Akash Deep: ಮೊದಲ ಪಂದ್ಯದಲ್ಲೇ ಕ್ಲೀನ್‌ಬೌಲ್ಡ್‌ ಮಾಡಿದರೂ ಔಟ್‌ ಕೊಡದ ಅಂಪೈರ್;‌ ತಪ್ಪು ಯಾರದ್ದು? - Vistara News

ಕ್ರಿಕೆಟ್

Akash Deep: ಮೊದಲ ಪಂದ್ಯದಲ್ಲೇ ಕ್ಲೀನ್‌ಬೌಲ್ಡ್‌ ಮಾಡಿದರೂ ಔಟ್‌ ಕೊಡದ ಅಂಪೈರ್;‌ ತಪ್ಪು ಯಾರದ್ದು?

Akash Deep: ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಪದಾರ್ಪಣೆ ಪಂದ್ಯದಲ್ಲಿಯೇ ಆಕಾಶ್‌ ದೀಪ್‌ ಎಸೆದ ನೋ ಬಾಲ್‌ ಅವರಿಗೆ ದುಬಾರಿ ಎನಿಸಿತು.

VISTARANEWS.COM


on

Akash Deep
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಂಚಿ: ಭಾರತ ಹಾಗೂ ಇಂಗ್ಲೆಂಡ್‌ (IND vs ENG) ನಡುವಿನ ನಾಲ್ಕನೇ ಟೆಸ್ಟ್‌ (Test Match) ಪಂದ್ಯವು ಶುಕ್ರವಾರ (ಫೆಬ್ರವರಿ 23) ಆರಂಭವಾಗಿದ್ದು, ವೇಗಿ ಆಕಾಶ್‌ ಪದಾರ್ಪಣೆ ಮಾಡಿದ್ದಾರೆ. ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್‌ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಆರಂಭವಾದ ಪಂದ್ಯದಲ್ಲಿ ಆಕಾಶ್‌ ದೀಪ್‌ (Akash Deep) ಅವರು ನೋ ಬಾಲ್‌ ಎಸೆದಿದ್ದು ಅವರಿಗೆ ದುಬಾರಿಯಾಗಿ ಪರಿಣಮಿಸಿತು. ಇಂಗ್ಲೆಂಡ್‌ ಆರಂಭಿಕ ಆಟಗಾರ ಜಾಕ್‌ ಕ್ರಾವ್ಲೆ (Zak Crawley) ಅವರನ್ನು ಆಕಾಶ್‌ ದೀಪ್‌ ಕ್ಲೀನ್‌ ಬೌಲ್ಡ್‌ (Clean Bowled) ಮಾಡಿದರೂ ನೋ ಬಾಲ್‌ ಎಸೆದ ಕಾರಣ ಪ್ರಮುಖ ವಿಕೆಟ್‌ ಕೈ ತಪ್ಪಿತು. ಈ ವಿಡಿಯೊ ಈಗ ವೈರಲ್‌ ಆಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡಕ್ಕೆ ಜಾಕ್‌ ಕ್ರಾವ್ಲೆ ಹಾಗೂ ಬೆನ್‌ ಡಕೆಟ್‌ ಅವರು ಉತ್ತಮ ಆರಂಭ ಒದಗಿಸಿದರು. ವಿಕೆಟ್‌ ನಷ್ಟವಿಲ್ಲದೆ ಇಂಗ್ಲೆಂಡ್‌ 47 ರನ್‌ ಗಳಿಸಿತ್ತು. ಆಗ, ಆಕಾಶ್‌ ದೀಪ್‌ ಎಸೆದ ಮೋಡಿಯ ಎಸೆತಕ್ಕೆ ಜಾಕ್‌ ಕ್ರಾವ್ಲೆ ನಿರುತ್ತರರಾದರು. ಕ್ಲೀನ್‌ಬೌಲ್ಡ್‌ ಆದ ಕಾರಣ ಸ್ಟಂಪ್‌ ಮಾರುದ್ದ ಬಿದ್ದಿತ್ತು. ಪದಾರ್ಪಣೆ ಮಾಡಿದ ಟೆಸ್ಟ್‌ ಪಂದ್ಯದಲ್ಲೇ ಮೊದಲ ವಿಕೆಟ್‌ ಪಡೆದ ಖುಷಿಯಲ್ಲಿ ಆಕಾಶ್‌ ದೀಪ್‌ ತೇಲಾಡುತ್ತಿದ್ದರು. ಆದರೆ, ಅಂಪೈರ್‌ ನೋ ಬಾಲ್‌ (Front Foot) ಎಂದು ಘೋಷಿಸಿದ ಕಾರಣ ಆಕಾಶ್‌ ದೀಪ್‌ ಖುಷಿ ಕಮರಿ ಹೋಯಿತು.

ಮೂರು ವಿಕೆಟ್‌ ಕಿತ್ತಿದ ಆಕಾಶ್‌ ದೀಪ್

ನೋ ಬಾಲ್‌ ಆದ ಕಾರಣ ಮೊದಲ ವಿಕೆಟ್‌ ಖುಷಿಯಿಂದ ವಂಚಿತರಾದರೂ ಎದೆಗುಂದ ಆಕಾಶ್‌ ದೀಪ್‌, ಚಾಣಾಕ್ಷತನದಿಂದ ಬೌಲಿಂಗ್‌ ಮಾಡಿದರು. ಬೆನ್‌ ಡಕೆಟ್‌ ಅವರ ವಿಕೆಟ್‌ ಪಡೆಯುವ ಮೂಲಕ ಆಕಾಶ್‌ ದೀಪ್‌, ಟೆಸ್ಟ್‌ನಲ್ಲಿ ಖಾತೆ ತೆರೆದರು. ಅಲ್ಲದೆ, ನಂತರ ಜಾಕ್‌ ಕ್ರಾವ್ಲಿ ಹಾಗೂ ಒಲಿ ಪೋಪ್‌ ಅವರ ವಿಕೆಟ್‌ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಅದರಲ್ಲೂ, ಬೌಲ್ಡ್‌ ಮಾಡುವ ಮೂಲಕವೇ ಜಾಕ್‌ ಕ್ರಾವ್ವಿ ವಿಕೆಟ್‌ ಪಡೆದಿದ್ದು ವಿಶೇಷವಾಗಿದೆ.

ಇದನ್ನೂ ಓದಿ: ಕೊಹ್ಲಿಗೆ ಮಗ ಹುಟ್ಟಿದ್ದೇ ತಡ‌, ನಿವೃತ್ತಿಯ ಭವಿಷ್ಯ ನುಡಿದ ಜ್ಯೋತಿಷಿ; ಏನಿದು ವೈರಲ್‌ ಪೋಸ್ಟ್?

ಬಿಹಾರದವರಾದ ಆಕಾಶ್‌ ದೀಪವ್‌ ಅವರಿಗೆ ಭಾರತ ಕ್ರಿಕೆಟ್‌ ತಂಡದ ಕ್ಯಾಪ್‌ ಸಿಗುತ್ತಲೇ ಅವರು ಭಾವುಕರಾದರು. ಬಳಿಕ ತಾಯಿ ಬಳಿ ಹೋಗಿ, ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ಭಾರತ ಹಾಗೂ ಇಂಗ್ಲೆಂಡ್‌ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ನಡೆಯುತ್ತಿದ್ದು, ಈಗಾಗಲೇ ಭಾರತವು 2-1ರ ಮುನ್ನಡೆ ಪಡೆದಿದೆ. ನಾಲ್ಕನೇ ಪಂದ್ಯವನ್ನು ಗೆದ್ದರೆ ಸರಣಿಯು ರೋಹಿತ್‌ ಶರ್ಮಾ ಪಡೆಯ ವಶವಾಗಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ಗೆದ್ದರೆ, ನಂತರದ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಆನ್​ಫೀಲ್ಡ್​ ಅಂಪೈರ್​ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್​; ಏನಾಯಿತು ಅವರಿಗೆ?

IPL 2024: ರಿಷಭ್ ಪಂತ್​ ಕೋಪಗೊಳ್ಳುವುದ ಬೇಗ. ಈ ಹಿಂದೆಯೂ ಒಂದು ಬಾರಿ ಐಪಿಎಲ್​ನಲ್ಲಿ ತಮ್ಮ ತಂಡಕ್ಕೆ ಅನ್ಯಾಯವಾಗಿದೆ ಎಂದು ವಾದಿಸಿ ಅವರೆಲ್ಲರನ್ನೂ ಮೈದಾನ ಬಿಟ್ಟು ಬರುವಂತೆ ಕೋರಿದ್ದ ಘಟನೆ ನಡೆದಿತ್ತು. ಇದೀಗ ಗೊಂದಲದಲ್ಲಿ ಮತ್ತೊಂದು ಬಾರಿ ಕೋಪಗೊಂಡರು. ಅಂಪೈರ್ ಮತ್ತು ಪಂತ್ ನಡುವೆ ಸುದೀರ್ಘ ಸಂಭಾಷಣೆ ನಡೆಯಿತು.

VISTARANEWS.COM


on

IPL 2024
Koo

ಲಖನೌ: ಐಪಿಎಲ್​ 2024ರ (IPL 2024) ಶುಕ್ರವಾರದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2024 ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant) ಡಿಆರ್​ಎಸ್​​ ಕರೆ ಕುರಿತು ಆನ್ ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದ ಪ್ರಸಂಗ ನಡೆದಿದೆ. ಡಿಆರ್​ಎಸ್​ ಪಡೆಯುವ ವೇಳೆ ಪಂತ್ ಅವರ ನಿರ್ಧಾರದ ಗೊಂದಲದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಎಲ್ಎಸ್​ಜಿ ಇನ್ನಿಂಗ್ಸ್​​ನ 4 ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಇಶಾಂತ್ ಶರ್ಮಾ ದೇವದತ್ ಪಡಿಕ್ಕಲ್ ಗೆ ಲೆಗ್ ಸೈಡ್​ನಲ್ಲಿ ಎಸೆತವನ್ನು ಎಸೆದರು. ಅಂಪೈರ್ ವೈಡ್​ ಸಂಕೇತವನ್ನು ನೀಡಿದರು. ಆದರೆ ಪಂತ್ ತಕ್ಷಣ ರಿವ್ಯೂ ತೆಗೆದುಕೊಂಡರು. ರಿಪ್ಲೇ ಕೂಡ ವೈಡ್​ ಎಂದು ತೋರಿಸಿತು. ಆದರೆ ಪಂತ್ ಸಂತೋಷಗೊಳ್ಳದೇ ಅಂಪೈರ್​ ಜತೆ ಜಗಳಕ್ಕೆ ನಿಂತರು.

ರಿಷಭ್ ಪಂತ್​ ಕೋಪಗೊಳ್ಳುವುದ ಬೇಗ. ಈ ಹಿಂದೆಯೂ ಒಂದು ಬಾರಿ ಐಪಿಎಲ್​ನಲ್ಲಿ ತಮ್ಮ ತಂಡಕ್ಕೆ ಅನ್ಯಾಯವಾಗಿದೆ ಎಂದು ವಾದಿಸಿ ಅವರೆಲ್ಲರನ್ನೂ ಮೈದಾನ ಬಿಟ್ಟು ಬರುವಂತೆ ಕೋರಿದ್ದ ಘಟನೆ ನಡೆದಿತ್ತು. ಇದೀಗ ಗೊಂದಲದಲ್ಲಿ ಮತ್ತೊಂದು ಬಾರಿ ಕೋಪಗೊಂಡರು. ಅಂಪೈರ್ ಮತ್ತು ಪಂತ್ ನಡುವೆ ಸುದೀರ್ಘ ಸಂಭಾಷಣೆ ನಡೆಯಿತು. ಆದರೆ ಅಧಿಕೃತ ಪ್ರಸಾರಕರು ತೋರಿಸಿದ ವಿವಿಧ ರಿಪ್ಲೇಗಳು ಪಂತ್ ನಿಜವಾಗಿಯೂ ವಿಮರ್ಶೆಗೆ ಸಂಕೇತ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ: David Warner : ಬಾಹುಬಲಿ ರಾಜಮೌಳಿ ನಿರ್ದೇಶನದಲ್ಲಿ ಕ್ರಿಕೆಟಿಗ ಡೇವಿಡ್​ ವಾರ್ನರ್ ಆ್ಯಕ್ಟಿಂಗ್​; ಇಲ್ಲಿದೆ ವಿಡಿಯೊ

ಟೀಮ್ ಇಂಡಿಯಾದ ಮಾಜಿ ಬ್ಯಾಟರ್​ ಸುನಿಲ್ ಗವಾಸ್ಕರ್ ಅವರು ತಂಡದ ಸಹ ಆಟಗಾರನ ಸಲಹೆ ಪಡೆಯಲು ಪಂತ್ ಆ ಸನ್ನೆ ಮಾಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು. ಆದರೆ ಅಂಪೈರ್ ಇದು ಅಧಿಕೃತ ವಿಮರ್ಶೆ ಎಂದು ಭಾವಿಸಿದರು. ಇದರಿಂದಾಗಿ ಡೆಲ್ಲಿ ತಂಡ ಒಂದು ವಿಮರ್ಶೆ ಕಳೆದುಕೊಂಡರು.

ಪರಿಶೀಲನೆಯ ಸಮಯದಲ್ಲಿ ಅಂಪೈರ್ ಸ್ನಿಕೋಮೀಟರ್ ಅನ್ನು ಪರಿಶೀಲಿಸದಿರುವ ಬಗ್ಗೆ ಪಂತ್ ಕೋಪಗೊಂಡಿದ್ದಾರೆ ಎಂದು ಪೊಮ್ಮಿ ಎಂಬಾಂಗ್ವಾ ಮತ್ತು ದೀಪ್ ದಾಸ್​ಗುಪ್ತಾ ಹೇಳಿದರು. ಏಕೆಂದರೆ ಅದು ವೈಡ್​ ಎಂದು ನಿರ್ಧರಿಸಲು ಅಂಪೈರ್ ಎಜ್​​ ಪರಿಶೀಲಿಸಬೇಕಾಗಿತ್ತು ಎಂದು ಡಿಸಿ ನಾಯಕ ನಂಬಿದ್ದರು.

Continue Reading

ಕ್ರೀಡೆ

Sanju Samson : ರೋಹಿತ್​ ಶರ್ಮಾ ರೆಕಾರ್ಡ್​ ಬ್ರೇಕ್ ಮಾಡಿದ ಸಂಜು; ಏನಿದು ವಿಶೇಷ ದಾಖಲೆ?

Sanju Samson: ಸ್ಯಾಮ್ಸನ್ ಮತ್ತು ರೋಹಿತ್ ಅವರಲ್ಲದೆ, ಗೌತಮ್ ಗಂಭೀರ್ ಕೂಡ ಐಪಿಎಲ್​​ನಲ್ಲಿ ನಾಯಕನಾಗಿ ತಮ್ಮ 50 ನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ಪರ ಆಡಿದ್ದ ಗಂಭೀರ್ 59 ರನ್ ಗಳಿಸಿದ್ದರು.

VISTARANEWS.COM


on

Sanju Samson
Koo

ಬೆಂಗಳೂರು: ಐಪಿಎಲ್ 2024 ರಲ್ಲಿ ಸಂಜು ಸ್ಯಾಮ್ಸನ್ (Sanju Samson) ಕೇವಲ 5 ಪಂದ್ಯಗಳಲ್ಲಿ 246 ರನ್ ಗಳಿಸಿದ್ದಾರೆ. ಅವರು ಇಲ್ಲಿಯವರೆಗೆ 3 ಅರ್ಧಶತಕಗಳನ್ನು ಬಾರಿಸಿದ್ದಾರೆ, ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದ್ದಾರೆ. ಏಪ್ರಿಲ್ 10 ರಂದು ನಡೆದ ರಾಜಸ್ಥಾನ್​ ತಂಡದ 5ನೇ ಲೀಗ್ ಪಂದ್ಯದಲ್ಲಿ ಸ್ಯಾಮ್ಸನ್ ಗುಜರಾತ್ ಟೈಟಾನ್ಸ್ ವಿರುದ್ಧ ಅಜೇಯ 68 ರನ್ ಗಳಿಸಿದ್ದರು. 179 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡಿದ ಅವರು 38 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 2 ಸಿಕ್ಸರ್​ಗಳನ್ನು ಸಿಡಿಸಿದ್ದರು. ರಿಯಾನ್ ಪರಾಗ್ (76) ಅವರೊಂದಿಗೆ ಅವರ 130 ರನ್​ಗಳ ಜೊತೆಯಾಟವು ರಾಜಸ್ಥಾನ್​ ತಂಡಕ್ಕೆ 20 ಓವರ್​ಗಳಲಲಿ 3 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಲು ಸಹಾಯ ಮಾಡಿತು.

ರಾಜಸ್ಥಾನ್ ರಾಯಲ್ಸ್ ನಾಯಕನಾಗಿ ತಮ್ಮ 50ನೇ ಪಂದ್ಯದಲ್ಲಿ, ಸಂಜು ಸ್ಯಾಮ್ಸನ್ ವಿಶೇಷ ದಾಖಲೆ ಮಾಡಿದ್ದಾರೆ. ಅದೇನೆಂದರೆ 50ನೇ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ರೋಹಿತ್ ಶರ್ಮಾ ಅವರ ಎಂಟು ವರ್ಷಗಳ ಐಪಿಎಲ್ ದಾಖಲೆ ಮುರಿದರು. 2016ರಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 65 ರನ್ ಬಾರಿಸಿದ್ದರು. 29 ವರ್ಷದ ಸ್ಯಾಮ್ಸನ್ ಈಗ ಐಪಿಎಲ್ ಫ್ರಾಂಚೈಸಿಯನ್ನು ಮುನ್ನಡೆಸುತ್ತಿರುವ ತಮ್ಮ 50 ನೇ ಪಂದ್ಯದಲ್ಲಿ ರೋಹಿತ್​ಗಿಂತ 3 ರನ್​ ಹೆಚ್ಚು ಬಾರಿಸಿ ಹೊಸ ಮಾನದಂಡವನ್ನು ಸ್ಥಾಪಿಸಿದ್ದಾರೆ.

ಸ್ಯಾಮ್ಸನ್ ಮತ್ತು ರೋಹಿತ್ ಅವರಲ್ಲದೆ, ಗೌತಮ್ ಗಂಭೀರ್ ಕೂಡ ಐಪಿಎಲ್​​ನಲ್ಲಿ ನಾಯಕನಾಗಿ ತಮ್ಮ 50 ನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೆಕೆಆರ್ ಪರ ಆಡಿದ್ದ ಗಂಭೀರ್ 59 ರನ್ ಗಳಿಸಿದ್ದರು.

ನಾಯಕನಾಗಿ 50ನೇ ಐಪಿಎಲ್ ಪಂದ್ಯದಲ್ಲಿ ಗರಿಷ್ಠ ಸ್ಕೋರ್

  • 68* (38) – ಸಂಜು ಸ್ಯಾಮ್ಸನ್ (ಆರ್ಆರ್) ವಿರುದ್ಧ ಜಿಟಿ, 2024
  • 65 (48) – ರೋಹಿತ್ ಶರ್ಮಾ (ಎಂಐ) ವಿರುದ್ಧ ಡಿಸಿ, 2016
  • 59 (46) – ಗೌತಮ್ ಗಂಭೀರ್ (ಕೆಕೆಆರ್) ವಿರುದ್ಧ ಆರ್ಸಿಬಿ, 2013
  • 45 (33) – ಡೇವಿಡ್ ವಾರ್ನರ್ (ಎಸ್ಆರ್ಹೆಚ್) ವಿರುದ್ಧ ಡಿಸಿ, 2021

ಶೇನ್ ವಾರ್ನ್ ನಂತರ ಕನಿಷ್ಠ 50 ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ರಾಜಸ್ಥಾನ್ ರಾಯಲ್ಸ್​ನ ಎರಡನೇ ಆಟಗಾರ ಸ್ಯಾಮ್ಸನ್. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿ 2024 ರ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅವರು ಉತ್ಸಾಹ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಾರ್ನ್ ತಮ್ಮ 55 ನಾಯಕತ್ವದ ಪಂದ್ಯಗಳಲ್ಲಿ 30 ಪಂದ್ಯಗಳನ್ನು ಗೆದ್ದರೆ, ಬಲಗೈ ಹಿಟ್ಟರ್ ತಮ್ಮ 50 ಪಂದ್ಯಗಳಲ್ಲಿ 26 ಪಂದ್ಯಗಳನ್ನು ಗೆದ್ದಿದ್ದಾರೆ.

ಇದನ್ನೂ ಓದಿ: Sachin Tendulkar : ಸೋಲಿನ ಹತಾಶೆಯಲ್ಲಿದ್ದ ಕೊಹ್ಲಿಯನ್ನು ತಬ್ಬಿ ಸಂತೈಸಿದ ಸಚಿನ್; ಇಲ್ಲಿದೆ ವಿಡಿಯೊ

ಸ್ಯಾಮ್ಸನ್ ಬುಧವಾರ ಐಪಿಎಲ್ 2024 ರಲ್ಲಿ ತಮ್ಮ ಮೂರನೇ ಅರ್ಧಶತಕವನ್ನು ಗಳಿಸಿದರು. ಆದರೆ ರಾಯಲ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನುಭವಿಸಿತು. ಜೈಪುರದಲ್ಲಿ ರಾಯಲ್ಸ್ ಮೂರು ವಿಕೆಟ್​ಗಳ ಸೋಲು ಋತುವಿನ ಮೊದಲ ಸೋಲಾಗಿದ್ದರೂ, ಅವರು ಐದು ಪಂದ್ಯಗಳಿಂದ ಎಂಟು ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Continue Reading

ಕ್ರೀಡೆ

Sachin Tendulkar : ಸೋಲಿನ ಹತಾಶೆಯಲ್ಲಿದ್ದ ಕೊಹ್ಲಿಯನ್ನು ತಬ್ಬಿ ಸಂತೈಸಿದ ಸಚಿನ್; ಇಲ್ಲಿದೆ ವಿಡಿಯೊ

Sachin Tendulkar: ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಆಧುನಿಕ ಕ್ರಿಕೆಟ್​​ನ ಇಬ್ಬರು ಶ್ರೇಷ್ಠ ಬ್ಯಾಟರ್​ಗಳು. ಆಟದ ಇಬ್ಬರು ದಂತಕಥೆಗಳು ಪರಸ್ಪರ ಹೆಚ್ಚಿನ ಗೌರವವನ್ನು ಕೊಡುತ್ತಾರೆ. ತೆಂಡೂಲ್ಕರ್ ಬಗ್ಗೆ ಕೊಹ್ಲಿಯ ಮೆಚ್ಚುಗೆ ಕೇವಲ ಗೌರವವನ್ನು ಮೀರಿದೆ. ಹೀಗಾಗಿ ಪಂದ್ಯ ಮುಗಿದ ಬಳಿಕ ಶೇಕ್ ಹ್ಯಾಂಡ್ ಮಾಡುವ ತಬ್ಬಿ ಸಂತೈಸಿದ್ದಾರೆ.

VISTARANEWS.COM


on

Sachin Tendulkar
Koo

ಮುಂಬೈ: ಗುರುವಾರ (ಏಪ್ರಿಲ್​11ರಂದು) ನಡೆದ ಐಪಿಎಲ್ ಪಂದ್ಯದಲ್ಲ ಮುಂಬಯಿ ಇಂಡಿಯನ್ಸ್​ ತಂಡವು ಆರ್​ಸಿಬಿಯನ್ನು ನಿರ್ದಯವಾಗಿ ಸೋಲಿಸಿದ ನಂತರ ವಿರಾಟ್ ಕೊಹ್ಲಿ ಹತಾಶೆಗೆ ಒಳಗಾಗಿದ್ದರು. ಈ ಪಂದ್ಯದಲ್ಲಿ ಅವರ ಬ್ಯಾಟಿಂಗ್​ ಯೋಜನೆ ವೈಫಲ್ಯವಾಗುವ ಜತೆಗೆ ತಂಡಕ್ಕೂ ಹೀನಾಯ ಸೋಲು ಎದುರಾಗಿತ್ತು. ಈ ರೀತಿಯಾಗಿ ಬೇಸರದಲ್ಲಿದ್ದ ಕೊಹ್ಲಿಯನ್ನು ಲೆಜೆಂಡ್​ ಸಚಿನ್ ತೆಂಡೂಲ್ಕರ್ (Sachin Tendulkar)​ ತಬ್ಬಿ ಸಂತೈಸಿದರು. ಆಕ್ಷಣದ ವಿಡಿಯೊ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಆಧುನಿಕ ಕ್ರಿಕೆಟ್​​ನ ಇಬ್ಬರು ಶ್ರೇಷ್ಠ ಬ್ಯಾಟರ್​ಗಳು. ಆಟದ ಇಬ್ಬರು ದಂತಕಥೆಗಳು ಪರಸ್ಪರ ಹೆಚ್ಚಿನ ಗೌರವವನ್ನು ಕೊಡುತ್ತಾರೆ. ತೆಂಡೂಲ್ಕರ್ ಬಗ್ಗೆ ಕೊಹ್ಲಿಯ ಮೆಚ್ಚುಗೆ ಕೇವಲ ಗೌರವವನ್ನು ಮೀರಿದೆ. ಹೀಗಾಗಿ ಪಂದ್ಯ ಮುಗಿದ ಬಳಿಕ ಶೇಕ್ ಹ್ಯಾಂಡ್ ಮಾಡುವ ತಬ್ಬಿ ಸಂತೈಸಿದ್ದಾರೆ.

ಇದನ್ನೂ ಓದಿ: IPL 2024 : ಮುಂಬಯಿ ವಿರುದ್ಧದ ಪಂದ್ಯದಲ್ಲಿ ರೆಫರಿಯಿಂದ ಆರ್​​ಸಿಬಿಗೆ ಮೋಸ; ಬಯಲಾಯ್ತು ವಿಡಿಯೊ!

ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ ಕೊಹ್ಲಿ . ಅವಕಾಶ ಸಿಕ್ಕಾಗಲೆಲ್ಲಾ, ತೆಂಡೂಲ್ಕರ್ ಅವರೊಂದಿಗೆ ಕ್ರಿಕೆಟ್ ಚರ್ಚೆಗಳಲ್ಲಿ ತೊಡಗುತ್ತಾರೆ. ಅವರನ್ನು ತಮಗೆ ತಿಳಿದಿರುವ ಅತ್ಯಂತ ಬುದ್ಧಿವಂತ ಕ್ರಿಕೆಟಿಗ ಎಂದು ಕೊಹ್ಲಿ ಹೇಳುತ್ತಾರೆ.

ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಸೇವೆ ಸಲ್ಲಿಸುತ್ತಿರುವ ಸಚಿನ್ ತೆಂಡೂಲ್ಕರ್ ಆರ್​ಸಿಬಿ ದಂತಕಥೆ ವಿರಾಟ್ ಕೊಹ್ಲಿ ಪಂದ್ಯದ ನಂತರ ಆತ್ಮೀಯವಾಗಿ ಅಪ್ಪಿಕೊಂಡರು. ಇಬ್ಬರು ಕ್ರಿಕೆಟ್ ಐಕಾನ್ ಗಳು ತಮ್ಮ ಸಂವಾದದ ಸಮಯದಲ್ಲಿ ಕೆಲವು ಸಂಗತಿಗಳನ್ನು ವಿನಿಮಯ ಮಾಡಿಕೊಂಡರು.

ಸಚಿನ್ ಮತ್ತು ಕೊಹ್ಲಿ ಭಾರತೀಯ ಕ್ರಿಕೆಟ್​​ನ ಪ್ರತಿನಿಧಿಗಳು

ಭಾರತವು ಇತ್ತೀಚೆಗೆ ತನ್ನ ವಿಶ್ವಕಪ್ ಗೆಲುವಿನ 13 ನೇ ವಾರ್ಷಿಕೋತ್ಸವ ಆಚರಿಸಿದೆ.. ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವ ಅತ್ಯಂತ ಅಪ್ರತಿಮ ಚಿತ್ರಗಳಲ್ಲಿ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಭುಜದ ಮೇಲೆ ಎತ್ತಿಕೊಂಡು ಸಂಭ್ರಮಿಸುವುದು ಕಾಣಬಹುದು. ಈ ಚಿತ್ರವು ಕಳೆದ ಮೂರು ದಶಕಗಳಲ್ಲಿ ಭಾರತೀಯ ಕ್ರಿಕೆಟ್​​ನ ಸಾರವನ್ನು ಎತ್ತಿ ತೋರಿಸುತ್ತದೆ. ಎರಡು ವಿಭಿನ್ನ ಯುಗಗಳಲ್ಲಿ ಭಾರತೀಯ ಕ್ರಿಕೆಟ್​​ನ ಭರವಸೆ ಮತ್ತು ಆಕಾಂಕ್ಷೆಗಳನ್ನು ಹೊತ್ತ ಇಬ್ಬರು ದಂತಕಥೆ ಕ್ರಿಕೆಟಿಗರು ಅವರು.

ನಿವೃತ್ತಿಯ ನಂತರವೂ, ಸಚಿನ್ ತೆಂಡೂಲ್ಕರ್ ತಂಡಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಅಭಿಮಾನಿಗಳು ಮತ್ತು ಸಹ ಕ್ರಿಕೆಟಿಗರಿಂದ ಅಪಾರ ಗೌರವ ಪಡೆಯುತ್ತಿದ್ದಾರೆ. ಅಂತೆಯೇ, ಈಗ ತಮ್ಮ ದಂತಕಥೆಯ ವೃತ್ತಿಜೀವನದ ಕೊನೆಯ ಹಂತದಲ್ಲಿರುವ ವಿರಾಟ್ ಕೊಹ್ಲಿ ಕೂಡ ತಮ್ಮ ಗಮನಾರ್ಹ ಸಾಧನೆಗಳಿಗಾಗಿ ಮೆಚ್ಚುಗೆ ಪಡೆಯುತ್ತಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಮುಂಬಯಿ ವಿರುದ್ಧದ ಪಂದ್ಯದಲ್ಲಿ ರೆಫರಿಯಿಂದ ಆರ್​​ಸಿಬಿಗೆ ಮೋಸ; ಬಯಲಾಯ್ತು ವಿಡಿಯೊ!

IPL 2024: ಟಾಸ್​ಗಾಗಿ ನಾಣ್ಯವನ್ನು ಎಸೆದು ಅದು ಬಿದ್ದಲ್ಲಿಂದ ರೆಫರಿ ಅದನ್ನು ಎತ್ತಿಕೊಳ್ಳುವಾಗ ಮುಂಬಯಿ ತಂಡದ ನಾಯಕ ಪಾಂಡ್ಯಗೆ ಪೂರಕವಾಗುವಂತೆ ತಿರುಗಿಸುತ್ತಿರುವುದು ಕಂಡುಬಂದಿದೆ. ಈ ಕೃತ್ಯವು ಮುಂಬೈಗೆ ಅನುಕೂಲಕರ ಟಾಸ್ ಗೆಲುವು ನೀಡಿದೆ. ನಾಯಕ ಹಾರ್ದಿಕ್ ಪಾಂಡ್ಯ ಆರ್​ಸಿಬಿ ವಿರುದ್ಧ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿದರು. ವಾಖೆಂಡೆಯಲ್ಲಿ ಟಾಸ್​ ಗೆಲುವಿನ ನಿರ್ಣಾಯಕ ಅಂಶವಾಗಿದೆ.

VISTARANEWS.COM


on

IPL 2024
Koo

ಮುಂಬೈ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 11) ನಡೆದ ಐಪಿಎಲ್​ 2024 (IPL 2024) ಪಂದ್ಯದಲ್ಲಿ ಆರ್​​ಸಿಬಿ (Royal Challengers Bangalore) ಮುಂಬಯಿ ಇಂಡಿಯನ್ಸ್​ (Mumbai Indians) ವಿರುದ್ಧ ಸೋತಿದೆ. ಈ ಪಂದ್ಯದಲ್ಲಿ ರೆಫಿರಿ ಮತ್ತು ಅಂಪೈರ್​ಗಳು ಆರ್​ಸಿಬಿಗೆ ಮೋಸ ಮಾಡಿದ್ದಾರೆ. ಟಾಸ್ ಸೇರಿದಂತೆ ಎಲ್ಲ ಕಡೆಯೂ ಮುಂಬಯಿ ತಂಡಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆಪಾದನೆಗಳು ಕೇಳಿ ಬಂದಿವೆ. ದೊಡ್ಡ ಟೂರ್ನಿಯಲ್ಲಿ ಈ ರೀತಿ ಆಗುತ್ತಿರುವ ಬಗ್ಗೆ ಆರ್​ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಕೃತ್ಯಗಳನ್ನು ಬಿಸಿಸಿಐ ತಡೆಬೇಕು ಎಂದು ವಿಡಿಯೊ ಸಮೇತ ಒತ್ತಾಯ ಮಾಡಿದ್ದಾರೆ.

ಟಾಸ್​ಗಾಗಿ ನಾಣ್ಯ ಎಸೆದು ಅದು ಬಿದ್ದಲ್ಲಿಂದ ರೆಫರಿ ಅದನ್ನು ಎತ್ತಿಕೊಳ್ಳುವಾಗ ಮುಂಬಯಿ ತಂಡದ ನಾಯಕ ಹಾರ್ದಿಕ್​ ಪಾಂಡ್ಯನ ಕರೆಗೆ ಪೂರಕವಾಗುವಂತೆ ತಿರುಗಿಸುತ್ತಿರುವುದು ಕಂಡುಬಂದಿದೆ. ಆರ್​ಸಿಬಿ ನಾಯಕ ಪ್ಲೆಸಿಸ್​ ತಲೆ (Tail) ಕರೆ ಕೊಟ್ಟಿದದರು. ಟೈಲ್ ಬಿದ್ದಿದ್ದರೂ ರೆಫರಿ ಎತ್ತಿಕೊಳ್ಳುವಾಗ ಹೆಡ್​ (Head) ಕಡೆಗೆ ತಿರುಗಿಸಿದ್ದಾರೆ ಎನ್ನಲಾಗಿದೆ. ಈ ಕೃತ್ಯವು ಮುಂಬೈಗೆ ಅನುಕೂಲಕರ ಟಾಸ್ ಗೆಲುವು ನೀಡಿದೆ. ನಾಯಕ ಹಾರ್ದಿಕ್ ಪಾಂಡ್ಯ ಆರ್​ಸಿಬಿ ವಿರುದ್ಧ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ವಾಖೆಂಡೆಯಲ್ಲಿ ಟಾಸ್​ ಗೆಲುವಿನ ನಿರ್ಣಾಯಕ ಅಂಶವಾಗಿದೆ. ಮೊದಲ ಬೌಲಿಂಗ್ ಮಾಡಿದ ತಂಡಕ್ಕೆ ವಿಜಯದ ಅವಕಾಶ ಹೆಚ್ಚು. ರಾತ್ರಿ ಪರಿಣಾಮಕಾರಿ ಬೌಲಿಂಗ್ ಮಾಡಲು ಇಬ್ಬನಿ ಪರಿಣಾಮ ಅಡ್ಡಿ ಮಾಡುತ್ತದೆ. ಮೋಸ ಮಾಡಲಾಗಿದೆ ಎಂಬ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಐಪಿಎಲ್ ಪಂದ್ಯಗಳು ಪೂರ್ವನಿರ್ಧರಿತ ಮತ್ತು ದೊಡ್ಡ ತಂಡಗಳಿಗೆ ಅನುಕೂಲಕರ ಎಂಬ ವದಂತಿಗಳನ್ನು ಮತ್ತೊಮ್ಮೆ ಹುಟ್ಟುಹಾಕಿದೆ.

ಇದನ್ನೂ ಓದಿ: Rohit Sharma : ಟಿ20 ವಿಶ್ವ ಕಪ್ ಬಳಿಕ ರೋಹಿತ್​ ನಿವೃತ್ತಿ? ಅವರುಹೇಳಿದ್ದೇನು?

ಇದೇ ರೀತಿ ಬೌಂಡರಿ ನೀಡುವಾಗ ಮತ್ತು ನೋ ಬಾಲ್ ಹಾಗೂ ವೈಡ್​ಗಳನ್ನು ನೀಡುವ ವಿಚಾರದಲ್ಲೂ ಅಂಪೈರ್​ಗಳು ತಾರತಮ್ಯ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಆರ್​ಸಿಬಿಗೆ ಸಿಗಬೇಕಾದ ರನ್​ ಕೊಟ್ಟಿಲ್ಲ. ವೈಡ್ ಕೊಟ್ಟಿಲ್ಲ. ನೋ ಬಾಲ್ ಕೊಟ್ಟಿಲ್ಲ ಎಂದು ಅಭಿಮಾನಿಗಳು ವಿಡಿಯೊ ಸಮೇತ ಸೋಶಿಯಲ್​ ಮೀಡಿಯಾಗಳಲ್ಲಿ ತಮ್ಮ ವಾದ ಮಂಡಿಸುತ್ತಿದ್ದಾರೆ.

ಆರ್​ಸಿಬಿಯನ್ನು ಸೋಲಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ 2024 ರ ಋತುವಿನಲ್ಲಿ ಎರಡನೇ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯಲ್ಲಿ ಈವರೆಗೆ ಐದು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ತಂಡವು ಮಿಶ್ರಫಳ ಉಂಡಿದೆ. ಆದರೆ, ಆಟಗಾರರು ಫಾರ್ಮ್ ಅನ್ನು ಕಂಡುಕೊಂಡಿರುವುದು ಆ ಪಾಳಯಕ್ಕೆ ಸಂತಸದ ಸುದ್ದಿ.

ಮುಂಬೈ ತಂಡದ ಚೇತರಿಕೆ, ಪಾತಾಳಕ್ಕೆ ಇಳಿದ ಆರ್​ಸಿಬಿ


ಸತತ ಎರಡು ಗೆಲುವುಗಳೊಂದಿಗೆ ಮುಂಬೈ ಇಂಡಿಯನ್ಸ್ ತನ್ನ ಆವೇಗವನ್ನು ಹೆಚ್ಚಿಸಿದೆ. ಇದೇ ಗೆಲುವಿನ ಹಳಿಯಲ್ಲಿ ಸಾಗುವ ಗುರಿಯನ್ನು ಹೊಂದಿದೆ. ಮೂರು ಸೋಲಿನ ಬಳಿಕ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದ ಐದು ಬಾರಿಯ ಚಾಂಪಿಯನ್ಸ್ ಈಗ ಐದು ಪಂದ್ಯಗಳಲ್ಲಿ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಬಂದಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಪಂದ್ಯಗಳನ್ನು ಗೆಲ್ಲುವುದನ್ನು ಮುಂದುವರಿಸಿದರೆ, ಅವರು ಪ್ಲೇಆಫ್​ ಸ್ಥಾನ ಪಡೆಯುವುದು ಖಚಿತ. ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಏಪ್ರಿಲ್ 14 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ 29 ನೇ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಸಿಎಸ್​ಕೆ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ ಹೀಗಾಗಿ ಇತ್ತಂಡಗಳ ನಡುವೆ ಜಿದ್ದಾಜಿದ್ದಿನ ಕದನ ನಿರೀಕ್ಷಿತ.

ಇದೇ ವೇಳೆ ಆರ್​ಸಿಬಿ ತಂಡ ಇದುವರೆಗೆ ಆಡಿರುವ ಆರರಲ್ಲಿ ಏಕೈಕ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಅಲ್ಲದೆ ಆರ್​ಸಿಬಿ ಪ್ಲೇಆಫ್​ ಚಾನ್ಸ್​ ಮಸುಕಾಗಿದೆ. ಇನ್ನುಳಿದಿರುವ ಎಂಟೂ ಪಂದ್ಯಗಳನ್ನು ಗೆದ್ದರೆ ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆಗೊಳ್ಳಬಹುದು. ಆದರೆ, ಆಟಗಾರರ ಫಾರ್ಮ್ ನೋಡಿದರೆ ಇವೆಲ್ಲವೂ ಅಸಾಧ್ಯ.

Continue Reading
Advertisement
Lok Sabha Election 2024
ಕರ್ನಾಟಕ7 mins ago

Lok Sabha Election 2024: ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ; ಇವರ ಆಸ್ತಿ ಎಷ್ಟು?

Pakistan
ಪ್ರಮುಖ ಸುದ್ದಿ23 mins ago

United Kingdom: ‘ಪ್ರಯಾಣಕ್ಕೆಅಪಾಯಕಾರಿ’ ದೇಶಗಳ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಿದ ಬ್ರಿಟನ್​!

Chikkaballapur Lok Sabha Constituency BJP Candidate Dr K Sudhakar is campaigning in various places today
ಚಿಕ್ಕಬಳ್ಳಾಪುರ46 mins ago

Lok Sabha Election 2024: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ರಿಂದ ಏ.13ರಂದು ಪ್ರಚಾರ

Union Minister Pralhad Joshi statement
ಹುಬ್ಬಳ್ಳಿ48 mins ago

Lok Sabha Election 2024: ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

Union Minister Pralhad Joshi latest statement in hubli
ಕರ್ನಾಟಕ49 mins ago

Lok Sabha Election 2024: ರಾಜ್ಯದಲ್ಲಿ ಕಾಂಗ್ರೆಸ್ 3ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲಲ್ಲ: ಪ್ರಲ್ಹಾದ್‌ ಜೋಶಿ ಸವಾಲು

Rashtrotthana Hospital adopts Dozi technology to provide greater safety to patients
ಕರ್ನಾಟಕ51 mins ago

Rashtrotthana Parishat: ಡೋಝಿ ತಂತ್ರಜ್ಞಾನ ಅಳವಡಿಸಿಕೊಂಡ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ

Iran- israel War
ದೇಶ55 mins ago

Iran- Israel War : ಮುಂದಿನ 48 ಗಂಟೆಗಳೊಳಗೆ ಇರಾನ್-ಇಸ್ರೇಲ್ ಭೀಕರ ಯುದ್ಧ ಶುರು!

Rain News
ಪ್ರಮುಖ ಸುದ್ದಿ1 hour ago

Rain News: ರಾಜ್ಯದ ವಿವಿಧೆಡೆ ಮಳೆ ಆರ್ಭಟ; ಸಿಡಿಲು ಬಡಿದು ಗದಗದಲ್ಲಿ 20, ಶಿವಮೊಗ್ಗದಲ್ಲಿ 18 ಕುರಿ ಸಾವು

SK Jain
ಕರ್ನಾಟಕ1 hour ago

SK Jain: ಅನಾರೋಗ್ಯದಿಂದ ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ನಿಧನ

IPL 2024
ಪ್ರಮುಖ ಸುದ್ದಿ1 hour ago

IPL 2024 : ಆನ್​ಫೀಲ್ಡ್​ ಅಂಪೈರ್​ ಜತೆ ವಾಗ್ವಾದ ನಡೆಸಿದ ರಿಷಭ್ ಪಂತ್​; ಏನಾಯಿತು ಅವರಿಗೆ?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameshwaram Cafe Blast Fake IDs created and captured bombers hiding in Kolkata
ಕ್ರೈಂ11 hours ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ18 hours ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 day ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20241 day ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಹೂಡಿಕೆ ವ್ಯವಹಾರದಲ್ಲಿ ಅಧಿಕ ಲಾಭ

Ugadi 2024
ಬಾಗಲಕೋಟೆ3 days ago

Ugadi 2024 : ಬೀಳಗಿಯ ಎಕ್ಕೆ ಎಲೆ ಭವಿಷ್ಯ; ಈಶಾನ್ಯ, ಪಶ್ಚಿಮ ಭಾಗದಲ್ಲಿ ಭಾರಿ ಕಂಟಕ!

ugadi 2024
ಧಾರವಾಡ3 days ago

Ugadi 2024 : ಹನುಮನಕೊಪ್ಪದಲ್ಲಿ ಭವಿಷ್ಯ ನುಡಿದ ಬೊಂಬೆ! ಮುಂದಿನ ಪ್ರಧಾನಿ ಯಾರಾಗ್ತಾರೆ?

Dina Bhavishya
ಭವಿಷ್ಯ4 days ago

Dina Bhavishya : ನೂತನ ಸಂವತ್ಸರದಲ್ಲಿ ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಶುಭ ಸುದ್ದಿ

Dina Bhavishya
ಭವಿಷ್ಯ5 days ago

Dina Bhavishya : ಅತಿರೇಕದ ಮಾತು ಈ ರಾಶಿಯವರಿಗೆ ಒಳ್ಳೆಯದಲ್ಲ

Rockstar Bull of bull festival king fame passes away
ಹಾವೇರಿ5 days ago

Rockstar Bull: ಹೋರಿ ಹಬ್ಬದ ಕಿಂಗ್ ಖ್ಯಾತಿಯ ರಾಕ್‌ ಸ್ಟಾರ್‌ ಬುಲ್‌ ಇನ್ನಿಲ್ಲ; ಬೊಮ್ಮಾಯಿ ಕಂಬನಿ

ಟ್ರೆಂಡಿಂಗ್‌