Site icon Vistara News

CWG-2022 | ಭಾರತಕ್ಕೆ 10ನೇ ಚಿನ್ನದ ಪದಕ ಗೆದ್ದುಕೊಟ್ಟ ಕುಸ್ತಿಪಟು ರವಿ ದಹಿಯಾ

ಬರ್ಮಿಂಗ್ಹಮ್:‌ ಕಾಮನ್ವೆಲ್ತ್‌ ಗೇಮ್ಸ್‌ ಕೂಟದಲ್ಲಿ (CWG-2022) ಭಾರತದ ಕುಸ್ತಿಪಟು ರವಿ ದಹಿಯಾ ಬಂಗಾರದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತವು ಒಟ್ಟು ಹತ್ತು ಚಿನ್ನದ ಪದಕವನ್ನು ತನ್ನದಾಗಸಿಕೊಂಡಿದೆ.

ಶನಿವಾರ (ಅಗಸ್ಟ್‌ 6) ನಡೆದ 57 ಕೆ.ಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಭಾರತದ ರವಿ ಫೈನಲ್‌ ತಲುಪಿದ್ದರು. ನೈಜಿರಿಯಾದ ಎಬಿಕೆವೆನಿಮೊ ವೆಲ್ಸನ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ರವಿ ರೋಚಕ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚೊಚ್ಚಲ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ.

ಮೂರು ಬಾರಿ ಏಷ್ಯನ್‌ ಚಾಂಪಿಯನ್‌ಶಿಪ್‌ ಗೆದ್ದಿರುವ ಹಾಗೂ ಕಳೆದ ವರ್ಷ ಟೊಕ್ಯೊ ಒಲಿಂಪಿಕ್ಸ್‌ನಲ್ಲಿ ಬೆಲ್ಳಿ ಗೆದ್ದ ಹಿರಿಮೆ ರವಿ ಅವರದ್ದು.

Exit mobile version