Site icon Vistara News

Cristiano Ronaldo: ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ

Cristiano Ronaldo: Cristiano Ronaldo wrote a record in international football

Cristiano Ronaldo: Cristiano Ronaldo wrote a record in international football

ಲಂಡನ್​: ಪೋರ್ಚುಗಲ್‌ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್-2024ರ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಆಡುವ ಮೂಲಕ ರೊನಾಲ್ಡೊ ಗರಿಷ್ಠ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಗೆ ಪಾತ್ರರಾದರು.

ಗುರುವಾರ ರಾತ್ರಿ ನಡೆದ ಲಿಚೆನ್‌ಸ್ಟೀನ್ ವಿರುದ್ಧದ ಪಂದ್ಯದಲ್ಲಿ ಪೋರ್ಚಗಲ್​ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 38 ವರ್ಷದ ರೊನಾಲ್ಡೊ ಪುರುಷರ ವಿಭಾಗದಲ್ಲಿ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಗೆ ಪಾತ್ರರಾದರು. ಸದ್ಯ ರೊನಾಲ್ಡೊ 197 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕುವೈತ್​ನ ಬದರ್ ಅಲ್-ಮುತಾವಾ(Bader Al-Mutawa) ಹಸರಿನಲ್ಲಿತ್ತು. ಅವರು 196 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಈ ದಾಖಲೆಯ ಪಂದ್ಯದಲ್ಲಿ ರೊನಾಲ್ಡೊ ಗೋಲು ಬಾರಿಸುವ ಮೂಲಕ ಪಂದ್ಯವನ್ನು ಸ್ಮರಣೀಯವಾಗಿಸಿದರು. ಜತೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 120ನೇ ಗೋಲು ಪೂರ್ಣಗೊಳಿಸಿದರು.

ಇದನ್ನೂ ಓದಿ Cristiano Ronaldo: ಅಲ್​ ನಾಸರ್ ಪರ 4 ಗೋಲ್​ ಬಾರಿಸಿ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

ದಾಖಲೆ ಬರೆದ ಹ್ಯಾರಿ ಕೇನ್

ದಿನದ ಮತ್ತೊಂದು ಪಂದ್ಯದಲ್ಲಿ ಇಟೆಲಿ ವಿರುದ್ಧ ಇಂಗ್ಲೆಂಡ್ 2-1 ಗೋಲುಗಳ ಜಯ ಗಳಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಹ್ಯಾರಿ ಕೇನ್ ದಾಖಲೆಯೊಂದನ್ನು ಬರೆದಿದ್ದಾರೆ. ದೇಶದ ಪರ ಗರಿಷ್ಠ (54) ಅಂತಾರಾಷ್ಟ್ರೀಯ ಗೋಲು ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವೇನ್ ರೂನಿ (53) ಹೆಸರಿನಲ್ಲಿತ್ತು.

Exit mobile version