ಸಿಡ್ನಿ: 2026ರ ಕಾಮನ್ ವೆಲ್ತ್ ಕ್ರೀಡಾಕೂಟದ(Commonwealth Games 2026) ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಟೂರ್ನಿಯ ಆತಿಥ್ಯ ವಹಿಸಿಕೊಂಡಿದ್ದ ಆಸ್ಟ್ರೇಲಿಯಾ(Australia) ದಿಢೀರ್ ಆಗಿ ಟೂರ್ನಿಯಿಂದ ಹಿಂದೆ ಸರಿದಿದೆ. ಹೀಗಾಗಿ ಟೂರ್ನಿ ನಡೆಯುವುದು ಅನುಮಾನ ಎನ್ನಲಾಗಿದೆ. ಕ್ರೀಡಾಕೂಟ ಆಯೋಜನೆಯ ವೆಚ್ಚ ಭರಿಸಲು ಸಾಧ್ಯವಾಗದ ಕಾರಣ ವಿಕ್ಟೋರಿಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಪೂರ್ವ ನಿಗದಿಯಂತೆ 2026ರ ಕಾಮನ್ ವೆಲ್ತ್ ಗೇಮ್ಸ್ ಆಸ್ಟ್ರೇಲಿಯಾದ ವಿಕ್ಟೋರಿಯ ರಾಜ್ಯದಲ್ಲಿ ನಡೆಯಬೇಕಿತ್ತು. ಆದರೆ ಇದೀಗ ಸ್ಟೇಟ್ ಆಫ್ ವಿಕ್ಟೋರಿಯಾದ ಡೇನಿಯಲ್ ಆಂಡ್ರ್ಯೂ(Daniel Andrews) ಅವರು “ಆಸ್ಟ್ರೇಲಿಯಾ ಕಾಮನ್ ವೆಲ್ತ್ ಕ್ರೀಡಾಕೂಟದ ಆತಿಥ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟದ ಆಯೋಜನೆಗೆ 2 ದಶಲಕ್ಷ ಆಸ್ಟ್ರೇಲಿಯನ್ ಡಾಲರ್ (1.3 ದಶಲಕ್ಷ ಅಮೆರಿಕನ್ ಡಾಲರ್) ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 7 ದಶಲಕ್ಷ ಆಸ್ಟ್ರೇಲಿಯನ್ ಡಾಲರ್ ವೆಚ್ಚವಾಗುವ ಸಾಧ್ಯತೆ ಇದೆ. ಇಷ್ಟು ದೊಡ್ಡ ಮೊತ್ತ ವೆಚ್ಚ ಮಾಡುವುದು ಕಷ್ಟಕರ. ಹೀಗಾಗಿ ನಾವು ಟೂರ್ನಿಯಿಂದ ಹಿಂಎ ಸರಿಯಲು ನಿರ್ಧರಿಸಿದ್ದೇವೆ ಎಂದು ಡೇನಿಯಲ್ ಆಂಡ್ರ್ಯೂ ತಿಳಿಸಿದ್ದಾರೆ.
“ನಿಜಕ್ಕೂ ಇಷ್ಟು ದೊಡ್ಡದ ಮೊತ್ತವನ್ನು ವಿನಿಯೋಗಿಸಲು ಸಾಧ್ಯವೇ ಇಲ್ಲ. ನಾವು ಕ್ರೀಡಾಕೂಟ ಆಯೋಜನೆಗಾಗಿ ಆಸ್ಪತ್ರೆ ಮತ್ತು ಶಾಲೆಗಳಿಗೆ ವಿನಿಯೋಗಿಸುವ ಹಣವನ್ನು ನೀಡಲು ಸಾಧ್ಯವಿಲ್ಲ. ನಾವು ಕಳೆದ ಬಾರಿ ಮಂಡಿಸಿದ ಬಜೆಟ್ ಗಿಂತ ಮೂರು ಪಟ್ಟು ದೊಡ್ಡ ಟೂರ್ನಿ ಇದಾಗಿದೆ” ಒಂದೊಮ್ಮೆ ಈ ಟೂರ್ನಿಯನ್ನು ನಡೆಸಿದ್ದೇ ಆದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಅಂತಿಮವಾಗಿ ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇವೆ” ಎಂದು ಆಂಡ್ರ್ಯೂ ಹೇಳಿದರು. ಶೂಟಿಂಗ್ ಮತ್ತು ಕುಸ್ತಿಯಂತಹ ಕ್ರೀಡೆಗಳನ್ನು ಕೈಬಿಡಲಾಗಿದೆ ಈ ಕಾಮನ್ ವೆಲ್ತ್ ಟೂರ್ನಿಯಿಂದ ಕೈಬಿಡಲಾಗಿತ್ತು.
Bit of a long one this morning.
— Dan Andrews (@DanielAndrewsMP) July 17, 2023
You might have heard the news this morning that Victoria will no longer be hosting the 2026 Commonwealth Games.
And I wanted to tell you about the decision.
ಆಸ್ಟ್ರೇಲಿಯಾ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಈಗಾಗಲೇ 5 ಬಾರಿ ಆಯೋಜಿಸಿದೆ 2006ರಲ್ಲಿ ವಿಕ್ಟೋರಿಯಾದ ಮೆಲ್ಬೋರ್ನ್ನಲ್ಲಿ ಆಯೋಜಿಸಲಾಗಿತ್ತು 1938ರಲ್ಲಿ ಸಿಡ್ನಿಯಲ್ಲಿ 1962ರಲ್ಲಿ ಪರ್ತ್ನಲ್ಲಿ 1982ರಲ್ಲಿ ಬ್ರಿಸ್ಬೇನ್ ಮತ್ತು 2018ರ ಆವೃತ್ತಿ ಗೋಲ್ಡ್ಕಾಸ್ಟ್ನಲ್ಲಿ ನಡೆದಿತ್ತು. 6ನೇ ಬಾರಿಯ ಆತಿಥ್ಯ ಹಣಕಾಸಿನ ಸಮಸ್ಯೆಯಿಂದ ಕೈತಪ್ಪಿದೆ.
ಆಸ್ಟ್ರೇಲಿಯಾ ಈ ಟೂರ್ನಿಯ ಆತಿಥ್ಯದಿಂದ ಹಿಂದೆ ಸರಿದ ಕಾರಣ ಮುಂದೆ ಯಾವ ದೇಶ ಟೂರ್ನಿಯ ಆತಿಥ್ಯ ಪಡೆಯಲಿದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಒಂದೊಮ್ಮೆ ಯಾವುದೇ ದೇಶ ಟೂರ್ನಿಯ ಆತಿಥ್ಯಕ್ಕೆ ಮುಂದೆ ಬಾರದೇ ಹೋದರೆ ಈ ಟೂರ್ನಿ ರದ್ದುಗೊಳ್ಳಲಿದೆ.