Site icon Vistara News

Heart Attack : ಕ್ರಿಕೆಟ್‌ ಆಡುತ್ತಿದ್ದ ಬ್ಯಾಂಕ್‌ ಉದ್ಯೋಗಿ ಅಲ್ಲೇ ಕುಸಿದು ಬಿದ್ದು ಸಾವು

Heart attack Youngster dies in Cricket Ground

ಬೆಂಗಳೂರು: ಇತ್ತೀಚೆಗೆ ಸಣ್ಣ ಸಣ್ಣ ವಯಸ್ಸಿನ ಯುವಕರೇ ಹೃದಯಾಘಾತಕ್ಕೀಡಾಗಿ (Heart Attack) ಕ್ಷಣ ಮಾತ್ರದಲ್ಲಿ ಜೀವ ಕಳೆದುಕೊಳ್ಳುವ ವಿದ್ಯಮಾನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ಜಿಮ್‌ ನಲ್ಲಿ ವರ್ಕೌಟ್‌ ಮಾಡುವಾಗ, ಆಟ ಆಡುವಾಗ ಒಮ್ಮೆಲೇ ಹೃದಯ ನಿಂತು ಬಿಡುವುದು ಹೆಚ್ಚಾಗುತ್ತಲೇ ಇದೆ. ಈ ಸರಣಿಯ ಇತ್ತೀಚಿನ ಘಟನೆಯಾಗಿ ಬೆಂಗಳೂರಿನಲ್ಲಿ (Bangalore News) ಕ್ರಿಕೆಟ್‌ ಆಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುತ್ತಿದ್ದ ವೇಳೆ ಯುವಕನೊಬ್ಬ ಕುಸಿದು ಬಿದ್ದು ಉಸಿರು ಚೆಲ್ಲಿದ್ದಾರೆ (Bank staff dies while playing Cricket). ಖಾಸಗಿ ಬ್ಯಾಂಕ್‌ ಒಂದರ ಉದ್ಯೋಗಿಯಾಗಿರುವ (Bank Staff death) ರಾಬಿನ್‌ (22) ಎಂಬ ಉತ್ತಮ ಕ್ರಿಕೆಟಿಗನೇ ಪ್ರಾಣ ಕಳೆದುಕೊಂಡವರು.

ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಮೈದಾನದಲ್ಲಿ ನಡೆದ ಕ್ರಿಕೆಟ್‌ ಪಂದ್ಯದ ವೇಳೆ ಶುಕ್ರವಾರ ಮಧ್ಯಾಹ್ನ ಈ ದುರಂತ ನಡೆದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಆಗಲೇ ಸಾವು ಸಂಭವಿಸಿ ಆಗಿತ್ತು.

ರಾಬಿನ್‌ ಮೂಲತಃ ತಮಿಳುನಾಡಿನ ತಿರುವಾಣ್ಣಮಲೈ ಮೂಲದ ರಾಬಿನ್‌ ಅವರು ರಾಜಾಜಿನಗರದ ಬೋವಿ ಕಾಲೊನಿಯಲ್ಲಿ ವಾಸವಾಗಿದ್ದರು. ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ಉದ್ಯೋಗಿಯಾಗಿ ವರ್ಷದ ಹಿಂದಷ್ಟೇ ಸೇರಿದ್ದರು.

ಗಣರಾಜ್ಯೋತ್ಸವ ದಿನದ ಹಿನ್ನೆಲೆಯಲ್ಲಿ ಬ್ಯಾಂಕ್‌ ವತಿಯಿಂದ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಬಿನ್‌ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಲಾಗಿತ್ತು.

ತಮ್ಮ ತಂಡವನ್ನು ಎರಡು ಪಂದ್ಯಗಳಲ್ಲಿ ಗೆಲ್ಲಿಸಿದ್ದ ರಾಬಿನ್‌ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಲೆಂದು ವೇದಿಕೆಗೆ ಹತ್ತಿದಾಗ ಏಕಾಏಕಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಅವರ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದರೂ ಫಲ ನೀಡಲಿಲ್ಲ.

ನಿರ್ಜಲೀಕರಣದಿಂದ ಸಂಭವಿಸಿದ ಹೃದಯಾಘಾತ

ರಾಬಿನ್‌ ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದೆ. ವೈದ್ಯರ ಪ್ರಕಾರ ನಿರ್ಜಲೀಕರಣದಿಂದ ಹೃದಯಾಘಾತ ಸಂಭವಿಸಿದೆ. ಹೀಗಾಗಿ ಯಾವುದೇ ಆಟ ಆಡುವಾಗ ಕಾಲ ಕಾಲಕ್ಕೆ ನೀರು ಕುಡಿಯುತ್ತಿರಬೇಕು, ಇಲ್ಲವಾದರೆ ಅಪಾಯವಾಗಬಹುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ : Heart Attack: ಕಾರ್ಟೂನ್‌ ನೋಡುತ್ತಿರುವಾಗಲೇ ಬಂದ ಜವರಾಯ; ಹೃದಯಾಘಾತಕ್ಕೆ ಐದರ ಬಾಲೆ ಬಲಿ

Heart attack ; ದಿಲ್ಲಿಯಲ್ಲಿ ಕ್ರಿಕೆಟ್‌ ಆಡುವ ವೇಳೆ ಸಾಫ್ಟ್‌ ವೇರ್‌ ಎಂಜಿನಿಯರ್‌ ಸಾವು

ಇತ್ತೀಚೆಗೆ ನೊಯ್ಡಾ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ವಿಕಾಸ್‌ ನೇಗಿ ಅವರು ಕ್ರಿಕೆಟ್‌ ಆಡುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಕಾರ್ಪೊರೇಟ್‌ ಟೂರ್ನಮೆಂಟ್‌ ಒಂದರ ಪಂದ್ಯದಲ್ಲಿ ಪಾಲ್ಗೊಂಡಿದ್ದ ವಿಕಾಸ್ ನಾನ್‌ ಸ್ಟ್ರೈಕ್‌ನಿಂದ ಸ್ಟ್ರೈಕರ್‌ ಕಡೆಗೆ ಸಾಗಿ ನಂತರ ಎದೆ ಹಿಡಿದುಕೊಂಡು ಅಲ್ಲೇ ಕುಸಿದುಬಿದ್ದಿದ್ದಾರೆ. ಎದುರಾಳಿ ತಂಡದ ಆಟಗಾರರು ಮತ್ತು ಸಹ ಆಟಗಾರರು ಕೂಡಲೇ ಸಹಾಯಕ್ಕೆ ಮುಂದಾದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಅವರ ಸಾವು ವಿಡಿಯೊದಲ್ಲಿ ದಾಖಲಾಗಿದೆ.

Heart Attack: ಚಿಕ್ಕಮಗಳೂರಿನಲ್ಲಿ ಜನವರಿ 12ರಂದು ಪಶುವೈದ್ಯರ ಸಾವು

ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಕಳೆದ ಜನವರಿ 12ರಂದು ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯಾವಳಿ ವೇಳೆ ಆಟ ಆಡಿ ಕುಳಿತಿದ್ದ ಪಶು ವೈದ್ಯರೊಬ್ಬರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೊಡಗು ಜಿಲ್ಲೆಯ ಸೋಮವಾರಪೇಟೆಯ ಪಶುವೈದ್ಯರಾದ ಶಿವಪ್ಪ ಬಾದಾಮಿ (56) ಮೃತರು. ಪಶು ಇಲಾಖೆಯಿಂದ ಆಯೋಜನೆ ಮಾಡಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಡಿದ್ದ ಅವರು ದಣಿದು ವಿಶ್ರಾಂತಿ ಪಡೆಯುತಿದ್ದ ವೇಳೆ ಅಲ್ಲೇ ಹೃದಯಾಘಾತ ಸಂಭವಿಸಿದೆ.

Exit mobile version