Site icon Vistara News

Akash Deep: ಮೊದಲ ಪಂದ್ಯದಲ್ಲೇ ಕ್ಲೀನ್‌ಬೌಲ್ಡ್‌ ಮಾಡಿದರೂ ಔಟ್‌ ಕೊಡದ ಅಂಪೈರ್;‌ ತಪ್ಪು ಯಾರದ್ದು?

Akash Deep

Heartbreak For Akash Deep As Late No-Ball Call Denies Him First Test Wicket: Watch

ರಾಂಚಿ: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಿನ ನಾಲ್ಕನೇ ಟೆಸ್ಟ್‌ (Test Match) ಪಂದ್ಯವು ಶುಕ್ರವಾರ (ಫೆಬ್ರವರಿ 23) ಆರಂಭವಾಗಿದ್ದು, ವೇಗಿ ಆಕಾಶ್‌ ಪದಾರ್ಪಣೆ ಮಾಡಿದ್ದಾರೆ. ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಆರಂಭವಾದ ಪಂದ್ಯದಲ್ಲಿ ಆಕಾಶ್‌ ದೀಪ್‌ (Akash Deep) ಅವರು ನೋ ಬಾಲ್‌ ಎಸೆದಿದ್ದು ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಇಂಗ್ಲೆಂಡ್‌ ಆರಂಭಿಕ ಆಟಗಾರ ಜಾಕ್‌ ಕ್ರಾವ್ಲೆ (Zak Crawley) ಅವರನ್ನು ಆಕಾಶ್‌ ದೀಪ್‌ ಕ್ಲೀನ್‌ ಬೌಲ್ಡ್‌ (Clean Bowled) ಮಾಡಿದರೂ ನೋ ಬಾಲ್‌ ಎಸೆದ ಕಾರಣ ಪ್ರಮುಖ ವಿಕೆಟ್‌ ಕೈ ತಪ್ಪಿತು. ಈ ವಿಡಿಯೊ ಈಗ ವೈರಲ್‌ ಆಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡಕ್ಕೆ ಜಾಕ್‌ ಕ್ರಾವ್ಲೆ ಹಾಗೂ ಬೆನ್‌ ಡಕೆಟ್‌ ಅವರು ಉತ್ತಮ ಆರಂಭ ಒದಗಿಸಿದರು. ವಿಕೆಟ್‌ ನಷ್ಟವಿಲ್ಲದೆ ಇಂಗ್ಲೆಂಡ್‌ 47 ರನ್‌ ಗಳಿಸಿತ್ತು. ಆಗ, ಆಕಾಶ್‌ ದೀಪ್‌ ಎಸೆದ ಮೋಡಿಯ ಎಸೆತಕ್ಕೆ ಜಾಕ್‌ ಕ್ರಾವ್ಲೆ ನಿರುತ್ತರರಾದರು. ಕ್ಲೀನ್‌ಬೌಲ್ಡ್‌ ಆದ ಕಾರಣ ಸ್ಟಂಪ್‌ ಮಾರುದ್ದ ಬಿದ್ದಿತ್ತು. ಪದಾರ್ಪಣೆ ಮಾಡಿದ ಟೆಸ್ಟ್‌ ಪಂದ್ಯದಲ್ಲೇ ಮೊದಲ ವಿಕೆಟ್‌ ಪಡೆದ ಖುಷಿಯಲ್ಲಿ ಆಕಾಶ್‌ ದೀಪ್‌ ತೇಲಾಡುತ್ತಿದ್ದರು. ಆದರೆ, ಅಂಪೈರ್‌ ನೋ ಬಾಲ್‌ (Front Foot) ಎಂದು ಘೋಷಿಸಿದ ಕಾರಣ ಆಕಾಶ್‌ ದೀಪ್‌ ಖುಷಿ ಕಮರಿ ಹೋಯಿತು.

ಮೂರು ವಿಕೆಟ್‌ ಕಿತ್ತಿದ ಆಕಾಶ್‌ ದೀಪ್

ನೋ ಬಾಲ್‌ ಆದ ಕಾರಣ ಮೊದಲ ವಿಕೆಟ್‌ ಖುಷಿಯಿಂದ ವಂಚಿತರಾದರೂ ಎದೆಗುಂದ ಆಕಾಶ್‌ ದೀಪ್‌, ಚಾಣಾಕ್ಷತನದಿಂದ ಬೌಲಿಂಗ್‌ ಮಾಡಿದರು. ಬೆನ್‌ ಡಕೆಟ್‌ ಅವರ ವಿಕೆಟ್‌ ಪಡೆಯುವ ಮೂಲಕ ಆಕಾಶ್‌ ದೀಪ್‌, ಟೆಸ್ಟ್‌ನಲ್ಲಿ ಖಾತೆ ತೆರೆದರು. ಅಲ್ಲದೆ, ನಂತರ ಜಾಕ್‌ ಕ್ರಾವ್ಲಿ ಹಾಗೂ ಒಲಿ ಪೋಪ್‌ ಅವರ ವಿಕೆಟ್‌ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಅದರಲ್ಲೂ, ಬೌಲ್ಡ್‌ ಮಾಡುವ ಮೂಲಕವೇ ಜಾಕ್‌ ಕ್ರಾವ್ವಿ ವಿಕೆಟ್‌ ಪಡೆದಿದ್ದು ವಿಶೇಷವಾಗಿದೆ.

ಇದನ್ನೂ ಓದಿ: ಕೊಹ್ಲಿಗೆ ಮಗ ಹುಟ್ಟಿದ್ದೇ ತಡ‌, ನಿವೃತ್ತಿಯ ಭವಿಷ್ಯ ನುಡಿದ ಜ್ಯೋತಿಷಿ; ಏನಿದು ವೈರಲ್‌ ಪೋಸ್ಟ್?

ಬಿಹಾರದವರಾದ ಆಕಾಶ್‌ ದೀಪವ್‌ ಅವರಿಗೆ ಭಾರತ ಕ್ರಿಕೆಟ್‌ ತಂಡದ ಕ್ಯಾಪ್‌ ಸಿಗುತ್ತಲೇ ಅವರು ಭಾವುಕರಾದರು. ಬಳಿಕ ತಾಯಿ ಬಳಿ ಹೋಗಿ, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಭಾರತ ಹಾಗೂ ಇಂಗ್ಲೆಂಡ್‌ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದ್ದು, ಈಗಾಗಲೇ ಭಾರತವು 2-1ರ ಮುನ್ನಡೆ ಪಡೆದಿದೆ. ನಾಲ್ಕನೇ ಪಂದ್ಯವನ್ನು ಗೆದ್ದರೆ ಸರಣಿಯು ರೋಹಿತ್‌ ಶರ್ಮಾ ಪಡೆಯ ವಶವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಗೆದ್ದರೆ, ನಂತರದ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version