Virat Kohli : ವಿರಾಟ್​​ ಕೊಹ್ಲಿ ಕತೆ ಮುಗೀತು... ಮತ್ತೆ ಶೂನ್ಯಕ್ಕೆ ಔಟಾದ ಸ್ಟಾರ್​ ಬ್ಯಾಟರ್​! - Vistara News

ಕ್ರಿಕೆಟ್

Virat Kohli : ವಿರಾಟ್​​ ಕೊಹ್ಲಿ ಕತೆ ಮುಗೀತು… ಮತ್ತೆ ಶೂನ್ಯಕ್ಕೆ ಔಟಾದ ಸ್ಟಾರ್​ ಬ್ಯಾಟರ್​!

Virat Kohli :

VISTARANEWS.COM


on

Virat kohli
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಐಪಿಎಲ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ (Virat Kohli) ಉತ್ತಮ ಫಾರ್ಮ್​ನಲ್ಲಿ ಇಲ್ಲ. ಅವರು ಮತ್ತೊಂದು ಬಾರಿ ಡಕ್ಔಟ್ ಆಗಿದ್ದಾರೆ. ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಟಿ 20 ವಿಶ್ವಕಪ್​​ನ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾಗಿರುವುದು ಮಂಡೆ ಬಿಸಿಗೆ ಕಾರಣವಾಗಿದೆ. ಆಸ್ಟ್ರೇಲಿಯಾ ಟಾಸ್ ಗೆದ್ದ ನಂತರ ಭಾರತ ಬ್ಯಾಟ್​ ಮಾಡಿತು. ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಐದು ಎಸೆತಗಳನ್ನು ಬಳಸಿಕೊಂಡು ರನ್ ಬಾರಿಸದೇ ನಿರ್ಗಮಿಸಿದರು. ಇದು ಅಭಿಮಾನಿಗಳ ಹೃದಯ ಚೂರು ಚೂರು ಮಾಡಿತು. ಕೊಹ್ಲಿ ಕತೆ ಮುಗೀತು ಎಂದು ಇನ್ನೊಂದು ವರ್ಗ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ.

ಸೇಂಟ್ ಲೂಸಿಯಾದಲ್ಲಿ ನಡೆದ ಟಿ 20 ವಿಶ್ವಕಪ್​ನ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಎಸೆತಕ್ಕೆ ಔಟಾದ ಕೊಹ್ಲಿ ಒಂದೇ ಆವೃತ್ತಿಯ ವಿಶ್ವ ಕಪ್​ನಲ್ಲಿ ಎರಡು ಶೂನ್ಯಕ್ಕೆ ಔಟಾದ ಎರಡನೇ ಭಾರತೀಯ ಎಂಬ ಕುಖ್ಯಾತಿಗೆ ಪಾತ್ರರಾದರು. 2010 ರ ಟಿ 20 ವಿಶ್ವಕಪ್​ನಲ್ಲಿ ಎರಡು ಡಕ್ಗಳನ್ನು ದಾಖಲಿಸಿದ ಆಶಿಶ್ ನೆಹ್ರಾ ಈ ಅನಪೇಕ್ಷಿತ ದಾಖಲೆಯನ್ನು ಸಾಧಿಸಿದ ಮೊದಲ ಭಾರತೀಯ. ಡೆಲ್ಲಿ ಮೂಲದ ನೆಹ್ರಾ ಅವರು ಕಳಪೆ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ಆದರೆ, ನೆಹ್ರಾ ಬ್ಯಾಟರ್​ ಅಲ್ಲ ಎಂಬುದು ಇಲ್ಲಿ ನೆನಪಿಸಬೇಕಾದ ಸಂಗತಿ.

ಹೇಜಲ್​ವುಡ್​ ಹೆಚ್ಚುವರಿ ಬೌನ್ಸ್​ ಇರುವ ಶಾರ್ಟ್​ ಪಿಚ್​ ಎಸೆತವನ್ನು ಎಸೆದು ಕೊಹ್ಲಿಯನ್ನು ಔಟ್ ಮಾಡಿದರು. ಪುಲ್ ಶಾಟ್ ಪ್ರಯತ್ನದಲ್ಲಿ ಕೊಹ್ಲಿ ಕೇವಲ ಅವರು ಟಿಮ್ ಡೇವಿಡ್​ಗೆ ಕ್ಯಾಚ್​ ನೀಡಿದರು. ಟಿಮ್ ಡೇವಿಡ್ ಸರ್ಕಲ್ ಒಳಗಿನಿಂದ ಒಳಗಿನಿಂದ 25 ಮೀಟರ್ ದೂರ ಓಡಿ ಉತ್ತಮ ಕ್ಯಾಚ್ ಪಡೆದರು. ಕೊಹ್ಲಿ ಎದುರಿಸಿದ ಐದು ಎಸೆತಗಳಲ್ಲಿ ರನ್​ ಗಳಿಸಲೇ ಇಲ್ಲ.

ಟೂರ್ನಿಯಲ್ಲಿ ಕೊಹ್ಲಿ ನಿರಾಸೆ

ಕೊಹ್ಲಿಯ ಈ ಇನಿಂಗ್ಸ್​​ ಕೊಹ್ಲಿಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನ ಪತನವಾಗಿದೆ. ಈ ಬಾರಿ ಆರಂಭಿಕನಾಗಿ ಅವರ ಪ್ರದರ್ಶನವು ಅಪೇಕ್ಷಿತ ಫಲಿತಾಂಶಗಳನ್ನು ನೀಡಲಿಲ್ಲ. ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ ಈ ವರ್ಷ ನಿರಾಶಾದಾಯಕ ಟೂರ್ನಿ ಹೊಂದಿದ್ದಾರೆ. ಅವರು ಆರು ಇನ್ನಿಂಗ್ಸ್​ಗಳಲ್ಲಿ 11.00 ಸರಾಸರಿ ಮತ್ತು 100.00 ಸ್ಟ್ರೈಕ್ ರೇಟ್​ನಲ್ಲಿ ಕೇವಲ 66 ರನ್ ಗಳಿಸಿದ್ದಾರೆ. ಭಾರತದ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 28 ಎಸೆತಗಳಲ್ಲಿ 37 ರನ್ ಗಳಿಸಿದ್ದು ಈ ಟೂರ್ನಿಯಲ್ಲಿ ಅವರ ಗರಿಷ್ಠ ಸ್ಕೋರ್ . ಈ ನಿರ್ಣಾಯಕ ಪಂದ್ಯದಲ್ಲಿ ಅವರು ಸ್ಕೋರ್ ಮಾಡಲು ವಿಫಲರಾಗಿರುವುದು ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಲು ಪ್ರಯತ್ನಿಸುತ್ತಿರುವ ಭಾರತೀಯ ಬ್ಯಾಟಿಂಗ್ ಲೈನ್ಅಪ್ ಮೇಲೆ ಹೆಚ್ಚುವರಿ ಒತ್ತಡ ಉಂಟು ಮಾಡಿತು.

ಇದನ್ನೂ ಓದಿ: Varun Chakravarthy : ತಮ್ಮನ್ನು ಆಯ್ಕೆ ಮಾಡದ್ದಕ್ಕೆ ಸಿಡಿದೆದ್ದ ವರುಣ್​ ಚಕ್ರವರ್ತಿ; ಸೋಶಿಯಲ್ ಮೀಡಿಯಾದಲ್ಲಿ ಆಕ್ರಮಣಕಾರಿ ಪೋಸ್ಟ್​​

ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಸೋಲಿನ ನಂತರ ಸೆಮಿಫೈನಲ್ ಆಸೆಯನ್ನು ಜೀವಂತವಾಗಿಡಲು ಜಯದ ಅಗತ್ಯವಿರುವ ಆಸ್ಟ್ರೇಲಿಯಾ, ಹೆಚ್ಚಿನ ತೀವ್ರತೆಯೊಂದಿಗೆ ಆಟ ಪ್ರಾರಂಭಿಸಿತು. ಮತ್ತೊಂದೆಡೆ, ಸೆಮಿಫೈನಲ್​ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಭಾರತ ಗೆಲ್ಲಲೇಬೇಕು. ಪಂದ್ಯಾವಳಿಯ ಮುಂದಿನ ಹಂತದಲ್ಲಿ ಎರಡೂ ತಂಡಗಳು ತಮ್ಮ ಸ್ಥಾನಕ್ಕಾಗಿ ಹೋರಾಡುತ್ತಿರುವುದರಿಂದ ಈ ಪಂದ್ಯವು ರೋಮಾಂಚಕ ಸ್ಪರ್ಧೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Womens Asia Cup: ಶಫಾಲಿ ವಿಕೆಟ್​ ಪತನದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ 15 ಎಸೆತಗಳಿಂದ ಅಜೇಯ 28 ರನ್​ ಬಾರಿಸಿದರು.

VISTARANEWS.COM


on

Womens Asia Cup
Koo

ದಂಬುಲ್ಲಾ(ಶ್ರೀಲಂಕಾ): ಲೇಡಿ ಸೆಹವಾಗ್​ ಖ್ಯಾತಿಯ ಡ್ಯಾಶಿಂಗ್​ ಓಪನರ್​ ಶಫಾಲಿ ವರ್ಮಾ(81) ಅವರ ಪ್ರಚಂಡ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಪ್ರದರ್ಶನದ ನೆರವು ಪಡೆದ ಭಾರತ ತಂಡ ಮಹಿಳಾ ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ(Womens Asia Cup) ನೇಪಾಳ(India Women vs Nepal Women) ವಿರುದ್ಧ 82 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್​ ಹಂತಕ್ಕೇರಿದೆ.

ಇಲ್ಲಿನ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ(Rangiri Dambulla International Stadium) ನಡೆದ ಅಂತಿಮ ಲೀಗ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ತಂಡ ಆರಂಭಿಕ ಆಟಗಾರ್ತಿಯಾದ ದಯಾಳನ್‌ ಹೇಮಲತಾ(47) ಮತ್ತು ಶಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 178 ರನ್​ ಪೇರಿಸಿತು. ಗುರಿ ಬೆನ್ನಟ್ಟಿದ ನೇಪಾಳ ಆರಂಭದಲ್ಲೇ ಸತತವಾಗಿ ವಿಕೆಟ್​ ಕಳೆದುಕೊಂಡು ಅಂತಿಮವಾಗಿ  9 ವಿಕೆಟ್​ಗೆ 96 ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಯುಎಇ ವಿರುದ್ಧ ಆರು ವಿಕೆಟ್​ ಗೆಲುವಿನೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದ ನೇಪಾಳ ತಂಡ ಇಂದಿನ ಪಂದ್ಯದಲ್ಲಿ ಭಾರತ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುತ್ತಿದ್ದರೆ ಪಾಕಿಸ್ತಾನವನ್ನು ಹಿಂದಿಕ್ಕಿ ಸೆಮಿಫೈನಲ್​ ಹಂತಕ್ಕೇರುವ ಅವಕಾಶವಿತ್ತು. ಆದರೆ ಸೋಲು ಕಂಡು ಈ ಅವಕಾಶದಿಂದ ವಂಚಿತವಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಅರುಂಧತಿ ರೆಡ್ಡಿ(2), ದೀಪ್ತಿ ಶರ್ಮಾ(3), ರಾಧಾ ಯಾದವ್​(2) ವಿಕೆಟ್​ ಕಿತ್ತು ಮಿಂಚಿದರು.

ಉತ್ತಮ ಆರಂಭ ಪಡೆದ ಭಾರತ


ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಪರ ಆರಂಭಿಕ ಆಟಗಾರ್ತಿಯಾದ ದಯಾಳನ್‌ ಹೇಮಲತಾ ಮತ್ತು ಶಫಾಲಿ ವರ್ಮಾ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿದರು. ಉಭಯ ಆಟಗಾರ್ತಿಯರ ಈ ಬ್ಯಾಟಿಂಗ್​ ಪೈಪೋಟಿಯಿಂದಾಗಿ ತಂಡ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ ಈ ಜೋಡಿ ಬರೋಬ್ಬರಿ 122 ರನ್​ ಒಟ್ಟುಗೂಡಿಸಿತು. ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ಹೇಮಲತಾ 47 ರನ್​ ಗಳಿಸಿದ್ದ ವೇಳೆ ವಿಕೆಟ್​ ಕೈಚೆಲ್ಲಿದರು. ಕೇವಲ 3 ರನ್​ ಅಂತೆದಿಂದ ಅರ್ಧಶತಕ ತಪ್ಪಿಸಿಕೊಂಡರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ದಾಖಲಾಯಿತು.

ಇದನ್ನೂ ಓದಿ

ದಾಖಲೆ ಬರೆದ ಶಫಾಲಿ


ಜತೆಗಾರ್ತಿ ಹೇಮಲತಾ ವಿಕೆಟ್​ ಬಿದ್ದರೂ ಕೂಡ ಶಫಾಲಿ ಬ್ಯಾಟಿಂಗ್​ ಆರ್ಭಟಕ್ಕೇನು ಅಡ್ಡಿಯಾಗಲಿಲ್ಲ. ಅವರು ಮುನ್ನುಗ್ಗಿ ಬಾರಿಸುತ್ತಲೇ ಇದ್ದರು. ಕೇವಲ 26 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಇದು ಅವರ 10ನೇ ಟಿ20 ಅರ್ಧಶತಕ. ಇನ್ನೇನು ಶತಕ ಬಾರಿಸುತ್ತಾರೆ ಎನ್ನುವಷ್ಟರಲ್ಲಿ ಅವಸರ ಮಾಡಿಕೊಂಡು ಸ್ಟಂಪ್ಡ್​ ಆಗಿ ವಿಕೆಟ್​ ಕಳೆದುಕೊಂಡರು. 48 ಎಸೆತ ಎದುರಿಸಿದ ಶಫಾಲಿ 12 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 81 ರನ್​ ಬಾರಿಸಿದರು. ಇದೇ ವೇಳೆ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ಪರ ಅತ್ಯಧಿಕ ವೈಯಕ್ತಿಕ ರನ್​ ಬಾರಿಸಿದ 2ನೇ ಆಟಗಾರ್ತಿ ಎನಿಸಿಕೊಂಡರು. ದಾಖಲೆ ಮಾಜಿ ಆಟಗಾರ್ತಿ ಮಿಥಾಲಿ ರಾಜ್​ ಹೆಸರಿನಲ್ಲಿದೆ. ಮಿಥಾಲಿ 2018 ರಲ್ಲಿ ಮಲೇಷ್ಯಾ ವಿರುದ್ಧ ಅಜೇಯ 97 ರನ್​ ಬಾರಿಸಿದ್ದರು. 2022 ರಲ್ಲಿ ಶ್ರೀಲಂಕಾ ವಿರುದ್ಧ 76 ರನ್​ ಬಾರಿಸಿದ್ದ ಜೆಮಿಮಾ ರಾಡ್ರಿಗಸ್ ದಾಖಲೆ ಪತನಗೊಂಡಿತು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 3 ಸಾವಿರ ರನ್​ ಪೂರೈಸಿದ ದಾಖಲೆಯನ್ನೂ ಕೂಡ ಶಫಾಲಿ ಈ ಪಂದ್ಯದಲ್ಲಿ ನಿರ್ಮಿಸಿದರು.

ಶಫಾಲಿ ವಿಕೆಟ್​ ಪತನದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ 15 ಎಸೆತಗಳಿಂದ ಅಜೇಯ 28 ರನ್​ ಬಾರಿಸಿದರು. ರಿಚಾ ಘೋಷ್​ 6 ರನ್​ ಗಳಿಸಿ ಅಜೇಯರಾಗಿ ಉಳಿದರು. ಎಸ್​ ಸಜನಾ 10 ರನ್​ ಬಾರಿಸಿದರು. ನೇಪಾಳ ಪರ ಸೀತಾ ರಾಣಾ ಮಗರ್ 25 ರನ್​ ವೆಚ್ಚದಲ್ಲಿ 2 ವಿಕೆಟ್​ ಕಿತ್ತರು.

ಹರ್ಮನ್​ಪ್ರೀತ್​ಗೆ ವಿಶ್ರಾಂತಿ

ಖಾಯಂ ನಾಯಕಿ ಹರ್ಮನ್​ಪ್ರೀತ್​ ಕೌರ್​ ಅನುಪಸ್ಥಿತಿಯಲ್ಲಿ ಸ್ಮೃತಿ ಮಂಧಾನ ಹಂಗಾಮಿಯಾಗಿ ತಂಡವನ್ನು ಮುನ್ನಡೆಸಿದರು. ಆದರೆ ಅವರು ಬ್ಯಾಟಿಂಗ್​ ನಡೆಸಲಿಲ್ಲ. ಯುವ ಆಟಗಾರ್ತಿಯರಿಗೆ ಅವಕಾಶ ನೀಡಿದರು.

Continue Reading

ಕ್ರಿಕೆಟ್

Kuldeep Yadav: ಬಾಗೇಶ್ವರ್ ಬಾಬಾ ಆಶೀರ್ವಾದ ಪಡೆದ ಕುಲ್​ದೀಪ್​ ಯಾದವ್; ವಿಡಿಯೊ ವೈರಲ್​

Kuldeep Yadav: ಗುರು ಪೂರ್ಣಿಮ ದಿನದಂದು ಕುಲ್​ದೀಪ್​ ಬಾಗೇಶ್ವರ್ ಧಾಮ್​ಗೆ ಭೇಟಿ ನೀಡಿದ್ದರು. ಕುಲ್​ದೀಪ್​ ಆಶ್ರಮದಲ್ಲಿ ಕೆಲ ಕಾಲ ಧ್ಯಾನ ಮಾಡಿರುವ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Kuldeep Yadav
Koo

ಮಧ್ಯಪ್ರದೇಶ: ಟೀಮ್​ ಇಂಡಿಯಾದ ಸ್ಟಾರ್​ ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಅವರು ಮಧ್ಯಪ್ರದೇಶದ ಛತ್ತರ್‌ಪುರ್(Chhatarpur) ಜಿಲ್ಲೆಯ ಬಾಗೇಶ್ವರ್ ಧಾಮ್ (Bageswhar Dham) ದೇಗುಲಕ್ಕೆ ಭೇಟಿ ನೀಡಿ ಪೀಠಾಧೀಶ್ವರ ಬಾಗೇಶ್ವರ್ ಬಾಬಾ(Baba Bageshwar) ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಕುಲ್​ದೀಪ್​ ಬೌಲಿಂಗ್​ ಫಾರ್ಮ್​ ಕಳೆದುಕೊಂಡು ಹಲವು ವರ್ಷ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ವೇಳೆ ಬಾಗೇಶ್ವರ್ ಧಾಮ್ (Bageswhar Dham) ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೋಜೆ ಸಲ್ಲಿಸಿದ್ದರು. ಈ ವೇಳೆ ಬಾಗೇಶ್ವರ್ ಬಾಬಾ ಕುಲ್​ದೀಪ್​ ಯಾದವ್ ಕೊರಳಿಗೆ ಹೂವಿನ ಹಾರ ಹಾಕುವ ಮೂಲಕ ಮತ್ತೆ ಭಾರತ ತಂಡದ ಪರ ಆಡಲಿದ್ದೀಯ ಎಂದು ಹಾರೈಸಿದ್ದರು. ಇದಾದ ಒಂದು ತಿಂಗಳ ಬಳಿಕ ಕುಲ್​ದೀಪ್​ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಏಕದಿನ ಸೇರಿ ಟಿ20 ವಿಶ್ವಕಪ್​ನಲ್ಲಿ ಪ್ರಧಾನ ಸ್ಪಿನ್ನರ್​ ಆಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಕುಲ್​ದೀಪ್​ ಬಾಗೇಶ್ವರ್ ಬಾಬಾ ಅವರ ಪರಮ ಭಕ್ತರಾಗಿದ್ದಾರೆ.

ಗುರು ಪೂರ್ಣಿಮ ದಿನದಂದು ಕುಲ್​ದೀಪ್​ ಬಾಗೇಶ್ವರ್ ಧಾಮ್​ಗೆ ಭೇಟಿ ನೀಡಿದ್ದರು. ಕುಲ್​ದೀಪ್​ ಆಶ್ರಮದಲ್ಲಿ ಕೆಲ ಕಾಲ ಧ್ಯಾನ ಮಾಡಿರುವ ವಿಡಿಯೊ ವೈರಲ್​ ಆಗಿದೆ. ಕೇವಲ 26 ವರ್ಷದ ಬಾಗೇಶ್ವರ್ ಬಾಬಾ ಅಲಿಯಾಸ್ ಶಾಸ್ತ್ರಿ ಅವರು ಸ್ವಯಂ ಘೋಷಿತ ದೇವಮಾನವ ಎನಿಸಿಕೊಂಡಿದ್ದಾರೆ. ಕಥಾ ಎಂಬ ಧಾರ್ಮಿಕ ಪ್ರವಚನ ನೀಡುವುದಕ್ಕಾಗಿ ಅವರು ದೇಶಾದ್ಯಂತ ಪ್ರವಾಸ ಕೈಗೊಳ್ಳುತ್ತಾರೆ. ಇತ್ತೀಚೆಗೆ, ಮಹಾರಾಷ್ಟ್ರ ಮೂಲದ ಮೂಢನಂಬಿಕೆ ವಿರೋಧಿ ಸಂಘಟನೆಯು ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ತಮಗಿರುವ ನಿಗೂಢ, ಪವಾಡ ಶಕ್ತಿಯನ್ನು ಪದರ್ಶಿಸುವಂತೆ ಸವಾಲು ಹಾಕಿದ್ದರು.

ಇದನ್ನೂ ಓದಿ Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

ಕಥಾ ವಿಡಿಯೋ ವೈರಲ್

ಬಾಗೇಶ್ವರ್ ಬಾಬಾ ನಡೆಸುವ ಕಥಾ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಹೀಗೆ ವೈರಲ್ ಆದ ವಿಡಿಯೋವೊಂದರಲ್ಲಿ ಜನರ ಮಧ್ಯೆದಿಂದ ಪತ್ರಕರ್ತರೊಬ್ಬರನ್ನು ಬಾಬಾ ಕರೆಯುತ್ತಾರೆ. ಬಳಿಕ, ಅವರ ಕುಟುಂಬದ ಸದಸ್ಯರ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. ಬಾಬಾಗೆ, ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ತಿಳಿದಿರುವುದು ಅಸಾಧಾರಣ ಕಾರ್ಯವೆಂದು ಆ ಪತ್ರಕರ್ತರು ಘೋಷಿಸುತ್ತಾರೆ. ಆದರೆ, ಈ ಪತ್ರಕರ್ತನ ಬಗ್ಗೆ ಬಾಬಾ ಹೇಳಿದ ಮಾಹಿತಿ ಎಲ್ಲವೂ ಸೋಷಿಯಲ್ ಮೀಡಿಯಾಗಳಲ್ಲಿದೆ ಎಂದು ಜನರು ಹೇಳಿಕೊಂಡಿದ್ದಾರೆ.

ಬಿಜೆಪಿ ನಾಯಕರ ಬೆಂಬಲ

ಬಾಗೇಶ್ವರ್ ಬಾಬಾ ಅವರಿಗೆ ಬಿಜೆಪಿಯ ಅನೇಕ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಪಕ್ಷದ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಅವರು ಬಹಿರಂವಾಗಿಯೇ ಬಾಬಾ ಅವರನ್ನು ಬೆಂಬಲಿಸಿದ್ದಾರೆ. ದ್ವೇಷ ಭಾಷಣದಿಂದಲೇ ಕುಖ್ಯಾತಿ ಗಳಿಸಿರುವ ಬಿಜೆಪಿಯ ಮತ್ತೊಬ್ಬ ನಾಯಕ ಕಪಿಲ್ ಮಿಶ್ರಾ ಅವರು, ಶಾಸ್ತ್ರಿ ಪರವಾಗಿ ದಿಲ್ಲಿಯಲ್ಲಿ ರ್ಯಾಲಿಯನ್ನು ನಡೆಸಿದ್ದಾರೆ. ಬಾಬಾ ಅವರು ಲವ್ ಜಿಹಾದ್ ವಿರುದ್ಧ ಮಾತನಾಡಿದ್ದಕ್ಕಾಗಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಯಾರು ಬಾಬಾ

ಬಾಗೇಶ್ವರ್ ಬಾಬಾ ಅವರು ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿರುವ ಬಾಗೇಶ್ವರ್ ಧಾಮ್ ಕ್ಷೇತ್ರದ ಧಾರ್ಮಿಕ ಮುಖಂಡರಾಗಿದ್ದಾರೆ. ಇವರ ಪೂರ್ತಿ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ. ಇವರು ಬಾಗೇಶ್ವರ ಬಾಬಾ ಎಂದೇ ಖ್ಯಾತರಾಗಿದ್ದಾರೆ. ಅವರ ಬೋಧಿಸುವ ಕಥಾಗಳು ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿವೆ. ಜತೆಗೆ, ಪವಾಡಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಜನರು ಆಕರ್ಷಿತರಾಗುತ್ತಿದ್ದಾರೆ. ಆದರೆ, ಪವಾಡಗಳ ಮೂಲಕ ಇವರು ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿದ್ದಾರೆಂಬ ಆರೋಪವೂ ಕೇಳಿ ಬಂದಿತ್ತು.

Continue Reading

ಕ್ರೀಡೆ

Amy Jones-Piepa Cleary: ನಿಶ್ಚಿತಾರ್ಥ ಮಾಡಿಕೊಂಡ ಇಂಗ್ಲೆಂಡ್​-ಆಸ್ಟ್ರೇಲಿಯಾ ತಂಡದ ಮಹಿಳಾ ಆಟಗಾರ್ತಿಯರು

Amy Jones-Piepa Cleary: ಇಂಗ್ಲೆಂಡ್​ ಆಟಗಾರ್ತಿ ಸಲಿಂಗ ವಿವಾಹವಾಗುತ್ತಿರುವ ಮೂರನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್, ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಸಲಿಂಗ ವಿವಾಹವಾಗಿದ್ದರು.

VISTARANEWS.COM


on

Amy Jones-Piepa Cleary
Koo

ಲಂಡನ್​: ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಸಲಿಂಗಿ ಜೋಡಿ ವಿವಾಹ ಹೆಚ್ಚಾಗಿ ನಡೆಯುತ್ತಿವೆ. ಅದರಲ್ಲೂ ಕ್ರಿಕೆಟ್​ ವಲಯದಲ್ಲಿ ಹೆಚ್ಚು. ಒಂದು ತಿಂಗಳ ಹಿಂದಷ್ಟೇ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್​ ಆಟಗಾರ್ತಿ ಡೇನಿಯಲ್ ವ್ಯಾಟ್(Danielle Wyatt) ಅವರು ತನ್ನ ಬಹುಕಾಲ ಗೆಳತಿ ಜಾರ್ಜಿ ಹಾಡ್ಜ್(Georgie Hodge) ಅವರೊಂದಿಗೆ ಮದುವೆಯಾಗಿದ್ದರು. ಇದೀಗ ಇಂಗ್ಲೆಂಡ್​​ ಮತ್ತು ಆಸ್ಟ್ರೇಲಿಯಾ ಮಹಿಳಾ ಸ್ಟಾರ್​ ಕ್ರಿಕೆಟಿಗರಿಬ್ಬರು ನಿಶ್ಚಿತಾರ್ಥ(Amy Jones-Piepa Cleary Engagement) ಮಾಡಿಕೊಂಡಿದ್ದಾರೆ.

ಇಂಗ್ಲೆಂಡ್​ ತಂಡ ವಿಕೆಟ್​ ಕೀಪರ್​ ಆಮಿ ಜೋನ್ಸ್​(Amy Jones) ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್​​​ ಆಟಗಾರ್ತಿ ಪೈಪಾ ಕ್ಲಿಯರಿ(Piepa Cleary) ಸಲಿಂಗಿ ವಿವಾಹವಾಗಲು(Amy Jones-Piepa Cleary) ಮುಂದಾಗಿರುವ ಜೋಡಿ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೊವನ್ನು ಉಭಯ ಆಟಗಾರ್ತಿಯರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು ನಾವು ಜತೆಯಾಗಿ ಜೀವಿಸಲು ಮೊದಲ ಹೆಜ್ಜೆ ಇಟ್ಟಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಬರೆದುಕೊಂಡಿದ್ದಾರೆ.

31 ವರ್ಷದ ಆಮಿ ಜೋನ್ಸ್ 2019 ರಲ್ಲಿ ಇಂಗ್ಲೆಂಡ್​ ತಂಡದ ಪರ ಪದಾರ್ಪಣೆ ಮಾಡಿದ್ದರು. ಇದುರೆಗೆ ಇಂಗ್ಲೆಂಡ್​ ಪರ 107 ಟಿ20, 91 ಏಕದಿನ ಮತ್ತು 6 ಟೆಸ್ಟ್​ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ(1951), ಟಿ20ಯಲ್ಲಿ (1515), ಟೆಸ್ಟ್​ನಲ್ಲಿ (116) ರನ್​ ಗಳಿಸಿದ್ದಾರೆ. ಆಮಿಯವರು ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾರ್ಚರ್ಸ್‌ಗಾಗಿ ಆಡುತ್ತಿರುವಾಗ 28 ವರ್ಷದ ಆಸ್ಟ್ರೇಲಿಯಾದ ವೇಗಿ ಪೈಪಾ ಕ್ಲಿಯರಿ ಜತೆ ಪ್ರೇಮಾಂಕುರವಾಗಿತ್ತು. ಇದೀಗ ಈ ಜೋಡಿ ಒಂದಾಗಿ ಜೀವನ ನಡೆಸಲು ಸಿದ್ಧರಾಗಿದ್ದಾರೆ.

ಇಂಗ್ಲೆಂಡ್​ ಆಟಗಾರ್ತಿ ಸಲಿಂಗ ವಿವಾಹವಾಗುತ್ತಿರುವ ಮೂರನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ಮಹಿಳಾ ರಾಷ್ಟ್ರೀಯ ತಂಡದ ಕ್ರಿಕೆಟಿಗರಾದ ನತಾಲಿಯಾ ಸೀವರ್ ಮತ್ತು ಕ್ಯಾಥರಿನ್ ಬ್ರಂಟ್, ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಸಲಿಂಗ ವಿವಾಹವಾಗಿದ್ದರು.

ಇದನ್ನೂ ಓದಿ Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್(Georgie Hodge) ಇದೇ ಜೂನ್​ನಲ್ಲಿ ವಿವಾಹವಾಗಿದ್ದರು. ಕಳೆದ ವರ್ಷ ಮಾರ್ಚ್ 2ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ‘ನಮ್ಮ ಮುಂದಿನ ಜೀವನವನ್ನು ದೃಢಪಡಿಸಿಕೊಳ್ಳುತ್ತಿದ್ದೇವೆ’ ಎಂದು ಮನೆಯ ಎಮೊಜಿಗಳನ್ನು ಹಾಕಿ ಟ್ವಿಟರ್​ ಪೋಸ್ಟ್​ ಮೂಲಕ ಡೇನಿಯಲ್‌ ವ್ಯಾಟ್‌ ತಮ್ಮ ವಿವಾಹದ(Danielle Wyatt Marriage) ತಮ್ಮ ವಿವಾಹದ ವಿಚಾರವನ್ನು ಪ್ರಕಟಿಸಿ ಮದುವೆಯ ಮೂರು ಫೋಟೊಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಡೇನಿಯಲ್ ವ್ಯಾಟ್(Danielle Wyatt) ಮತ್ತು ಜಾರ್ಜಿ ಹಾಡ್ಜ್ ಜೋಡಿಗಳಿಗೆ ಭಾರತ ಮಹಿಳಾ ತಂಡದ ಆಟಗಾರ್ತಿ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮೀಮಾ ರೋಡ್ರಿಗಸ್​ ಸೇರಿ ಹಲವು ದೇಶದ ಆಟಗಾರ್ತಿಯರು ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಶುಭ ಕೋರಿದ್ದರು. ವಿವಾಹ ಸಮಾರಂಭದಲ್ಲಿ ಇಂಗ್ಲೆಂಡ್​ ನಾಯಕಿ ನಾಯಕಿ ಹೀದರ್ ನೈಟ್, ಡ್ಯಾನಿ ವ್ಯಾಟ್, ಇಶಾ ಗುಹಾ, ಜೆನ್ನಿ ಗನ್ ಸೇರಿದಂತೆ ಇಂಗ್ಲೆಂಡ್ ತಂಡದ ಪ್ರಸ್ತುತ ಮತ್ತು ಹಿಂದಿನ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Continue Reading

ಕ್ರೀಡೆ

Team India: ನೂತನ ಕೋಚ್​ ಗಂಭೀರ್​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರರು

Team India: 2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್​ ಮಾರ್ಗದರ್ಶನದಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷ. ಲಂಕಾ ತಂಡಕ್ಕೆ ಮಾಜಿ ಆಟಗಾರ ಸನತ್​ ಜಯಸೂರ್ಯ ಮಾರ್ಗದರ್ಶನ ನೀಡಲಿದ್ದಾರೆ.

VISTARANEWS.COM


on

Team India
Koo

ಕೊಲಂಬೊ: ನೂತನ ಕೋಚ್​ ಗೌತಮ್ ಗಂಭೀರ್(Gautam Gambhir) ಅವರ ಉಸ್ತುವಾರಿಯಲ್ಲಿ ಭಾರತ ತಂಡ(Team India) ಇಂದು(ಮಂಗಳವಾರ) ಅಭ್ಯಾಸ ನಡೆಸಿತು. ​ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಸರಣಿಯು ಜುಲೈ 27 ರಿಂದ ಶುರುವಾಗಲಿದೆ. ಗಂಭೀರ್ ಅವರ ಕೋಚಿಂಗ್​ನಲ್ಲಿ ಭಾರತ ತಂಡ​ ಆಡುವ ಮೊದಲ ಸರಣಿ ಇದಾಗಲಿದೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿಯೇ ಇದೆ.

2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್​ ಮಾರ್ಗದರ್ಶನದಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷ. ಲಂಕಾ ತಂಡಕ್ಕೆ ಮಾಜಿ ಆಟಗಾರ ಸನತ್​ ಜಯಸೂರ್ಯ ಮಾರ್ಗದರ್ಶನ ನೀಡಲಿದ್ದಾರೆ.

ಮಂಗಳವಾರ ಭಾರತ ಟಿ20 ತಂಡದ ನೂತನ ನಾಯಕ ಸೂರ್ಯಕುಮಾರ್​ ಯಾದವ್​, ಮೊಹಮ್ಮದ್​ ಸಿರಾಜ್​, ರಿಷಭ್​ ಪಂತ್​, ರಿಂಕು ಸಿಂಗ್​, ಶುಭಮನ್​ ಗಿಲ್​, ರವಿ ಬಿಷ್ಟೋಯಿ ಸೇರಿದಂತೆ ಎಲ್ಲ ಆಟಗಾರರು ಗಂಭೀರ್​ ಮಾರ್ಗದರ್ಶನದಲ್ಲಿ ಮೊದಲು ಬ್ಯಾಟಿಂಗ್​ ಅಭ್ಯಾಸ ನಡೆಸಿ ಬಳಿಕ ಫೀಲ್ಡಿಂಗ್​, ಬೌಲಿಂಗ್​ ಅಭ್ಯಾಸ ನಡೆಸಿದರು. ಭಾರತೀಯ ಆಟಗಾರರ ಅಭ್ಯಾಸ ನಡೆಸುತ್ತಿರುವ ವಿಡಿಯೊಗಳನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ.

ಲಂಕಾಗೆ ತೆರಳುವ ಮುನ್ನ ಗಂಭೀರ್​ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ರಾಷ್ಟ್ರೀಯ ತಂಡಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುವುದನ್ನು ಮುಂದುವರಿಸಲು ಬೆಂಬಲಿಸಿದರು, ಇಬ್ಬರೂ ಮುಂದೆ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಪ್ರಮುಖ ಭಾಗವಾಗಲಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ ರೋಹಿತ್ ಮತ್ತು ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಗಾಗಿ ಆಡಲಿದ್ದು, 2025 ರ ಋತುವಿನ ನಂತರವೂ ಅವರು ಮುಂದುವರಿಯಲು ಬಾಗಿಲು ತೆರೆದೇ ಇದೆ ಎಂದು ಗಂಭೀರ್ ಹೇಳಿದ್ದರು.

ಇದನ್ನೂ ಓದಿ IND vs SL: ಭಾರತ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್​ 1ರದ ಬದಲಾಗಿ ಆಗಸ್ಟ್​ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್​ 4 ಮತ್ತು 7ರಂದೇ ನಡೆಯಲಿದೆ.

ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ , ಅರ್ಶದೀಪ್​ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್​ ಸಿರಾಜ್.

ಏಕದಿನ ತಂಡ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Continue Reading
Advertisement
INDIA Bloc To Protest
ದೇಶ5 hours ago

INDIA Bloc To Protest: ಬಜೆಟ್‌ ತಾರತಮ್ಯ ಖಂಡಿಸಿ ನಾಳೆ ಸಂಸತ್ತಿನಲ್ಲಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

Paris Olympics
ಕ್ರೀಡೆ5 hours ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೂ ವಕ್ಕರಿಸಿದ ಕೊರೊನಾ ಸೋಂಕು; ಮೊದಲ ಪ್ರಕರಣ ಪತ್ತೆ

Union Minister Pralhad Joshi statement about Union Budget
ಕರ್ನಾಟಕ6 hours ago

Pralhad Joshi: ನವಭಾರತ ನಿರ್ಮಾಣಕ್ಕೆ ಅತ್ಯುತ್ತಮ ಬಜೆಟ್: ಸಚಿವ ಪ್ರಲ್ಹಾದ್‌ ಜೋಶಿ ಶ್ಲಾಘನೆ

The Kaftan kannada Album Song Release
ಕರ್ನಾಟಕ6 hours ago

The Kaptan Song: ‘ದ ಕಪ್ತಾನ್’ ಆಲ್ಬಂ ಸಾಂಗ್ ಬಿಡುಗಡೆ

kimberly cheatle
ವಿದೇಶ6 hours ago

Kimberly Cheatle: ಯುಎಸ್ ಸೀಕ್ರೆಟ್ ಸರ್ವೀಸ್ ಡೈರೆಕ್ಟರ್ ಹುದ್ದೆಗೆ ಕಿಂಬರ್ಲಿ ಚೀಟಲ್ ದಿಢೀರ್​ ರಾಜೀನಾಮೆ

Womens Asia Cup
ಕ್ರೀಡೆ6 hours ago

Womens Asia Cup: ಶಫಾಲಿ ಬ್ಯಾಟಿಂಗ್​ ಆರ್ಭಟ; ಭಾರತಕ್ಕೆ ಹ್ಯಾಟ್ರಿಕ್​ ಜಯ

Farmer commits suicide in Kenchanala village
ಕರ್ನಾಟಕ7 hours ago

Farmer Self Harming: ಕೆಂಚನಾಲ ಗ್ರಾಮದಲ್ಲಿ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕರ್ನಾಟಕ7 hours ago

Assembly Session: ಕೆಳಮನೆಯಲ್ಲಿ ವಿಧಾನ ಮಂಡಲ ಅನರ್ಹತಾ‌ ನಿವಾರಣಾ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರ

Viral Video
Latest7 hours ago

Viral Video: 13ನೇ ಮಹಡಿಯಿಂದ ಬಿದ್ದರೂ ಈಕೆಯ ಒಂದೇ ಒಂದು ಮೂಳೆ ಮುರಿದಿಲ್ಲ! ವಿಡಿಯೊ ನೋಡಿ

Foreign Investment investment in the state South Korea Consul General along with Minister M.B. Patil discussion
ಕರ್ನಾಟಕ7 hours ago

Foreign Investment: ರಾಜ್ಯದಲ್ಲಿ ಹೂಡಿಕೆಗೆ ದ. ಕೊರಿಯಾ ಆಸಕ್ತಿ; ಸಚಿವ ಎಂ‌.ಬಿ. ಪಾಟೀಲ್‌ ಚರ್ಚೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ10 hours ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ11 hours ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ15 hours ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ5 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

ಟ್ರೆಂಡಿಂಗ್‌