ವಾಷಿಂಗ್ಟನ್: ಉತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಹೊಂದಿದ್ದರೂ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುವ ಜತೆಗೆ ಅದೃಷ್ಟದಾಟದಲ್ಲೂ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಟೂರ್ನಿಯಿಂದಲೇ (T20 World Cup 2024) ಹೊರಬಿದ್ದಿದೆ. ಸೂಪರ್ 8ರ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬಾಬರ್ ಅಜಂ (Babar Azam) ನೇತೃತ್ವದ ತಂಡವು ಟೂರ್ನಿಯಿಂದ ಹೊರಬಿದ್ದಿದ್ದು, ಪಾಕ್ ಕ್ರಿಕೆಟ್ ಅಭಿಮಾನಿಗಳು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಮೆರಿಕದ ಲೌಡರ್‌ಹಿಲ್‌ನಲ್ಲಿ ಶುಕ್ರವಾರ (ಜೂನ್ 14) ಯುಎಸ್‌ಎ ಹಾಗೂ ಐರ್ಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಬೇಕಿತ್ತು. ಆದರೆ, ಮಳೆಯಿಂದಾಗಿ ಅಮೆರಿಕ ಹಾಗೂ ಐರ್ಲೆಂಡ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಸಂಪಾದಿಸಿದವು. ಇದರೊಂದಿಗೆ ಒಟ್ಟು 5 ಅಂಕ ಗಳಿಸಿದ ಅಮೆರಿಕ ತಂಡವು ಸೂಪರ್ 8ಕ್ಕೆ ಲಗ್ಗೆ ಇಟ್ಟಿತು. ಮೊದಲ ಬಾರಿಗೆ ಟಿ-20 ವಿಶ್ವಕಪ್‌ನಲ್ಲಿ ಆಡುತ್ತಿರುವ ಅಮೆರಿಕ ತಂಡವು ಮೊದಲ ಪ್ರಯತ್ನದಲ್ಲಿಯೇ ಸೂಪರ್ 8 ಪ್ರವೇಶಿಸಿದೆ.
PAKISTAN HAVE BEEN KNOCKED OUT OF 2024 T20 WORLD CUP. 🏆 pic.twitter.com/hXFL95kXMv
— Mufaddal Vohra (@mufaddal_vohra) June 14, 2024
ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್ ವಿರುದ್ಧ ಸೋತು, ಜೂನ್ 16ರಂದು ಐರ್ಲೆಂಡ್ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್ ವಿರುದ್ಧ ಪಾಕ್ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.
The fate of Group A is 🔒
— ICC (@ICC) June 14, 2024
USA advance to the Super Eight of the #T20WorldCup 2024 as they share a point each with Ireland 👏#USAvIRE pic.twitter.com/NvlDPT0T0Y
2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವು ಸೆಮಿಫೈನಲ್ ಕೂಡ ತಲುಪಿರಲಿಲ್ಲ. ಇನ್ನು, 2009ರ ಟಿ-20 ವಿಶ್ವಕಪ್ ಚಾಂಪಿಯನ್ ಆಗಿರುವ ಪಾಕಿಸ್ತಾನವು 2022ರ ಟಿ-20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿ, ರನ್ನರ್ ಅಪ್ ಆಗಿತ್ತು. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲಿಯೇ ಮನೆಯ ದಾರಿ ಹಿಡಿದಿದೆ. 2007ರಿಂದಲೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನವು ಒಮ್ಮೆಯೂ ಗ್ರೂಪ್ ಹಂತದಲ್ಲಿಯೇ ಹೊರಬಿದ್ದಿರಲಿಲ್ಲ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಹೊರಬೀಳುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗದೆ.
ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಅಗ್ರಸ್ಥಾನಿಯಾಗಿ ಸೂಪರ್ 8ಕ್ಕೆ ಪ್ರವೇಶ ಪಡೆದಿದೆ. ಶನಿವಾರ ಕೆನಡಾ ವಿರುದ್ಧ ಔಪಚಾರಿಕ ಪಂದ್ಯವನ್ನಷ್ಟೇ ಆಡಲಿದೆ. ಜೂನ್ 19ರಿಂದ ಸೂಪರ್ 8 ಪಂದ್ಯಗಳು ಆರಂಭವಾಗಲಿವೆ. ಸೂಪರ್ 8 ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿವೆ.
ಇದನ್ನೂ ಓದಿ: T20 World Cup Viral Video: ಪಾಕ್ ತಂಡದ ವೇಗಿಗೆ ತವರಿನ ಅಭಿಮಾನಿಗಳಿಂದಲೇ ಗೇಲಿ