ಮುಂಬಯಿ: ಬುಧವಾರ ನಡೆದ ರಣಜಿ ಟ್ರೋಫಿಯ (Ranji Trophy) ಸೆಮಿಫೈನಲ್‌ನಲ್ಲಿ ವಿದರ್ಭ ತಂಡ (Vidarbha Team) 62 ರನ್‌ಗಳಿಂದ ಮಧ್ಯಪ್ರದೇಶ ತಂಡವನ್ನು (Madhya Pradesh team) ರೋಚಕವಾಗಿ ಸೋಲಿಸಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬಯಿ ತಂಡದ ವಿರುದ್ಧ ವಿದರ್ಭ ಸೆಣಸಲಿದೆ.
ಇಂದಿನ ಪಂದ್ಯದಲ್ಲಿ ಗೆಲುವಿಗೆ 321 ರನ್‌ಗಳ ಗುರಿ ಬೆನ್ನು ಹತ್ತಿದ ಮಧ್ಯಪ್ರದೇಶ ತಂಡ 258 ರನ್‌ಗಳಿಗೆ ಆಲೌಟ್ ಆಯಿತು. ಪಂದ್ಯ ಕೊನೆಯ ದಿನಕ್ಕೆ ಕಾಲಿಟ್ಟಾಗ ಮಧ್ಯಪ್ರದೇಶ ಗೆಲ್ಲಲು 93 ರನ್‌ಗಳ ಅಗತ್ಯವಿತ್ತು. ವಿದರ್ಭ ನಾಲ್ಕು ವಿಕೆಟ್‌ಗಳನ್ನು ತೆಗೆದುಕೊಂಡಿತು. ಯಶ್ ದುಬೆ ಅವರ 94 ರನ್ ಗಳಿಕೆ ಹಾಗೂ ಸ್ಥಿರ ಆಟವು ಸ್ಪರ್ಧೆಯನ್ನು ಮುಂದಕ್ಕೆ ಒಯ್ದಿತಾದರೂ, 4ನೇ ದಿನದ ಅಂತಿಮ ಹಂತದಲ್ಲಿ ಅವರ ವಿಕೆಟ್ ಕೂಡ ಬಿದ್ದು ಸ್ಪರ್ಧೆಯನ್ನು ಬದಲಾಯಿಸಿತು.
ಸಾರಾಂಶ್ ಜೈನ್ ಮತ್ತು ಕುಮಾರ್ ಕಾರ್ತಿಕೇಯ ಅವರು ಕ್ರೀಸ್ ಆಕ್ರಮಿಸುವುದರೊಂದಿಗೆ ಮಧ್ಯಪ್ರದೇಶ ಹಿಂದಿನ ದಿನದ 228/6ರಿಂದ ಪುನರಾರಂಭಿಸಿತು. ಹೆಚ್ಚಿನ ಪ್ರತಿರೋಧವಿಲ್ಲದೆ ಎಲ್ಲಾ ನಾಲ್ಕು ವಿಕೆಟ್‌ಗಳು ಪತನಗೊಂಡವು. ದಿನದ ಆಟಕ್ಕೆ ಒಂದು ಗಂಟೆಯ ಮೊದಲು ಕೇವಲ 30 ರನ್‌ಗಳನ್ನು ಸೇರಿಸಲು ಸಾಧ್ಯವಾಯಿತು. ಅನುಭವ್ ಅಗರ್ವಾಲ್ ಕೂಡ ಸ್ಕೋರ್ ಸೇರಿಸಲಿಲ್ಲ. ಕಾರ್ತಿಕೇಯ ಮೊದಲು ಡಕ್ ಆದರು. ಸಾರಾಂಶ್ ಜೈನ್ 25 ರನ್‌ಗಳಿಗೆ ಔಟಾದರೆ, ಕುಲ್ವಂತ್ ಖೆಜ್ರೋಲಿಯಾ ಕೊನೆಯದಾಗಿ ಪತನಗೊಂಡರು.
ದುಬೆ ಅವರ 94 ಮತ್ತು ಹರ್ಷ್ ಗಾವ್ಲಿ ಅವರ 67 ರನ್‌ಗಳು ಕೆಲವು ವೀರಾವೇಶದ ಹೊಡೆತಗಳ ಮೂಲಕ ಬಂದವು. ಆದರೆ ವಿದರ್ಭದ ಬೌಲರ್‌ಗಳು ಈ ವೇಗವನ್ನು ಕುಂದಿಸಿದರು. ಅಕ್ಷಯ್ ವಾಖರೆ ಮತ್ತು ಯಶ್ ಠಾಕೂರ್ ತಲಾ ಮೂರು ವಿಕೆಟ್ ಪಡೆದರೆ, ಆದಿತ್ಯ ಸರ್ವಾಟೆ ಮತ್ತು ಆದಿತ್ಯ ಠಾಕ್ರೆ ತಲಾ ಎರಡು ವಿಕೆಟ್ ಪಡೆದರು.
ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮುಂಬಯಿ ತಂಡವು ತಮಿಳುನಾಡು ತಂಡವನ್ನು 70 ರನ್‌ಗಳಿಂದ ಸೋಲಿಸಿತ್ತು.