ಕ್ರೀಡೆ
PM Modi: ಕಾಮನ್‌ವೆಲ್ತ್ ಹಗರಣದಿಂದ ಕ್ರೀಡೆ ಕುರಿತ ಕಾಂಗ್ರೆಸ್ ಅಸಡ್ಡೆ ಬಯಲು; ಪ್ರಧಾನಿ ಮೋದಿ
ನಗರ ಕ್ರೀಡಾ ಮೂಲಸೌಕರ್ಯ ಯೋಜನೆಗಳಲ್ಲಿ ಹಿಂದಿನ ಸರ್ಕಾರ ಕೇವಲ 300 ಕೋಟಿ ರೂ.ವ್ಯಯಿಸಿದೆ. ಆದರೆ ಖೇಲೋ ಇಂಡಿಯಾ ಉಪಕ್ರಮದ ಅಡಿಯಲ್ಲಿ ನಮ್ಮ ಸರ್ಕಾರವು ಸುಮಾರು 3,000 ಕೋಟಿ ರೂ.ಯೋಜನೆಗಳನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನವದೆಹಲಿ: ಹಿಂದಿನ ಸರ್ಕಾರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತೋರಿದ ಧೋರಣೆಯನ್ನು ಗಮನಿಸುವಾಗ ಇದು ಹಗರಣಕ್ಕೆ ಒತ್ತು ಕೊಟ್ಟ ರೀತಿಯಲ್ಲಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕ್ರೀಡಾಪಟುಗಳನ್ನು ಉದ್ದೇಶಿಸಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ವೇಳೆ ಮೋದಿ ಅವರು ಈ ಮಾತನ್ನು ಹೇಳಿದರು. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ತನ್ನದೇ ಆದ ವಿಶೇಷತೆ ಹೊಂದಿದೆ. ಈ ಕ್ರೀಡಾ ಕೂಟದಿಂದ ಹಲವು ಕ್ರೀಡಾಪಟುಗಳು ಬೆಳಕಿಗೆ ಬರಲಿದ್ದಾರೆ. ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ಭಾವನೆಯನ್ನು ಯುವಜನರಲ್ಲಿ ಹೆಚ್ಚಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷ ಟೀಕೆಯನ್ನು ಮಾಡಿದರು, ಕಾಮನ್‌ವೆಲ್ತ್ ಹಗರಣ ಹಿಂದಿನ ಸರ್ಕಾರಗಳು ಕ್ರೀಡೆಯ ಬಗ್ಗೆ ಹೊಂದಿದ್ದ ಧೋರಣೆಗೆ ಉತ್ತಮ ನಿದರ್ಶನ. ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಬಹುದಾದ ಕ್ರೀಡೆಯಲ್ಲಿ ಹಗರಣವೊಂದು ನಡೆದಿರುವುದು ನಿಜಕ್ಕೂ ಬೇಸರ ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ಚಾಟಿ ಬೀಸಿದರು.
ಇದನ್ನೂ ಓದಿ PM Modi: ಕ್ರೀಡೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಯುವಕರಿಗೆ ಸರ್ಕಾರ ಸದಾ ಪ್ರೋತ್ಸಾಹ; ಪ್ರಧಾನಿ ಮೋದಿ
ನಗರ ಕ್ರೀಡಾ ಮೂಲಸೌಕರ್ಯ ಯೋಜನೆಗಳಲ್ಲಿ ಹಿಂದಿನ ಸರ್ಕಾರ ಕೇವಲ 300 ಕೋಟಿ ರೂ.ವ್ಯಯಿಸಿದೆ. ಆದರೆ ಖೇಲೋ ಇಂಡಿಯಾ ಉಪಕ್ರಮದ ಅಡಿಯಲ್ಲಿ ನಮ್ಮ ಸರ್ಕಾರವು ಸುಮಾರು 3,000 ಕೋಟಿ ರೂ.ಯೋಜನೆಗಳನ್ನು ಮಾಡಿದೆ. ಈ ಮೂಲಕ ದೇಶದಲ್ಲಿ ಕ್ರೀಡೆಯ ಬಗ್ಗೆ ಇದ್ದ ಅಸಡ್ಡೆ ಇದೀಗ ಮರೆಯಾಗಿದೆ. ಕ್ರೀಡಾಪಟುಗಳ ಅಗತ್ಯತೆಗಳ ಬಗ್ಗೆ ನಮ್ಮ ಸರ್ಕಾರ ವಿಶೇಷ ಕ್ರೀಡಾ ಅಭಿಯಾನದ ಅಡಿಯಲ್ಲಿ ದೊರಕುವಂತೆ ಮಾಡಿದೆ ಎಂದರು. ಮುಂದಿನ ಒಪಿಂಪಿಕ್ಸ್ನಲ್ಲಿ ಭಾರತ ಶ್ರೇಷ್ಠ ಸಾಧನೆ ತೋರುವ ವಿಶ್ವಾಸವಿದೆ ಎಂದು ಈ ಸಂದರ್ಭದಲ್ಲಿ ಮೋದಿ ಹೇಳಿದರು.
ಕ್ರಿಕೆಟ್
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
ಬಹುತೇಕ ಎಲ್ಲ ಮೆಟ್ರೋ ಸಿಟಿಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಮುಕ್ತಾಯದ ಬಳಿಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಆಡಲು ಇಂಗ್ಲೆಂಡ್ಗೆ ತೆರಳಲಿದೆ. ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇದಾದ ಬಳಿಕ ನಡೆಯಲಿರುವ ಐಸಿಸಿ ಟೂರ್ನಿಯೆಂದರೆ ಏಕ ದಿನ ವಿಶ್ವ ಕಪ್. ಇದು ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದೆ. ಅದಕ್ಕಾಗಿ ಬಿಸಿಸಿಐ ಸಜ್ಜಾಗುತ್ತಿದೆ. ವರ್ಷದ ಕೊನೆಯಲ್ಲಿ ನಡೆಯಲಿರುವ ಈ ಟೂರ್ನಿಯ ವೇಳಾಪಟ್ಟಿ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಜತೆಗೆ ಪಂದ್ಯದ ತಾಣಗಳು ಎಲ್ಲೆಲ್ಲಿ ಎಂದು ತಿಳಿಯುವ ಕುತೂಹಲವೂ ಸೃಷ್ಟಿಯಾಗಿದೆ. ಮಾಹಿತಿಯೊಂದರ ಪ್ರಕಾರ ಟೂರ್ನಿಯ ವೇಳಾಪಟ್ಟಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದ ಬಳಿಕ ನಡೆಯಲಿದೆ.
ಡಬ್ಲ್ಯುಟಿಸಿ ಫೈನಲ್ ಸಮೀಪಿಸುತ್ತಿರುವುದರಿಂದ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಸಮಯದಲ್ಲಿ ಬಿಸಿಸಿಐ ವಿಶ್ವಕಪ್ನ ಸ್ಥಳಗಳು ಮತ್ತು ವೇಳಾಪಟ್ಟಿಯನ್ನು ಅನಾವರಣ ಮಾಡಲಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ.
ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ಮೇ 27 ರಂದು ಅಹಮದಾಬಾದ್ನಲ್ಲಿ ನಡೆದಿದೆ. ಅಲ್ಲಿ ಕ್ರೀಡಾಂಗಣಗಳ ಗುಣಮಟ್ಟ ಹದಗೆಡುತ್ತಿರುವುದನ್ನು ಮಂಡಳಿಯು ಬೊಟ್ಟು ಮಾಡಿ ತೋರಿಸಿದೆ. ದೇಶಾದ್ಯಂತ ಅನೇಕ ಸ್ಟೇಡಿಯಮ್ಗಳೂ ಇರುವುದರಿಂದ ಸೌಲಭ್ಯಗಳ ಗುಣಮಟ್ಟವನ್ನು ಸುಧಾರಿಸುವ ಜವಾಬ್ದಾರಿಯನ್ನು ಆಯಾಯ ಕ್ರಿಕೆಟ್ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಹೇಳಲಾಗಿದೆ. ಮೂಲ ಸೌಕರ್ಯ ಹೆಚ್ಚಿಸಲು ಬೇಕಾದ ಅನುದಾನ ವಿತರಣೆಗೂ ವ್ಯವಸ್ಥೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ :IPL 2023: ಟಿ20 ವಿಶ್ವ ಕಪ್ಗೆ ಹಾರ್ದಿಕ್ ಪಾಂಡ್ಯ ಸೂಕ್ತ ನಾಯಕ; ರವಿಶಾಸ್ತ್ರಿ ವಿಶ್ವಾಸ
ಬಿಸಿಸಿಐ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಕ್ರೀಡಾಂಗಣಗಳ ಸಂಭಾವ್ಯ ನವೀಕರಣಗಳ ಬಗ್ಗೆ ಚರ್ಚಿಸಲಾಯಿತು. ಮೂಲಸೌಕರ್ಯ ಸುಧಾರಣೆಯು ಹೆಚ್ಚು ಚರ್ಚಿಸಲಾದ ವಿಷಯಗಳಲ್ಲಿ ಒಂದು. ಏಕದಿನ ವಿಶ್ವ ಕಪ್ ವೇಗವಾಗಿ ಸಮೀಪಿಸುತ್ತಿರುವುದರಿಂದ, ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸು ನಿರ್ಧಾರ ಕೈಗೊಳ್ಳಲಾಯಿತು. ವಿಶ್ವ ಕಪ್ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ನಡೆಯುವ ಕಾರಣ ಅದಕ್ಕಿಂತ ಮೊದಲು ಸಜ್ಜುಗೊಳಿಸುವಂತೆ ಸೂಚಿಸಲಾಯಿತು.
ವಿಶ್ವಕಪ್ನ ಸ್ಥಳಗಳ ಯೋಜನೆಯೊಂದಿಗೆ, ಪದಾಧಿಕಾರಿಗಳಿಗೆ ನಿರ್ದಿಷ್ಟ ಸ್ಥಳಗಳ ಉಸ್ತುವಾರಿ ನೀಡುವ ಯೋಜನೆ ರೂಪಿಸಲಾಯಿತು. ನಾವು ಎಲ್ಲಾ ಮಹಾನಗರಗಳನ್ನು ಪಂದ್ಯಗಳಿಗೆ ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕ್ರಿಕೆಟ್
IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!
ಅಪ್ಪ, ಅಮ್ಮನ ಹೆಸರು, ಪತ್ನಿಯ ಮಾತಿನಂತೆ ಬಿಡಿಸಿದ ಟ್ಯಾಟೂಗಳು ದೇಹದ ಮೇಲಿವೆ ಎಂದು ಸೂರ್ಯಕುಮಾರ್ ಯಾದವ್ ವಿವರಿಸಿದ್ದಾರೆ.
ಮುಂಬಯಿ: ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯ ಐಪಿಎಲ್ ಪ್ರಶಸ್ತಿ ರೇಸ್ನಿಂದ ಹೊರ ಬಿದ್ದಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ಮೂಲಕ ಆರನೇ ಪ್ರಶಸ್ತಿ ಗಲ್ಲುವ ಅವಕಾಶದಿಂದ ವಂಚಿತವಾಗಿದೆ. ಏತನ್ಮಧ್ಯೆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದ್ದರು. ಆದರೆ, ತಂಡಕ್ಕೆ ಗೆಲುವು ತಂದುಕೊಡಲಾಗದ ಬೇಸರಕ್ಕೂ ಒಳಗಾದರು. ಇದೀಗ ಅವರು ಬೇಸರದಿಂದ ಮುಕ್ತರಾಗಿದ್ದು ತಮ್ಮ ಕುರಿತು ಹಲವಾರು ವಿವರಣೆಗಳನ್ನು ನೀಡಿದ್ದಾರೆ. ಈ ವೇಳೆ ಅವರು ತಮ್ಮ ದೇಹದ ಮೇಲಿರುವ ಟ್ಯಾಟೂಗಳ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ.
ಸೂರ್ಯಕುಮಾರ್ ಯಾದವ್ ತಮ್ಮ ದೇಹದ ಮೇಲೆ ತಾಯಿ, ತಂದೆ, ಪತ್ನಿ ಮತ್ತು ರಾಷ್ಟ್ರೀಯ ಕ್ಯಾಪ್ ಸಂಖ್ಯೆಗಳು (ಟೆಸ್ಟ್, ಏಕದಿನ ಮತ್ತು ಟಿ 20 ಐ) ಸೇರಿದಂತೆ ತಮ್ಮ ದೇಹದ ಮೇಲೆ ಅನೇಕ ಹಚ್ಚೆಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ. ನಕಾರಾತ್ಮಕ ಶಕ್ತಿಯನ್ನು ದೂರವಿರಿಸಲು ತಮ್ಮ ಕೈಯಲ್ಲಿ ಹೊಂದಿರುವ ಸಿಂಹದ ಮುಖದ ಹಚ್ಚೆಯನ್ನೂ ಹಾಕಿಸಿಕೊಂಡಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ.
“ನನ್ನ ತಾಯಿ ಮತ್ತು ತಂದೆಯ ಹೆಸರಿನ ಹಚ್ಚೆ ನನ್ನ ಬಳಿ ಇದೆ. ಇದು ನನ್ನ ಮೊದಲ ಹಚ್ಚೆ, ಆದ್ದರಿಂದ ನಾನು ಉಳಿದವುಗಳಿಗೆ ಅನುಮತಿ ಪಡೆದುಕೊಂಡೆ. ನನ್ನ ಹೆಂಡತಿ ಈ ದೃಷ್ಟಿ ತಾಗದಂತಿರುವ ಹಾಕಿಸಿಕೊಳ್ಳುವಂತೆ ನನಗೆ ಹೇಳಿದಳು ಎಂದು ಸೂರ್ಯಕುಮಾರ್ ಜಿಯೋ ಸಿನೆಮಾದೊಂದಿಗೆ ಮಾತನಾಡುತ್ತಾ ಹೇಳಿದರು.
“ನನ್ನ ಭುಜದ ಮೇಲೆ ನನ್ನ ತಾಯಿ ಮತ್ತು ತಂದೆಯ ಭಾವಚಿತ್ರವಿದೆ, ಅದು 4-5 ವರ್ಷಗಳಷ್ಟು ಹಳೆಯದು. ಇದು ನನ್ನ ಅಚ್ಚುಮೆಚ್ಚಿನದು. ಇದು ಶಾಂತ ಸಿಂಹ. ನಾನು ಶಾಂತ ಸಿಂಹ ಎಂದು ಸ್ಫೋಟಕ ಬ್ಯಾಟರ್ ಹೇಳಿದ್ದಾರೆ.
ವಿಶ್ವದ ನಂಬರ್ ಒನ್ ಟಿ20 ಬ್ಯಾಟರ್ ತನ್ನ ಮೇಲಿನ ತೋಳಿನ ಮೇಲೆ ಬಾಣಗಳ ಹಚ್ಚೆಯನ್ನೂ ಹೊಂದಿದ್ದಾರೆ. ವ್ಯಕ್ತಿಯೊಬ್ಬ ಜೀವನದಲ್ಲಿ ಹಿಂದಕ್ಕೆ ಹೋದಷ್ಟು ಮುಂದಕ್ಕೆ ಹೋಗುತ್ತಾನೆ ಎಂಬುದನ್ನು ಸೂಚಿಸಲು ಈ ಹಚ್ಚೆ ಹಾಕಿಕೊಂಡಿದ್ದೇನೆ ಎಂದು ಅವರು ವಿವರಣೆ ನೀಡಿದರು. ನಾನು ಆಸ್ಟ್ರೇಲಿಯಾ ವಿರುದ್ಧ ಸತತವಾಗಿ ಮೂರು ಬಾರಿ ಶೂನ್ಯಕ್ಕೆ ಔಟಾಗಿ ಬಳಿಕ ಫಾರ್ಮ್ಗೆ ಮರಳಿರುವುದೇ ಇದಕ್ಕೆ ಸೂಕ್ತ ಉದಾಹರಣೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ : ICC T20 Ranking: ನಂ.1 ಸ್ಥಾನ ಉಳಿಸಿಕೊಂಡ ಸೂರ್ಯಕುಮಾರ್ ಯಾದವ್
ವಿಶೇಷವೆಂದರೆ, ಮುಂಬೈ ಮೂಲದ ಕ್ರಿಕೆಟಿಗ ತನ್ನ ಮೇಲಿನ ತೋಳಿನ ಮೇಲೆ ವಿಶಿಷ್ಟ ಹಚ್ಚೆಯೊಂದನ್ನೂ ಹಾಕಿಸಿಕೊಂಡಿದ್ದಾರೆ. ಇದು ನ್ಯೂಜಿಲ್ಯಾಂಡ್ನ ಮಾವೊರಿ ಬುಡಕಟ್ಟು ಸಂಪ್ರದಾಯಕ್ಕೆ ಸಂಬಂಧಿಸಿದ್ದು. ಈ ವಿನ್ಯಾಸದ ಬಗ್ಗೆ ಮಾತನಾಡಿದ ಸೂರ್ಯ, ಇದು ಅದೃಷ್ಟವನ್ನು ತರುತ್ತದೆ ಮತ್ತು ನನ್ನನ್ನು ಸದಾ ಶಾಂತವಾಗಿರಿಸುತ್ತದೆ ಎಂದು ವಿವರಿಸಿದ್ದಾರೆ.
“ನಾನು ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ, ಮಾವೊರಿ ಬುಡಕಟ್ಟಿನ ಈ ವಿನ್ಯಾಸದ ಬಗ್ಗೆ ತಿಳಿದುಕೊಂಡೆ, ಈ ವಿನ್ಯಾಸವು ಅದೃಷ್ಟ ಮತ್ತು ಪ್ರೀತಿಯನ್ನು ತರುತ್ತದೆ ಮತ್ತು ನಿಮ್ಮನ್ನು ಶಾಂತವಾಗಿರಿಸುತ್ತದೆ ಎಂದು ಅಲ್ಲಿನ ವ್ಯಕ್ತಿಯೊಬ್ಬರು ಹೇಳಿದರು. ಅದನ್ನು ನಾನು ದೇಹದಲ್ಲಿ ಟ್ಯಾಟೂ ಮಾಡಿಸಿಕೊಂಡೆ ಎಂಬುದಾಗಿ ಅವರು ಹೇಳಿದರು.
ಕ್ರಿಕೆಟ್
ಸೋಶಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್ಫಾಲೊ ಮಾಡಿಕೊಂಡ ಶುಭ್ಮನ್, ಸಾರಾ! ಏನಾಯಿತು ಅವರಿಗೆ?
ಶುಭ್ಮನ್ ಮತ್ತು ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅನ್ಫಾಲೊ ಮಾಡುವ ಮೂಲಕ ಬೇರ್ಪಟ್ಟಿದ್ದಾರೆ ಎಂಬುದಾಗಿ ವರದಿಗಳು ಹೇಳಿವೆ.
ಮುಂಬಯಿ: ಶುಭ್ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ನಡುವಿನ ಹೆಸರು ಕಳೆದ ಕೆಲವು ತಿಂಗಳಿಂದ ವದಂತಿಯ ವಿಷಯವಾಗಿದೆ. ಅವರು ಆಗಾಗ ಅಲ್ಲಿಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದೆ ಅದಕ್ಕೆ ಕಾರಣ. ಈ ಸುದ್ದಿ ಎಲ್ಲೆಡೆ ಹರಡುತ್ತಿದ್ದರೂ. ಅವರು ತಮ್ಮ ಸಂಬಧವನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಅಥವಾ ನಿರಾಕರಿಸಿರಲಿಲ್ಲ. ಅದೇನೇ ಇದ್ದರೂ, ಇತ್ತೀಚಿನ ವರದಿಗಳ ಪ್ರಕಾರ ಶುಬ್ಮನ್ ಮತ್ತು ಸಾರಾ ಪ್ರತ್ಯೇಕಗೊಂಡಿದ್ದಾರೆ. ಅದೇ ರೀತಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ ಎಂಬುದಾಗಿಯೂ ಸುದ್ದಿಯಾಗಿದೆ.
ಅವರಿಬ್ಬರು ಯಾಕೆ ಅನ್ಫಾಲೊ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಊಹಾಪೋಹ ಸುದ್ದಿಗಳ ಪ್ರಕಾರ ಅವರಿಬ್ಬರೂ ಬ್ರೇಕ್ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾರಾ ಎಂಬ ಹೆಸರು ಶುಭ್ಮನ್ ಗಿಲ್ ಹೆಸರಿನ ಜತೆ ತಳುಕು ಹಾಕಿಕೊಂಡಿತತ್ತು. ಅವರು ಐಪಿಎಲ್ ಪಂದ್ಯವಾಡುವ ವೇಳೆ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಮೈದಾನಕ್ಕೆ ಇಳಿಯುವ ಸಂದರ್ಭದಲ್ಲಿ ಪ್ರೆಕ್ಷಕರು ಸಾರಾ, ಸಾರ ಎಂದು ಕೂಗುವ ಮೂಲಕ ಹುರಿದುಂಬಿಸುತ್ತಿದ್ದರು.
ಸಾರಾ ಅಲಿಖಾನ್ ಮತ್ತು ಗಿಲ್ ಎಂದಿಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಮಾಷೆಗಳಲ್ಲಿ ಭಾಗಿಯಾಗುವುದು ಅಥವಾ ಪ್ರತಿಕ್ರಿಯಿಸುವು ನಡೆದಿರಲಿಲ್ಲ. ಆದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವರು ಪರಸ್ಪರ ಅನುಸರಿಸುತ್ತಿದ್ದರು. ಇದೀಗ ಅವರಿಬ್ಬರ ಪಾಯೋಯರ್ಗಳ ಪಟ್ಟಿಯಲ್ಲಿ ಪರಸ್ಪರ ಹೆಸರುಗಳು ಕಾಣಿಸುತ್ತಿಲ್ಲ. ಹೀಗಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬುದಾಗಿ ಅಭಿಮಾನಿಗಳು ಊಹಿಸುತ್ತಿದ್ದಾರೆ.
ಸಾರಾ ಅಲಿ ಖಾಣ್ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಶುಬ್ಮನ್ ಗಿಲ್ ಅಥವಾ ಬೇರೆ ಯಾರೊಂದಿಗಾದರೂ ತನ್ನ ಸಂಬಂಧದ ಕುರಿತು ನಟಿ ಎಂದಿಗೂ ಪ್ರತಿಕ್ರಿಯೆ ಕೊಟ್ಟಿಲ್ಲ. ಮತ್ತೊಂದೆಡೆ, ಗಿಲ್ ತಮ್ಮ ತಂಡ ಗುಜರಾತ್ ಟೈಟನ್ಸ್ ಪರ ಐಪಿಎಲ್ ಪಂದ್ಯಗಳಲ್ಲಿ ಒಂದರ ನಂತರ ಒಂದರಂತೆ ಶತಕಗಳನ್ನು ಬಾರಿಸುತ್ತಿದ್ದಾರೆ. ಈ ಮೂಲಕ ಅಭಿಮಾನಿಗ ಸಂಖ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ.
ಸುಳಿವು ಕೊಟ್ಟಿದ್ದ ಗಿಲ್
ಶುಭ್ಮನ್ ಗಿಲ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದವರು. ಬಳಿಕ ಅವರಿಬ್ಬರೂ ಬೇರ್ಪಟ್ಟಿದ್ದರು ಎನ್ನಲಾಗಿದೆ. ಇದಾದ ಬಳಿಕ ನಟಿ ಸಾರಾ ಅಲಿ ಖಾನ್ ಜತೆ ಡಿನ್ನರ್ಗೆ ಶುಭ್ಮನ್ ಹೋಗಿದ್ದು ಸುದ್ದಿಯಾಗಿತ್ತು. ಜತೆಗೆ ವಿಮಾನವೊಂದರಲ್ಲಿ ಜತೆಯಾಗಿ ಪ್ರಯಾಣ ಮಾಡಿದ್ದರ ವಿಡಿಯೊಗಳು ಬೆಳಕಿಗೆ ಬಂದಿದ್ದವು.
ಕೆಲವು ತಿಂಗಳ ಹಿಂದೆ, ಸೋನಮ್ ಬಜ್ವಾ ಅವರೊಂದಿಗಿನ ಸಂದರ್ಶನದ ಸಮಯದಲ್ಲಿ ಮಾತನಾಡಿದ ಗಿಲ್, ಸಾರಾ ಜತೆಗಿನ ಡೇಟಿಂಗ್ ಸತ್ಯವೂ ಇರಬಹುದು, ಇಲ್ಲದೆಯೂ ಇರಬಹುದು ಎಂದು ಹೇಳಿದ್ದರು. ಈ ಮೇಲೆ ಅಭಿಮಾನಿಗಳ ಅನುಮಾನ ಹೆಚ್ಚಾಗಿತ್ತು.
ಇದನ್ನೂ ಓದಿ : Shubhman Gill | ಶುಭ್ಮನ್ ಗೆಳತಿ ಯಾರು? ಸಾರಾ ಅಲಿಖಾನ್ ಅಥವಾ ಸಾರಾ ತೆಂಡೂಲ್ಕರ್?
“ನೀವು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ?” ಸೋನಮ್ ಬಾಜ್ವಾ, ಶುಭ್ಮನ್ ಗಿಲ್ ಅವರನ್ನು ಕೇಳಿದ್ದರು. ಅದಕ್ಕೆ ಗಿಲ್ ನಾಚಿಕೆಪಟ್ಟು “ಇರಬಹುದು, ಇಲ್ಲದಿರಬಹುದು” ಎಂದು ಉತ್ತರಿಸಿದ್ದರು.
ಆದರೆ ಸಾರಾ ಯಾರೆಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ತೆಂಡೂಲ್ಕರ್ ಅವರ ಮಗಳು ಸಾರಾ ಅಥವಾ ಪಟೌಡಿ ರಾಜಕುಮಾರಿ ಸಾರಾ ಎಂಬುದಾಗಿ ಅವರು ಹೇಳಿರಲಿಲ್ಲ.
ಕ್ರಿಕೆಟ್
Team India : ಶೂಗಳ ಚಿತ್ರ ಹಾಕಿ ಹೊಸ ಸಂದೇಶ ರವಾನಿಸಿದ ಬುಮ್ರಾ; ಏನಿದರ ಅರ್ಥ?
ಇನ್ಸ್ಟಾಗ್ರಾಮ್ನಲ್ಲಿ ಸ್ಪೈಕ್ ಶೂಗಳ ಚಿತ್ರವನ್ನು ಹಾಕಿದ ಅವರ ಟೀಮ್ ಇಂಡಿಯಾಗೆ (Team India) ಮರಳುವ ಸೂಚನೆ ಕೊಟ್ಟರು.
ಮುಂಬಯಿ: ಭಾರತ ತಂಡದ ವೇಗದ ಬೌಲರ್ ಜಸ್ಪ್ರಿತ್ ಕಳೆದ 10 ತಿಂಗಳಿಂದ ಆಡುತ್ತಿಲ್ಲ. ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಅವರು ಎರಡು ಐಸಿಸಿ ಟೂರ್ನಿ, ತವರಿನ ಹಾಗೂ ವಿದೇಶದ ಪ್ರವಾಸದ ಸರಣಿಗಳನ್ನು ನಷ್ಟ ಮಾಡಿಕೊಂಡಿದ್ದಾರೆ. ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಆಡಿಲ್ಲ. ಏತನ್ಮಧ್ಯೆ ಅವರಿಗೆ ಕಳೆದ ಮಾರ್ಚ್ನಲ್ಲಿ ನ್ಯೂಜಿಲ್ಯಾಂಡ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಅವರು ಮತ್ತೆ ಆಟದ ಕಣಕ್ಕೆ ಇಳಿಯುವ ಸೂಚನೆ ಕೊಟ್ಟಿದ್ದಾರೆ. ಅವರು ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ತಮ್ಮ ಬೌಲಿಂಗ್ ಸ್ಪೈಕ್ಗಳ ಚಿತ್ರಗಳನ್ನು ಹಾಕಿದ್ದಾರೆ. ಅದಕ್ಕವರು ಹಲೊ ಸ್ನೇಹಿತರೇ ಮತ್ತೆ ಭೇಟಿಯಾಗಲಿದ್ದೇವೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪತ್ರಿಕಾ ಪ್ರಕಟಣೆಯಲ್ಲಿ ಖಚಿತಪಡಿಸಿದಂತೆ 29 ವರ್ಷದ ಬೌಳರ್ ಕಳೆದ ಏಪ್ರಿಲ್ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ 2023 ರಲ್ಲಿ ಭಾಗವಹಿಸಿರಲಿಲ್ಲ. ಇದೀಗ ಅವರು ಸಂಪೂರ್ಣ ಸುಧಾರಿಸಿಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ತಂಡಕ್ಕೆ ಮರಳುವ ಸೂಚನೆ ಕೊಟ್ಟಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯಕ್ಕೆ ಅವರು ಆಯ್ಕೆಯಾಗಿಲ್ಲ. ನಂತರದಲ್ಲಿ ಅವರು ತಂಡಕ್ಕೆ ಮರಳುವ ಸಾಧ್ಯತೆಗಳಿವೆ.
ಹಿನ್ನಡೆ ಅನುಭವಿಸಿದ್ದ ಮುಂಬೈ ಇಂಡಿಯನ್ಸ್
ಜಸ್ಪ್ರಿತ್ ಬುಮ್ರಾ ಅವರ ಅಲಭ್ಯತೆಯಿಂದಾಗಿ ಐದು ಬಾರಿಯ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಹೊಡ್ಡ ಮಟ್ಟದ ಹಿನ್ನಡೆ ಅನುಭವಿಸಿತ್ತು ಅವರ ಅನುಪಸ್ಥಿತಿಯು ಮುಂಬೈನ ಬೌಲಿಂಗ್ ದಾಳಿ ದುರ್ಬಲಗೊಂಡಿತ್ತು. ಇಂಗ್ಲೆಂಡ್ನ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಮೇಲೆ ಮುಂಬೈ ಭರವಸೆ ಇಟ್ಟಿತ್ತು. ಆದರೆ ಮೊಣಕೈ ಸಮಸ್ಯೆಯು ಪುನರಾವರ್ತನೆಗೊಂಡ ಕಾರಣ ಅವರ ಸೇವೆಯು ತಂಡಕ್ಕೆ ಲಭಿಸಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ನೇತೃತ್ವದ ತಂಡದ ಬೌಲಿಂಗ್ ವಿಭಾಗ ಒತ್ತಡ ಎದುರಿಸಿತ್ತು.
ಆರ್ಚರ್ ಐಪಿಎಲ್ 2023ರಲ್ಲಿ ಮುಂಬೈ ಪರ ಐದು ಬಾರಿ ಮೈದಾನಕ್ಕೆ ಇಳಿದಿದ್ದರೂ ಸಂಪೂರ್ಣ ವೈಫಲ್ಯ ಎದುರಿಸಿದ್ದರು. 9.5 ಎಕಾನಮಿಯಲ್ಲಿ ರನ್ ನೀಡಿದ್ದ ಅವರು ಕೇವಲ ಎರಡು ಉರುಳಿಸಲು ಸಫಲಗೊಂಡಿದ್ದರು. ಹೀಗಾಗಿ 28 ವರ್ಷದ ವೇಗಿ ಕೊನೇ ಹಂತದಲ್ಲಿ ಆಡಿರಲಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಲು ಬೆಲ್ಜಿಯಂಗೆ ಹೋಗಿದ್ದಾರೆ ಎಂದು ವರದಿಯಾಗಿದ್ದವು.
ಮುಂಬಯಿ ತಂಡದಲ್ಲಿ ಉಂಟಾದ ಗಾಯದ ಸಮಸ್ಯೆ ಜೇಸನ್ ಬೆಹ್ರೆನ್ಡಾರ್ಫ್ ಮತ್ತು ಆಕಾಶ್ ಮಧ್ವಾಲ್ ಅವರಿಗೆ ಸುವರ್ಣಾವಕಾಶಗಳನ್ನು ನೀಡಿತು. ಇಬ್ಬರೂ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಆದರೆ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಕಟ್ಟಿ ಹಾಕಲು ಈ ಬೌಲರ್ಗಳಿಗೆ ಸಾಧ್ಯವಾಗಿರಲಿಲ್ಲ.
ರೋಹಿತ್ ಶರ್ಮಾ ನೇತೃತ್ವದ ತಂಡದಲ್ಲಿ ಬೆಹ್ರೆನ್ಡಾರ್ಫ್ 12 ಪಂದ್ಯಗಳಲ್ಲಿ 9.21 ಎಕಾನಮಿಯಂತೆ 14 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇನ್ನು ಮಧ್ವಾಲ್ ಆಡಿದ ಎಂಟು ಪಂದ್ಯಗಳಲ್ಲಿ 8.59 ಎಕಾನಮಿಯಂತೆ 14 ವಿಕೆಟ್ ಕಬಳಿಸಿದ್ದಾರೆ. ಇನ್ನು ಮೇ 24 ರಂದು ಕೃಣಾಲ್ ಪಾಂಡ್ಯ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಮಧ್ವಾಲ್ 3.3 ಓವರ್ಗಳಲ್ಲಿ 5 ರನ್ಗಳಿಗೆ 5 ವಿಕೆಟ್ ಉರುಳಿಸಿದ್ದರು.
-
ಕರ್ನಾಟಕ15 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ17 hours ago
Karnataka Cabinet Expansion Live : 34 ಸಚಿವರಿಗೆ ಖಾತೆ ಹಂಚಿಕೆ; ಬಯಸಿದ ಖಾತೆ ಪಡೆದ ಡಿ ಕೆ ಶಿವಕುಮಾರ್
-
ಕರ್ನಾಟಕ15 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ13 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ9 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕಿರುತೆರೆ15 hours ago
Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಅತಿಥಿಗಳು ಇವರು!
-
ಕ್ರಿಕೆಟ್18 hours ago
IPL 2023: ಶತಕ ಬಾರಿಸಿ ಸೆಹವಾಗ್ ದಾಖಲೆ ಮುರಿದ ಶುಭಮನ್ ಗಿಲ್
-
ಕರ್ನಾಟಕ13 hours ago
Karnataka Cabinet: ಸಂಪುಟದಲ್ಲಿ ಸೋತರೂ ಖಾತೆಯಲ್ಲಿ ಗೆದ್ದ ಡಿ.ಕೆ. ಶಿವಕುಮಾರ್: ಇಲ್ಲಿದೆ ಎಲ್ಲ ಸಚಿವರ ಖಾತೆಗಳ ಪಟ್ಟಿ