Site icon Vistara News

Year Ender 2023 : ಕ್ರಿಕೆಟ್​​ ಕ್ಷೇತ್ರ ಕಂಡ ಸೋಲು- ಗೆಲುವಿನ ಅವಿಸ್ಮರಣೀಯ ಕ್ಷಣಗಳು ಇವು…

World cup champions

ಮತ್ತೊಂದು ರೋಮಾಂಚಕಾರಿ ವರ್ಷಕ್ಕೆ ತೆರೆ ಬೀಳುತ್ತಿದೆ. ಈ ವರ್ಷದಲ್ಲಿ ಹಲವಾರು ಕ್ರೀಡಾಕೂಟಗಳು ನಡೆದಿವೆ. ನೂರಾರು ದಾಖಲೆಗಳು ಸೃಷ್ಟಿಯಾಗಿವೆ. ವೈಯಕ್ತಿಕ ದಾಖಲೆ, ಅಚ್ಚರಿಯ ಫಲಿತಾಂಶ, ತಂಡಗಳ ಪರಿಶ್ರಮ ಎಲ್ಲವೂ ಈ ವರ್ಷದಲ್ಲಿ ಕ್ರೀಡಾ ಪ್ರೇಮಿಗಳ ಮನಗೆದ್ದಿದೆ. ಎಲ್ಲದಕ್ಕಿಂತ ಪ್ರಮುಖವಾಗಿ ಕ್ರಿಕೆಟ್​ ಕ್ಷೇತ್ರದಲ್ಲಿ ಕೆಲವೊಂದು ಅಚ್ಚರಿಯ ಬೆಳವಣಿಗೆಗಳು ನಡೆದಿವೆ. ಅಚ್ಚರಿಯ ಫಲಿತಾಂಶಗಳಿಂದ ಹಿಡಿದು ಹಲವು ದಾಖಲೆಗಳನ್ನು ಮುರಿಯುವ ವೈಯಕ್ತಿಕ ಪ್ರದರ್ಶನಗಳಿಗೆ 2023 (Year Ender 2023) ಸಾಕ್ಷಿಯಾಗಿದೆ.

ಕ್ರಿಕೆಟ್​ನ ಪ್ರತಿಯೊಂದು ಕ್ಷಣಗಳು ಆಟಗಾರರ ಅಪಾರ ಪ್ರತಿಭೆಯ ಅನಾವರಣಕ್ಕೆ ಕಾರಣವಾಗಿದೆ. ತಂಡಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದೆ. ಹೀಗಾಗಿ 20023ರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಆಹ್ಲಾದಕರ ಮತ್ತು ಮರೆಯಲಾಗದ ಘಟನೆಗಳು ಸಂಭವಿಸಿವೆ. ಅಂಥ ಕೆಲವು ಕ್ಷಣಗಳನ್ನು ಸ್ಮರಿಸಿಕೊಳ್ಳುವುದು ಅತ್ಯಗತ್ಯ. ಅಂಥ ಐದು ಅವಿಸ್ಮರಣೀಯ ಕ್ಷಣಗಳನ್ನು ಈ ಕೆಳಗೆ ವಿವರಿಸಲಾಗಿದೆ.

5. ಮೂರು ವಿಶ್ವ ಚಾಂಪಿಯನ್ ತಂಡವನ್ನು ಸೋಲಿಸಿದ ಅಫಘಾನಿಸ್ತಾನ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಫ್ಘಾನಿಸ್ತಾನವು ತಂಡ ಪ್ರತಿ ಬಾರಿಯೂ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿರುತ್ತದೆ. ಅಂತೆಯೇ ಈ ವರ್ಷವೂ ಕೆಲವು ಅಮೋಘ ಸಾಧನೆಗಳನ್ನು ಮಾಡಿದೆ. ಪ್ರಮುಖವಾಗಿ ಮೂರು ವಿಶ್ವ ಚಾಂಪಿಯನ್ ತಂಡಗಳನ್ನು ಸೋಲಿಸುವ ಮೂಲಕ ಖ್ಯಾತಿ ಪಡೆದುಕೊಂಡಿದೆ. ಶಾರ್ಜಾದಲ್ಲಿ ನಡೆದ ಟಿ20 ಸರಣಿಯಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಈ ತಂಡ ಏಷ್ಯಾ ಕಪ್ 2023ರಲ್ಲಿ ಎರಡನೇ ಸುತ್ತಿಗೆ ಬಹುತೇಕ ಅರ್ಹತೆ ಪಡೆದುಕೊಂಡು ಸಾಧನೆ ಮಾಡಿತ್ತು.

ಐಸಿಸಿ ವಿಶ್ವಕಪ್ 2023 ರಲ್ಲಿ, ಅಫ್ಘಾನಿಸ್ತಾನವು ಕ್ರಿಕೆಟ್ ಜಗತ್ತು ಹುಬ್ಬೇರಿಸುವಂತೆ ಮಾಡಿತ್ತು. ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾದಲ್ಲಿ ಮೂರು ತಂಡಗಳು ಮಾಜಿ ವಿಶ್ವಕಪ್ ವಿಜೇತರು. ಅವರ ವಿರುದ್ಧ ಏಕದಿನ ಗೆಲುವುಗಳನ್ನು ದಾಖಲಿಸಿದ್ದರು. ಅಂತಿಮವಾಗಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಪೆಟ್ಟು ಕೊಡಲು ಮುಂದಾಗಿ ಅನುಭವದ ಕೊರತೆಯಿಂದಾಗಿ ಸೋಲು ಕಂಡಿತ್ತು. ವಿಶ್ವ ಕಪ್​ನಲ್ಲಿ ಸೆಮಿಫೈನಲ್ ಅರ್ಹತೆ ಪಡೆಯುವ ಸೂಚನೆಯನ್ನೂ ನೀಡಿತ್ತು. ಆದರೆ, ಅಂತಿಮ ಹಂತದಲ್ಲಿ ಅದು ಸಾಧ್ಯವಾಗಿರಲಿಲ್ಲ.

4. ಗ್ಲೆನ್​ ಮ್ಯಾಕ್ಸ್​ವೆಲ್​ ಅಬ್ಬರದ ದ್ವಿಶತಕದ ಸಾಧನೆ

ಅಫ್ಘಾನಿಸ್ತಾನವು ವಿಶ್ವ ಕಪ್​ ಪಂದ್ಯದಲ್ಲಿ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಸೋಲು ನೀಡುವ ಮುನ್ಸೂಚನೆ ಕೊಟ್ಟಿತ್ತು. ಅದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯ. ಅಫ್ಘಾನಿಸ್ತಾನ 50 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತ್ತು. ಈ ಪಂದ್ಯದಲ್ಲಿ ಆಫ್ಘನ್ ಆಟಗಾರ ಇಬ್ರಾಹಿಂ ಝದ್ರನ್ ಚೊಚ್ಚಲ ಶತಕ ಬಾರಿಸಿದ್ದರು. ನಂತರ ನವೀನ್ ಉಲ್ ಹಕ್ ಮತ್ತು ಅಜ್ಮತುಲ್ಲಾ ಒಮರ್ಜೈ ಅವರ ಬೌಲಿಂಗ್ ಅಬ್ಬರಕ್ಕೆ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. ಈ ವೇಳೆ ಗೆಲುವು ಅಫಘಾನಿಸ್ತಾನಕ್ಕೆ ಸೇರಿದ್ದು ಎಂದು ನಂಬಲಾಯಿತು.

ಇದನ್ನೂ ಓದಿ : Year Ender 2023 : ಒಂದು ವರ್ಷದ ಅವಧಿಯಲ್ಲಿ ಇಹ ಲೋಕ ತ್ಯಜಿಸಿದ ಕ್ರಿಕೆಟ್ ದಂತಕತೆಗಳು ಇವರು

ಸ್ಫೋಟಕ ಬ್ಯಾಟರ್​​ ಗ್ಲೆನ್ ಮ್ಯಾಕ್ಸ್​ವೆಲ್ ಅವರು ಹೋರಾಟ ಶುರು ಮಾಡಿದ್ದರು. ಸ್ನಾಯು ಸೆಳೆತದ ನಡುವೆಯೇ 128 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ ಅಜೇಯ 201* ರನ್ ಬಾರಿಸಿದ್ದರು. ಮ್ಯಾಕ್ಸ್ವೆಲ್ ಕೇವಲ ಒಂದು ಕಾಲಿನ ಮೇಲೆ ನಿಂತು ವಾಂಖೆಡೆ ಕ್ರೀಡಾಂಗಣದ ಎಲ್ಲಾ ಭಾಗಗಳಿಗೆ ಚೆಂಡುಗಳನ್ನು ಬಾರಿಸಿದ್ದರು. ಇದು ಅವರ ಜೀವನಶ್ರೇಷ್ಠ ಇನಿಂಗ್ಸ್​​ ಹಾಗೂ 2003ರಲ್ಲಿ ಕ್ರಿಕೆಟ್​ ಕ್ಷೇತ್ರ ಕಂಡಿರುವ ಅವಿಸ್ಮರಣೀಯ ವೈಯಕ್ತಿಕ ಪ್ರದರ್ಶನ.

3. ಐದನೇ ಐಪಿಎಲ್​ ಟ್ರೋಫಿ ಗೆದ್ದ ಮಹೇಂದ್ರ ಸಿಂಗ್ ಧೋನಿ

ಐಪಿಎಲ್ 2023 ಪ್ರಾರಂಭವಾದಾಗ, ಎಂಎಸ್ ಧೋನಿ ಪಂದ್ಯಾವಳಿಯಲ್ಲಿ ಆಡುವುದು ಇದೇ ಕೊನೆಯ ಬಾರಿ ಎಂಬ ಮಾತು ಇತ್ತು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಐಪಿಎಲ್ ಹೋಮ್​ ಮತ್ತು ಅವೇ ವೇಳಾಪಟ್ಟಿಗೆ ಮರಳಿತ್ತು. ಅಭಿಮಾನಿಗಳಿಗೆ ಧನ್ಯವಾದ ಹೇಳಲು ಧೋನಿ ಕೊನೇ ಋತುವಿನಲ್ಲಿ ಆಡುತ್ತಾರೆ ಎಂದು ಹೇಳಲಾಯಿತು. ಹೀಗಾಗಿ ಅವರ ಅಭಿಮಾನಿಗಳು ಹುಚ್ಚೆದ್ದಿದ್ದರು.

ಇಡೀ ಟೂರ್ನಿಯಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಮಾಡಲು ಅಥವಾ ಸಿಎಸ್​ಕೆ ತಂಡವನ್ನು ಮುನ್ನಡೆಸಲು ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಕಿವಿಗಡಚಿಕ್ಕುವ ಸ್ವಾಗತ ಪಡೆದರು. ಚೆಪಾಕ್ನಲ್ಲಿ ಎಂಎಸ್ ಧೋನಿ ಅವರ ನೆಟ್ ಸೆಷನ್​ಗಳ ವೇಳೆಯೂ ಅಭಿಮಾನಿಗಳ ಮೈದಾನ ತುಂಬೆಲ್ಲಾ ತುಂಬಿಕೊಂಡಿದ್ದರು. ಅಂತಿಮವಾಗಿ ಅವರ ತಂಡವೇ ಟ್ರೋಫಿ ಗೆದ್ದಿತು. ಈ ವೇಳೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.

4. 50ನೇ ಏಕ ದಿನ ಶತಕ ಬಾರಿಸಿದ ವಿರಾಟ್​ ಕೊಹ್ಲಿ

ಸಚಿನ್ ತೆಂಡೂಲ್ಕರ್ 463 ಏಕದಿನ ಮತ್ತು 200 ಟೆಸ್ಟ್ ಪಂದ್ಯಗಳಲ್ಲಿ ಕ್ರಮವಾಗಿ 49 ಏಕದಿನ ಮತ್ತು 51 ಟೆಸ್ಟ್ ಶತಕಗಳೊಂದಿಗೆ 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರು. ಲಿಟ್ಲ್ ಮಾಸ್ಟರ್ ಅವರ 100 ಅಂತರರಾಷ್ಟ್ರೀಯ ಶತಕಗಳ ದಾಖಲೆ ಮುರಿಯುವುದು ಸುಲಭವಲ್ಲ. ಆದರೆ ಆಧುನಿಕ ಯುಗದ ದಂತಕಥೆ ವಿರಾಟ್ ಕೊಹ್ಲಿ, ಐಸಿಸಿ ವಿಶ್ವಕಪ್​ನ ಟೂರ್ನಿಯ ವೇಳೆ ಸಚಿನ್ ಅವರ ಅತಿ ಹೆಚ್ಚು ಏಕದಿನ ಶತಕಗಳ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿ, ಮೂರು ವರ್ಷಗಳ ಕಾಲ ಯಾವುದೇ ಅಂತರರಾಷ್ಟ್ರೀಯ ಶತಕವನ್ನು ಬಾರಿಸಿರಲಿಲ್ಲ. 2023ರಲ್ಲಿ ಆಡಿದ್ದ 27 ಏಕದಿನ ಪಂದ್ಯಗಳಲ್ಲಿ ವಿರಾಟ್​ ಆರು ಶತಕಗಳನ್ನು ಗಳಿಸಿದ್ದಾರೆ. ಆ ಮೂರು ಶತಕಗಳು ವಿಶ್ವಕಪ್​ನಲ್ಲಿ ಮೂಡಿ ಬಂದಿದ್ದವು. ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್​​ನಲ್ಲಿ ದಾಖಲೆಯ 50 ನೇ ಶತಕ ಮೂಡಿಬಂತು.

6. ಭಾರತದ ಕನಸಿನ ಓಟವನ್ನು ಮುರಿದು ವಿಶ್ವ ಕಪ್ ಟ್ರೋಫಿ ಎತ್ತಿದ ಆಸ್ಟ್ರೇಲಿಯಾ

ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತ್ತು. ಫೈನಲ್ ವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಭಾರತ ಪರ ಬ್ಯಾಟಿಂಗ್​ನಲ್ಲಿ ಮಿಂಚಿದ್ದರು. ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಬೌಲಿಂಗ್ ಸಾಧನೆ ಮಾಡಿದ್ದರು.

ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಅವರು ಅಹಮದಾಬಾದ್ ನಲ್ಲಿ ನಡೆದ ಫೈನಲ್ ನಲ್ಲಿ ಮತ್ತೆ ಅವರನ್ನು ಎದುರಿಸಿದ್ದರು. ಆದರೆ ಈ ಬಾರಿ, ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಧೈರ್ಯ ತೋರಿಸಿತು. ಭಾರತ ಕೇವಲ 240 ರನ್​ಗಳಿಗೆ ಸೀಮಿತಗೊಂಡಿತು. ನಂತರ ಟ್ರಾವಿಸ್ ಹೆಡ್ ಅವರ ಅದ್ಭುತ ಶತಕವು ಆಸ್ಟ್ರೇಲಿಯಾವನ್ನು ಫೈನಲ್ ಗೆಲುವನ್ನು ಖಚಿತಪಡಿಸಿತು. ಭಾರತಕ್ಕೆ ಹೃದಯ ಭಾರವಾದರೆ, ಆಸೀಸ್​ ಬಳಗಕ್ಕೆ ಸರ್ವಶ್ರೇಷ್ಠ ತಂಡ ಎಂಬ ಗರಿಮೆ ಸಿಕ್ಕಿತು.

Exit mobile version