Site icon Vistara News

IPL 2023 : ಪಂಜಾಬ್​ ವಿರುದ್ಧ ಟಾಸ್​ ಗೆದ್ದ ಸಿಎಸ್​ಕೆ ತಂಡದಿಂದ ಬ್ಯಾಟಿಂಗ್​ ಆಯ್ಕೆ

CSK won the toss and elected to bat against Punjab

#image_title

ಚೆನ್ನೈ: ಐಪಿಎಲ್​ 16ನೇ ಆವೃತ್ತಿಯ 41ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧ ಟಾಸ್ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪ್ರವಾಸಿ ಪಂಜಾಬ್​ ತಂಡ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಣ ಮಾಡಿ ಗೆಲ್ಲುವ ಪ್ರಯತ್ನ ಮಾಡಬೇಕಾಗಿದೆ.

ಇಲ್ಲಿನ ಚಿದಂಬರಂ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯುತ್ತಿದ್ದು ಪಿಚ್​ ಹೆಚ್ಚು ಒಣಗಿರುವ ಕಾರಣ ದೊಡ್ಡ ಮೊತ್ತದ ಸ್ಕೋರ್​ ದಾಖಲಾಗುವ ಸಾಧ್ಯತೆಗಳಿವೆ.

ಟಾಸ್​ ಗೆದ್ದ ಬಳಿಕ ಮಾತನಾಡಿದ ಚೆನ್ನೈ ನಾಯಕ ಮಹೇಂದ್ರ ಸಿಂಗ್​ ಧೋನಿ, ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ. ಪಿಚ್​ ಬ್ಯಾಟಿಂಗ್​ಗೆ ಯೋಗ್ಯವಾಗಿರುವಂತೆ ಕಾಣುತ್ತದೆ. ಅದೇ ರೀತಿ ಹಗಲಿನಲ್ಲಿ ಆಡುವಾಗ ಬಿಸಿಲಿನ ಬಗ್ಗೆ ಹಚ್ಚು ಯೋಚನೆ ಮಾಡಬೇಕಾಗುತ್ತದೆ. ಹೀಗಾಗಿ ವೇಗದ ಬೌಲರ್​ಗಳಿಗೆ ಹೆಚ್ಚು ವಿಶ್ರಾಂತಿ ಬೇಕಾಗಬಹುದು. ಐಪಿಎಲ್​ ಸುದೀರ್ಘವಾಗಿ ನಡೆಯುವ ಟೂರ್ನಿ. ಇಲ್ಲಿ ಪರಿಸ್ಥಿತಿಗೆ ಪೂರಕವಾಗಿ ಹೊಂದಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್​ ಧವನ್​ ಮಾತನಾಡಿ, ನಾವು ಕೂಡ ಮೊದಲ ಬ್ಯಾಟ್​ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಬಿಸಿಲು ಹೆಚ್ಚಿರುವ ಕಾರಣ ಪಿಚ್​ ಹೆಚ್ಚು ಒಣಗಿದೆ. ಈ ಪಂದ್ಯದಲ್ಲಿ ಇಬ್ಬನಿ ಪರಿಣಾಮವನ್ನು ಅನುಭವಿಸಲು ಸಾಧ್ಯವಿಲ್ಲ. ನಾವು ಹಲವು ಪಂದ್ಯಗಳಿಂದ ಕಲಿಯುತ್ತಲೇ ಬಂದಿದ್ದೇವೆ. ಹೋರಾಟದ ಮನೋಭಾವವನ್ನು ಮುಂದುವರಿಸಿದ್ದೇವೆ. ಹಿಂದಿನ ಪಂದ್ಯದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕಾದಿದ್ದೆವು. ಆದರೆ ಅದು ಪೂರಕವಾಗಿ ಕೆಲಸ ಮಾಡಲಿಲ್ಲ. ಈ ಬಾರಿ ಸಕಾರಾತ್ಮಕ ಮನಸ್ಸಿನೊಂದಿಗೆ ಸಾಗುತ್ತೇವೆ. ಹರ್​ಪ್ರೀತ್​ ಬ್ರಾರ್ ಅವರು ತಂಡಕ್ಕೆ ಸೇರ್ಪಡಗೊಂಡಿದ್ದಾರೆ ಎಂದು ಹೇಳಿದರು.

ಪಂಜಾಬ್ ಕಿಂಗ್ಸ್​ ತಂಡದ ಆಟಗಾರ ಶಾರುಖ್​ ಖಾನ್ ಮಾತನಾಡಿ, ನಾನು ಈ ಪಿಚ್​ನಲ್ಲಿ ಆಡಿ ಬಂದವನು. ಹಾಗಾಗಿ ಚೆನ್ನೈಗೆ ಬಂದಾಗ ಪ್ರತಿ ಬಾರಿಯೂ ನನಗೆ ವಿಶೇಷ ಎನಿಸುತ್ತದೆ. ನಾನು ಪ್ರತಿ ಬಾರಿಯೂ ತಂಡದಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡುತ್ತಿದ್ದೇನೆ. ಜಿತೇಶ್ ಮತ್ತು ನಾನು ಜತೆಯಾಗಿ ನೆಟ್​ನಲ್ಲಿ ಅಭ್ಯಾಸ ಮಾಡುತ್ತೇವೆ. ಜಿತೇಶ್ ಕೂಡ ಉತ್ತಮ ಆಟಗಾರ ಎಂದು ಅವರು ಹೇಳಿದ್ದಾರೆ.

ತಂಡಗಳು ಇಂತಿವೆ

ಚೆನ್ನೈ ಸೂಪರ್​ ಕಿಂಗ್ಸ್​ : ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಲಿಯಾಮ್ ಲಿವಿಂಗ್​ಸ್ಟನ್​, ಸಿಕಂದರ್ ರಾಜಾ, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್​ಪ್ರೀತ್​ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್​ದೀಪ್​ ಸಿಂಗ್​.

ಚೆನ್ನೈ ಸೂಪರ್ ಕಿಂಗ್ಸ್ : ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಅಂಬಾಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ಮಥೀಶಾ ಪತಿರಾನಾ, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಾನಾ.

Exit mobile version