Year Ender 2023 : ಒಂದು ವರ್ಷದ ಅವಧಿಯಲ್ಲಿ ಇಹ ಲೋಕ ತ್ಯಜಿಸಿದ ಕ್ರಿಕೆಟ್ ದಂತಕತೆಗಳು ಇವರು - Vistara News

ಕ್ರಿಕೆಟ್

Year Ender 2023 : ಒಂದು ವರ್ಷದ ಅವಧಿಯಲ್ಲಿ ಇಹ ಲೋಕ ತ್ಯಜಿಸಿದ ಕ್ರಿಕೆಟ್ ದಂತಕತೆಗಳು ಇವರು

Year Ender 2023: ಭಾರತ ಸೇರಿದಂತೆ ವಿಶ್ವ ಕ್ರಿಕೆಟ್​ನ ಆರು ಆಟಗಾರರು ಇಹಲೋಕ ತ್ಯಜಿಸಿದ್ದಾರೆ.

VISTARANEWS.COM


on

Bishon Singh Bedi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕ್ರಿಕೆಟ್ ಜಗತ್ತು 2023 ರಲ್ಲಿ ಕೆಲವು ಖ್ಯಾತನಾಮ ಮತ್ತು ಪ್ರಸಿದ್ಧ ಕ್ರಿಕೆಟ್​ ದಂತಕತೆಗಳಿಗೆ ವಿದಾಯ ಹೇಳಿದೆ. ಕ್ರಿಕೆಟ್​ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯಗಳನ್ನು ಸೃಷ್ಟಿಸಿದ್ದ ಅವರೆಲ್ಲರ ಸೇವೆಯನ್ನು ಕಳೆದುಕೊಂಡಿದೆ. ಅತ್ಯುತ್ತಮ ಕ್ರಿಕೆಟಿಗರಾಗಿ ಗಮನ ಸೆಳೆದಿದ್ದ ಎಲ್ಲರೂ ಬಳಿಕ ಮಾರ್ಗದರ್ಶಕರಾಗಿ ಆ ಮೇಲೆ ದಂತಕತೆಗಳಾಗಿ ಬದಲಾದವರು. ಅವರಲ್ಲರ ನಿರ್ಗಮನ ಕ್ರಿಕೆಟ್ ಕ್ಷೇತ್ರಕ್ಕೆ ದೊಡ್ಡ ನಷ್ಟ. ಅವರ ನಂಬಲಾಗದ ವೃತ್ತಿಜೀವನ ಮತ್ತು ಕ್ರಿಕೆಟ್ ಪರಂಪರೆ ಎಂದೆಂದಿಗೂ ಅವಿಸ್ಮರಣೀಯರು. ಹೀಗೆ ಕಳೆದ 12 ತಿಂಗಳ ಅವಧಿಯಲ್ಲಿ (Year Ender 2023) ನಿಧನ ಹೊಂದಿದ ಕ್ರಿಕೆಟ್ ಕ್ಷೇತ್ರದ ಖ್ಯಾತನಾಮರ ವಿವರ ಇಲ್ಲಿದೆ.

ಸುಧೀರ್ ನಾಯಕ್

Sudhir Naik

ಮುಂಬೈ ನೆಲದ ಪ್ರತಿಭೆ ಬಲಗೈ ಬ್ಯಾಟ್ಸ್​ಮನ್​ ಸುಧೀರ್ ನಾಯಕ್ ಮಾರ್ಚ್ 24, 2023 ರಂದು ಮಹಾರಾಷ್ಟ್ರದ ಮುಂಬೈನ ತಮ್ಮ ನಿವಾಸದಲ್ಲಿ ತಮ್ಮ 78 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ 85 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ನಾಯಕ್ 7 ಶತಕಗಳೊಂದಿಗೆ 4376 ರನ್ ಗಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಬಾಂಬೆ (ಈಗ ಮುಂಬೈ) ಪರ 1973-74ರಲ್ಲಿ ಬರೋಡಾ ವಿರುದ್ಧ ಅಜೇಯ 200 ರನ್ ಗಳಿಸಿದ್ದು ಅವರ ಸಾಧನೆಯಾಗಿದೆ. ಒಟ್ಟಾರೆಯಾಗಿ ಅವರು 2687 ರನ್ (40.10) ಗಳಿಸಿದ್ದಾರೆ.

1974-1975 ರಿಂದ ಭಾರತಕ್ಕಾಗಿ 3 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 141 ಮತ್ತು 38 ರನ್ ಗಳಿಸಿದ್ದಾರೆ. ಅವರು ಜಹೀರ್ ಖಾನ್, ವಾಸಿಮ್ ಜಾಫರ್ ಮತ್ತು ನಿಲೇಶ್ ಕುಲಕರ್ಣಿ ಅವರಂತಹ ಆಟಗಾರರನ್ನು ಸೃಷ್ಟಿಸಿದ ರಾಷ್ಟ್ರೀಯ ಕ್ರಿಕೆಟ್ ಕ್ಲಬ್​ನ ಮಾಲೀಕ ಮತ್ತು ತರಬೇತುದಾರರಾಗಿದ್ದರು ಅವರು. ಹಲವಾರು ವರ್ಷಗಳ ಕಾಲ ವಾಂಖೆಡೆ ಕ್ರೀಡಾಂಗಣದ ಮುಖ್ಯ ಕ್ಯುರೇಟರ್ ಆಗಿದ್ದರು, ವಿಶೇಷವಾಗಿ 2011 ರ ವಿಶ್ವಕಪ್ ಫೈನಲ್ ಸಮಯದಲ್ಲಿ ಅವರೇ ಪಿಚ್ ನಿರ್ಮಿಸಿದ್ದರು.

ಇಜಾಜ್ ಬಟ್

izaz Butt

ಆಗಸ್ಟ್ 3, 2023 ರಂದು ಲಾಹೋರ್​ನಲ್ಲಿ ನಿಧನ ಹೊಂದಿದ ಇಜಾಜ್ ಬಟ್ ಅವರಿಗೆ 85 ವರ್ಷ ವಯಸ್ಸಾಗಿತ್ತು. ಬಟ್ 1959-1962ರ ಅವಧಿಯಲ್ಲಿ ಪಾಕಿಸ್ತಾನ ಪರ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅವರು ಒಂದು ಅರ್ಧಶತಕದೊಂದಿಗೆ 279 ರನ್ ಗಳಿಸಿದ್ದರು. ಅವರು 5 ಕ್ಯಾಚ್ ಗಳನ್ನು ಪಡೆದಿದ್ದಾರೆ. ನಿವೃತ್ತಿಯ ನಂತರ, ಬಟ್ ಕ್ರಿಕೆಟ್​ ಆಡಳಿತಕ್ಕೆ ಕಾಲಿಟ್ಟಿದ್ದರು. 2008 ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

ಜೋ ಸೊಲೊಮನ್

ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಜೊ ಸೊಲೊಮನ್​ ಡಿಸೆಂಬರ್ 10ರಂದು 93 ನೇ ನಿಧನ ಹೊಂದಿದ್ದಾರೆ. 1958 ಮತ್ತು 1965ರ ನಡುವೆ, ಅವರು ವೆಸ್ಟ್ ಇಂಡೀಸ್ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 34 ಸರಾಸರಿಯಲ್ಲಿ 1326 ರನ್ ಗಳಿಸಿದ್ದರೆ. ಅವರು 1958 ರಲ್ಲಿ ಭಾರತದ ವಿರುದ್ಧ ಪಾದಾರ್ಪಣೆ ಮಾಡಿದ್ದರು. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಅವರ ಚೊಚ್ಚಲ ಟೆಸ್ಟ್​ ಶತಕ ಮೂಡಿ ಬಂದಿತ್ತು.

1960 ರಲ್ಲಿ ಗಬ್ಬಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾ ಆಗಿತ್ತು. ಅದಕ್ಕೆ ಕಾರಣ ಇಯಾನ್ ಮೆಕಿಫ್ ಅವರನ್ನು ಸೊಲೊಮನ್ ಔಟ್ ಮಾಡಿದ್ದು. ಅದೆ ರೀತಿ ಮೆಲ್ಬೋರ್ನ್ ನಲ್ಲಿ ನಡೆದ ಅದೇ ಸರಣಿಯ ಎರಡನೇ ಟೆಸ್ಟ್ ನಲ್ಲಿ ಸೊಲೊಮನ್ ಅವರ ಕ್ಯಾಪ್ ಸ್ಟಂಪ್ ಗಳ ಮೇಲೆ ಬಿದ್ದ ಕಾರಣ ಅವರು ಹಿಟ್ ವಿಕೆಟ್ ಅಗಿದ್ದರು.

ಸಲೀಂ ದುರಾನಿ

Salim Durani

ಭಾರತದ ಮಾಜಿ ಆಲ್​ರೌಂಡರ್​ ಸಲೀಮ್ ದುರಾನಿ ಏಪ್ರಿಲ್ 2, 2023 ರಂದು ಗುಜರಾತ್​ನ ಜಾಮ್​​ನಗರದಲ್ಲಿ ತಮ್ಮ 88 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಕಾಬೂಲ್ ಮೂಲದ ಕ್ರಿಕೆಟಿಗ 170 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 14 ಶತಕಗಳೊಂದಿಗೆ 137* ಸರಾಸರಿಯಲ್ಲಿ 8545 ರನ್ ಗಳಿಸಿದ್ದಾರೆ. ದೇ ರೀತಿ 484 ವಿಕೆಟ್​​ಗಳನ್ನು ಉರುಳಿಸಿದ್ದಾರೆ. ಭಾರತದ ಪರ 29 ಟೆಸ್ಟ್ ಪಂದ್ಯಗಳನ್ನಾಡಿರುವ ದುರಾನಿ 75 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. 1962ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ 1202 ರನ್ ಗಳಿಸಿದ್ದರು. 104 ರನ್ ಅವರ ಗರಿಷ್ಠ ಸ್ಕೋರ್ ಆಗಿತ್ತು.

1973 ರಲ್ಲಿ, ಸ್ಟಾರ್ ಕ್ರಿಕೆಟಿಗ ಬಾಲಿವುಡ್​ಗೆ ಕಾಲಿಟ್ಟರು. ಪ್ರಸಿದ್ಧ ನಟಿ ಪ್ರವೀಣ್ ಬಾಬಿ ಅವರೊಂದಿಗೆ ಚರಿತ್ರ ಚಿತ್ರದಲ್ಲಿ ನಟಿಸಿದ್ದರು. ಅರ್ಜುನ ಪ್ರಶಸ್ತಿ ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇದಲ್ಲದೆ, ಅಫ್ಘಾನ್ ಮೂಲದ ಏಕೈಕ ಭಾರತೀಯ ಕ್ರಿಕೆಟಿಗರಾಗಿ ಅವರು ಜೂನ್ 14, 2018 ರಂದು ಐತಿಹಾಸಿಕ ಭಾರತ ಮತ್ತು ಅಫ್ಘಾನಿಸ್ತಾನ ಟೆಸ್ಟ್ ಪಂದ್ಯವನ್ನು ವೀಕ್ಷಿಸಿದ್ದರು. 2011ರಲ್ಲಿ ಬಿಸಿಸಿಐ ಅವರಿಗೆ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಹೀತ್ ಸ್ಟ್ರೀಕ್

ಜಿಂಬಾಬ್ವೆಯಿಂದ ಮೂಡಿಬಂದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಹೀತ್ ಸ್ಟ್ರೀಕ್ ಸೆಪ್ಟೆಂಬರ್ 3, 2023 ರಂದು ತಮ್ಮ 49 ನೇ ವಯಸ್ಸಿನಲ್ಲಿ ಕ್ಯಾನ್ಸರ್​ನಿಂದಾಗಿ ನಿಧನ ಹೊಂದಿದರು. ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಹಾಗೂ ರನ್ ಪೂರೈಸಿದ ಜಿಂಬಾಬ್ವೆಯ ಏಕೈಕ ಕ್ರಿಕೆಟಿಗ ಅವರು. ಅವರು ಆ ತಂಡದ ಮಾಜಿ ನಾಯಕರಾಗಿದ್ದರು. ಏಕದಿನ ಕ್ರಿಕೆಟ್​ನಲ್ಲಿ 2000 ರನ್ ಹಾಗೂ 200 ವಿಕೆಟ್ ಪಡೆದ ಆ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1993ರಿಂದ 2005 ರವರೆಗೆ ಜಿಂಬಾಬ್ವೆ ತಂಡದೊಂದಿಗಿನ ವೃತ್ತಿಜೀವನದಲ್ಲಿ, ಸ್ಟ್ರೀಕ್ 216 ಟೆಸ್ಟ್ ಮತ್ತು 239 ಏಕದಿನ ವಿಕೆಟ್​ಗಳನ್ನು ಪಡೆದಿದ್ದಾರೆ. ಸ್ಟ್ರೀಕ್ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ತಂಡಗಳಿಗೆ ಕೋಚಿಂಗ್ ಮಾಡಿದ್ದರು. ಐಪಿಎಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು.

ಬಿಷನ್ ಸಿಂಗ್ ಬೇಡಿ

Bishan Singh Bedi

ಭಾರತದ ಲೆಜೆಂಡರಿ ಸ್ಪಿನ್ನರ್ ಮತ್ತು ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಅಕ್ಟೋಬರ್ 23, 2023 ರಂದು ನಿಧನರಾದರು. ಅವರಿಗೆ ಅಂಗದ್ ಬೇಡಿ, ನೇಹಾ ಬೇಡಿ, ಗವಾಸಿಂದರ್ ಬೇಡಿ ಮತ್ತು ಗಿಲ್ಲಿಂದರ್ ಬೇಡಿ ಎಂಬ ನಾಲ್ವರು ಮಕ್ಕಳಿದ್ದಾರೆ. ಬಿಷನ್ ಬೇಡಿ 25 ಸೆಪ್ಟೆಂಬರ್ 1946 ರಂದು ಅಮೃತಸರದಲ್ಲಿ ಜನಿಸಿದರು. ಅವರು ಭಾರತೀಯ ದೇಶೀಯ ಕ್ರಿಕೆಟ್​ನಲ್ಲಿ ಪಂಜಾಬ್ ಮತ್ತು ದೆಹಲಿಗಾಗಿ ಆಡಿದ್ದರು.

ಇದನ್ನೂ ಓದಿ: Year Ender 2023: ಈ ವರ್ಷ ಅತ್ಯಧಿಕ ರನ್​ ಗಳಿಸಿದ ಟಾಪ್​ 10 ಸಾಧಕರಿವರು…

ಬೇಡಿ 1967 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ನಲ್ಲಿ ಪಾದಾರ್ಪಣೆ ಮಾಡಿದ್ದರು. ಅವರು 67 ಟೆಸ್ಟ್ ಪಂದ್ಯಗಳಲ್ಲಿ 266 ವಿಕೆಟ್​ಗಳನ್ನು ಪಡೆದಿದ್ದಾರೆ. ಬೇಡಿ 1960 ಮತ್ತು 1970 ರ ದಶಕಗಳಲ್ಲಿ, ಲೆಗ್ ಸ್ಪಿನ್ನರ್ ಭಗವತ್ ಚಂದ್ರಶೇಖರ್ ಮತ್ತು ಆಫ್-ಸ್ಪಿನ್ನರ್​ಗಳಾದ ಎರಪಲ್ಲಿ ಪ್ರಸನ್ನ ಮತ್ತು ಶ್ರೀನಿವಾಸ್ ವೆಂಕಟರಾಘವನ್ ಅವರನ್ನು ಒಳಗೊಂಡಿದ್ದ ಭಾರತದ ಮಾರಕ ಸ್ಪಿನ್ ಬಳಗದ ಭಾಗವಾಗಿದ್ದರು.

ಬೇಡಿ 370 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಕೌಂಟಿ ಕ್ರಿಕೆಟ್​ನಲ್ಲಿ ನಾರ್ಥಾಂಪ್ಟನ್​ಶೈರ್​ ಪರ ದೀರ್ಘಕಾಲ ಆಡಿದ್ದು, 1560 ವಿಕೆಟ್​ ಉರುಳಿಸಿದ್ದಾರೆ. ಟೆಸ್ಟ್ ಹೊರತಾಗಿ,ಬೇಡಿ 10 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ವಿಕೆಟ್​ ಉರುಳಿಸಿದ್ದಾರೆ. 1975 ರ ವಿಶ್ವಕಪ್​ನ ಪೂರ್ವ ಆಫ್ರಿಕಾ ವಿರುದ್ಧ ಭಾರತದ ಮೊದಲ ಏಕದಿನ ವಿಜಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 Points Table: ಸನ್​ರೈಸರ್ಸ್​ಗೆ 10 ವಿಕೆಟ್​ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ

IPL 2024 Points Table: ಚೆನ್ನೈ, ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು 12 ಅಂಕಗಳಿಸಿವೆ. ಹೀಗಾಗಿ ಈ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಬಹುತೇಕ ಪ್ಲೇ ಆಫ್​ ಪ್ರವೇಶಿಸುವುದು ಖಚಿತ. ಹೈದರಾಬಾದ್​ಗೆ ಇನ್ನೊಂದು ಪಂದ್ಯ ಗೆದ್ದರೂ ಸಾಕು.

VISTARANEWS.COM


on

IPL 2024 - Points Table
Koo

ಹೈದರಾಬಾದ್​: ಬುಧವಾರ ರಾತ್ರಿ ನಡೆದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ವಿರುದ್ಧ 10 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದ ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ತಂಡ ಪ್ಲೇ ಆಫ್​ ಸನಿಹಕ್ಕೆ ಬಂದು ನಿಂತಿದೆ. ಜತೆಗೆ ಅಂಕಪಟ್ಟಿಯಲ್ಲಿಯೂ(IPL 2024 Points Table) ಪ್ರಗತಿ ಸಾಧಿಸಿ ಮೂರನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಈ ಹಿಂದೆ ಮೂರನೇ ಸ್ಥಾನಿಯಾಗಿದ್ದ ಹಾಲಿ ಚಾಂಪಿಯನ್​ ಚೆನ್ನೈ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಸದ್ಯ ಚೆನ್ನೈ, ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು 12 ಅಂಕಗಳಿಸಿವೆ. ಹೀಗಾಗಿ ಈ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನ್​ ರಾಯಲ್ಸ್​ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಬಹುತೇಕ ಪ್ಲೇ ಆಫ್​ ಪ್ರವೇಶಿಸುವುದು ಖಚಿತ. ಹೈದರಾಬಾದ್​ಗೆ ಇನ್ನೊಂದು ಪಂದ್ಯ ಗೆದ್ದರೂ ಸಾಕು. ಇಂದು ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಮತ್ತು ಪಂಜಾಬ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಪ್ಲೇ ಆಫ್​ ಕ್ಷೀಣ ಅವಕಾಶ ಹೊಂದಿರುವ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ಕೆಕೆಆರ್​118316 (+1.453)
ರಾಜಸ್ಥಾನ್​ ರಾಯಲ್ಸ್​​​118316 (+0.476)
ಚೆನ್ನೈ​​116514 (+0.700)
ಹೈದರಾಬಾದ್​116512 (-0.065)
ಡೆಲ್ಲಿ126612 (-0.316)
ಲಕ್ನೋ116512 (-0.371)
ಆರ್​ಸಿಬಿ11478 (-0.049)
ಪಂಜಾಬ್​10468 (-0.062)
ಮುಂಬೈ12488 (-0.212)
ಗುಜರಾತ್​11478 (-1.320)

ಲಕ್ನೋಗೆ ಸೋಲು


ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಈ ಪಂದ್ಯದಲ್ಲಿ ಟಾಸ್​ ಗೆದ್ದು ಆಮೆ ಗತಿಯ ಬ್ಯಾಟಿಂಗ್​ ನಡೆಸಿದ ಲಕ್ನೋ ಸೂಪರ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 165 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ಯಾವುದೇ ವಿಕೆಟ್​ ನಷ್ಟವಿಲ್ಲದೆ ಕೇವಲ 9.4 ಓವರ್​ಗಳಲ್ಲಿ 167 ರನ್​ ಬಾರಿಸಿ ಭರ್ಜರಿ 10 ವಿಕೆಟ್​ ಅಂತರದ ಗೆಲುವು ಸಾಧಿಸಿತು.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ದಾಖಲೆ ಬರೆದ ಮ್ಯಾಕ್‌ಗುರ್ಕ್; ಜೈಸ್ವಾಲ್​ ದಾಖಲೆ ಪತನ

ಒಟ್ಟು 30 ಎಸೆತ ಎದುರಿಸಿದ ಹೆಡ್​ 8 ಸೊಗಸಾದ ಸಿಕ್ಸರ್​ ಮತ್ತು 8 ಬೌಂಡರಿ ನೆರವಿನಿಂದ ಅಜೇಯ 89 ರನ್​ ಬಾರಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಇವರ ಜತೆಗಾರ ಅಭಿಷೇಕ್​ ಶರ್ಮ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ ಅಜೇಯ 75 ರನ್​ ಬಾರಿಸಿದರು. ಈ ಜೋಡಿಯ ಬ್ಯಾಟಿಂಗ್​ ಆರ್ಭಟದಿಂದಾಗಿ ಪವರ್​ ಪ್ಲೇ ಮುಕ್ತಾಯಕ್ಕೆ ತಂಡಕ್ಕೆ ವಿಕೆಟ್​ ನಷ್ಟವಿಲ್ಲದೆ 107 ರನ್​ ಹರಿದು ಬಂತು. 

Continue Reading

ಕ್ರೀಡೆ

SRH vs LSG: ಬಿರುಸಿನ ಅರ್ಧಶತಕ ಬಾರಿಸಿ ಗೇಲ್​, ನರೈನ್​ ದಾಖಲೆ ಮುರಿದ ಟ್ರಾವಿಸ್ ಹೆಡ್​

SRH vs LSG: ಲಕ್ನೋ ಸೂಪರ್​ ಜೈಂಟ್ಸ್(SRH vs LSG)​ ವಿರುದ್ಧದ ಪಂದ್ಯದಲ್ಲಿ 19 ಎಸೆತಗಳಿಂದ ಅರ್ಧಶತಕ ಬಾರಿಸಿದ ಟ್ರಾವಿಸ್​ ಹೆಡ್​ ಪವರ್​ ಪ್ಲೇಯಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ 2ನೇ ಆಟಗಾರ ಎಂಬ ದಾಖಲೆ ಬರೆದರು.

VISTARANEWS.COM


on

SRH vs LSG
Koo

ಹೈದರಾಬಾದ್​: ಲಕ್ನೋ ಸೂಪರ್​ ಜೈಂಟ್ಸ್(SRH vs LSG)​ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಆರಂಭಿಕ ಬ್ಯಾಟರ್​ ಟ್ರಾವಿಸ್​ ಹೆಡ್(Travis Head)​, ತಮ್ಮ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ಐಪಿಎಲ್​ನಲ್ಲಿ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದ ಹೆಡ್​ ಸ್ಟೇಡಿಯಂನ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ ಕೇವಲ 19 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಈ ಮೂಲಕ ಪವರ್​ ಪ್ಲೇಯಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ 2ನೇ ಆಟಗಾರ ಎನಿಸಿಕೊಂಡರು. ದಾಖಲೆ ಡೇವಿಡ್​ ವಾರ್ನರ್​(6) ಹೆಸರಿನಲ್ಲಿದೆ. ಹೆಡ್​ 4 ಬಾರಿ ಈ ಸಾಧನೆ ಮಾಡಿದರು. ಇದು ಮಾತ್ರವಲ್ಲದೆ, ಈ ಈ ಆವೃತ್ತಿಯಲ್ಲಿ ಹೆಡ್​ 16 ಎಸೆತಗಳಿಂದ ಬಾರಿಸಿದ ಮೂರನೇ ಅರ್ಧಶತ ಇದಾಗಿದೆ.

ಪವರ್​ ಪ್ಲೇಯಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಬ್ಯಾಟರ್​ಗಳು


ಡೇವಿಡ್​ ವಾರ್ನರ್​-6

ಟ್ರಾವಿಸ್​ ಹೆಡ್​-4

ಸುನೀಲ್​ ನರೈನ್​-3

ಕ್ರಿಸ್​ ಗೇಲ್​-3

ಒಟ್ಟು 30 ಎಸೆತ ಎದುರಿಸಿದ ಹೆಡ್​ 8 ಸೊಗಸಾದ ಸಿಕ್ಸರ್​ ಮತ್ತು 8 ಬೌಂಡರಿ ನೆರವಿನಿಂದ ಅಜೇಯ 89 ರನ್​ ಬಾರಿಸಿ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು. ಇವರ ಜತೆಗಾರ ಅಭಿಷೇಕ್​ ಶರ್ಮ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ ಅಜೇಯ 75 ರನ್​ ಬಾರಿಸಿದರು. ಈ ಜೋಡಿಯ ಬ್ಯಾಟಿಂಗ್​ ಆರ್ಭಟದಿಂದಾಗಿ ಪವರ್​ ಪ್ಲೇ ಮುಕ್ತಾಯಕ್ಕೆ ತಂಡಕ್ಕೆ ವಿಕೆಟ್​ ನಷ್ಟವಿಲ್ಲದೆ 107 ರನ್​ ಹರಿದು ಬಂತು. ಸದ್ಯ ಹೈದರಾಬಾದ್​ ಈ ಗೆಲುವಿನೊಂದಿಗೆ 14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನಿಯಾಗಿದ್ದ ಚೆನ್ನೈ 4ನೇ ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿ LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

ಈ ಪಂದ್ಯದಲ್ಲಿ ಟಾಸ್​ ಗೆದ್ದು ಆಮೆ ಗತಿಯ ಬ್ಯಾಟಿಂಗ್​ ನಡೆಸಿದ ಲಕ್ನೋ ಸೂಪರ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 165 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ಯಾವುದೇ ವಿಕೆಟ್​ ನಷ್ಟವಿಲ್ಲದೆ ಕೇವಲ 9.4 ಓವರ್​ಗಳಲ್ಲಿ 167 ರನ್​ ಬಾರಿಸಿ ಭರ್ಜರಿ 10 ವಿಕೆಟ್​ ಅಂತರದ ಗೆಲುವು ಸಾಧಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡ ಪವರ್​ ಪ್ಲೇಯಲ್ಲಿ ವೈಫಲ್ಯ ಕಂಡು 2 ವಿಕೆಟ್​ಗೆ ಕೇವಲ 27 ರನ್​ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದದ್ದು ಆಯುಷ್​ ಬದೋನಿ ಮತ್ತು ನಿಕೋಲಸ್​ ಪೂರನ್​. ಉಭಯ ಆಟಗಾರರು ಹೈದರಾಬಾದ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 5ನೇ ವಿಕೆಟ್​ಗೆ ಮುರಿಯದ 99 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಹೀಗಾಗಿ ತಂಡ 150ರ ಗಡಿ ದಾಡಿತು. ಬದೋನಿ 30 ಎಸೆತ ಎದುರಿಸಿ 55 ರನ್​ ಬಾರಿಸುವ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ನಿಕೋಲಸ್​ ಪೂರನ್​ 26 ಎಸೆತಗಳಿಂದ 48 ರನ್​ ಗಳಿಸಿದರು. ಹೈದರಾಬಾದ್​ ಪರ ಅನುಭವಿ ಭುವನೇಶ್ವರ್ ಕುಮಾರ್​ 2 ವಿಕೆಟ್​ ಪಡೆದರೆ, ಕಮಿನ್ಸ್​ 1 ವಿಕೆಟ್​ ಕಿತ್ತರು.

Continue Reading

ಕ್ರೀಡೆ

LSG vs SRH: ಹೆಡ್, ಅಭಿಷೇಕ್ ಬ್ಯಾಟಿಂಗ್​ ಸುಂಟರಗಾಳಿಗೆ ತತ್ತರಿಸಿದ ಲಕ್ನೋ; 10 ವಿಕೆಟ್​ ಹೀನಾಯ ಸೋಲು

LSG vs SRH: ಚೇಸಿಂಗ್​ ವೇಳೆ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಹೆಡ್​ ಮತ್ತು ಅಭಿಷೇಕ್ ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಹೆಡ್​ 16 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರೆ, ಅಭಿಷೇಕ್​ ಶರ್ಮ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

VISTARANEWS.COM


on

LSG vs SRH
Koo

ಹೈದರಾಬಾದ್​: ಟ್ರಾವಿಸ್​ ಹೆಡ್(89*)​ ಮತ್ತು ಅಭಿಷೇಕ್​ ಶರ್ಮ(75*) ಅವರ ಸುಂಟರಗಾಳಿ ಬ್ಯಾಟಿಂಗ್​ಗೆ ತತ್ತರಿಸಿದ ಲಕ್ನೋ ಸೂಪರ್​ ಜೈಂಟ್ಸ್​(LSG vs SRH) 10 ವಿಕೆಟ್​ಗಳ ಅಂತರದ ಹೀನಾಯ ಸೋಲಿಗೆ ತುತ್ತಾಗಿದೆ. ಈ ಸೋಲಿನಿಂದ ರಾಹುಲ್​ ಪಡೆಯ ಪ್ಲೇ ಆಫ್​ ಹಾದಿ ದುರ್ಗಮವಾಗಿದೆ.

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಆಮೆ ಗತಿಯ ಬ್ಯಾಟಿಂಗ್​ ನಡೆಸಿದ ಲಕ್ನೋ ಸೂಪರ್​ ಜೈಂಟ್ಸ್​ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 165 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹೈದರಾಬಾದ್​ ಯಾವುದೇ ವಿಕೆಟ್​ ನಷ್ಟವಿಲ್ಲದೆ ಕೇವಲ 9.4 ಓವರ್​ಗಳಲ್ಲಿ 167 ರನ್​ ಬಾರಿಸಿ ಭರ್ಜರಿ 10 ವಿಕೆಟ್​ ಅಂತರದ ಗೆಲುವು ಸಾಧಿಸಿತು.

ಚೇಸಿಂಗ್​ ವೇಳೆ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಹೆಡ್​ ಮತ್ತು ಅಭಿಷೇಕ್ ಲಕ್ನೋ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಹೆಡ್​ 16 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಇದು ಈ ಆವೃತ್ತಿಯಲ್ಲಿ ಹೆಡ್​ 16 ಎಸೆತಗಳಿಂದ ಬಾರಿಸಿದ ಮೂರನೇ ಅರ್ಧಶತಕವಾಗಿದೆ. ಅಭಿಷೇಕ್​ ಶರ್ಮ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅದರಲ್ಲೂ ಹೆಡ್​ ಕನ್ನಡಿಗ ಕೃಷ್ಣಪ್ಪ ಗೌತಮ್​ ಅವರಿಗೆ ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಚಳಿ ಬಿಡಿಸಿದರು. 2 ಓವರ್​ಗೆ 29 ರನ್​ ಬಿಟ್ಟುಕೊಟ್ಟರು. 30 ಎಸೆತ ಎದುರಿಸಿದ ಹೆಡ್​ ತಲಾ 8 ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಅಜೇಯ 89 ರನ್​ ಬಾರಿಸಿದರು. ಅಭಿಷೇಕ್​ ಶರ್ಮ 8 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ ಅಜೇಯ 75 ರನ್​ ಬಾರಿಸಿ ತಂಡದ ಜಯ ಸಾರಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ತಂಡದ ಪವರ್​ ಪ್ಲೇ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ರನ್​ ಗಳಿಸಲು ಪರದಾಡಿದ ಕ್ವಿಂಟನ್​ ಡಿ ಕಾಕ್(2) ರನ್​ಗೆ ವಿಕೆಟ್​ ಕಳೆದುಕೊಂಡರೆ, ಇದರ ಬೆನ್ನಲ್ಲೇ ಮಾರ್ಕಸ್​ ಸ್ಟೋಯಿನಿಸ್​ 3 ರನ್​ ಗಳಿಸಿ ಪೆವಿಲಿಯನ್​ ಕಡೆಗೆ ನಡೆದರು. 21 ರನ್​ಗೆ 2 ವಿಕೆಟ್​ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಪವರ್​ ಪ್ಲೇಯಲ್ಲಿ ದಾಖಲಾದದ್ದು ಕೇವಲ 27 ರನ್​ ಮಾತ್ರ. ಇದು ತಂಡದ ಬೃಹತ್​ ಮೊತ್ತಕ್ಕೆ ಹಿನ್ನಡೆಯಾಯಿತು.

ನಾಯಕ ರಾಹುಲ್​ ಕೂಡ ಅತ್ಯಂತ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟು 33 ಎಸೆತಗಳಿಂದ 29 ರನ್​ ಬಾರಿಸಿದರು. ಬಾರಿಸಿದ್ದು ತಲಾ ಒಂದು ಸಿಕ್ಸರ್​ ಮತ್ತು ಬೌಂಡರಿ ಮಾತ್ರ. 4ನೇ ವಿಕೆಟ್​ಗೆ ಆಡಲು ಬಂದ ಕೃಣಾಲ್​ ಪಾಂಡ್ಯ ಮಧ್ಯಮ ಕ್ರಮಾಂದಲ್ಲಿ ಸಣ್ಣ ಮಟ್ಟದ ಹೋರಾಟ ಸಂಘಟಿಸಿ 2 ಸಿಕ್ಸರ್​ ಸಿಡಿಸಿ 24 ರನ್​ ಗಳಿಸಿ ಪ್ಯಾಟ್​ ಕಮಿನ್ಸ್​ ಅವರ ನೇರ ಥ್ರೋಗೆ ರನೌಟ್​ ಆದರು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದದ್ದು ಆಯುಷ್​ ಬದೋನಿ ಮತ್ತು ನಿಕೋಲಸ್​ ಪೂರನ್​. ಉಭಯ ಆಟಗಾರರು ಹೈದರಾಬಾದ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತು 5ನೇ ವಿಕೆಟ್​ಗೆ ಮುರಿಯದ 99 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಹೀಗಾಗಿ ತಂಡ 150ರ ಗಡಿ ದಾಡಿತು.

ಬದೋನಿ 30 ಎಸೆತ ಎದುರಿಸಿ 55 ರನ್​ ಬಾರಿಸುವ ಮೂಲಕ ಅರ್ಧಶತಕ ಪೂರ್ತಿಗೊಳಿಸಿದರು. ನಿಕೋಲಸ್​ ಪೂರನ್​ 26 ಎಸೆತಗಳಿಂದ 48 ರನ್​ ಗಳಿಸಿದರು. ಹೈದರಾಬಾದ್​ ಪರ ಅನುಭವಿ ಭುವನೇಶ್ವರ್ ಕುಮಾರ್​ 2 ವಿಕೆಟ್​ ಪಡೆದರೆ, ಕಮಿನ್ಸ್​ 1 ವಿಕೆಟ್​ ಕಿತ್ತರು. ಹುಟ್ಟುಹಬ್ಬದ ದಿನವೇ ಕಮಿನ್ಸ್​ಗೆ ಭರ್ಜರಿ ಗೆಲುವಿನ ಉಡುಗೊರೆ ದೊರೆತಿದೆ.​

Continue Reading

ಕ್ರಿಕೆಟ್

Monty Panesar: ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರದಲ್ಲಿ ಗುಡ್​ ಬೈ ಹೇಳಿದ ಇಂಗ್ಲೆಂಡ್​ ಸ್ಪಿನ್ನರ್

Monty Panesar: 42 ವರ್ಷದ ಪನೇಸರ್ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಲಂಡನ್‌ನ ಈಲಿಂಗ್ ಸೌಥಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿದ್ದರು. ಇದೀಗ ಅಚ್ಚರಿ ಎಂಬತ್ತೆ ಒಂದೇ ವಾರಕ್ಕೆ ರಾಜಕೀಯಕ್ಕೆ ಗುಡ್​ ಬೈ ಹೇಳಿದ್ದಾರೆ. ಆದರೆ, ರಾಜಕೀಯದಿಂದ ದೂರವಾಗಲು ಕಾರಣ ಏನೆಂಬುದನ್ನು ಪನೇಸರ್ ತಿಳಿಸಿಲ್ಲ.

VISTARANEWS.COM


on

Monty Panesar
Koo

ಲಂಡನ್​: ಕಳೆದ ವಾರವಷ್ಟೇ ಇಂಗ್ಲೆಂಡ್‌ನ‌ ಮಾಂಟಿ ಪನೇಸರ್‌(Monty Panesar) ರಾಜಕೀಯಕ್ಕೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿದ್ದರು. ಇದೀಗ ಒಂದು ವಾರ ಆಗುವಷ್ಟರಲ್ಲಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಜಾರ್ಜ್ ಗ್ಯಾಲೋವೆ ನೇತೃತ್ವದ ವರ್ಕರ್ಸ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್‌ನ ಸಂಸದೀಯ ಅಭ್ಯರ್ಥಿಯಾಗಿದ್ದ ಮಾಂಟಿ ಪನೇಸರ್‌, ತಮ್ಮ ಹೆಸರನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಇದೇ ವರ್ಷಾರಂಭದಲ್ಲಿ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಒಂದೇ ವಾರಕ್ಕೆ ದಿಢೀರ್​ ರಾಜಕೀಯದಿಂದ ಹಿಂದೆ ಸರಿದಿದ್ದರು.

42 ವರ್ಷದ ಪನೇಸರ್ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಶ್ಚಿಮ ಲಂಡನ್‌ನ ಈಲಿಂಗ್ ಸೌಥಾಲ್ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆಯಾಗಿದ್ದರು. ಇದೀಗ ಅಚ್ಚರಿ ಎಂಬತ್ತೆ ಒಂದೇ ವಾರಕ್ಕೆ ರಾಜಕೀಯಕ್ಕೆ ಗುಡ್​ ಬೈ ಹೇಳಿದ್ದಾರೆ. ಆದರೆ, ರಾಜಕೀಯದಿಂದ ದೂರವಾಗಲು ಕಾರಣ ಏನೆಂಬುದನ್ನು ಪನೇಸರ್ ತಿಳಿಸಿಲ್ಲ. ಮೂಲಗಳ ಪ್ರಕಾರ ಮಾಧ್ಯಮಗಳ ನಿರಂತರವಾದ ಸಂದರ್ಶನಗಳಿಂದ ಬೇಸತ್ತು ಅವರು ಈ ನಿರ್ಧಾರ ಕೈಗೊಂಡರು ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ನಡೆದಿದ್ದ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಪನೇಸರ್ ನ್ಯಾಟೊದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ಮುಂದುವರಿದ ಸದಸ್ಯತ್ವದ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಹೆಣಗಾಡಿದ್ದರು. ಈ ಘಟನೆ ನಡೆದ 2 ದಿನಗಳ ಅಂತರದಲ್ಲಿ ಪನೇಸರ್ ರಾಜಕೀಯದಿಂದ ದೂರ ಸರಿದಿದ್ದಾರೆ. ರಾಜಕೀಯವು ಜನರಿಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾನಿನ್ನೂ ಕಲಿಯಬೇಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ತಮ್ಮ ರಾಜಕೀಯ ನಿವೃತ್ತಿಯನ್ನು ಪ್ರಕಟಿಸಿದ್ದಾರೆ.

“ವರ್ಕರ್ಸ್ ಪಾರ್ಟಿಯ ಸಾರ್ವತ್ರಿಕ ಚುನಾವಣಾ ಅಭ್ಯರ್ಥಿಯಾಗಿ ನನ್ನ ಹೆಸರನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ನನ್ನ ವೈಯಕ್ತಿಕ ಮತ್ತು ರಾಜಕೀಯ ಮೌಲ್ಯಗಳಿಗೆ ಹೊಂದಿಕೆಯಾಗುವ ರಾಜಕೀಯ ನೆಲೆಯನ್ನು ಹುಡುಕಲು ನನಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅರಿತುಕೊಂಡಿದ್ದೇನೆ. ಹೀಗಾಗಿ ನಾನು ಈ ನಿಲುವು ಕೈಗೊಂಡಿದ್ದೇನೆ. ವರ್ಕರ್ಸ್ ಪಾರ್ಟಿಗೆ ಶುಭ ಹಾರೈಸುತ್ತೇನೆ. ನನ್ನ ರಾಜಕೀಯ ನೆಲೆಯನ್ನು ಪ್ರಬುದ್ಧಗೊಳಿಸಲು ಮತ್ತು ಕಂಡುಕೊಳ್ಳಲು ಸ್ವಲ್ಪ ಸಮಯ ಬೇಕು. ಮುಂದಿನ ದಿನಗಳಲ್ಲಿ ಮತ್ತೆ ಬಲಿಷ್ಠನಾಗಿ ರಾಜಕೀಯಕ್ಕೆ ಟಂಟ್ರಿ ಕೊಡಲಿದ್ದೇನೆ” ಎಂದು ಪನೇಸರ್ ಹೇಳಿದ್ದಾರೆ.

ಇಂಗ್ಲೆಂಡ್ ಪರ 50 ಟೆಸ್ಟ್ ಪಂದ್ಯಗಳಲ್ಲಿ 167 ವಿಕೆಟ್ ಪಡೆದಿದ್ದಾರೆ. 26 ಏಕದಿನ ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ಪನೇಸರ್ ಕ್ರಿಕೆಟ್​ ಕಾಮೆಂಟ್ರಿಯಲ್ಲಿ ತೊಡಗಿಕೊಂಡಿದ್ದಾರೆ.

Continue Reading
Advertisement
hd revanna jailed 2
ಕ್ರೈಂ4 mins ago

HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

Jyothi Rai clarity For torturing on indecent videos
ಕಿರುತೆರೆ8 mins ago

Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಹೀಗಿದೆ!

IPL 2024 - Points Table
ಕ್ರೀಡೆ12 mins ago

IPL 2024 Points Table: ಸನ್​ರೈಸರ್ಸ್​ಗೆ 10 ವಿಕೆಟ್​ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ

Reservation Row
Lok Sabha Election 202413 mins ago

Reservation Row: ಎಸ್‌ಸಿ / ಎಸ್‌ಟಿ ಮೀಸಲಾತಿಗೆ ನೆಹರೂ ವಿರೋಧ ವ್ಯಕ್ತಪಡಿಸಿದ್ದರು: ಸಾಕ್ಷಿ ಸಮೇತ ಬಹಿರಂಗಪಡಿಸಿದ ಬಿಜೆಪಿ

Gurpatwant Singh Pannun
ವಿದೇಶ28 mins ago

Gurpatwant Singh Pannun: ಪನ್ನುನ್‌ ಹತ್ಯೆ ಸಂಚಿನಲ್ಲಿ ಭಾರತದ ಕೈವಾಡ; ಅಮೆರಿಕ ಆರೋಪಕ್ಕೆ ರಷ್ಯಾ ಟಾಂಗ್‌

Sangeeth Sivan dies Riteish Deshmukh Tusshar Kapoor pay tribute
ಮಾಲಿವುಡ್34 mins ago

Sangeeth Sivan dies: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

SRH vs LSG
ಕ್ರೀಡೆ51 mins ago

SRH vs LSG: ಬಿರುಸಿನ ಅರ್ಧಶತಕ ಬಾರಿಸಿ ಗೇಲ್​, ನರೈನ್​ ದಾಖಲೆ ಮುರಿದ ಟ್ರಾವಿಸ್ ಹೆಡ್​

bagalakote unrest
ಕ್ರೈಂ1 hour ago

Bagalakote Unrest: ಹಿಂದೂ ಯುವಕ- ಮುಸ್ಲಿಂ ಯುವತಿ ನವದಂಪತಿ ರಕ್ಷಣೆಗೆ ನಿಂತ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್‌ ಲಾಠಿಚಾರ್ಜ್‌

Do You Know
ಲೈಫ್‌ಸ್ಟೈಲ್1 hour ago

Do You Know: ನಿಮಗಿದು ಗೊತ್ತಾ? ಲವ್‌ ಮಾಡುತ್ತಿದ್ದರೆ ತೂಕ ಜಾಸ್ತಿಯಾಗುತ್ತದೆ!

hd revanna jailed prajwal revanna case
ಕ್ರೈಂ1 hour ago

Prajwal Revanna Case: ಎಚ್‌.ಡಿ ರೇವಣ್ಣ ಈಗ ಕೈದಿ ನಂಬರ್‌ 4567, ನಿದ್ದೆ ಮಾಡದೆ ಮೌನಿಯಾಗಿ ಕುಳಿತ ಮಾಜಿ ಸಚಿವ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌