ಮುಂಬಯಿ: ಫ್ರೆಂಚ್ ಮೂಲದ ಕಾರು ತಯಾರಕ ಕಂಪನಿ ಸಿಟ್ರಾನ್ ಭಾರತೀಯ ಮಾರುಕಟ್ಟೆಯಲ್ಲಿರುವ ತನ್ನ ಸಿಟ್ರಾನ್ ಸಿ3ಯ 2023ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಈ ಹಿಂದಿನ ಆವೃತ್ತಿಯಲ್ಲಿ ಇಲ್ಲದ ಫೀಚರ್ಗಳನ್ನು ನೀಡಲಾಗಿದ್ದು ಇನ್ನಷ್ಟು ಅತ್ಯಾಕರ್ಷಕ ಪೀಚರ್ಗಳನ್ನೂ ನೀಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಶೈನ್ ಎಂಬ ಹೊಸ ವೇರಿಯೆಂಟ್ ಅನ್ನು ಪರಿಚಯಿಸಿದೆ. ಇದು ಟಾಪ್ ಎಂಡ್ ವೇರಿಯೆಂಟ್ ಆಗಿದ್ದು ಎಲ್ಲ ಹೊಸ ಫೀಚರ್ಗಳನ್ನು ಇಲ್ಲಿ ನೀಡಲಾಗಿದೆ.
ಸಿಟ್ರಾನ್ ಸಿ3 ಹ್ಯಾಚ್ಬ್ಯಾಕ್ ಕಾರು 2022ರ ಜುಲೈನಲ್ಲಿ ಬಿಡುಗಡೆಯಾಗಿತ್ತು. ಆ ವೇಳೆ ಕಾರಿನ ಅರಂಭಿಕ ಬೆಲೆ 5.71 ಲಕ್ಷ ರೂಪಾಯಿಗಳಾಗಿದ್ದರೆ, ಟಾಪ್ ಎಂಡ್ ವೇರಿಯೆಂಟ್ 8.06 ಲಕ್ಷ ರೂಪಾಯಿಗಳಾಗಿತ್ತು. ಈ ವೇಳೆ ಕಾರಿನಲ್ಲಿ ಕೆಲವೊಂದು ಫಿಚರ್ಗಳ ಕೊರತೆಗಳಿವೆ ಎಂದು ಅನಿಸಿತ್ತು. ರಿಯರ್ ವೈಪರ್, ಡಿಫಾಗರ್, ಎಲೆಕ್ಟ್ರಿಕ್ ಒಆರ್ವಿಎಮ್, ರಿಯರ್ ಕ್ಯಾಮೆರಾ ಇತ್ಯಾದಿ ಫೀಚರ್ಗಳನ್ನು ಕೊಟ್ಟಿರಲಿಲ್ಲ. ಟಾಪ್ ಎಂಡ್ ವೇರಿಯೆಂಟ್ನ ಕಾರಿನಲ್ಲೂ ಅಲಾಯ್ ವೀಲ್ ಹಾಗೂ ಫಾಗ್ ಲ್ಯಾಂಪ್ ಇರಲಿಲ್ಲ. ಆದರೆ ಹೊಸ ಕಾರಿನಲ್ಲಿ 13 ಹೊಸ ಫಿಚರ್ಗಳನ್ನು ಕೊಡಲಾಗಿದೆ.
2023ನೇ ಆವೃತ್ತಿಯ ಸಿಟ್ರಾನ್ ಸಿ3 ಕಾರಿನಲ್ಲಿ ಎಲೆಕ್ಟ್ರಿಕ್ ಒಆರ್ವಿಎಮ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಡೇ, ನೈಟ್ ಐಆರ್ವಿಎಮ್, 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್, ಫಾಗ್ ಲೈಟ್, ರಿಯರ್ ವೈಪರ್ ಮತ್ತು ವಾಶರ್, ರಿಯರ್ ಸ್ಕಿಡ್ ಪ್ಲೇಟ್, ರಿಯರ್ ಡಿ ಫಾಗರ್ ನೀಡಲಾಗಿದೆ. ಅದೇ ರೀತಿ ಇನ್ಫೋಟೈನ್ಮೆಂಟ್ ಸಿಸ್ಟಮ್ ಕನೆಕ್ಟೆಡ್ ಕಾರ್ ಟೆಕ್ ಫೀಚರ್ ಕೂಡ ಹೊಂದಿದೆ.
ಸಿಟ್ರಾನ್ ಸಿ3 ಕಾರು ಎರಡು ಎಂಜಿನ ಆಯ್ಕೆಯೊಂದಿಗೆ ಲಭ್ಯವಿದೆ. 1.2 ಲೀಟರ್ನ 3 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ 82 ಬಿಎಚ್ಪಿ ಪವರ್ ಹಾಗೂ 115 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್ನ ಗೇರ್ ಬಾಕ್ಸ್ ಇದೆ. ಇನ್ನೊಂದು 1.2 ಲೀಟರ್ನ 3 ಸಿಲಿಂಡರ್ ಟರ್ಬೊ ಚಾರ್ಜ್ಡ್ ಎಂಜಿನ್ ಇದ್ದು ಇದು 110 ಬಿಎಚ್ಪಿ ಪವರ್ ಹಾಗೂ 190 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಇದರಲ್ಲಿ 6 ಸ್ಪೀಡ್ನ ಮ್ಯಾನುಯಲ್ ಗೇರ್ಬಾಕ್ಸ್ ಆಯ್ಕೆಯಿದೆ. ಈ ಎರಡೂ ಎಂಜಿನ್ಗಳನು ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸಿವೆ ಎಂದು ಕಂಪನಿ ಹೇಳಿದೆ.
2023ನೇ ಆವೃತ್ತಿಯ ಲೈವ್, ಫೀಲ್ ಹಾಗೂ ಶೈನ್ ಎಂಬ ಮೂರು ವೇರಿಯೆಂಟ್ಗಳಲ್ಲಿ ಲಭ್ಯವಿದೆ. ಒಟ್ಟು 9 ಆಯ್ಕೆಯನ್ನೂ ನೀಡಲಾಗಿದೆ. ಆರಂಭಿಕ ಲೈವ್ ವೇರಿಯೆಂಟ್ನ ಆರಂಭಿಕ ಬೆಲೆ 6.16 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್ ವೇರಿಯೆಂಟ್ನ ಶೈನ್ ಡ್ಯುಯಲ್ ಟೋನ್ ವೈಬ್ ಪ್ಯಾಕ್ 7.87 ಲಕ್ಷ ರೂಪಾಯಿಗಳು. ಎರಡೂ ಎಕ್ಸ್ಶೋ ರೂಮ್ ಬೆಲೆ.
ಇದನ್ನೂ ಓದಿ : Hero MotoCorp : ಹೀರೋ ಸೂಪರ್ ಸ್ಪ್ಲೆಂಡರ್ XTEC ಭಾರತದಲ್ಲಿ ಬಿಡುಗಡೆ, ಏನಿವೆ ವಿಶೇಷತೆಗಳು?
ಸಿಟ್ರಾನ್ ಕಂಪನಿಯ ಬ್ರಾಂಡ್ ಹೆಡ್ ಸೌರಭ್ ವಸ್ತಾ ಅವರು ಮಾತನಾಡಿ , ನಾವು ಹೊಸ ಶೈನ್ ವೇರಿಯೆಂಟ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಫೀಚರ್ಗಳನ್ನು ನೀಡಿದ್ದೇವೆ. ಅದೇ ರೀತಿ ಹೊಸ ಪ್ಯೂರ್ಟೆಕ್ ಟರ್ಬೊ ಎಂಜಿನ್ ಕೂಡ ಕೊಟ್ಟಿದ್ದೇವೆ. ಜತೆಗೆ ಕೆಲವೊಂದು ಫಿಚರ್ಗಳನ್ನೂ ನೀಡಲಾಗಿದೆ. ಪ್ರತಿಸ್ಪರ್ಧಿ ಕಂಪನಿಗಳ ಜತೆ ಪೈಪೋಟಿ ಒಡ್ಡುವ ಉತ್ತಮ ಪ್ಯಾಕೇಜ್ ನೀಡಲಾಗಿದೆ ಎಂದು ಹೇಳಿದರು.
ಎಲೆಕ್ಟ್ರಿಕ್ ಸಿಟ್ರಾನ್
ಸಿಟ್ರಾನ್ ಕಂಪನಿಯ ಇತ್ತೀಚೆಗೆ ಭಾರತದಲ್ಲಿ ಇಸಿ3 ಎಂಬ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಇದರಲ್ಲಿ 29.2 ಕಿಲೊವ್ಯಾಟ್ ಅವರ್ ಬ್ಯಾಟರಿಯಿದ್ದು 57 ಬಿಎಚ್ಪಿ ಪವರ್ ಹಾಗೂ 143 ಎನ್ಎಮ್ ಟಾರ್ಕ್ ಬಿಡುಗಡೆ ಮಾಡುತ್ತದೆ. ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ 320 ಕಿಲೋ ಮೀಟರ್ ದೂರಕ್ಕೆ ಸಾಗುತ್ತದೆ.