ಬೆಂಗಳೂರು:| ಭಾರತ ಹಾಗೂ ದಕ್ಷಿಣ ಆಫ್ರಿಕಾ (Ind vs Sa T20) ನಡುವಿನ ಟಿ೨೦ ಸರಣಿಯ ನಿರ್ಣಾಯಕ ೫ನೇ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆಮಾಡಿಕೊಂಡಿದೆ. ರಿಷಭ್ ಪಂತ್ ಸತತ ಐದನೇ ಬಾರಿ ಟಾಸ್ ಸೋತಿದ್ದಾರೆ.
ಇಂದಿನ ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದ್ದು, ತಂಡವನ್ನು ಕೇಶವ್ ಮಹಾರಾಜ್ ಮುನ್ನಡೆಸಲಿದ್ದಾರೆ. ತಂಡ ಐದನೇ ಪಂದ್ಯದಲ್ಲಿಯೂ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಆರಂಭದಲ್ಲಿ ವರುಣನ ವಿಘ್ನ ಕಾಡಿದ್ದು, ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಸರಣಿಯ ಕ್ಲೈಮ್ಯಾಕ್ಸ್ ತೀವ್ರ ಕುತೂಹಲ ಕೆರಳಿಸಿದೆ.
ಪಿಚ್ ರಿಪೋರ್ಟ್
ಇಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರು ಹವಾಮಾನ ವರದಿ ಪ್ರಕಾರ ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಗಳಿವೆ.
ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಪೂರಕವಾಗಿಲಿದೆ. ಈ ಪಿಚ್‌ನಲ್ಲಿ ಚೇಸ್ ಮಾಡಿ ಗೆಲುವು ಸಾಧಿಸಿದ ಪ್ರಮಾಣ ಹೆಚ್ಚಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೇಶವ್ ಮಹಾರಾಜ್ ಉತ್ತಮ ನಿರ್ಣಯ ಕೈಗೊಂಡಿದ್ದಾರೆ. ರಿಷಭ್ ಟಾಸ್ ಗೆದ್ದಿದ್ದರೂ ಅವರಿಂದ ಇದನ್ನೇ ನಿರೀಕ್ಷಿಸಲಾಗುತ್ತಿತ್ತು.
ತಂಡದ ವಿವರ:
ಕಳೆದ ನಾಲ್ಕು ಪಂದ್ಯಗಳಲ್ಲಿಯೂ ಭಾರತ ತಂಡವು ಯಾವುದೇ ಬದಲಾವಣೆ ಮಾಡಿರಲಿಲ್ಲ. ಈ ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ದಕಿಣ ಆಫ್ರಿಕಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಇಂದಿನ ಪಂದ್ಯದಲ್ಲಿ ತಂಡದ ನೇತೃತ್ವವನ್ನು ಕೇಶವ್ ಮಹರಾಜ್ ವಹಿಸಲಿದ್ದಾರೆ. ಇದು ಕೇಶವ್ ಪಾಲಿಗೆ ಮಹತ್ವದ ಪಂದ್ಯವಾಗಲಿದೆ. ಸರಣಿ ಗೆಲ್ಲಲು ಈ ಪಂದ್ಯವನ್ನು ಗೆಲ್ಲುವುದು ಅತ್ಯಗತ್ಯವಾಗಿದ್ದು, ಕೇಶವ್ ಯಾವ ರೀತಿ ಗೇಮ್ ಪ್ಲಾನ್ ಮಾಡಲಿದ್ದಾರೆ ಎಂದು ನೋಡಬೇಕಿದೆ.
ಭಾರತ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ, ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್.
ದಕ್ಷಿಣ ಆಫ್ರಿಕ: ಕ್ವಿಂಟನ್ ಡಿ ಕಾಕ್, ರಿಜಾ ಹೆನ್ರಿಕ್ಸ್ , ರಸ್ಸಿ ವ್ಯಾನ್ ಡರ್ ಡಸ್ಸೆನ್, ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೀನ್, ಡ್ವೈನ್ ಪಿಟೋರಿಯಸ್, ಕೇಶವ್ ಮಹಾರಾಜ್ (ನಾಯಕ) , ಕಗಿಸೊ ರಬಾಡಾ, ಟ್ರಿಸ್ಟೆನ್ ಸ್ಟಬ್ಸ್, ತಬ್ರಿಜ್ ಶಂಸಿ, ಅನ್ರಿಚ್ ನೊಕಿಯೆ, ಲುಂಗಿ ಎನ್‌ಗಿಡಿ.
ಇದನ್ನೂ ಓದಿ: Ind vs Sa T20 | ಬೆಂಗಳೂರಿನಲ್ಲಿ ಇಂದು ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದೇ?