ಅಹ್ಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ 16ನೇ ಆವೃತ್ತಿಯ ಐಪಿಎಲ್ನ (IPL 2023) ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆದ್ದುಕೊಂಡಿದೆ. ಈ ಮೂಲಕ ಧೋನಿ ನೇತೃತ್ವದ ಸಿಎಸ್ಕೆ ತಂಡ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಫೈನಲ್ ಪಂದ್ಯವನ್ನು ಐದು ವಿಕೆಟ್ಗಳಿಂದ ಗೆದ್ದ ಚೆನ್ನೈ ತಂಡದ ವಿಪರೀತ ಸಂಭ್ರಮದಲ್ಲಿದೆ. ಸಿಎಸ್ಕೆ ಅಭಿಮಾನಿಗಳು ದೇಶಾದ್ಯಂತ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇವೆಲ್ಲದೆ ನಡುವೆ ಸಿಎಸ್ಕೆ ಫ್ರಾಂಚೈಸಿ ಐಪಿಎಲ್ ಟ್ರೋಫಿಗೆ ತಮಿಳುನಾಡಿನಲ್ಲಿರುವ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದೆ.
ಚೆನ್ನೈನ ತ್ಯಾಗರಾಯನಗರದಲ್ಲಿ (ಟಿ ನಗರ) ತಿರುಪತಿ ತಿರುಮಲ ದೇವಸ್ಥಾನಮ್ ಅವರ ವೆಂಕಟೇಶ್ವರ ದೇಗುಲವಿದೆ. ಚೆನ್ನೈಗೆ ಬಂದಿಳಿದ ಫ್ರಾಂಚೈಸಿ ನೇರವಾಗಿ ದೇಗುಲಕ್ಕೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿ ಪೂಜೆ ನಡೆಸಿದೆ. ಪೂಜೆಯ ಚಿತ್ರವು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
5 ಬಾರಿ ಐಪಿಎಲ್ ಚಾಂಪಿಯನ್
ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಗುಜರಾತ್ ಟೈಟನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರರಾದ ಶುಬ್ಮನ್ ಗಿಲ್ 20 ಎಸೆತಗಳಲ್ಲಿ 39 ರನ್ ಸಹಾ 39 ರನ್ ಗಳಿಸಿದೆ, ವೃದ್ಧಿಮಾನ್ ಸಾಹ 34 ಎಸೆತಗಳಲ್ಲಿ 54 ರನ್ ಗಳಿಸಿದರು. ಸಾಯಿ ಸುದರ್ಶನ್ 47 ಎಸೆತಗಳಲ್ಲಿ 96 ರನ್ ಗಳಿಸಿದರು. ಇದರೊಂದಿಗೆ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 214 ರನ್ ಗಳಿಸಿತು.
ಇದನ್ನೂ ಓದಿ : MS Dhoni : ಮೊದಲ ಪಂದ್ಯದ ವೇಳೆಯೇ ಕಣ್ಣೀರು ಹಾಕಿದ್ದ ಮಹೇಂದ್ರ ಸಿಂಗ್ ಧೋನಿ!
ಗುರಿಯನ್ನು ಬೆನ್ನಟ್ಟಲು ಚೆನ್ನೈ ತಂಡ ಕಣಕ್ಕೆ ಇಳಿದಾಗ ಮಳೆ ಅಡ್ಡಿಪಡಿಸಿತು. ಕೊನೆಗೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 15 ಓವರ್ಗಳಲ್ಲಿ 171 ರನ್ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು . ಡೆವೊನ್ ಕಾನ್ವೇ ಮತ್ತು ಋತುರಾಜ್ ಗಾಯಕ್ವಾಡ್ 25 ಎಸೆತಗಳಲ್ಲಿ 47 ರನ್ ಗಳಿಸಿದರೆ, ಗಾಯಕ್ವಾಡ್ 16 ಎಸೆತಗಳಲ್ಲಿ 26 ರನ್ ಗಳಿಸಿದರು.
ಅಜಿಂಕ್ಯ ರಹಾನೆ (13 ಎಸೆತಗಳಲ್ಲಿ 27 ರನ್) ಮತ್ತು ಅಂಬಾಟಿ ರಾಯುಡು (8 ಎಸೆತಗಳಲ್ಲಿ 19 ರನ್) ತಮ್ಮ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಶಿವಂ ದುಬೆ (21 ಎಸೆತಗಳಲ್ಲಿ 32 ರನ್) ಮತ್ತು ರವೀಂದ್ರ ಜಡೇಜಾ (6 ಎಸೆತಗಳಲ್ಲಿ ಅಜೇಯ 15 ರನ್) ತಂಡಕ್ಕೆ ಗೆಲುವು ತಂದುಕೊಟ್ಟರು.