Cristiano Ronaldo: ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ - Vistara News

ಕ್ರೀಡೆ

Cristiano Ronaldo: ಅಂತಾರಾಷ್ಟ್ರೀಯ ಫುಟ್ಬಾಲ್​ನಲ್ಲಿ ದಾಖಲೆ ಬರೆದ ಕ್ರಿಸ್ಟಿಯಾನೋ ರೊನಾಲ್ಡೊ

ಪೋರ್ಚುಗಲ್‌ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ.

VISTARANEWS.COM


on

Cristiano Ronaldo: Cristiano Ronaldo wrote a record in international football
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್​: ಪೋರ್ಚುಗಲ್‌ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ(Cristiano Ronaldo) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್-2024ರ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಆಡುವ ಮೂಲಕ ರೊನಾಲ್ಡೊ ಗರಿಷ್ಠ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಗೆ ಪಾತ್ರರಾದರು.

ಗುರುವಾರ ರಾತ್ರಿ ನಡೆದ ಲಿಚೆನ್‌ಸ್ಟೀನ್ ವಿರುದ್ಧದ ಪಂದ್ಯದಲ್ಲಿ ಪೋರ್ಚಗಲ್​ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 38 ವರ್ಷದ ರೊನಾಲ್ಡೊ ಪುರುಷರ ವಿಭಾಗದಲ್ಲಿ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಗೆ ಪಾತ್ರರಾದರು. ಸದ್ಯ ರೊನಾಲ್ಡೊ 197 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕುವೈತ್​ನ ಬದರ್ ಅಲ್-ಮುತಾವಾ(Bader Al-Mutawa) ಹಸರಿನಲ್ಲಿತ್ತು. ಅವರು 196 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಈ ದಾಖಲೆಯ ಪಂದ್ಯದಲ್ಲಿ ರೊನಾಲ್ಡೊ ಗೋಲು ಬಾರಿಸುವ ಮೂಲಕ ಪಂದ್ಯವನ್ನು ಸ್ಮರಣೀಯವಾಗಿಸಿದರು. ಜತೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 120ನೇ ಗೋಲು ಪೂರ್ಣಗೊಳಿಸಿದರು.

ಇದನ್ನೂ ಓದಿ Cristiano Ronaldo: ಅಲ್​ ನಾಸರ್ ಪರ 4 ಗೋಲ್​ ಬಾರಿಸಿ ದಾಖಲೆ ಬರೆದ ಕ್ರಿಸ್ಟಿಯಾನೊ ರೊನಾಲ್ಡೊ

ದಾಖಲೆ ಬರೆದ ಹ್ಯಾರಿ ಕೇನ್

ದಿನದ ಮತ್ತೊಂದು ಪಂದ್ಯದಲ್ಲಿ ಇಟೆಲಿ ವಿರುದ್ಧ ಇಂಗ್ಲೆಂಡ್ 2-1 ಗೋಲುಗಳ ಜಯ ಗಳಿಸಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಹ್ಯಾರಿ ಕೇನ್ ದಾಖಲೆಯೊಂದನ್ನು ಬರೆದಿದ್ದಾರೆ. ದೇಶದ ಪರ ಗರಿಷ್ಠ (54) ಅಂತಾರಾಷ್ಟ್ರೀಯ ಗೋಲು ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವೇನ್ ರೂನಿ (53) ಹೆಸರಿನಲ್ಲಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

SRH vs RR: ಕ್ವಾಲಿಫೈಯರ್​ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಸಂಜು ಸ್ಯಾಮ್ಸನ್​

SRH vs RR: ಪಂದ್ಯದ ಸೋಲಿನ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್​, ನಮ್ಮ ತಂಡದ ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಹೈದರಾಬಾದ್​ ತಂಡದ ಎಡಗೈ ಸ್ಪಿನ್ನರ್​ಗಳು ಉತ್ತಮ ದಾಳಿ ಸಂಘಟಿಸಿದರು. ನಮ್ಮ ಬ್ಯಾಟಿಂಗ್​ ಲೈನಪ್​ನಲ್ಲಿ ಹೆಚ್ಚಿನ ಎಡಗೈ ಬ್ಯಾಟರ್​ಗಳು ಇಲ್ಲದಿರುವುದು ಕೂಡ ನಮ್ಮ ಸೋಲಿಗೆ ಕಾರಣವಾಯಿತು ಎಂದರು.

VISTARANEWS.COM


on

SRH vs RR
Koo

ಚೆನ್ನೈ: ಶುಕ್ರವಾರ ರಾತ್ರಿ ನಡೆದ ಐಪಿಎಲ್​(IPL 2024) ಕ್ವಾಲಿಫೈಯರ್​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​(SRH vs RR) ತಂಡ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದ 36 ರನ್​ಗಳಿಂದ ಸೋಲು ಕಾನುಣು ಮೂಲಕ ತನ್ನ ಅಭಿಯಾನವನ್ನು ಮುಗಿಸಿತು. ಈ ಸೋಲಿಗೆ ಕಾರಣ ಏನೆಂಬುದನ್ನು ತಂಡದ ನಾಯಕ ಸಂಜು ಸ್ಯಾಮನ್ಸ್(Sanju Samson)​ ವಿವರಿಸಿದ್ದಾರೆ.

ಪಂದ್ಯದ ಸೋಲಿನ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್​, ನಮ್ಮ ತಂಡದ ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಹೈದರಾಬಾದ್​ ತಂಡದ ಎಡಗೈ ಸ್ಪಿನ್ನರ್​ಗಳು ಉತ್ತಮ ದಾಳಿ ಸಂಘಟಿಸಿದರು. ನಮ್ಮ ಬ್ಯಾಟಿಂಗ್​ ಲೈನಪ್​ನಲ್ಲಿ ಹೆಚ್ಚಿನ ಎಡಗೈ ಬ್ಯಾಟರ್​ಗಳು ಇಲ್ಲದಿರುವುದು ಕೂಡ ನಮ್ಮ ಸೋಲಿಗೆ ಕಾರಣವಾಯಿತು ಎಂದರು.

ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್​ ಹೆಟ್ಮೆಯರ್​ ಹೊರತುಪಡಿಸಿ ಯಾರು ಎಡಗೈ ಬ್ಯಾಟ್ಸ್​ಮನ್​ಗಳಿರಲಿಲ್ಲ. ಇದುವೇ ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಸ್ಯಾಮ್ಸನ್​ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದರು. ಕ್ರೀಡೆ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಯಾವುದೇ ಒಂದು ತಂಡ ಸೋಲಲೇ ಬೇಕು. ಈ ಸೋಲಿನಿಂದ ಹಲವು ಪಾಠ ಕಲಿತಿದ್ದೇವೆ. ಮುಂದಿನ ಬಾರಿ ಮತ್ತಷ್ಟು ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡುವ ವಿಶ್ವಾಸವಿದೆ ಎಂದರು.

ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಸನ್​ರೈಸರ್ಸ್​ ಹೈದರಾಬಾದ್​ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 175 ರನ್​ ಬಾರಿಸಿತು. ಜವಾಬಿತ್ತ ರಾಜಸ್ಥಾನ್​ ಉತ್ತಮ ಆರಂಭ ಪಡೆದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್​ ನಷ್ಟಕ್ಕೆ 139 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಮೇ 26ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ಹೈದರಾಬಾದ್​ ತಂಡ ಕೆಕೆಆರ್​ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯ ಕೂಡ ಚಿದಂಬರಂ ಸ್ಟೇಡಿಯಂನಲ್ಲೇ ನಡೆಯಲಿದೆ.​

ಇದನ್ನೂ ಓದಿ IPL Final 2024: ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಚೇಸಿಂಗ್​ ವೇಳೆ ನಾಯಕ ಸಂಜು ಸ್ಯಾಮ್ಸನ್​(10), ಟಾಮ್ ಕೊಹ್ಲರ್-ಕ್ಯಾಡ್ಮೋರ್(10), ರಿಯಾನ್​ ಪರಾಗ್​(6), ಆರ್​ ಅಶ್ವಿನ್​(0), ಶಿಮ್ರಾನ್ ಹೆಟ್​ಮೇರ್​(4) ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಪರೇಡ್​ ನಡೆಸಿದರು. ಯಾರೂ ಕೂಡ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ಸು ಕಾಣಲಿಲ್ಲ. ಜೈಸ್ವಾಲ್​ 3 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿ 42 ರನ್​ ಗಳಿಸಿದರು.

ಅಂತಿಮ ಹಂತದಲ್ಲಿ ಧೃವ್​ ಜುರೇಲ್​ ಅರ್ಧಶತಕ ಬಾರಿಸುವ ಮೂಲಕ ಶಕ್ತಿ ಮೀರಿದ ಬ್ಯಾಟಿಂಗ್​ ಹೋರಾಟ ನಡೆಸಿದರೂ ಕೂಡ ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗದ ಕಾರಣ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಜೇಯರಾಗಿ ಉಳಿದ ಜುರೇಲ್ 35 ಎಸೆತಗಳಿಂದ 56 ರನ್​ ಬಾರಿಸಿದರು. ಇದರದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಹೈದರಾಬಾದ್​ ಪರ ಶಾಬಾಜ್​ ಅಹ್ಮದ್​ 4 ಓವರ್​ಗೆ ಕೇವಲ 23 ರನ್​ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್​ ಕಡೆವಿದರು. ಪಾರ್ಟ್​ ಟೈಮ್​ ಬೌಲರ್​ ಅಭಿಷೇಕ್​ ಶರ್ಮ 24 ರನ್​ಗೆ 2 ವಿಕೆಟ್​ ಕಿತ್ತರು

Continue Reading

ಕ್ರೀಡೆ

Hardik Pandya: ಪತ್ನಿಗೆ ಶೇ.70ರಷ್ಟು ಆಸ್ತಿ ವರ್ಗಾಯಿಸಲು ಮುಂದಾದ ಹಾರ್ದಿಕ್​ ಪಾಂಡ್ಯ; ಶೀಘ್ರದಲ್ಲೇ ವಿಚ್ಛೇದನ!

Hardik Pandya: ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ಈಗಾಗಲೇ ನತಾಶಾಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಸದ್ಯ ನತಾಶಾ ಲಂಡನ್​ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

VISTARANEWS.COM


on

Hardik Pandya
Koo

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಯ ಮಧ್ಯೆ ಇದೀಗ ಮತ್ತೊಂದು ಬೆಳವಣಿಗೆ ನಡೆದಿದೆ. ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ಈಗಾಗಲೇ ನತಾಶಾಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಸದ್ಯ ನತಾಶಾ ಲಂಡನ್​ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

ಹಾರ್ದಿಕ್​ ಪಾಂಡ್ಯ ಕಳೆದ 2 ಆವೃತ್ತಿಯಲ್ಲಿ ಗುಜರಾತ್​ ಟೈಟಾನ್ಸ್​ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಪ್ರತಿ ಪಂದ್ಯದಲ್ಲಿಯೂ ನತಾಶಾ ಸ್ಟೇಡಿಯಂಗೆ ಬಂದು ಗಂಡನಿಗೆ ಬೆಂಬಲ ಸೂಚಿಸಿದ್ದರು. ಆದರೆ ಈ ಬಾರಿ ಮುಂಬೈ ತಂಡವನ್ನು ಮುನ್ನಡೆಸಿ ವೇಳೆ ಒಮ್ಮೆಯೂ ಕೂಡ ನತಾಶಾ ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿರಲಿಲ್ಲ. ಅಲ್ಲದೆ ನತಾಶಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರನ್ನು ಕೂಡ ಬದಲಿಸಿದ್ದಾರೆ ಹೀಗಾಗಿ ಈ ಜೋಡಿ ಬೇರ್ಪಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೆ ಸ್ಪಷ್ಟನೆ ಇಲ್ಲ.


ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

ಇದನ್ನೂ ಓದಿ IPL Final 2024: ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಹುಟ್ಟುಹಬ್ಬಕ್ಕೂ ಶುಭ ಕೋರದ ಪಾಂಡ್ಯ


ಮಾರ್ಚ್ 4 ರಂದು ಪತ್ನಿ ನತಾಶಾ ಅವರ ಹುಟ್ಟುಹಬ್ಬವಿತ್ತು. ಆದರೆ, ಪತ್ನಿಯ ಹುಟ್ಟುಹಬ್ಬಕ್ಕೆ ಹಾರ್ದಿಕ್ ಯಾವುದೇ ಶುಭ ಹಾರೈಕೆಯ ಪೋಸ್ಟ್ ಮಾಡಿಲ್ಲ. ಕೆಲ ದಿನಗಳ ಹಿಂದೆ ನತಾಶಾ ಅವರು ಸಿಂಗಲ್​ ಫೋಟೋವನ್ನು ಮತ್ತು ಮಗನ ಜತೆಗಿನ ಫೋಟೊವನ್ನು ಮಾತ್ರ ಪೋಸ್ಟ್​ ಮಾಡಿದ್ದರು. ಇದೆನೆಲ್ಲ ನೋಡುವಾಗ ಈ ಜೋಡಿ ಸದ್ಯದಲ್ಲೇ ದೂರವಾಗು ಸೂಚನೆಯೊಂದು ಲಭಿಸಿದೆ. ಹಾರ್ದಿಕ್ ಜತೆಗಿರುವ ಇತ್ತೀಚಿನ ಎಲ್ಲ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ. 

ರೋಹಿತ್ ಶರ್ಮಾರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ತಾವೇ ತಂಡ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಜತೆಗೆ ಪಾಂಡ್ಯ ಕೆಟ್ಟ ನಾಯಕತ್ವದಿಂದ ಮುಂಬೈ ಹಿಂದೆದು ಕಾಣದ ಘೋರ ವೈಫಲ್ಯ ಕಂಡಿತ್ತು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಈ ಬಾರಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಯಿತು.

Continue Reading

ಕ್ರಿಕೆಟ್

IPL Final 2024: ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

IPL Final 2024: ಉಭಯ ತಂಡಗಳ ಐಪಿಎಲ್​ ಇತಿಹಾಸ ನೋಡುವಾಗ ಕೆಕೆಆರ್​ ಬಲಿಷ್ಠವಾಗಿದೆ. ಇದುವರೆಗೆ 27 ಪಂದ್ಯಗಳನ್ನು ಆಡಿ 18 ಪಂದ್ಯಗಳಲ್ಲಿ ಕೆಕೆಆರ್​ ಗೆಲುವು ಸಾಧಿಸಿದೆ. ಹೈದರಾಬಾದ್​ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಲೀಗ್​ ಮತ್ತು ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಹೈದರಾಬಾದ್​ ಸೋಲು ಕಂಡಿತ್ತು.

VISTARANEWS.COM


on

IPL Final 2024
Koo

ಚೆನ್ನೈ: ಕಳೆದ ವರ್ಷದ ಐಪಿಎಲ್​ ಪಂದ್ಯ ಮಳೆಯಿಂದಾಗಿ ಮೀಸಲುದಿನಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ ನಾಳೆ(ಭಾನುವಾರ, ಮೇ 26) ನಡೆಯುವ 17ನೇ ಆವೃತ್ತಿಯ ಐಪಿಎಲ್​ ಫೈನಲ್(IPL Final 2024)​ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಫೈನಲ್​ನಲ್ಲಿ ಕೆಕೆಆರ್​ ಮತ್ತು ಹೈದರಾಬಾದ್​(SRH vs KKR IPL Final) ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯದ ಮಳೆ ನಿಯಮ ಹೇಗಿದೆ(ipl final 2024 rain rules) ಎಂಬುದರ ಮಾಹಿತಿ ಇಂತಿದೆ.

ಲೀಗ್​ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಆದರೆ ನಾಕೌಟ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು(Reserve day) ದಿನ ಇದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್​ವರ್ತ್​ ನಿಯದ ಅನುಸಾರ ಓವರ್​ ಕಡಿತಗೊಳಿಸಿ ಪಂದ್ಯ ನಡೆಸುವ ನಿರ್ಣಾಯಕ್ಕೆ ಬರಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ.

ಮೀಸಲು ದಿನಕ್ಕೂ ಮಳೆ ಬಂದರೆ?

ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್​ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್​ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಹೀಗಾದರೆ ಅಗ್ರಸ್ಥಾನಿ ಕೆಕೆಆರ್​ ಈ ಬಾರಿಯ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ. ಏಕೆಂದರೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.​ ಅಚ್ಚರಿ ಎಂದರೆ ಲೀಗ್​ ಹಂತದಲ್ಲಿ ಕೆಕೆಆರ್​ ಮತ್ತು ಹೈದರಾಬಾದ್​ ತಂಡಗಳ ಒಂದೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು.

ಇದನ್ನೂ ಓದಿ IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

ಬಲಾಬಲ ​


ಉಭಯ ತಂಡಗಳ ಐಪಿಎಲ್​ ಇತಿಹಾಸ ನೋಡುವಾಗ ಕೆಕೆಆರ್​ ಬಲಿಷ್ಠವಾಗಿದೆ. ಇದುವರೆಗೆ 27 ಪಂದ್ಯಗಳನ್ನು ಆಡಿ 18 ಪಂದ್ಯಗಳಲ್ಲಿ ಕೆಕೆಆರ್​ ಗೆಲುವು ಸಾಧಿಸಿದೆ. ಹೈದರಾಬಾದ್​ ಕೇವಲ 9 ಪಂದ್ಯ ಮಾತ್ರ ಗೆದ್ದಿದೆ. ಈ ಆವೃತ್ತಿಯಲ್ಲಿಯೂ ಆಡಿದ ಲೀಗ್​ ಮತ್ತು ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಹೈದರಾಬಾದ್​ ಸೋಲು ಕಂಡಿತ್ತು. ಈ ಲೆಕ್ಕಾಚಾರವನ್ನು ನೋಡುವಾಗ ನಾಳಿನ ಪಂದ್ಯದಲ್ಲಿಯೂ ಕೆಕೆಆರ್​ ಗೆಲುವಿನ ಫೇವರಿಟ್ ತಂಡವಾಗಿದೆ.

ಸಂಭಾವ್ಯ ತಂಡಗಳು


ಹೈದರಾಬಾದ್​:
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿತೀಶ್ ರೆಡ್ಡಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನದ್ಕತ್, ಟಿ ನಟರಾಜನ್.

ಕೆಕೆಆರ್​: ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್​), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

Continue Reading

ಕ್ರೀಡೆ

Malaysia Masters: ಇಂದು ಮಲೇಷ್ಯಾ ಮಾಸ್ಟರ್ಸ್‌ ಸೆಮಿಫೈನಲ್​; ಸಿಂಧು ಕಣಕ್ಕೆ

Malaysia Masters: ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಶುಕ್ರವಾರ ನಡೆದಿದ್ದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.6, ಚೀನಾದ ಹ್ಯಾನ್‌ ಯು ವಿರುದ್ಧ ತೀವ್ರ ಹೋರಾಟ ನಡೆಸಿ 21-13, 14-21, 21-12ರಲ್ಲಿ ಗೆಲುವು ಸಾಧಿಸಿದ್ದರು.

VISTARANEWS.COM


on

Malaysia Masters
Koo

ಕೌಲಾಲಂಪುರ: ಇಂದು ನಡೆಯುವ ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌(Malaysia Masters) ಟೂರ್ನಿಯಲ್ಲಿ ಸೆಮಿಫೈನಲ್‌(Malaysia Masters Semi-Final) ಪಂದ್ಯದಲ್ಲಿ ಅವಳಿ ಒಲಿಂಪಿಕ್ಸ್‌ ಪದಕ ವಿಜೇತ, ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು(PV Sindhu) ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಎದುರಾಳಿ ಥಾಯ್ಲೆಂಡ್‌ನ ಬುಸಾನನ್‌(Busanan Ongbamrungphan).

ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಶುಕ್ರವಾರ ನಡೆದಿದ್ದ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.6, ಚೀನಾದ ಹ್ಯಾನ್‌ ಯು ವಿರುದ್ಧ ತೀವ್ರ ಹೋರಾಟ ನಡೆಸಿ 21-13, 14-21, 21-12ರಲ್ಲಿ ಗೆಲುವು ಸಾಧಿಸಿದ್ದರು. ಕಳೆದ 2 ವರ್ಷಗಳಿಂದಲೂ ಪ್ರಶಸ್ತಿ ಬರ ಎದುರಿಸುತ್ತಿರುವ ಸಿಂಧು ಸದ್ಯ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಪದಕ ಬರವಸೆಯೊಂದನ್ನು ಮೂಡಿಸಿದ್ದಾರೆ.

ಜುಲೈ 26ರಿಂದ ಆರಂಭಗೊಳ್ಳುವ ಒಲಿಂಪಿಕ್ಸ್ ಕ್ರೀಡಾಕುಟಕ್ಕೂ ಮುನ್ನ ಸಿಂಧು ಮತ್ತೆ ಕಮ್​ ಬಾಕ್​ ಮಾಡಿದ್ದು ಸಂತಸದ ವಿಚಾರ. 2022ರ ಸಿಂಗಾಪುರ್‌ ಓಪನ್‌ ಪಂದ್ಯಾವಳಿ ಬಳಿಕ ಸಿಂಧು ಯಾವುದೇ ಪ್ರಶಸ್ತಿ ಜಯಿಸಿಲ್ಲ.  ಪ್ಯಾರಿಸ್‌ ಒಲಿಂಪಿಕ್ಸ್‌ ಸವಾಲಿಗೆ ಸಜ್ಜಾಗುವ ಕಾರಣದಿಂದ ಪ್ರತಿಷ್ಠಿತ ಉಬರ್‌ ಕಪ್‌(Uber Cup) ಮತ್ತು ಥಾಯ್ಲೆಂಡ್‌ ಓಪನ್‌(Thailand Open 2024) ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದ ಹಿಂದೆ ಸರಿದ್ದಿದ್ದರು. ಇದೀಗ ಮಲೇಷ್ಯಾದಲ್ಲಿ ಪ್ರಶಸ್ತಿ ಬರಗಾಲ ನೀಗಿಸಿಕೊಳ್ಳುವ ಉತ್ತಮ ಅವಕಾಶವಿದೆ.

ಇದನ್ನೂ ಓದಿ IPL 2024: ಐಪಿಎಲ್​ ಟ್ರೋಫಿಯಲ್ಲಿರುವ ಸಂಸ್ಕೃತ ಶ್ಲೋಕದ ಮೂಲ ಸಾರವೇನು?

ಕಳೆದ ವರ್ಷ ಮೊಣಕಾಲಿನ ಗಾಯಕ್ಕಾಗಿ ವಿಶ್ರಾಂತಿ ಪಡೆದು, ಚೇತರಿಸಿಕೊಂಡ ಬಳಿಕ ಅವರಿಗೆ ಫಾರ್ಮ್‌ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಸದ್ಯ ಗಾಯದಿಂದ ಚೇತರಿಕೆ ಕಂಡು ಉತ್ತಮವಾಗಿ ಪ್ರದರ್ಶನ ತೋರುತ್ತಿದ್ದಾರೆ. ಶುಕ್ರವಾರ ನಡೆದಿದ್ದ ಮತ್ತೊಂದು ಮಹಿಳಾ ಸಿಂಗಲ್ಸ್​ ಸ್ಪರ್ಧೆಯಲ್ಲಿ ಭಾರತದ ಮತ್ತೋರ್ವ ಆಟಗಾರ್ತಿ ಅಶ್ಮಿತಾ ಚಾಲಿಹಾ ಸೋಲು ಕಂಡರು. ಚೀನದ ಝಾಂಗ್‌ ಯಿ ಮಾನ್‌ ವಿರುದ್ಧ ಅಶ್ಮಿತಾ 10-21, 15-21 ಅಂತರದ ಸೋಲುಂಡರು.

ಪಿ.ವಿ ಸಿಂಧು-ನೀರಜ್ ಚೋಪ್ರಾ ಮಧ್ಯೆ ಪ್ರೇಮಾಂಕುರ? 


ನೀರಜ್ ಚೋಪ್ರಾ(Neeraj Chopra) ಮತ್ತು ಪಿ.ವಿ.ಸಿಂಧು(PV Sindhu) ಮಧ್ಯೆ ಪ್ರೇಮಾಂಕುರವಾಗಿದ್ದು, ಶೀಘ್ರದಲ್ಲೇ ವಿವಾಹವಾಗುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಚರ್ಚೆಗೆ ಪ್ರಮುಖ ಕಾರಣ, ಇವರಿಬ್ಬರು(Neeraj And Sindhu) ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಡಿರುವ ಒಂದು ಪೋಸ್ಟ್​. ಜತೆಗೆ ಒಬ್ಬರಿಗೊಬ್ಬರು ಟ್ಯಾಗ್​ ಕೂಡ ಮಾಡಿರುವುದಾಗಿತ್ತು.

ಹೌದು, ನೀರಜ್​ ಚೋಪ್ರಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬ್ಯಾಡ್ಮಿಂಟನ್​ ಬ್ಯಾಟ್​ ಮತ್ತು ಕಾಕ್​ನ ಫೋಟೊ ಹಂಚಿಕೊಂಡು ‘ಇದರರ್ಥವೇನು ಗೆಸ್ ಮಾಡ್ತೀರಾ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಈ ಪೋಸ್ಟನ್ನು ಸಿಂಧುಗೆ ಟ್ಯಾಗ್​ ಮಾಡಿದ್ದರು. ಪಿ.ವಿ ಸಿಂಧು ಕೂಡ ಜಾವೆಲಿನ್​ನ ಫೋಟೊ ಹಂಚಿಕೊಂಡು ‘ಅರೇ ಇದು ಹೇಗೆ ನನ್ನ ಬಳಿ ಬಂತು? ಗೆಸ್ ಮಾಡ್ತೀರಾ’ ಎಂದು ಬರೆದುಕೊಂಡಿದ್ದರು. ಅಲ್ಲದೆ ಸಿಂಧು ಕೂಡ ತಮ್ಮ ಪೋಸ್ಟ್​ ಅನ್ನು ನೀರಜ್​ಗೆ ಟ್ಯಾಗ್​ ಮಾಡಿದ್ದರು. ಅಚ್ಚರಿ ಎಂದರೆ ಇಬ್ಬರು ಕೂಡ ಒಂದೇ ಸಮಯಕ್ಕೆ ಈ ಪೋಸ್ಟ್​ ಮಾಡಿದ್ದಾರೆ. ಹೀಗಾಗಿ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಮುಂದಿನ ದಿನದಲ್ಲಿ ಮದುವೆಯಾದರೂ ಅಚ್ಚರಿಯಿಲ್ಲ ಎಂದು ಕೆಲ ನೆಟ್ಟಿಗರು ಇವರ ಪೋಸ್ಟ್​ಗೆ ಕಮೆಂಟ್​ ಮಾಡಿದ್ದರು.

Continue Reading
Advertisement
lok sabha election 2024 voting dhoni
ಪ್ರಮುಖ ಸುದ್ದಿ17 mins ago

Lok Sabha Election 2024: ಮಧ್ಯಾಹ್ನ 1 ಗಂಟೆವರೆಗೆ 39.13% ಮತದಾನ, ಪ.ಬಂಗಾಳ ದಾಖಲೆ, ರಾಂಚಿಯಲ್ಲಿ ಧೋನಿ ವೋಟ್‌

SRH vs RR
ಕ್ರೀಡೆ29 mins ago

SRH vs RR: ಕ್ವಾಲಿಫೈಯರ್​ ಪಂದ್ಯದ ಸೋಲಿಗೆ ಕಾರಣ ತಿಳಿಸಿದ ಸಂಜು ಸ್ಯಾಮ್ಸನ್​

Exam date announced for recruitment of 4000 posts including PSI exam
ಉದ್ಯೋಗ44 mins ago

PSI Exam: ಪಿಎಸ್‌ಐ ಸೇರಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಅನೌನ್ಸ್‌; ಯಾವ ದಿನಕ್ಕೆ ಯಾವ ಪರೀಕ್ಷೆ?

Udupi Gang War
ಪ್ರಮುಖ ಸುದ್ದಿ44 mins ago

Udupi Gang War: ಉಡುಪಿಯನ್ನು ಬೆಚ್ಚಿ ಬೀಳಿಸಿದ ಗ್ಯಾಂಗ್ ವಾರ್; ಮಾರಾಮಾರಿಯ ವಿಡಿಯೊ ವೈರಲ್‌, ಇಬ್ಬರ ಬಂಧನ

google maps kerala river
ವೈರಲ್ ನ್ಯೂಸ್51 mins ago

Google maps: ರಸ್ತೆಯೆಂದು ಕೊಂಡೊಯ್ದು ನದಿಗಿಳಿಸಿದ ಗೂಗಲ್‌ ಮ್ಯಾಪ್!‌ ನೀರು ಕುಡಿದು ಪಾರಾದ ಪ್ರಯಾಣಿಕರು

Samarjit Lankesh Love you Samantha Song Teaser
ಸ್ಯಾಂಡಲ್ ವುಡ್52 mins ago

Samarjit Lankesh: `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ ಮಾಡಿದ ಮಹಿಳಾ ಕ್ರಿಕೆಟ್‌ ತಾರೆ!

Fake Intelligence Bureau officer arrested
ಬಾಗಲಕೋಟೆ57 mins ago

Fake Intelligence Officer : ಜಾಸ್ತಿ `ಇಂಟೆಲಿಜೆಂಟ್‌’ ಆಗ್ಬೇಡಿ! ಊರವರ ಮುಂದೆ ಪೊಲೀಸ್‌ ಎಂದು ಬಿಲ್ಡಪ್‌ ಕೊಟ್ಟವ ಈಗ ಲಾಕಪ್‌ ಒಳಗೆ!

Janhvi Kapoor views on Gandhi Ambedkar casteism
ಬಾಲಿವುಡ್1 hour ago

Janhvi Kapoor: ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಶ್ರೀದೇವಿ ಮಗಳಿಗೆ ಆಸಕ್ತಿಯಂತೆ!

Karan Johar announces new film on birthday
ಬಾಲಿವುಡ್1 hour ago

Karan Johar: ಬರ್ತ್‌ಡೇ ದಿನ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕರಣ್ ಜೋಹರ್!

foolish to link Rakesh death to Prajwal case says CM Siddaramaiah
ರಾಜಕೀಯ1 hour ago

CM Siddaramaiah: ಪ್ರಜ್ವಲ್‌ ಕೇಸ್‌ಗೆ ರಾಕೇಶ್‌ ಸಾವನ್ನು ಲಿಂಕ್‌ ಮಾಡೋದು ಮೂರ್ಖತನ: ಎಚ್‌ಡಿಕೆಗೆ ಸಿದ್ದರಾಮಯ್ಯ ತರಾಟೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌