ಬೆಂಗಳೂರು: ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ (Virat Kohli) ಉತ್ತಮ ಫಾರ್ಮ್ನಲ್ಲಿ ಇಲ್ಲ. ಅವರು ಮತ್ತೊಂದು ಬಾರಿ ಡಕ್ಔಟ್ ಆಗಿದ್ದಾರೆ. ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್ನ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾಗಿರುವುದು ಮಂಡೆ ಬಿಸಿಗೆ ಕಾರಣವಾಗಿದೆ. ಆಸ್ಟ್ರೇಲಿಯಾ ಟಾಸ್ ಗೆದ್ದ ನಂತರ ಭಾರತ ಬ್ಯಾಟ್ ಮಾಡಿತು. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐದು ಎಸೆತಗಳನ್ನು ಬಳಸಿಕೊಂಡು ರನ್ ಬಾರಿಸದೇ ನಿರ್ಗಮಿಸಿದರು. ಇದು ಅಭಿಮಾನಿಗಳ ಹೃದಯ ಚೂರು ಚೂರು ಮಾಡಿತು. ಕೊಹ್ಲಿ ಕತೆ ಮುಗೀತು ಎಂದು ಇನ್ನೊಂದು ವರ್ಗ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.
Virat Kohli took prime membership of TukTuk after the end of IPL 💀 pic.twitter.com/JioAZ7zFER
— Dinda Academy (@academy_dinda) June 24, 2024
ಸೇಂಟ್ ಲೂಸಿಯಾದಲ್ಲಿ ನಡೆದ ಟಿ 20 ವಿಶ್ವಕಪ್ನ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಎಸೆತಕ್ಕೆ ಔಟಾದ ಕೊಹ್ಲಿ ಒಂದೇ ಆವೃತ್ತಿಯ ವಿಶ್ವ ಕಪ್ನಲ್ಲಿ ಎರಡು ಶೂನ್ಯಕ್ಕೆ ಔಟಾದ ಎರಡನೇ ಭಾರತೀಯ ಎಂಬ ಕುಖ್ಯಾತಿಗೆ ಪಾತ್ರರಾದರು. 2010 ರ ಟಿ 20 ವಿಶ್ವಕಪ್ನಲ್ಲಿ ಎರಡು ಡಕ್ಗಳನ್ನು ದಾಖಲಿಸಿದ ಆಶಿಶ್ ನೆಹ್ರಾ ಈ ಅನಪೇಕ್ಷಿತ ದಾಖಲೆಯನ್ನು ಸಾಧಿಸಿದ ಮೊದಲ ಭಾರತೀಯ. ಡೆಲ್ಲಿ ಮೂಲದ ನೆಹ್ರಾ ಅವರು ಕಳಪೆ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಆದರೆ, ನೆಹ್ರಾ ಬ್ಯಾಟರ್ ಅಲ್ಲ ಎಂಬುದು ಇಲ್ಲಿ ನೆನಪಿಸಬೇಕಾದ ಸಂಗತಿ.
ಹೇಜಲ್ವುಡ್ ಹೆಚ್ಚುವರಿ ಬೌನ್ಸ್ ಇರುವ ಶಾರ್ಟ್ ಪಿಚ್ ಎಸೆತವನ್ನು ಎಸೆದು ಕೊಹ್ಲಿಯನ್ನು ಔಟ್ ಮಾಡಿದರು. ಪುಲ್ ಶಾಟ್ ಪ್ರಯತ್ನದಲ್ಲಿ ಕೊಹ್ಲಿ ಕೇವಲ ಅವರು ಟಿಮ್ ಡೇವಿಡ್ಗೆ ಕ್ಯಾಚ್ ನೀಡಿದರು. ಟಿಮ್ ಡೇವಿಡ್ ಸರ್ಕಲ್ ಒಳಗಿನಿಂದ ಒಳಗಿನಿಂದ 25 ಮೀಟರ್ ದೂರ ಓಡಿ ಉತ್ತಮ ಕ್ಯಾಚ್ ಪಡೆದರು. ಕೊಹ್ಲಿ ಎದುರಿಸಿದ ಐದು ಎಸೆತಗಳಲ್ಲಿ ರನ್ ಗಳಿಸಲೇ ಇಲ್ಲ.
ಟೂರ್ನಿಯಲ್ಲಿ ಕೊಹ್ಲಿ ನಿರಾಸೆ
ಕೊಹ್ಲಿಯ ಈ ಇನಿಂಗ್ಸ್ ಕೊಹ್ಲಿಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನ ಪತನವಾಗಿದೆ. ಈ ಬಾರಿ ಆರಂಭಿಕನಾಗಿ ಅವರ ಪ್ರದರ್ಶನವು ಅಪೇಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ ಈ ವರ್ಷ ನಿರಾಶಾದಾಯಕ ಟೂರ್ನಿ ಹೊಂದಿದ್ದಾರೆ. ಅವರು ಆರು ಇನ್ನಿಂಗ್ಸ್ಗಳಲ್ಲಿ 11.00 ಸರಾಸರಿ ಮತ್ತು 100.00 ಸ್ಟ್ರೈಕ್ ರೇಟ್ನಲ್ಲಿ ಕೇವಲ 66 ರನ್ ಗಳಿಸಿದ್ದಾರೆ. ಭಾರತದ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 28 ಎಸೆತಗಳಲ್ಲಿ 37 ರನ್ ಗಳಿಸಿದ್ದು ಈ ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ . ಈ ನಿರ್ಣಾಯಕ ಪಂದ್ಯದಲ್ಲಿ ಅವರು ಸ್ಕೋರ್ ಮಾಡಲು ವಿಫಲರಾಗಿರುವುದು ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಲು ಪ್ರಯತ್ನಿಸುತ್ತಿರುವ ಭಾರತೀಯ ಬ್ಯಾಟಿಂಗ್ ಲೈನ್ಅಪ್ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡಿತು.
ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲಿನ ನಂತರ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಡಲು ಜಯದ ಅಗತ್ಯವಿರುವ ಆಸ್ಟ್ರೇಲಿಯಾ, ಹೆಚ್ಚಿನ ತೀವ್ರತೆಯೊಂದಿಗೆ ಆಟ ಪ್ರಾರಂಭಿಸಿತು. ಮತ್ತೊಂದೆಡೆ, ಸೆಮಿಫೈನಲ್ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಭಾರತ ಗೆಲ್ಲಲೇಬೇಕು. ಪಂದ್ಯಾವಳಿಯ ಮುಂದಿನ ಹಂತದಲ್ಲಿ ಎರಡೂ ತಂಡಗಳು ತಮ್ಮ ಸ್ಥಾನಕ್ಕಾಗಿ ಹೋರಾಡುತ್ತಿರುವುದರಿಂದ ಈ ಪಂದ್ಯವು ರೋಮಾಂಚಕ ಸ್ಪರ್ಧೆಯಾಗಿದೆ.