Site icon Vistara News

VISTARA TOP 10 NEWS: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ, ಬೆಂಗಳೂರಲ್ಲಿ ಮಕ್ಕಳ ಮಾರಾಟ ದಂಧೆ ಮತ್ತಿತರ ದಿನದ ಪ್ರಮುಖ ಸುದ್ದಿಗಳು

Top 10 news

1.ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ
ಬೆಂಗಳೂರು: ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲೇ ಬಗೆಹರಿಯಬೇಕಾದ ಸಮಸ್ಯೆಗಳು ಬೆಂಗಳೂರಿನವರೆಗೂ ಬರಕೂಡದು. ಬಂದರೆ ನಿಮ್ಮಗಳ ವೈಫಲ್ಯ. ಇದನ್ನು ಸಹಿಸುವುದಿಲ್ಲ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎರಡನೇ ಅವಧಿ ಸಿಎಂ ಆದ ಬಳಿಕ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ (CM Home office) ಏರ್ಪಡಿಸಲಾಗಿದ್ದ ಮೊದಲ ಜನತಾ ದರ್ಶನ (Janatha Darshan) ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ ತರುವಾಯ, ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಈ ಎಚ್ಚರಿಕೆಯನ್ನು ನೀಡಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!
ಇದನ್ನೂ ಓದಿ : Janatha Darshan : ಹಣ ಲೂಟಿ ಯಾಕೆ; ಜನತಾ ದರ್ಶನ ಮಾಡುತ್ತಿರುವ ಸಿಎಂಗೆ ಬಿಜೆಪಿಯಿಂದ 9 ಪ್ರಶ್ನೆ!

2.ಬೆಂಗಳೂರಲ್ಲಿ ಮಕ್ಕಳ ಮಾರಾಟ; ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಖತರ್ನಾಕ್‌ ಗ್ಯಾಂಗ್‌!
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸದ್ದಿಲ್ಲದೇ ಮಕ್ಕಳ ಮಾರಾಟ ಜಾಲವು (Child trafficking) ಶುರುವಾಗಿದ್ಯಾ? ಇಂತಹದೊಂದು ಪ್ರಶ್ನೆ ಸಹಜವಾಗಿ ಕಾಡುತ್ತಿದೆ. ಹೆತ್ತವರ ಮಡಿಲಿನಲ್ಲಿ ಬೆಚ್ಚಗೆ ಮಲಗಿರುವ ಹಸುಗೂಸುಗಳನ್ನು ಕದ್ದು ಮಾರಾಟ ಮಾಡುವ ಜಾಲವೊಂದನ್ನು ಸಿಸಿಬಿ ಅಧಿಕಾರಿಗಳು ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

3. ಎಗ್ಗಿಲ್ಲದೆ ನಡೀತಿದ್ಯಾ ಪೊಲೀಸ್‌ ಟ್ರಾನ್ಸ್‌ಫರ್‌ ದಂಧೆ; ಉಮಾಪತಿ ಡೀಲ್‌?
ಬೆಂಗಳೂರು: ರಾಜ್ಯದಲ್ಲಿ ಪೊಲೀಸ್‌ ಟ್ರಾನ್ಸ್‌ಫರ್‌ ದಂಧೆ (Transfer Scam) ಇನ್ನೂ ಜೋರಾಗಿಯೇ ನಡೆಯುತ್ತಿದೆಯಾ? ಹೌದು ಎನ್ನುತ್ತದೆ ಒಂದು ಆಡಿಯೋ ಮತ್ತು ಅದರ ಸುತ್ತ ತಿರುಗುತ್ತಿರುವ ವಾದ ವಿವಾದ. ಕಾಂಗ್ರೆಸ್‌ ನಾಯಕರೂ ಆಗಿರುವ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ (Congress leader Umapathy gowda) ಅವರು ಸಾಮಾಜಿಕ ಕಾರ್ಯಕರ್ತ ವಿಜಯ್‌ ಡೆನ್ನಿಸ್‌ (Social worker Vijay Dennis) ಅವರ ಜತೆಗೆ ನಡೆಸಿರುವ ಮಾತುಕತೆಯ ಚಿತ್ರಣ ರಾಜ್ಯದಲ್ಲಿ ಪೊಲೀಸ್‌ ವರ್ಗಾವಣೆ (Police Transfer) ದಂಧೆಗೆ ಸಾಕ್ಷಿ ನುಡಿದಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

4. ಐಟಿ ದಾಳಿಗೆ ಒಳಗಾಗಿದ್ದ ಕಂಟ್ರಾಕ್ಟರ್‌ ಅಂಬಿಕಾಪತಿ ಹೃದಯಾಘಾತದಿಂದ ನಿಧನ
ಬೆಂಗಳೂರು: ಕಳೆದ ಅಕ್ಟೋಬರ್‌ 13ರಂದು ಐಟಿ ದಾಳಿಗೆ ಒಳಗಾಗಿದ್ದ ಕಂಟ್ರಾಕ್ಟರ್ಸ್‌ ಅಸೋಸಿಯೇಷನ್‌ನ (Contractors Association) ಉಪಾಧ್ಯಕ್ಷ ಅಂಬಿಕಾಪತಿ (Contractor Ambikapati) ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಅಂದು ನಡೆದ ಬೃಹತ್‌ ಐಟಿ ದಾಳಿಯಲ್ಲಿ (IT Raid) ಅಂಬಿಕಾಪತಿ ಅವರ ಮಾನ್ಯತಾ ಟೆಕ್‌ ಪಾರ್ಕ್‌ ಮತ್ತು ಆರ್‌.ಟಿ ನಗರದ ಪುತ್ರನ ಮನೆಯಲ್ಲಿ 42 ಲಕ್ಷ ರೂ. ಪತ್ತೆಯಾಗಿತ್ತು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

5. Rishab Shetty: ಕಾಂತಾರ; ಚಾಪ್ಟರ್‌ 1 ಫಸ್ಟ್ ಲುಕ್‌ನಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ
ಬೆಂಗಳೂರು: ಕಾಂತಾರʼ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ಹಾಗೂ ನಟಿಸಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಸಿನಿಮಾದ ಫಸ್ಟ್‌ ಲುಕ್‌ ರಿವೀಲ್‌ ಯಾವಾಗ ಎಂಬುದು ಅಭಿಮಾನಿಗಳು ಕಾತುರದಿಂದ ಕಾದಿದ್ದರು. ಇದೀಗ ಡಿವೈನ್ಸ್‌ ಸ್ಟಾರ್‌ ತಮ್ಮ ರೌದ್ರಾವತಾರವನ್ನು ತೋರಿಸಿದ್ದಾರೆ. ಇಂಗ್ಲಿಷ್‌ನಲ್ಲಿಯೇ ಕಾಂತಾರ ಚಾಪ್ಟರ್‌ -1 ಲುಕ್ ಔಟ್ ಆಗಿದೆ. ಪ್ರತಿಕ್ಷಣವು ದೈವಿಕ ಸ್ಪರ್ಶ ನೀಡುವಂತಹ ಹಿನ್ನೆಲೆ ಧ್ವನಿಯಲ್ಲಿ ತಮ್ಮ ಅವತಾರವನ್ನು ಬಹಿರಂಗೊಳಿಸಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

6. ನ.30ರವರೆಗೆ ವರ್ಟಿಕಲ್ ಡ್ರಿಲಿಂಗ್, ಇನ್ನೂ 3 ದಿನ ಕಾರ್ಮಿಕರಿಗೆ ಸುರಂಗವೇ ಗತಿ
ನವದೆಹಲಿ: ಸಿಲ್ಕ್ಯಾರಾ ಸುರಂಗದಲ್ಲಿ (Uttarkashi tunnel collapse) ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ (Rescue Operation) ಕೊರೆಯಲಾಗುತ್ತಿದ್ದ ಹಾರಿಜಾಂಟಲ್ ಡ್ರಿಲಿಂಗ್‌ಗೆ (Horizontal Drilling) ಸಾಕಷ್ಟು ಅಡೆ ತಡೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಲಂಬವಾಗಿ ಡ್ರಿಲಿಂಗ್ ಆರಂಭಿಸಲಾಗಿದೆ(Vertical Drilling). ಈ ಕಾರ್ಯವು ನವೆಂಬರ್ 30ರ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಒಟ್ಟಾರೆ ರಕ್ಷಣಾ ಕಾರ್ಯಾಚರಣೆಯು ಈಗ 16ನೇ ದಿನಕ್ಕೆ ಕಾಲಿಟ್ಟಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

7. ಉಚಿತ ಗ್ಯಾರಂಟಿ’ಗಿಂತ 4 ರಾಜ್ಯಗಳ ಚುನಾವಣೆಯಲ್ಲಿ ಜಾತಿ ಮತಗಳೇ ನಿರ್ಣಾಯಕ!
ನವದೆಹಲಿ: ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯು (Assembly Elections) ಲೋಕಸಭೆ ಚುನಾವಣೆಯ ಸಮಿಫೈನಲ್‌ ಎಂದೇ ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ದೇಶದ ಗಮನ ಸೆಳೆದ ಕಾರಣ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ. ಬಿಜೆಪಿ ಸೇರಿ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳೂ ಇಂತಹ ಉಚಿತ ಕೊಡುಗೆಗಳ ಭರವಸೆಗಳನ್ನು ಸ್ಪರ್ಧೆಗೆ ಬಿದ್ದಂತೆ ನೀಡಿವೆ. ಆದರೆ, ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಉಚಿತ ಕೊಡುಗೆಗಳಿಗಿಂತ, ಜಾತಿವಾರು ಮತಗಳೇ ನಿರ್ಣಾಯಕ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

8. ಆನ್‌ಲೈನ್‌ನಲ್ಲಿ ಸುದ್ದಿ ಪ್ರಕಟಿಸುವವರೆಲ್ಲಾ ಇನ್ನು ʼಪ್ರಸಾರಕʼರೇ! ಹೊಸ ಪ್ರಸಾರ ಕಾಯಿದೆ ಹೀಗಿದೆ
ಹೊಸದಿಲ್ಲಿ: ಇನ್ನು ಮುಂದೆ ಸುದ್ದಿಗಳನ್ನು ಪ್ರಕಟಿಸುವ ಆನ್‌ಲೈನ್‌ನಲ್ಲಿ ಸುದ್ದಿ ಮತ್ತು ಪ್ರಚಲಿತ ವಿಷಯವನ್ನು ಪ್ರಕಟಿಸುವ ವ್ಯಕ್ತಿಗಳು ಸಹ ʼಪ್ರಸಾರಕರುʼ ಎಂದು ಪರಿಗಣಿಸಲ್ಪಡುತ್ತಾರೆ. ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳು, ವಾಟ್ಸ್ಯಾಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳು, ಆನ್ಲೈನ್‌ ಸುದ್ದಿತಾಣಗಳಲ್ಲಿ ಪ್ರಚಲಿತ ವಿಷಯಗಳನ್ನು ಪ್ರಕಟಿಸುವವರನ್ನು ʼಪ್ರಸಾರಕರುʼ ಎಂದು ದೇಶದ ನೂತನ ಪ್ರಸಾರ ವಿಧೇಯಕ (Broadcast Bill) ಪರಿಗಣಿಸಲು ಮುಂದಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.

9. ಕಾಂಗರೂ ಪಡೆಯನ್ನು ಹಿಮ್ಮೆಟ್ಟಿಸಿ ಸರಣಿ ಗೆಲ್ಲುವುದೇ ಸೂರ್ಯ ಬಳಗ?
ಗುವಾಹಟಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ (Ind vs Aus) ಮೂರನೇ ಟಿ20 ಪಂದ್ಯಕ್ಕೆ ಗುವಾಹಟಿಯ ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಐದು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಮೆನ್ ಇನ್ ಬ್ಲೂ ತಂಡ ಸರಣಿಯನ್ನು ಗೆಲ್ಲುವ ಗುರಿ ಹೊಂದಿದೆ. ಈ ಪಂದ್ಯವನ್ನು ಗೆದ್ದರೆ ಸರಣಿ ಸೂರ್ಯಕುಮಾರ್​ ಯಾದವ್​ ನೇತೃತ್ವದ ಭಾರತ ತಂಡದ ಕೈವಶವಾಗಲಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : IPL 2024: ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ; ಪಾಂಡ್ಯ ಮುಂಬೈ ಪಾಲು!

10. ನಟಿ ಎದೆ ಮೇಲೆ ಕೈಯಿಟ್ಟು ಕೊಟ್ರೆ ಪೋಸು; ಓರಿಗೆ ಸಿಗ್ತದೆ 20-30 ಲಕ್ಷ ಕಾಸು!
ಮುಂಬೈ: ಬಿಗ್ ಬಾಸ್ (Big Boss) ಮನೆ ಸೇರಿದ್ದ ಓರ್ಹಾನ್ ಅವತ್ರಮಣಿ ಅಲಿಯಾಸ್ ಓರಿ (Orhan Awatramani aka Orry) ಕಳೆದ ಒಂದು ವಾರದಿಂದ ಭಾರೀ ಸದ್ದು ಮಾಡುತ್ತಿದ್ದಾರೆ. ಹಾಗೆಯೇ ಶನಿವಾರ ಬಿಗ್ ಬಾಸ್ ಮನೆ ಪ್ರವೇಶಿಸಿ ಓರಿ, ಭಾನುವಾರ ಮನೆಯಿಂದ ಹೊರ ಬಿದ್ದಿದ್ದಾರೆ! ಆದರೆ, ಸಲ್ಮಾನ್ ಖಾನ್ (Salman Khan) ಅವರು ಕೇಳಿದ ಅನೇಕ ಪ್ರಶ್ನೆಗಳಿಗೆ ಓರಿ ನೀಡಿದ ಉತ್ತರಗಳು ಭಾರೀ ವೈರಲ್ ಆಗಿವೆ. ಓರಿ, ಸೆಲಿಬ್ರೆಟಿ ಪಾರ್ಟಿಗಳಿಗೆ ಹೋಗಿ, ಅಲ್ಲಿನ ನಟ, ನಟಿಯರ ಎದೆಯ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುತ್ತಾನೆ (posing for selfies) ಮತ್ತು ಆ ಫೋಟೋಗಳನ್ನು ಆತ ತನ್ನ ಸೋಷಿಯಲ್ ಮೀಡಿಯಾದಲ್ಲಿ ಷೇರು ಮಾಡುತ್ತಾನೆ. ಇದಕ್ಕಾಗಿ ಆತನಿಗೆ 20ರಿಂದ 30 ಲಕ್ಷ ರೂಪಾಯಿ ದೊರೆಯುತ್ತದೆ ಎಂದು ಹೇಳಿಕೊಂಡಿದ್ದಾನೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version