Site icon Vistara News

IND vs ENG 4th Test : ರಾಂಚಿ ಸ್ಟೇಡಿಯಂಗೆ ಬಿಗಿ ಭದ್ರತೆ; ಪ್ರೇಕ್ಷಕರಿಗೆ 2 ಹಂತದ ತಪಾಸಣೆ!

ranchi stadium

ರಾಂಚಿ: ನಾಳೆ ಆರಂಭಗೊಳ್ಳುವ ಭಾರತ ಮತ್ತು ಇಂಗ್ಲೆಂಡ್​(India vs England 4th test) ನಡುವಿನ ನಾಲ್ಕನೇ ಟೆಸ್ಟ್​ ಪಂದ್ಯಕ್ಕೆ(IND vs ENG 4th Test) ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಬೆದರಿಕೆಯೊಡ್ಡಿದ ಕಾರಣ, ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ(JSCA International Stadium Complex, Ranchi) ಸುತ್ತ ಭಾರೀ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 

ಗುರುಪತ್ವಂತ್ ಸಿಂಗ್ ಪನ್ನುನ್ ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಪಂದ್ಯ ರದ್ದು ಮಾಡುವಂತೆ ಬೆದರಿಕೆ ಹಾಕಿದ್ದ. ಜತೆಗೆ ಸಿಪಿಐ (ಮಾವೋವಾದಿ)ಗೆ ಗಲಭೆ ಸೃಷ್ಟಿಸುವಂತೆ ವಿಡಿಯೊ ಮೂಲಕ ಒತ್ತಾಯಿಸಿದ್ದ. ಹೀಗಾಗಿ ರಾಂಚಿ ಪೊಲೀಸರು JSCA ಸ್ಟೇಡಿಯಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಿದೆ. ಕ್ರೀಡಾಂಗಣದಲ್ಲಿಯೇ ಸುಮಾರು 1500 ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.

ಇದನ್ನೂ ಓದಿ IND vs ENG 4th Test: ರಾಂಚಿಯಲ್ಲಿ ಈಡೇರಿತೇ ಜುರೇಲ್ ಕನಸು?

ಪಂದ್ಯ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ 2 ಹಂತದ ತಪಾಸಣೆ ನಡಿಸಿ ಸ್ಟೇಡಿಯಂನ ಒಳಗಡೆ ಬಿಡಲಾಗುವುದು ಎಂದು ಇಲ್ಲಿನ ಡಿಎಸ್ಪಿ ಪಿ.ಕೆ.ಮಿಶ್ರಾ ಮಾಹಿತಿ ನೀಡಿದ್ದಾರೆ. ಗುರುಪತ್ವಂತ್ ವಿರುದ್ಧ ದೂರ್ವಾ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಈಗಾಗಲೇ ಪ್ರಕರಣ ದಾಖಲಾಗಿದೆ. ಪನ್ನುನ್ ಈ ರೀತಿಯ ಬೆದರಿಕೆ ಒಡ್ಡುತ್ತಿರುವುದು ಇದೇ ಮೊದಲೆನಲ್ಲ. ಇದಕ್ಕೂ ಮುನ್ನ ಹಲವು ಬಾರಿ ಈ ರೀತಿಯ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಬೆದರಿಕೆಯೊಡ್ಡಿದ್ದ. ಈ ಕಾರಣಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆತನ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.

ಯಾರು ಈ ಖಲಿಸ್ತಾನಿ ಉಗ್ರ?


ಗುರುಪತ್ವಂತ್ ಸಿಂಗ್ ಪನ್ನುನ್ ಅವರು ಸಿಖ್ಸ್ ಫಾರ್ ಜಸ್ಟಿಸ್ (SFJ) ಎಂಬ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದಾನೆ. 2007 ರಲ್ಲಿ ಸ್ಥಾಪಿತವಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯನ್ನು ಭಾರತ ಸರ್ಕಾರ 2019 ರಲ್ಲಿ ನಿಷೇಧಿಸಿತು. ಅಂದಿನಿಂದ ಪನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಕಣ್ಗಾವಲಿನಲ್ಲಿದ್ದ. ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆಯಡಿ 2020 ರಲ್ಲಿ ಭಾರತ ಸರ್ಕಾರವು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿತು. ಹೊರಡಿಸಿತು.

ಪಿಚ್​ ರಿಪೋರ್ಟ್


ರಾಂಚಿಯ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಆಟ ಸಾಗಿದಂತೆ ಇಲ್ಲಿ ಸ್ಪಿನ್ನರ್‌ಗಳು ಹಿಡಿತ ಸಾಧಿಸುತ್ತಾರೆ. ಹೀಗಾಗಿ ಉಭಯ ತಂಡಗಳು ಕೂಡ ಸ್ಪಿನ್ನ್​ ಬೌಲಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್​ ನಡೆಸಿದ ತಂಡಕ್ಕೆ ಗೆಲುವಿನ ಶೇಕಡಾವಾರು ಹೆಚ್ಚು ಇದೆ.

ಜೆಎಸ್​ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಇದುವರೆಗೆ 2 ಟೆಸ್ಟ್​ ಪಂದ್ಯಗಳನ್ನು ಆಡಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ. ಆಸೀಸ್​ ವಿರುದ್ಧ ಡ್ರಾ ಸಾಧಿಸಿದರೆ, ಹರಿಣಗಳ ಎದುರು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಇಲ್ಲಿ ಭಾರತ ಅಜೇಯ ದಾಖಲೆ ಹೊಂದಿದೆ. ಆದರೆ ಮೂರನೇ ಪಂದ್ಯದಲ್ಲಿಯೂ ಭಾರತವೇ ಫೇವರಿಟ್​ ಎನ್ನಲಾಗುದು. ಏಕೆಂದರೆ ಈ ಬಾರಿ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಇದೆ. ಜಸ್​ಪ್ರೀತ್​ ಬುಮ್ರಾಗೆ ವಿಶ್ರಾಂತಿ, ಫಿಟ್​ ಆಗದೆ ಸರಣಿಯಿಂದ ಹಿಂದೆ ಬಿದ್ದ ರಾಹುಲ್​, ಅಯ್ಯರ್​, ಕೊಹ್ಲಿ ಅನುಪಸ್ಥಿತಿ ಹೀಗೆ ಹಲವು ಸವಾಲನ್ನು ಮೆಟ್ಟಿ ನಿಂತು ಭಾರತ ಈ ಪಂದ್ಯದಲ್ಲಿ ಕಣಕ್ಕಿಳಿಯಬೇಕಾದ ಪರಿಸ್ಥಿತಿಯಿದೆ.

Exit mobile version