Site icon Vistara News

Babar Azam: ಆಡಿ ಕಾರ್ ಓವರ್‌ಸ್ಪೀಡ್ ಓಡಿಸಿ, ದಂಡ ಕಟ್ಟಿದ ಪಾಕ್ ಕ್ರಿಕೆಟ್ ಟೀಂ ನಾಯಕ ಬಾಬರ್ ಅಜಮ್!

Pakistan Cricket Team Skipper Babaz azam fined exceeding speed limit

ನವದೆಹಲಿ: ಕ್ರಿಕೆಟ್‌ ಜಗತ್ತಿನಲ್ಲಿ ಸದ್ಯ ಟಾಪ್ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಹಾಗೂ ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ (Pakistan Cricket Team Skipper Babar Azam) ಅತಿ ವೇಗದ ಕಾರ್ (Audi Car) ಚಾಲನೆಗಾಗಿ ದಂಡ ಕಟ್ಟಿದ್ದಾರೆ. ಟೈಮ್ಸ್ ಆಫ್ ಕರಾಚಿ ಪತ್ರಿಕೆಯ ಪ್ರಕಾರ, ಪ್ರಕಾರ ವೇಗದ ಮಿತಿಯನ್ನು ಮೀರಿದ್ದಕ್ಕಾಗಿ ಅಜಮ್ ಅವರಿಗೆ ಪಂಜಾಬ್ ಮೋಟರ್‌ವೇ ಪೊಲೀಸರು (Punjab Motarway Police) ದಂಡ ವಿಧಿಸಿದ್ದಾರೆ. ಟ್ರಾಫಿಕ್ ರೂಲ್ಸ್ ಉಲ್ಲಂಘನೆಗಾಗಿ ಬಾಬರ್ ಅಜಮ್ ದಂಡ ಕಟ್ಟುತ್ತಿರುವುದು ಇದೇ ಮೊದಲೇನಲ್ಲ!

ಪಾಕಿಸ್ತಾನದ ಕ್ರಿಕೆಟ್ ತಂಡದ ನಾಯಕರಾಗಿರುವ ಬಾಬರ್ ಅಜಮ್ ನಿಯಮ ಪಾಲನೆಯಲ್ಲಿ ಮೇಲ್ಪಂಕ್ತಿ ಹಾಕಬೇಕಿತ್ತು. ಆದರೆ, ಪೊಲೀಸರು ಬಾಬರ್ ಅಜಂ ಕಾರನ್ನು ತಡೆದು ನಿಲ್ಲಿಸಿರುವುದು ಇದೇ ಮೊದಲಲ್ಲ. ವರ್ಷದ ಆರಂಭದಲ್ಲಿ, ಸರಿಯಾದ ನಂಬರ್ ಪ್ಲೇಟ್ ಇಲ್ಲದಿದ್ದಕ್ಕಾಗಿ ಅವರು ಸಿಕ್ಕಿಬಿದ್ದರು. ಆದರೆ ಯಾವುದೇ ಮೊತ್ತವನ್ನು ದಂಡ ವಿಧಿಸಲಿಲ್ಲ. ಆದರೆ, ಈಗ ಹೆದ್ದಾರಿಯಲ್ಲಿ ಆಡಿ ಕಾರ್ ಚಾಲನೆ ಮಾಡುವಾಗ ಬಾಬರ್ ಅವರು ವೇಗದ ಮಿತಿಯನ್ನು ಮೀರಿದ್ದರು. ಅಂತಿಮವಾಗಿ ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ದಂಡವನ್ನೂ ವಿಧಿಸಿದ್ದಾರೆ. ಆದರೆ ದಂಡದ ಮೊತ್ತವನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಏತನ್ಮಧ್ಯೆ, ಅದೇ ದಿನ ಪಾಕಿಸ್ತಾನ ಕ್ರಿಕೆಟಿಗರಿಗೆ ಮುಂಬರುವ ಒಂದು ದಿನದ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ವೀಸಾ ನೀಡಲಾಗುತ್ತಿದೆ. ವಿಶ್ವಕಪ್ ಪಂದ್ಯಾವಳಿಯು ಅಭಿಯಾನವು ಅಕ್ಟೋಬರ್ 5 ರಂದು ಪ್ರಾರಂಭವಾಗಲಿದೆ. ತಂಡವು ಸೆಪ್ಟೆಂಬರ್ 27ರ ಮುಂಜಾನೆ ಮತ್ತು ಸಂಜೆ ದುಬೈಗೆ ಪ್ರಯಾಣಿಸಲಿದೆ. ಅಲ್ಲಿಂದ ಅವರು ಹೈದರಾಬಾದ್ ತಲುಪುತ್ತಾರೆ ಮತ್ತು ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Babar Azam | ಲೀಕ್​ ಆಗಿರುವ ವಿಡಿಯೊ ನನ್ನದಲ್ಲ, ನಾನವನಲ್ಲ ಎಂದ ಪಾಕ್​ ತಂಡದ ನಾಯಕ ಬಾಬರ್​ ಅಜಮ್​

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಹಿಂದೆ ವೀಸಾ ನೀಡಿಕೆ ವಿಳಂಬವಾಗುತ್ತಿರುವ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿತ್ತು. ಅಲ್ಲದೇ, ಪರಿಸ್ಥಿತಿಯನ್ನು ಪರಿಹರಿಸುವ ಸಲುವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಯೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ಆ ನಂತರ ಅವರು ವೀಸಾಗಳನ್ನು ಪಡೆಯಲು ಸಾಧ್ಯವಾಯಿತು. ಅಂತಿಮವಾಗಿ ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ವಿಶೇಷ ಎಂದರೆ, ಪಾಕಿಸ್ತಾನಕ್ಕಿಂತ ಮೊದಲೇ ಆಫ್ಘಾನಿಸ್ತಾನಕ್ಕೆ ವೀಸಾ ದೊರೆತಿದೆ. ಸೆಪ್ಟೆಂಬರ್ 25ಕ್ಕಿಂತ ಮುಂಚೆಯೇ ಆಫ್ಘನ್ ಆಟಗಾರರಿಗೆ ವೀಸಾ ನೀಡಲಾಗಿದೆ.

ಕ್ರಿಕೆಟ್‌ನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version