್ರತಿಕ್ರಿಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಮೂಲಕ ಅವರು ಇಂಟರ್ನೆಟ್​​ ಪ್ರಪಂಚದ “ರಾಣಿ” ಎಂಬ ಬಿರುದು ಪಡೆದುಕೊಂಡಿದ್ದಾರೆ. ಆ ವಿಡಿಯೋವನ್ನು 3.4 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಆಲ್ರೌಂಡ್ ವಿಭಾಗದ ಫೈನಲ್​​ನಲ್ಲಿ ತೀರ್ಪುಗಾರರ ಆರಂಭಿಕ ಸ್ಕೋರ್ ಇಟೆಲಿಯ ಜಿಮ್ನಾಸ್ಟ್ ಸೋಫಿಯಾ ರಾಫೆಲಿ ಅವರ ಗೆಲುವಿನ ಅವಕಾಶಗಳನ್ನು ಕಸಿಯವ ಅವಕಾಶ ಇತ್ತು. ಆದರೆ ಕೋಚ್​​ ಕ್ಲಾಡಿಯಾ ಮನ್ಸಿನೆಲ್ಲಿ, ಸ್ಕೋರ್​​ ಬಗ್ಗೆ ತಕರಾರು ಎತ್ತಿದರು. ರೆಫರಿಗಳ ಬಳಿಗೆ ಹೋಗಿ ಸ್ಕೋರ್ ಮರುಪರಿಶೀಲಿಸುವಂತೆ ಒತ್ತಾಯಿಸಿದರು. ಈ ವೇಳೆ ಅವರು ನಿರ್ಭೀತಿಯಿಂದ ಅವರು ಮಾತನಾಡಿದ ಶೈಲಿ ಕೋಪದಿಂದ ತಿರುಗಿ ನಡೆದದುಕೊಂಡು ಹೋಗುತ್ತಿರುವ ವಿಡಿಯೊ ವೈರಲ್ ಆಗಿದೆ. ಆ ವಿಡಿಯೊ ಅದು ಕಾಡ್ಗಿಚ್ಚಿನಂತೆ ಹರಡಿತ್ತು ಕೊನೆಗೂ ವೈಯಕ್ತಿಕ ಆಲ್ರೌಂಡ್ ಸ್ಪರ್ಧೆಯಲ್ಲಿ ಇಟೆಲಿಯ ರಾಫೆಲಿ ಕಂಚಿನ ಪದಕ ಗೆದ್ದರು.

ಫಲಿತಾಂಶಕ್ಕಿಂತ ಕೋಚ್​ ಕ್ಲಾಡಿಯಾ ಅವರ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸ ಅವರನ್ನು ಅಂತರ್ಜಾಲದ ಸೆನ್ಷೇಷನ್ ಆಗಿ ಮಾಡಿತು. ಹಲವಾರು ಜನರು ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ಆನ್ ಲೈನ್ ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಾಡಿಯಾ ಅವರ ಸೌಂದರ್ಯ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ.

ಕ್ಲೌಡಿಯಾ ಯಾರು?

ಇಟಲಿಯಾ ಫ್ಯಾಬ್ರಿಯಾನೊದಲ್ಲಿ ಹುಟ್ಟಿ ಬೆಳೆದ ಕ್ಲಾಡಿಯಾ ಮನ್ಸಿನೆಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಜಿಮ್ನಾಸ್ಟಿಕ್​ನಲ್ಲಿ ತೊಡಗಿದ್ದರು. ಕ್ರಿಸ್ಟಿನಾ ಘಿಯುರೋವಾ ಮತ್ತು ಮಿರ್ನಾ ಬಾಲ್ಡೋನಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು. ಬಳಿಕ ಅವರು ಸ್ಥಳೀಯ ಕ್ಲಬ್ ಅನ್ನು ಸೆರಿದ್ದರು. ಇವೆಲ್ಲದರ ನಡುವೆ ಆಶ್ಚರ್ಯಕರ ರೀತಿಯಲ್ಲಿ ಅವರು ನಟನಾ ವೃತ್ತಿಜೀವನವನ್ನು ಮುಂದುವರಿಸಲು ಕ್ರೀಡೆಯನ್ನು ತೊರೆದರು.

ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ ಅವರು ‘ ಯೂನಿಕ್ ಬ್ರದರ್ಸ್​’, ‘ದಿ ಟೂರಿಸ್ಟ್’ ಮತ್ತು ‘ನೈನ್’ ನಂತಹ ಗಮನಾರ್ಹ ಚಿತ್ರಗಳಲ್ಲಿ ಪಾತ್ರ ವಹಿಸಿದ್ದರು. ಈ ನಡುವೆ ಪ್ಯಾರಿಸ್ ಒಲಿಂಪಿಕ್ಸ್​ಗೆ ಕೇವಲ ಹತ್ತು ತಿಂಗಳು ಬಾಕಿ ಇರುವಾಗ ಖ್ಯಾತ ತರಬೇತುದಾರ ಜೂಲಿಯೆಟಾ ಕ್ಯಾಂಟಲುಪ್ಪಿ ರಾಜೀನಾಮೆ ನೀಡಿದರು. ಹೀಗಾಗಿ ರಿಧಮಿಕ್​ ಜಿಮ್ನಾಸ್ಟಿಕ್ಸ್ ತಂಡವನ್ನು ಒಲಿಂಪಿಕ್ಸ್​​ನಲ್ಲಿ ಮುನ್ನಡೆಸಲು ಮನ್ಸಿನೆಲ್ಲಿ ಅವರನ್ನು ಫೆಡರೇಶನ್ ಕೇಳಿಕೊಂಡಿತು.

ಇದನ್ನೂ ಓದಿ: Sarabjot Singh : ಹರಿಯಾಣ ಸರ್ಕಾರದ ಉದ್ಯೋಗದ ಆಫರ್​ ತಿರಸ್ಕರಿಸಿದ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸರಬ್ಜೋತ್​ ಸಿಂಗ್​​

ಒಲಿಂಪಿಕ್ಸ್​ಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಮನ್ಸಿನೆಲ್ಲಿ ಕಠಿಣ ಸವಾಲನ್ನು ಎದುರಿಸಿದರು. ಸೋಫಿಯಾ ರಾಫೆಲಿ ಮತ್ತು ಮಿಲೆನಾ ಬಾಲ್ಡಸ್ಸಾರಿ ಅವರನ್ನು ವಿಶ್ವದರ್ಜೆಯ ಸ್ಪರ್ಧಿಗಳಾಗಿ ಪರಿವರ್ತಿಸಿದಿರು. ನಂಬಿಕೆ, ಗೌರವ ಮತ್ತು ಸಮರ್ಪಣೆಯ ಮೂಲಕ ಮನ್ಸಿನೆಲ್ಲಿ ಅವರಲ್ಲಿನ ಅತ್ಯುತ್ತಮ ಪ್ರದರ್ಶನ ಹೊರತಂದರು. ಅವರ ಮಾರ್ಗದರ್ಶನದಲ್ಲಿ, ರಾಫೆಲಿ ಅಂತಿಮವಾಗಿ ವೈಯಕ್ತಿಕ ಆಲ್ರೌಂಡ್ ಸ್ಪರ್ಧೆಯಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದಾರೆ.

Exit mobile version