2023-edition-citroen-c3-launched-in-india-what-are-the-new-features Citroen C3 : 2023ನೇ ಆವೃತ್ತಿಯ ಸಿಟ್ರಾನ್​ ಸಿ3 ಭಾರತದಲ್ಲಿ ಬಿಡುಗಡೆ; ಹೊಸ ಫೀಚರ್​ಗಳೇನು? - Vistara News

ಆಟೋಮೊಬೈಲ್

Citroen C3 : 2023ನೇ ಆವೃತ್ತಿಯ ಸಿಟ್ರಾನ್​ ಸಿ3 ಭಾರತದಲ್ಲಿ ಬಿಡುಗಡೆ; ಹೊಸ ಫೀಚರ್​ಗಳೇನು?

ಹೊಸ ಆವೃತ್ತಿಯ ಸಿಟ್ರಾನ್​ ಸಿ3 (Citroen C3) ಕಾರಿನಲ್ಲಿ ಶೈನ್ ಎಂಬ ಹೊಸ ಟಾಪ್​ ವೇರಿಯೆಂಟ್​ ಸೇರ್ಪಡೆಯಾಗಿದ್ದು ಹಲವು ಹೊಸ ಫೀಚರ್​​ಗಳನ್ನು ನೀಡಲಾಗಿದೆ.

VISTARANEWS.COM


on

2023-edition-citroen-c3-launched-in-india-what-are-the-new-features
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಫ್ರೆಂಚ್​ ಮೂಲದ ಕಾರು ತಯಾರಕ ಕಂಪನಿ ಸಿಟ್ರಾನ್​ ಭಾರತೀಯ ಮಾರುಕಟ್ಟೆಯಲ್ಲಿರುವ ತನ್ನ ಸಿಟ್ರಾನ್​ ಸಿ3ಯ 2023ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಈ ಹಿಂದಿನ ಆವೃತ್ತಿಯಲ್ಲಿ ಇಲ್ಲದ ಫೀಚರ್​ಗಳನ್ನು ನೀಡಲಾಗಿದ್ದು ಇನ್ನಷ್ಟು ಅತ್ಯಾಕರ್ಷಕ ಪೀಚರ್​ಗಳನ್ನೂ ನೀಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಶೈನ್​ ಎಂಬ ಹೊಸ ವೇರಿಯೆಂಟ್​ ಅನ್ನು ಪರಿಚಯಿಸಿದೆ. ಇದು ಟಾಪ್​ ಎಂಡ್​ ವೇರಿಯೆಂಟ್​ ಆಗಿದ್ದು ಎಲ್ಲ ಹೊಸ ಫೀಚರ್​ಗಳನ್ನು ಇಲ್ಲಿ ನೀಡಲಾಗಿದೆ.

ಸಿಟ್ರಾನ್​ ಸಿ3 ಹ್ಯಾಚ್​ಬ್ಯಾಕ್​ ಕಾರು 2022ರ ಜುಲೈನಲ್ಲಿ ಬಿಡುಗಡೆಯಾಗಿತ್ತು. ಆ ವೇಳೆ ಕಾರಿನ ಅರಂಭಿಕ ಬೆಲೆ 5.71 ಲಕ್ಷ ರೂಪಾಯಿಗಳಾಗಿದ್ದರೆ, ಟಾಪ್​ ಎಂಡ್​ ವೇರಿಯೆಂಟ್​ 8.06 ಲಕ್ಷ ರೂಪಾಯಿಗಳಾಗಿತ್ತು. ಈ ವೇಳೆ ಕಾರಿನಲ್ಲಿ ಕೆಲವೊಂದು ಫಿಚರ್​ಗಳ ಕೊರತೆಗಳಿವೆ ಎಂದು ಅನಿಸಿತ್ತು. ರಿಯರ್ ವೈಪರ್​, ಡಿಫಾಗರ್​, ಎಲೆಕ್ಟ್ರಿಕ್ ಒಆರ್​ವಿಎಮ್, ರಿಯರ್ ಕ್ಯಾಮೆರಾ ಇತ್ಯಾದಿ ಫೀಚರ್​ಗಳನ್ನು ಕೊಟ್ಟಿರಲಿಲ್ಲ. ಟಾಪ್​ ಎಂಡ್ ವೇರಿಯೆಂಟ್​ನ ಕಾರಿನಲ್ಲೂ ಅಲಾಯ್​ ವೀಲ್ ಹಾಗೂ ಫಾಗ್​ ಲ್ಯಾಂಪ್ ಇರಲಿಲ್ಲ. ಆದರೆ ಹೊಸ ಕಾರಿನಲ್ಲಿ 13 ಹೊಸ ಫಿಚರ್​ಗಳನ್ನು ಕೊಡಲಾಗಿದೆ.

2023ನೇ ಆವೃತ್ತಿಯ ಸಿಟ್ರಾನ್​ ಸಿ3 ಕಾರಿನಲ್ಲಿ ಎಲೆಕ್ಟ್ರಿಕ್​ ಒಆರ್​ವಿಎಮ್​, ರಿಯರ್​ ಪಾರ್ಕಿಂಗ್ ಕ್ಯಾಮೆರಾ, ಡೇ, ನೈಟ್​ ಐಆರ್​ವಿಎಮ್​, 15 ಇಂಚಿನ ಡೈಮಂಡ್​ ಕಟ್​ ಅಲಾಯ್​ ವೀಲ್​, ಫಾಗ್​ ಲೈಟ್​, ರಿಯರ್ ವೈಪರ್​ ಮತ್ತು ವಾಶರ್​, ರಿಯರ್ ಸ್ಕಿಡ್​ ಪ್ಲೇಟ್​, ರಿಯರ್ ಡಿ ಫಾಗರ್​ ನೀಡಲಾಗಿದೆ. ಅದೇ ರೀತಿ ಇನ್ಫೋಟೈನ್​ಮೆಂಟ್​ ಸಿಸ್ಟಮ್​ ಕನೆಕ್ಟೆಡ್​ ಕಾರ್​ ಟೆಕ್​ ಫೀಚರ್​ ಕೂಡ ಹೊಂದಿದೆ.

ಸಿಟ್ರಾನ್​ ಸಿ3 ಕಾರು ಎರಡು ಎಂಜಿನ ಆಯ್ಕೆಯೊಂದಿಗೆ ಲಭ್ಯವಿದೆ. 1.2 ಲೀಟರ್​ನ 3 ಸಿಲಿಂಡರ್ ನ್ಯಾಚುರಲ್​ ಆಸ್ಪಿರೇಟೆಡ್​ ಎಂಜಿನ್ 82 ಬಿಎಚ್​ಪಿ ಪವರ್​ ಹಾಗೂ 115 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ ಐದು ಸ್ಪೀಡ್​​ನ ಗೇರ್​ ಬಾಕ್ಸ್​ ಇದೆ. ಇನ್ನೊಂದು 1.2 ಲೀಟರ್​ನ 3 ಸಿಲಿಂಡರ್​ ಟರ್ಬೊ ಚಾರ್ಜ್ಡ್​​ ಎಂಜಿನ್​ ಇದ್ದು ಇದು 110 ಬಿಎಚ್​ಪಿ ಪವರ್​ ಹಾಗೂ 190 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ 6 ಸ್ಪೀಡ್​ನ ಮ್ಯಾನುಯಲ್​ ಗೇರ್​ಬಾಕ್ಸ್ ಆಯ್ಕೆಯಿದೆ. ಈ ಎರಡೂ ಎಂಜಿನ್​ಗಳನು ಬಿಎಸ್​​6 ಎರಡನೇ ಹಂತದ ಮಾನದಂಡಗಳನ್ನು ಪೂರೈಸಿವೆ ಎಂದು ಕಂಪನಿ ಹೇಳಿದೆ.

2023ನೇ ಆವೃತ್ತಿಯ ಲೈವ್​, ಫೀಲ್ ಹಾಗೂ ಶೈನ್ ಎಂಬ ಮೂರು ವೇರಿಯೆಂಟ್​ಗಳಲ್ಲಿ ಲಭ್ಯವಿದೆ. ಒಟ್ಟು 9 ಆಯ್ಕೆಯನ್ನೂ ನೀಡಲಾಗಿದೆ. ಆರಂಭಿಕ ಲೈವ್ ವೇರಿಯೆಂಟ್​ನ ಆರಂಭಿಕ ಬೆಲೆ 6.16 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್​ ವೇರಿಯೆಂಟ್​ನ ಶೈನ್​ ಡ್ಯುಯಲ್​ ಟೋನ್​ ವೈಬ್​ ಪ್ಯಾಕ್​ 7.87 ಲಕ್ಷ ರೂಪಾಯಿಗಳು. ಎರಡೂ ಎಕ್ಸ್​ಶೋ ರೂಮ್​ ಬೆಲೆ.

ಇದನ್ನೂ ಓದಿ : Hero MotoCorp : ಹೀರೋ ಸೂಪರ್​ ಸ್ಪ್ಲೆಂಡರ್​ XTEC ಭಾರತದಲ್ಲಿ ಬಿಡುಗಡೆ, ಏನಿವೆ ವಿಶೇಷತೆಗಳು?

ಸಿಟ್ರಾನ್ ಕಂಪನಿಯ ಬ್ರಾಂಡ್ ಹೆಡ್​ ಸೌರಭ್ ವಸ್ತಾ ಅವರು ಮಾತನಾಡಿ , ನಾವು ಹೊಸ ಶೈನ್​ ವೇರಿಯೆಂಟ್​ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಫೀಚರ್​ಗಳನ್ನು ನೀಡಿದ್ದೇವೆ. ಅದೇ ರೀತಿ ಹೊಸ ಪ್ಯೂರ್​ಟೆಕ್​ ಟರ್ಬೊ ಎಂಜಿನ್​ ಕೂಡ ಕೊಟ್ಟಿದ್ದೇವೆ. ಜತೆಗೆ ಕೆಲವೊಂದು ಫಿಚರ್​ಗಳನ್ನೂ ನೀಡಲಾಗಿದೆ. ಪ್ರತಿಸ್ಪರ್ಧಿ ಕಂಪನಿಗಳ ಜತೆ ಪೈಪೋಟಿ ಒಡ್ಡುವ ಉತ್ತಮ ಪ್ಯಾಕೇಜ್​ ನೀಡಲಾಗಿದೆ ಎಂದು ಹೇಳಿದರು.

ಎಲೆಕ್ಟ್ರಿಕ್​ ಸಿಟ್ರಾನ್​

ಸಿಟ್ರಾನ್​ ಕಂಪನಿಯ ಇತ್ತೀಚೆಗೆ ಭಾರತದಲ್ಲಿ ಇಸಿ3 ಎಂಬ ಎಲೆಕ್ಟ್ರಿಕ್​ ಕಾರನ್ನು ಬಿಡುಗಡೆ ಮಾಡಿದೆ. ಇದರಲ್ಲಿ 29.2 ಕಿಲೊವ್ಯಾಟ್​ ಅವರ್​ ಬ್ಯಾಟರಿಯಿದ್ದು 57 ಬಿಎಚ್​​ಪಿ ಪವರ್​ ಹಾಗೂ 143 ಎನ್​ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಒಂದು ಬಾರಿ ಪೂರ್ತಿ ಚಾರ್ಜ್​ ಮಾಡಿದರೆ 320 ಕಿಲೋ ಮೀಟರ್​ ದೂರಕ್ಕೆ ಸಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Nissan India : ಉಚಿತ ಏಸಿ ರಿಪೇರಿ ಮಾಡಿಸಿಕೊಳ್ಳಲು ನಿಸ್ಸಾನ್ ಕಾರು ಮಾಲೀಕರಿಗೆ ಇಲ್ಲಿದೆ ಅವಕಾಶ

Nissan India: ಉಚಿತ ಏಸಿ ತಪಾಸಣಾ ಕಾರ್ಯಾಗಾರ ಏಪ್ರಿಲ್ 15ರಿಂದಲೇ ಆರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ. ನಿಸ್ಸಾನ್ ಗ್ರಾಹಕರು ವಿವಿಧ ಶ್ರೇಣಿಗಳ ಸರ್ವೀಸ್ ಗಳು ಮತ್ತು ರಿಯಾಯಿತಿ ಪಡೆಯುವ ಭಾರತದಾದ್ಯಂತ ಇರುವ ಎಲ್ಲಾ ನಿಸ್ಸಾನ್ ಅಧಿಕೃತ ಸರ್ವೀಸ್ ವರ್ಕ್ ಶಾಪ್ ಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

VISTARANEWS.COM


on

Nissan India
Koo

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ (Nissan India) ದೇಶಾದ್ಯಂತ ಇರುವ ತನ್ನ ಗ್ರಾಹಕರಿಗೆ ಎರಡು ತಿಂಗಳ ಕಾಲ ಉಚಿತ ಏಸಿ ತಪಾಸಣಾ ಕಾರ್ಯಾಗಾರ ಆಯೋಜಿಸಿದೆ. ಆ ಮೂಲಕ ಗ್ರಾಹಕ ತೃಪ್ತಿಯನ್ನು ಬಯಸು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ನಿಸ್ಸಾನ್ ಉಚಿತ ಏಸಿ ತಪಾಸಣಾ ಕಾರ್ಯಾಗಾರ ಏಪ್ರಿಲ್ 15ರಿಂದಲೇ ಆರಂಭಗೊಂಡಿದ್ದು ಜೂನ್ 15ರವರೆಗೆ ನಡೆಯಲಿದೆ. ನಿಸ್ಸಾನ್ ಗ್ರಾಹಕರು ವಿವಿಧ ಶ್ರೇಣಿಗಳ ಸರ್ವೀಸ್ ಗಳು ಮತ್ತು ರಿಯಾಯಿತಿ ಪಡೆಯುವ ಭಾರತದಾದ್ಯಂತ ಇರುವ ಎಲ್ಲಾ ನಿಸ್ಸಾನ್ ಅಧಿಕೃತ ಸರ್ವೀಸ್ ವರ್ಕ್ ಶಾಪ್ ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ನಿಸ್ಸಾನ್‌ನ ನುರಿತ ಮತ್ತು ತರಬೇತಿ ಪಡೆದ ಸರ್ವೀಸ್ ಉದ್ಯೋಗಿಗಳು ನಿಸ್ಸಾನ್ ನಿಜವಾದ ಬಿಡಿಭಾಗಗಳನ್ನು ಬಳಸಿಕೊಂಡು ಏಸಿ ತಪಾಸಣೆ ಶಿಬಿರವನ್ನು ನಡೆಸಿಕೊಡುತ್ತಾರೆ.

ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ವಾಹನ ಮಾಲೀಕರು ನಿಸ್ಸಾನ್ ಒನ್ ಆ್ಯಪ್ ಅಥವಾ ನಿಸ್ಸಾನ್ ಮೋಟಾರ್ ಇಂಡಿಯಾ ವೆಬ್‌ಸೈಟ್ (www.nissan.in) ಮೂಲಕ ತಪಾಸಣೆ ಪಡೆಯಲು ಸರ್ವೀಸ್ ಅಪಾಯಿಂಟ್‌ಮೆಂಟ್ ಅನ್ನು ಪಡೆಯಬಹುದು. ಇದರಿಂದಾಗಿ ಗ್ರಾಹಕರು ಯಾವುದೇ ತೊಂದರೆ ಇಲ್ಲದೆ ನಿಸ್ಸಾನ್ ಮಾಲೀಕತ್ವವನ್ನು ಅನುಭವಿಸುವ ಸೌಕರ್ಯ ಪಡೆಯುವುದಲ್ಲದೆ, ಈ ಉಪಕ್ರಮವು ಬ್ರಾಂಡ್ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸಕ್ಕೆ ಸಣ್ಣ ಪ್ರಮಾಣದ ಕೊಡುಗೆಯೂ ಆಗಿದೆ. ಈ ಸರ್ವೀಸ್ ಶಿಬಿರಗಳು ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ಬ್ರಾಂಡ್ ವಾಹನಗಳಿಗೆ ಸರ್ವೀಸ್ ಒದಗಿಸುವ ಕಂಪನಿಯ ವ್ಯಾಪಕವಾದ 120 ಸರ್ವೀಸ್ ವರ್ಕ್ ಶಾಪ್ ಗಳಲ್ಲಿಯೂ ನಡೆಯಲಿದೆ.

ಇದನ್ನೂ ಓದಿ: Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

ಶಿಬಿರವು ಉಚಿತ ಕಾರ್ ಟಾಪ್ ವಾಶ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಸಮಗ್ರ 20-ಪಾಯಿಂಟ್ ತಪಾಸಣೆಯನ್ನು ಮಾಡಲಾಗುತ್ತದೆ. ಪಿಎಂಎಸ್ (ಪೀರಿಯಾಡಿಕಲ್ ಮೇಂಟನೆನ್ಸ್ ಸರ್ವೀಸ್) ಆಯ್ಕೆ ಮಾಡುವ ಗ್ರಾಹಕರಿಗೆ ಉಚಿತ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯ ಕೂಡ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು ಶೇ.20ರವರೆಗೆ ಭಾಗಗಳು/ಪರಿಕರಗಳ ಮೇಲೆ ರಿಯಾಯಿತಿ (ಡೀಲರ್ ತೀರ್ಮಾನದ ಪ್ರಕಾರ) ಪಡೆಯಬಹುದು. ಕಾರ್ಮಿಕ ಶುಲ್ಕಗಳ ಮೇಲೆ 20% ವರೆಗೆ ಮತ್ತು ಮೌಲ್ಯವರ್ಧಿತ ಸೇವೆಗಳ ಮೇಲೆ (ವಿಎಎಸ್) 10% ವರೆಗೆ ರಿಯಾಯಿತಿ ಪಡೆಯಬಹುದು. ಕಂಪನಿಯು ಎಲ್ಲಾ ನಿಸ್ಸಾನ್ ಮತ್ತು ಡಾಟ್ಸನ್ ವಾಹನಗಳು ಈ ವಿಶೇಷ ಕೊಡುಗೆಗಳ ಲಾಭವನ್ನು ಪಡೆಯಬೇಕು ಮತ್ತು ಅದರಿಂದ ವಾಹನಗಳ ಕಾರ್ಯಕ್ಷಮತೆ ಉತ್ತಗೊಳಿಸಬೇಕು, ವಾಹನಗಳು ಆಯುಷ್ಯ ಹೆಚ್ಚಿಸಬೇಕು ಎಂದು ಹೇಳಿದೆ.

Continue Reading

ಆಟೋಮೊಬೈಲ್

Air Purifier: ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ ಏಕೆ ಅಗತ್ಯ ಗೊತ್ತೆ?

ಕಾರಿನಲ್ಲಿರುವ ಏರ್ ಪ್ಯೂರಿಫೈಯರ್ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳು (Air Purifier) ಅಗತ್ಯವಾಗಿರುವುದಕ್ಕೆ ಕೆಲವು ಪ್ರಮುಖ ಕಾರಣಗಳೂ ಇವೆ. ಕಾರಿನಲ್ಲಿ ಓಡಾಡುವವರಿಗೆ ಏರ್‌ ಪ್ಯೂರಿಫೈಯರ್‌ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Air Purifier
Koo

ವಾಯು ಮಾಲಿನ್ಯವು (Air pollution) ಈಗ ಜಾಗತಿಕವಾಗಿ ಒಂದು ಸಮಸ್ಯೆಯಾಗಿದೆ. ಹೊರಾಂಗಣ ಪರಿಸರವನ್ನು ಮಾತ್ರವಲ್ಲದೆ ಇದು ನಮ್ಮ ಮನೆ (home) ಮತ್ತು ವಾಹನಗಳ (vehicles) ಒಳಗಿನ ಗಾಳಿಯ ಮೇಲೂ ಪರಿಣಾಮ ಬೀರುತ್ತಿದೆ. ಒಳಾಂಗಣ ವಾಯು ಮಾಲಿನ್ಯವನ್ನು ಎದುರಿಸಲು ಅನೇಕ ಜನರು ತಮ್ಮ ಮನೆಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು (Air Purifier) ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳ ಅಗತ್ಯವನ್ನು ಸಾಮಾನ್ಯವಾಗಿ ಹೆಚ್ಚಿನವರು ಕಡೆಗಣಿಸುತ್ತಾರೆ.

ಕಲುಷಿತ ಗಾಳಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು, ವಾಹನಗಳಲ್ಲಿ ಏರ್ ಪ್ಯೂರಿಫೈಯರ್ ಗಳ ಪ್ರಾಮುಖ್ಯತೆಯು ಎಲ್ಲರ ಗಮನ ಸೆಳೆಯುತ್ತಿದೆ. ಸ್ವಂತ ವಾಹನ ಚಾಲನೆ ಮಾಡುವಾಗ ವಿಶೇಷವಾಗಿ ಭಾರೀ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ಸುತ್ತಮುತ್ತ ನಿರಂತರವಾಗಿ ಹಾನಿಕಾರಕ ಅನಿಲಗಳು ಮತ್ತು ಕಣಗಳು ಹೊರಸೂಸುತ್ತಿರುತ್ತದೆ. ಈ ಮಾಲಿನ್ಯಕಾರಕಗಳು ಕಾರಿನ ಕ್ಯಾಬಿನ್ ಅನ್ನು ಪ್ರವೇಶಿಸಬಹುದು. ಇದು ಒಳಗೆ ಕಲುಷಿತ ಗಾಳಿಯ ಸಂಗ್ರಹಕ್ಕೆ ಕಾರಣವಾಗುತ್ತದೆ. ಪರಿಸರದಲ್ಲಿರುವ ಧೂಳು, ಹೊಗೆ, ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಅಲರ್ಜಿನ್‌ಗಳಂತಹ ಅಂಶಗಳಿಂದ ಇದು ಮತ್ತಷ್ಟು ಹದಗೆಡುತ್ತದೆ.
ಕಾರಿನಲ್ಲಿರುವ ಏರ್ ಪ್ಯೂರಿಫೈಯರ್ ಗಾಳಿಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಮತ್ತು ಆರೋಗ್ಯವನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌ಗಳು ಅಗತ್ಯವಾಗಿರುವುದಕ್ಕೆ ಕೆಲವು ಪ್ರಮುಖ ಕಾರಣಗಳೂ ಇವೆ.


1. ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುತ್ತದೆ

ಗಾಳಿಯ ಶುದ್ಧೀಕರಣವು ಕಾರಿನೊಳಗಿನ ಗಾಳಿಯಿಂದ ಧೂಳು, ಹೊಗೆ, ಪರಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಮಾಲಿನ್ಯಕಾರಕಗಳನ್ನು ಪರಿಣಾಮಕಾರಿಯಾಗಿ ಫಿಲ್ಟರ್ ಮಾಡುತ್ತದೆ. ಚಾಲನೆ ಮಾಡುವಾಗ ನೀವು ಉಸಿರಾಡುವ ಹಾನಿಕಾರಕ ಕಣಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

2. ಅಲರ್ಜಿಕಾರಕಗಳನ್ನು ತೆಗೆದು ಹಾಕುತ್ತದೆ

ಅಲರ್ಜಿ ಅಥವಾ ಆಸ್ತಮಾದಂತಹ ಉಸಿರಾಟದ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಕಲುಷಿತ ಗಾಳಿಯು ಅಸ್ವಸ್ಥತೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಪ್ರಚೋದಿಸುತ್ತದೆ. ಏರ್ ಪ್ಯೂರಿಫೈಯರ್ ಗಾಳಿಯಿಂದ ಅಲರ್ಜಿಯನ್ನು ತೆಗೆದುಹಾಕುತ್ತದೆ. ಸೂಕ್ಷ್ಮ ವ್ಯಕ್ತಿಗಳಿಗೆ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸುತ್ತದೆ.

3. ವಾಸನೆ ತೊಡೆದು ಹಾಕುವುದು

ಮಾಲಿನ್ಯಕಾರಕಗಳ ಜೊತೆಗೆ ಏರ್ ಪ್ಯೂರಿಫೈಯರ್‌ಗಳು ಕಾರಿನೊಳಗಿನ ಅಹಿತಕರ ವಾಸನೆಯನ್ನು ತೆಗೆದು ಹಾಕುತ್ತದೆ. ಅದು ಹೊಗೆ, ಆಹಾರ ಅಥವಾ ಇತರ ವಾಸನೆಯ ಪದಾರ್ಥಗಳು ತೊಡೆದು ಹಾಕಿ ಗಾಳಿ ಶುದ್ಧೀಕರಣ ಮಾಡಿ ಸುವಾಸನೆಯನ್ನು ಬೀರುತ್ತದೆ. ವಾಹನ ಚಾಲನೆಯ ಅನುಭವವನ್ನು ಹೆಚ್ಚಿಸುತ್ತದೆ.

4. ಆರೋಗ್ಯದ ಅಪಾಯಗಳ ವಿರುದ್ಧ ರಕ್ಷಣೆ

ಕಲುಷಿತ ಗಾಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ಸಮಸ್ಯೆಗಳು, ಅಲರ್ಜಿಗಳು, ಆಸ್ತಮಾ ಮತ್ತು ಹೃದಯರಕ್ತನಾಳದ ಕಾಯಿಲೆಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರಿನೊಳಗಿನ ಗಾಳಿಯನ್ನು ಶುದ್ಧೀಕರಿಸುವ ಮೂಲಕ ಈ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಚಾಲನಾ ವಾತಾವರಣವನ್ನು ಉತ್ತೇಜಿಸಲು ಏರ್ ಪ್ಯೂರಿಫೈಯರ್ ಸಹಾಯ ಮಾಡುತ್ತದೆ.

5. ಚಾಲನಾ ಸೌಕರ್ಯವನ್ನು ಹೆಚ್ಚಿಸುವುದು

ಕಾರಿನೊಳಗೆ ಶುದ್ಧ ಮತ್ತು ತಾಜಾ ಗಾಳಿಯು ಹೆಚ್ಚು ಆರಾಮದಾಯಕ ಮತ್ತು ಆನಂದದಾಯಕ ಚಾಲನಾ ಅನುಭವಕ್ಕೆ ಕೊಡುಗೆ ನೀಡುತ್ತದೆ. ವಿಶೇಷವಾಗಿ ದೀರ್ಘ ಪ್ರಯಾಣದ ಸಮಯದಲ್ಲಿ ಅಥವಾ ಸವಾಲಿನ ಚಾಲನಾ ಪರಿಸ್ಥಿತಿಗಳಲ್ಲಿ ಇದು ಗಮನ ಮತ್ತು ಜಾಗರೂಕತೆಯನ್ನು ಸುಧಾರಿಸುತ್ತದೆ.

ಇದನ್ನೂ ಓದಿ: Xiaomi EV: ತಿಂಗಳಲ್ಲಿ 75 ಸಾವಿರ ಆರ್ಡರ್ ಸ್ವೀಕರಿಸಿದ ಕ್ಸಿಯೋಮಿ ಎಸ್‌ಯು 7 ಎಲೆಕ್ಟ್ರಿಕ್‌ ಕಾರು; ಟೆಸ್ಲಾಗಿಂತ ಅಗ್ಗ!

6. ಕಾರುಗಳಲ್ಲಿ ಏರ್ ಪ್ಯೂರಿಫೈಯರ್‌

ಕಾರು ತಯಾರಕರು ಈಗ ತಮ್ಮ ವಾಹನದ ವೈಶಿಷ್ಟ್ಯಗಳ ಭಾಗವಾಗಿ ಇನ್‌ಬಿಲ್ಟ್‌ ಆಗಿ ಏರ್ ಪ್ಯೂರಿಫೈಯರ್‌ಗಳನ್ನು ನೀಡುತ್ತಿದ್ದಾರೆ. ಹೆಚ್ಚುವರಿಯಾಗಿ ಕಾರುಗಳಲ್ಲಿ ಬಳಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಪೋರ್ಟಬಲ್ ಮತ್ತು ಕಾಂಪ್ಯಾಕ್ಟ್ ಏರ್ ಪ್ಯೂರಿಫೈಯರ್‌ಗಳು ಇವೆ. ಚಾಲಕರು ತಮ್ಮ ವಾಹನದ ಮಾದರಿಯನ್ನು ಲೆಕ್ಕಿಸದೆಯೇ ಶುದ್ಧ ಗಾಳಿಯನ್ನು ಆನಂದಿಸಲು ಇದು ಅನುವು ಮಾಡಿಕೊಡುತ್ತದೆ.

Continue Reading

ದೇಶ

Innova Crysta: ಇನ್ನೋವಾ ಕ್ರಿಸ್ಟಾ ನೂತನ ಸರಣಿಯ GX+ ಪರಿಚಯಿಸಿದ ಟಿಕೆಎಂ; ವೈಶಿಷ್ಟ್ಯಗಳೇನು? ದರ ಎಷ್ಟು?

Innova Crysta: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇನ್ನೋವಾ ಕ್ರಿಸ್ಟಾ ಸರಣಿಯಲ್ಲಿ ನೂತನ ಗ್ರೇಡ್ GX+ ಅನ್ನು ಪರಿಚಯಿಸಿದ್ದು, ರಿಯರ್ ಕ್ಯಾಮೆರಾ, ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್, ಡೈಮಂಡ್-ಕಟ್ ಅಲಾಯ್ಸ್, ವುಡನ್ ಪ್ಯಾನೆಲ್ ಮತ್ತು ಪ್ರೀಮಿಯಂ ಫ್ಯಾಬ್ರಿಕ್ ಸೀಟ್ಸ್ ಸೇರಿದಂತೆ ಹಲವಾರು ಅತ್ಯಾಕರ್ಷಕ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಇನ್ನೋವಾ ಕ್ರಿಸ್ಟಾ GX+ ಗ್ರೇಡ್ ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ನೂತನ ವಾಹನ ಹೊರಬರಲಿದೆ.

VISTARANEWS.COM


on

Innova Crysta new grade GX+ introduced by Toyota Kirloskar Motor
Koo

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಇನ್ನೋವಾ ಕ್ರಿಸ್ಟಾ (Innova Crysta) ಸರಣಿಯಲ್ಲಿ ನೂತನ ಗ್ರೇಡ್ GX+ ಅನ್ನು ಪರಿಚಯಿಸಿದ್ದು, ರಿಯರ್ ಕ್ಯಾಮೆರಾ, ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್, ಡೈಮಂಡ್-ಕಟ್ ಅಲಾಯ್ಸ್, ವುಡನ್ ಪ್ಯಾನೆಲ್ ಮತ್ತು ಪ್ರೀಮಿಯಂ ಫ್ಯಾಬ್ರಿಕ್ ಸೀಟ್ಸ್ ಸೇರಿದಂತೆ ಹಲವಾರು ಅತ್ಯಾಕರ್ಷಕ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

ಇನ್ನೋವಾ ಕ್ರಿಸ್ಟಾ GX+ ಗ್ರೇಡ್ ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು, ಸೂಪರ್ ವೈಟ್, ಆಟಿಟ್ಯೂಡ್ ಬ್ಲ್ಯಾಕ್ ಮೈಕಾ, ಅವಂತ್-ಗಾರ್ಡೆ ಬ್ರೋನ್ಜ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳಲ್ಲಿ ನೂತನ ವಾಹನ ಹೊರಬರಲಿದೆ. ಇನ್ನೋವಾ ಕ್ರಿಸ್ಟಾ GX+ ಗ್ರೇಡ್ 14 ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ: Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಸೇಲ್ಸ್-ಸರ್ವೀಸ್-ಯೂಸ್ಡ್ ಕಾರ್ ಬಿಸಿನೆಸ್‌ನ ಉಪಾಧ್ಯಕ್ಷ ಶಬರಿ ಮನೋಹರ್ ಈ ಕುರಿತು ಮಾತನಾಡಿ, ನೂತನವಾಗಿ ಪರಿಚಯಿಸಲಾದ ಇನ್ನೋವಾ ಕ್ರಿಸ್ಟಾ GX+ ಗ್ರೇಡ್ ನಮ್ಮ ಅಸ್ತಿತ್ವದಲ್ಲಿರುವ ಇನ್ನೋವಾ ಕ್ರಿಸ್ಟಾ ಶ್ರೇಣಿಗೆ ಪೂರಕವಾಗಿದೆ. ಹೊಸದಾಗಿ ಪರಿಚಯಿಸಲಾದ ವರ್ಧಿತ ವೈಶಿಷ್ಟ್ಯಗಳು ಮತ್ತು ಮಲ್ಟಿ ಫಂಕ್ಷನಾಲಿಟಿಯ ಮೂಲಕ ಹೆಚ್ಚಿನ ಮೌಲ್ಯವನ್ನು ನೀಡುವ ವಿಷಯದಲ್ಲಿ ಒಂದು ಹೆಜ್ಜೆಯಾಗಿದೆ. ಹೊಸ ಪರಿಚಯವು ಗ್ರಾಹಕರ ವ್ಯಾಪಕ ಪ್ರೇಕ್ಷಕರನ್ನು ಆಕರ್ಷಿಸುವುದನ್ನು ಮುಂದುವರಿಸುತ್ತದೆ ಎಂದು ನಮಗೆ ವಿಶ್ವಾಸವಿದೆ, ಇದರಿಂದಾಗಿ ಭಾರತದ ಅತ್ಯಂತ ಪ್ರೀತಿಯ ಎಂಪಿವಿ ಎಂಬ ಇನ್ನೋವಾ ಪರಂಪರೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.

ಎಕ್ಸ್ ಶೋರೂಂ ಬೆಲೆ (ಗ್ರೇಡ್ ವಾರು)

Variant Ex Showroom Price (W.E.F 06th May 2024), Innova Crysta GX+ 7s Rs 21,39,000, Innova Crysta GX+ 8s ರೂ. 21,44,000 ಗಳಾಗಿದೆ.

ದೃಢವಾದ ಕಾರ್ಯಕ್ಷಮತೆ

ಇನ್ನೋವಾ ಕ್ರಿಸ್ಟಾ GX+ 2.4 ಲೀಟರ್ ಡೀಸೆಲ್ ಎಂಜಿನ್, ಇಕೋ ಮತ್ತು ಪವರ್ ಡ್ರೈವ್ ಮೋಡ್ , 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಶಕ್ತಿಶಾಲಿ ಜಿಡಿ ಡೀಸೆಲ್ ಎಂಜಿನ್ ಕಡಿಮೆ ಮತ್ತು ಮಧ್ಯಮ ವೇಗದ ಶ್ರೇಣಿಗಳಲ್ಲಿ ಗಣನೀಯ ವರ್ಧಿತ ಟಾರ್ಕ್‌ ಅನ್ನು ಹೊಂದಿದೆ. ಹೆಚ್ಚುವರಿಯಾಗಿ ವಾಹನವು ಪಿಚ್ ಮತ್ತು ಬೌನ್ಸ್ ನಿಯಂತ್ರಣದೊಂದಿಗೆ ಸುಧಾರಿತ ಸಸ್ಪೆಂಷನ್ ಅನ್ನು ಖಚಿತಪಡಿಸುತ್ತಿದ್ದು, ಕ್ಯಾಬಿನ್ ಚಲನೆಯನ್ನು ಕನಿಷ್ಠವಾಗಿರಿಸುತ್ತದೆ ಮತ್ತು ಒರಟಾದ ರಸ್ತೆಗಳಲ್ಲಿ ಸುಗಮ ಸವಾರಿಯನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಟಫ್ ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್ ಟಫ್ ಮತ್ತು ಅತ್ಯಾಧುನಿಕತೆಯ ಹೊಂದಾಣಿಕೆಯನ್ನು ಇದು ಹೊಂದಿದ್ದು, ನಯವಾದ ಮತ್ತು ಸಮಕಾಲೀನ ವಿನ್ಯಾಸದೊಂದಿಗೆ ಇನ್ನೋವಾ ಕ್ರಿಸ್ಟಾ ಪ್ರತಿ ಪ್ರಯಾಣದಲ್ಲಿ ಸೊಬಗು ಮತ್ತು ಪರಿಷ್ಕರಣೆಯನ್ನು ನೀಡುತ್ತದೆ. ಇದರ ನಿಖರವಾದ ಪರಿಷ್ಕರಿಸಿದ ಎಕ್ಸ್‌ಟೀರಿಯರ್ ವೈಶಿಷ್ಟ್ಯಗಳಾದ ಬೋಲ್ಡ್ ಫ್ರಂಟ್ ಗ್ರಿಲ್ ಮತ್ತು ಗಟ್ಟಿಮುಟ್ಟಾದ ಬಂಪರ್ ಲುಕ್ ಅನ್ನು ಹೆಚ್ಚಿಸುತ್ತದೆ. ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ ರಸ್ತೆಯಲ್ಲಿ ಕಮಾಂಡಿಂಗ್ ಉಪಸ್ಥಿತಿಯನ್ನು ಖಚಿತಪಡಿಸುತ್ತದೆ. ಇನ್ನೋವಾ ಕ್ರಿಸ್ಟಾ GX+ ಅನ್ನು ಮತ್ತಷ್ಟು ಪ್ರತ್ಯೇಕಿಸುವ ಅಂಶವೆಂದರೆ ಅದರ ಭವ್ಯವಾದ ಸಿಲ್ವರ್ ಸರೌಂಡ್ ಪಿಯಾನೋ ಬ್ಲ್ಯಾಕ್ ಗ್ರಿಲ್ ಮತ್ತು ಆಕರ್ಷಕ ಡೈಮಂಡ್-ಕಟ್ ಅಲಾಯ್ಸ್ ವಾಹನದ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಆರಾಮದಾಯಕ ಇಂಟೀರಿಯರ್

ಇನ್ನೋವಾ ಕ್ರಿಸ್ಟಾ GX+ ನ ಇಂಟೀರಿಯರ್ ನವೀನ ವೈಶಿಷ್ಟ್ಯಗಳೊಂದಿಗೆ ಆರಾಮ ಮತ್ತು ಅನುಕೂಲತೆಯಲ್ಲಿ ಉದಾಹರಣೆಯಾಗಿದೆ. ಇತರ ಇನ್ನೋವಾಗಳಂತೆ, ಐಷಾರಾಮಿ ಮತ್ತು ಆರಾಮವು ಹೊಸ ಇನ್ನೋವಾ ಕ್ರಿಸ್ಟಾ GX+ನ ಪ್ರಮುಖ ಅಂಶವಾಗಿದ್ದು ವುಡ್ ಫಿನಿಶ್ ಇಂಟೀರಿಯರ್ ಪ್ಯಾನೆಲ್ಸ್ , ಆಟೋ-ಫೋಲ್ಡ್ ಮಿರರ್ಸ್, ಡಿವಿಆರ್, ಸಾಟಿಯಿಲ್ಲದ ಪರಿಷ್ಕರಣೆ ಮತ್ತು ಕ್ಲಾಸ್ ಅನ್ನು ಹೊಂದಿದೆ.

ಇದನ್ನೂ ಓದಿ: Lok Sabha Election 2024: ಮತದಾನ ಮಾಡಲು ದುಬೈನಿಂದ ಗಂಗಾವತಿಗೆ ಆಗಮಿಸಿದ ದಂಪತಿ

ಸುಧಾರಿತ ಸುರಕ್ಷತಾ ಕೊಡುಗೆಗಳು

ಸುರಕ್ಷತೆಯು ಟೊಯೊಟಾಗೆ ಉನ್ನತ ಆದ್ಯತೆಯಾಗಿದೆ. ಇನ್ನೋವಾ ಕ್ರಿಸ್ಟಾ GX+ ಇದಕ್ಕೆ ಹೊರತಾಗಿಲ್ಲ. ರಿಯರ್ ಕ್ಯಾಮೆರಾ, ಎಸ್‌ಆರ್‌ಎಸ್ ಏರ್ ಬ್ಯಾಗ್ಸ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಸೇರಿದಂತೆ ಸಮಗ್ರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಹೆಚ್ಚಿನ ಸಾಮರ್ಥ್ಯದ GOA ಬಾಡಿ ಸ್ಟ್ರಕ್ಚರ್ ಪ್ರತಿ ಪ್ರಯಾಣದಲ್ಲಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

Continue Reading

ದೇಶ

Toyota Kirloskar Motor: ಟೊಯೊಟಾ ರುಮಿಯಾನ್‌ G-AT ಬುಕ್ಕಿಂಗ್‌ ಶುರು! ಏನಿದರ ವಿಶೇಷ?

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಟೊಯೊಟಾ ರುಮಿಯಾನ್ G-AT ನೂತನ ಗ್ರೇಡ್ ಅನ್ನು ಪರಿಚಯಿಸಿದ್ದು, 1.5-ಲೀಟರ್ ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನಿಯೋ ಡ್ರೈವ್ (ಐಎಸ್‌ಜಿ) ತಂತ್ರಜ್ಞಾನವನ್ನು ಒಳಗೊಂಡಿದೆ.

VISTARANEWS.COM


on

Toyota Kirloskar Motor Introduces New G-AT Grade of Toyota Rumion
Koo

ಬೆಂಗಳೂರು: ಟೊಯೊಟಾ ರುಮಿಯಾನ್‌ನ G-AT ಹೊಸ ಸರಣಿಯ ಅಧಿಕೃತ ಬುಕ್ಕಿಂಗ್ ಆರಂಭಿಸಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಬೆಲೆಯನ್ನು ಇಂದು ಘೋಷಿಸಿದ್ದು, ಹೊಸದಾಗಿ ಬಿಡುಗಡೆಯಾದ G-AT ವೇರಿಯಂಟ್‌ ಸರಿಸಾಟಿಯಿಲ್ಲದ ಸ್ಪೇಸ್ ಮತ್ತು ಕಂಫರ್ಟ್‌, ಅತ್ಯುತ್ತಮ ಇಂಧನ ದಕ್ಷತೆ, ಸ್ಟೈಲಿಶ್ ಮತ್ತು ಪ್ರೀಮಿಯಂ ಎಕ್ಸ್‌ಟೀರಿಯರ್ ಡಿಸೈನ್‌ ಒಳಗೊಂಡಿದೆ.

ಟಿಕೆಎಂನ ಇತ್ತೀಚಿನ ಆಫರ್ ಬೆಲೆಯು 13 ಲಕ್ಷ ರೂ. ಗಳ ಆಕರ್ಷಕ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಡೆಲಿವರಿ ಮೇ 5 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಗ್ರಾಹಕರು ಯಾವುದೇ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ 11 ಸಾವಿರ ರೂ. ಬುಕಿಂಗ್ ಶುಲ್ಕದೊಂದಿಗೆ ವಾಹನವನ್ನು ಬುಕ್ ಮಾಡಬಹುದಾಗಿದೆ.

ಇದನ್ನೂ ಓದಿ: Labour Day 2024: ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಉಪಯುಕ್ತ ಹಣಕಾಸು ಟಿಪ್ಸ್‌ ಇಲ್ಲಿದೆ

ಟೊಯೊಟಾ ರುಮಿಯಾನ್ G-AT ವೇರಿಯಂಟ್ 1.5-ಲೀಟರ್ ಸೀರಿಸ್ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಿಂದ ನಿಯಂತ್ರಿಸಲ್ಪಡುತ್ತದೆ. ನಿಯೋ ಡ್ರೈವ್ (ಐಎಸ್‌ಜಿ) ತಂತ್ರಜ್ಞಾನವನ್ನು ಒಳಗೊಂಡಿದೆ. ಪೆಟ್ರೋಲ್ ಗ್ರೇಡ್ 75.8 ಕಿಲೋವ್ಯಾಟ್ @ 6000 rpm ಪವರ್ ಮತ್ತು 136.8 Nm @ 4400 ಆರ್‌ಪಿಎಂ ಟಾರ್ಕ್ ಅನ್ನು ಹೊಂದಿದೆ. ಸಿಎನ್‌ಜಿ ಗ್ರೇಡ್ 64.6 ಕಿಲೋವ್ಯಾಟ್ ಔಟ್‌ಪುಟ್ @ 5500 rpm ಮತ್ತು 121.5 Nm@4200 rpm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟೊಯೊಟಾ ರುಮಿಯಾನ್ ಈಗ ನಿಯೋ ಡ್ರೈವ್ MT ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಎಸ್, ಜಿ ಮತ್ತು ವಿ ಗ್ರೇಡ್ ಮತ್ತು ನಿಯೋ ಡ್ರೈವ್ AT: ಎಸ್, ಜಿ ಮತ್ತು ವಿ ಗ್ರೇಡ್. ಇ-ಸಿಎನ್ ಜಿ: ಎಸ್ ಗ್ರೇಡ್ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ.

G-AT ವೇರಿಯಂಟ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 17.78 ಸೆಂ.ಮೀ ಸ್ಮಾರ್ಟ್ ಪ್ಲೇ ಕ್ಯಾಸ್ಟ್ ಟಚ್ ಸ್ಕ್ರೀನ್ ಆಡಿಯೊ ಸಿಸ್ಟಮ್ ಸೇರಿದಂತೆ ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಟೊಯೊಟಾ i-Connect ಹೊಂದಿರುವ ಇದು ಹವಾಮಾನ, ಲಾಕ್ / ಅನ್ಲಾಕ್, ಹಜಾರ್ಡ್ ಲೈಟ್ಸ್ ಸೇರಿದಂತೆ ಅನೇಕ ಸಂಪರ್ಕಿತ ವೈಶಿಷ್ಟ್ಯಗಳಿಗಾಗಿ ರಿಮೋಟ್ ಕಂಟ್ರೋಲ್ ಅನ್ನು ನೀಡುತ್ತದೆ. ಟೊಯೊಟಾ ರುಮಿಯಾನ್ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಹೋಲ್ಡ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ) ಸೇರಿದಂತೆ ಹಲವು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ತನ್ನ ಮಾಲೀಕರ ಸುರಕ್ಷತೆಗೆ ಆದ್ಯತೆ ನೀಡುತ್ತದೆ.

ಇದನ್ನೂ ಓದಿ: IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಕುಲ್​ದೀಪ್, ನರೈನ್

ಈ ಕುರಿತು ಟಿಕೆಎಂನ ಸೇಲ್ಸ್ ಅಂಡ್ ಸ್ಟ್ರಾಟಜಿಕ್ ಮಾರ್ಕೆಟಿಂಗ್ ನ ಉಪಾಧ್ಯಕ್ಷ ಶಬರಿ ಮನೋಹರ್ ಮಾತನಾಡಿ, ಟೊಯೊಟಾ ರುಮಿಯಾನ್ ಸೀರಿಸ್‌ಗೆ ಹೊಸ ಗ್ರೆಡ್ ಸೇರ್ಪಡೆಯನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ, ಇದರಿಂದಾಗಿ ಗ್ರಾಹಕರಿಗೆ ಅವರ ಚಲನಶೀಲತೆ ಅಗತ್ಯತೆಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ವ್ಯಾಪಕ ಆಯ್ಕೆಗಳನ್ನು ನೀಡುತ್ತದೆ. G-AT ವೇರಿಯಂಟ್‌ನ ಬುಕಿಂಗ್ ಈಗ ತೆರೆದಿದೆ. ಆಗಸ್ಟ್ 23ರಲ್ಲಿ ಬಿಡುಗಡೆಯಾದಾಗಿನಿಂದ ಟೊಯೊಟಾ ರುಮಿಯಾನ್ ಗ್ರಾಹಕರಲ್ಲಿ ಹೆಚ್ಚಿನ ಉತ್ಸಾಹವನ್ನು ಸೃಷ್ಟಿಸಿದೆ. ಇದು ಹೆಚ್ಚಿನ ಎನ್‌ಕ್ವೈರಿ ಮತ್ತು ಆರೋಗ್ಯಕರ ಬುಕಿಂಗ್‌ಗೆ ಕಾರಣವಾಗಿದೆ. ನಮ್ಮ ಮೌಲ್ಯಯುತ ಗ್ರಾಹಕರು ತೋರಿಸಿದ ಪ್ರೀತಿ ಮತ್ತು ನಂಬಿಕೆಯನ್ನು ನಾವು ತುಂಬು ಹೃದಯದಿಂದ ಪ್ರಶಂಸಿಸುತ್ತೇವೆ ಎಂದು ತಿಳಿಸಿದ್ದಾರೆ.

ಟೊಯೊಟಾ MPV ಸಿಗ್ನೇಚರ್ ಫ್ರಂಟ್ ಗ್ರಿಲ್, ಕ್ರೋಮ್ ಫಿನಿಶ್‌ನೊಂದಿಗೆ ಫ್ರಂಟ್ ಬಂಪರ್, ಬ್ಯಾಕ್ ಡೋರ್ ಕ್ರೋಮ್ ಡಿಸೈನ್ ನೊಂದಿಗೆ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಅತ್ಯಾಧುನಿಕ ಡ್ಯುಯಲ್ ಟೋನ್ ಅಲಾಯ್ ವೀಲ್ಸ್, ದೃಢವಾದ ಗುಣಲಕ್ಷಣಗಳೊಂದಿಗೆ ರಫ್ ಲುಕ್‌ಗಾಗಿ ರುಮಿಯನ್ ಸ್ಟೈಲಿಶ್ ಮತ್ತು ಪ್ರೀಮಿಯಂ ಎಕ್ಸ್‌ಟೀರಿಯರ್ ಡಿಸೈನ್ ಅನ್ನು ಹೊಂದಿದೆ. ಐಷಾರಾಮಿ ಒಳಾಂಗಣವು ಮರದ ಫಿನಿಶ್ ಡ್ಯಾಶ್ ಬೋರ್ಡ್ ಮತ್ತು ಡೋರ್ ಟ್ರಿಮ್‌ಗಳೊಂದಿಗೆ ಪ್ರೀಮಿಯಂ ಡ್ಯುಯಲ್-ಟೋನ್, ಪ್ರೀಮಿಯಂ ಡ್ಯುಯಲ್-ಟೋನ್ ಒಳಾಂಗಣ ಮತ್ತು ಅನುಕೂಲಕರ ಸೌಲಭ್ಯಗಳನ್ನು ನೀಡುತ್ತದೆ.

ಇದನ್ನೂ ಓದಿ: Maoists killed: ಭದ್ರತಾ ಪಡೆಗಳ ಜತೆ ಗುಂಡಿನ ಚಕಮಕಿ, ಏಳು ಮಾವೋವಾದಿಗಳು ಫಿನಿಶ್

ಟೊಯೊಟಾ ರುಮಿಯಾನ್ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ಸಹ ನೋಡುತ್ತದೆ. ಇದು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್ ಮತ್ತು ಬ್ರೇಕ್ ಅಸಿಸ್ಟ್, ಎಂಜಿನ್ ಇಮೊಬೈಲೈಜರ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಐಎಸ್ ಒ ಫಿಕ್ಸ್ ಚೈಲ್ಡ್ ಸೀಟ್ ಆಂಕೋರೇಜ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ. ಪ್ರಿಟೆನ್ಷನರ್‌ಗಳು ಮತ್ತು ಫೋರ್ಸ್ ಲಿಮಿಟರ್‌ಗಳೊಂದಿಗೆ ಫ್ರಂಟ್ ಸೀಟ್ ಬೆಲ್ಟ್‌ಗಳು, ಎಲ್ಲಾ ಸೀಟ್‌ಗಳಿಗೆ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಹೈಸ್ಪೀಡ್ ಅಲರ್ಟ್ ಸಿಸ್ಟಮ್ ಹೊಂದಿದೆ.

Continue Reading
Advertisement
Dina Bhavishya
ಭವಿಷ್ಯ17 mins ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

70.94 percent voting in Koppal Lok Sabha constituency says Koppal DC Nalin Atul
ಕೊಪ್ಪಳ5 hours ago

Lok Sabha Election 2024: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94ರಷ್ಟು ಮತದಾನ

Rampura PSI Mahesh Hosapete admitted to the hospital Hanagal village road accident injured persons
ಕರ್ನಾಟಕ5 hours ago

Road Accident: ಅಪಘಾತವಾಗಿ ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸಿದ ಪಿಎಸ್‌ಐ

Lok Sabha Election 2024
ಕರ್ನಾಟಕ5 hours ago

Lok Sabha Election 2024: 2ನೇ ಹಂತದಲ್ಲಿ ಶೇ.70.41 ಮತದಾನ; ಕಳೆದ ಬಾರಿಗಿಂತ ಹೆಚ್ಚು, ಚಿಕ್ಕೋಡಿಯಲ್ಲಿ ಗರಿಷ್ಠ

Mayawati
ಪ್ರಮುಖ ಸುದ್ದಿ5 hours ago

Mayawati: ನೇಮಿಸಿದ 5 ತಿಂಗಳಲ್ಲೇ ಸೋದರಳಿಯನನ್ನು ಉತ್ತರಾಧಿಕಾರಿ ಹುದ್ದೆಯಿಂದ ತೆಗೆದ ಮಾಯಾವತಿ!

IPL 2024
ಪ್ರಮುಖ ಸುದ್ದಿ6 hours ago

IPL 2024 : ರಾಜಸ್ಥಾನ್​ ವಿರುದ್ಧ ಡೆಲ್ಲಿಗೆ 20 ರನ್​ ಗೆಲುವು, ಪ್ಲೇಆಫ್ ಕನಸು ಜೀವಂತ

Music Festival
ಬೆಂಗಳೂರು6 hours ago

Music Festival: ಬೆಂಗಳೂರಿನಲ್ಲಿ ಮೇ 12ರಂದು ಸಪ್ತಕ ʼಸಂಗೀತ ಸಂಭ್ರಮʼ

Amanatullah Khan
ದೇಶ6 hours ago

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Yuzvendra Chahal
ಕ್ರಿಕೆಟ್6 hours ago

Yuzvendra Chahal : ಟಿ20 ವಿಕೆಟ್​​ಗಳ ಗಳಿಕೆಯಲ್ಲಿ ನೂತನ ದಾಖಲೆ ಬರೆದ ಸ್ಪಿನ್ನರ್ ಯಜ್ವೇಂದ್ರ ಚಹಲ್​

Bescom Helpline
ಕರ್ನಾಟಕ6 hours ago

BESCOM Helpline: ಮಳೆ ಹಾನಿ; ದೂರು ಸಲ್ಲಿಸಲು ಬೆಸ್ಕಾಂ ಗ್ರಾಹಕರಿಗೆ ಪರ್ಯಾಯ ವಾಟ್ಸ್‌ಆ್ಯಪ್‌, ದೂರವಾಣಿ ಸಂಖ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ17 mins ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ8 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ11 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ13 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ1 day ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ1 day ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ1 day ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌