Site icon Vistara News

IPL 2023 : ಪಾರ್ಟಿಯಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿದ ಡೆಲ್ಲಿ ಆಟಗಾರ; ರೂಲ್ಸ್​​ ಬಿಗಿ

Delhi Capitals player misbehaves with woman at party

ನವ ದಹೆಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನೊಬ್ಬ ಫ್ರಾಂಚೈಸಿ ಪಾರ್ಟಿಯೊಂದರಲ್ಲಿ ಯವತಿ ಜತೆ ಅನುಚಿತ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿ ತನ್ನ ಡ್ರೆಸಿಂಗ್​ ರೂಮ್​ನಲ್ಲಿ ಆಟಗಾರರ ಮಾರ್ಗಸೂಚಿಯನ್ನು ಬಿಗಿಗೊಳಿಸಿದೆ ಎಂದು ಇಂಡಿಯನ್ಸ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡ ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಎರಡು ಹಣಾಹಣಿಗಳಲ್ಲಿ ಮಾತ್ರ ಗೆದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದೀಗ ತಂಡದ ಆಟಗಾರನೊಬ್ಬ ಮಹಿಳೆಗೆ ತೊಂದರೆ ಕೊಡುವ ಮೂಲಕ ತಂಡದ ವರ್ಚಸ್ಸಿಗೆ ಧಕ್ಕೆ ತಂದಿದ್ದಾನೆ.

ಆಟಗಾರನ ಕೈ ಚಳಕದಿಂದ ಮುಜುಗರಕ್ಕೆ ಒಳಗಾಗಿರುವ ಫ್ರಾಂಚೈಸಿ ಆಟಗಾರರಿಗೆ ವಿಧಿಸಲಾಗಿರುವ ಮಾರ್ಗಸೂಚಿಯನ್ನು ಕಠಿಣಗೊಳಿಸಿದೆ. ಪ್ರತಿಯೊಬ್ಬರಿಗೂ ತಂಡದ ನಿಯಮವನ್ನು ಪಾಲಿಸುವಂತೆ ಸೂಚನೆ ನೀಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾತ್ರಿ 10 ಗಂಟೆಯ ನಂತರ ಆಟಗಾರರು ಇನ್ನು ಮುಂದೆ ತಮ್ಮ ಪರಿಚಿತರನ್ನು ತಮ್ಮ ಕೋಣೆಗಳಿಗೆ ಕರೆತರುವಂತಿಲ್ಲ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ತಂಡದ ರೆಸ್ಟೋರೆಂಟ್ ಅಥವಾ ಕಾಫಿ ಶಾಪ್ ನಲ್ಲಿ ಮಾತ್ರ ಪರಿಚಿತರನ್ನು ಭೇಟಿಯಾಗಲು ಆಟಗಾರರಿಗೆ ಅವಕಾಶ ನೀಡಲಾಗಿದೆ.

ವೈಯಕ್ತಿಕ ಭೇಟಿಗಾಗಿ ತಂಡದ ನಿಗದಿತ ಹೋಟೆಲ್​ನಿಂದ ಹೊರಹೋಗಬೇಕಾದರೆ ಆಟಗಾರರು ಇನ್ನು ಮುಂದೆ ಫ್ರಾಂಚೈಸಿಯ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಸಲಹೆಯಲ್ಲಿ ತಿಳಿಸಲಾಗಿದೆ. ಇದು ಕೇವಲ ಸಲಹೆ ಮಾತ್ರವಲ್ಲದೆ ಎಚ್ಚರಿಕೆ ಎಂಬುದಾಗಿಯೂ ಇಂಡಿಯನ್ ಎಕ್ಸ್​ಪ್ರೆಸ್​ ವರದಿ ಮಾಡಿದೆ. ನಿಯಮ ಉಲ್ಲಂಘಿಸಿದರೆ ಫ್ರಾಂಚೈಸಿ ಜತೆಗಿನ ಒಪ್ಪಂದವನ್ನು ರದ್ದು ಮಾಡುವ ಸೂಚನೆಯನ್ನೂ ನೀಡಲಾಗಿದೆ.

ಆಟಗಾರ ತನ್ನ ಹೆಂಡತಿ ಅಥವಾ ಪ್ರೇಯಸಿಯನ್ನು ತಂಡದೊಂದಿಗೆ ಕರೆದೊಯ್ಯಬಹುದು. ಆದರೆ ಅವರ ವೆಚ್ಚಗಳನ್ನು ಆಟಗಾರರು ಭರಿಸಬೇಕು ಎಂಬುದಾಗಿ ಫ್ರಾಂಚೈಸಿ ಹೇಳಿದೆ.

ಇದನ್ನೂ ಓದಿ : IPL 2023: ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರರ ಬ್ಯಾಟ್‌ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳ ಕಳವು; ಚಿಂತೆಯಲ್ಲಿ ಆಟಗಾರರು

ಏತನ್ಮಧ್ಯೆ, ಆರಂಭಿಕ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿರುವ ಡೇವಿಡ್​ ವಾರ್ನರ್​ ನೇತೃತ್ವದ ಡೆಲ್ಲಿ ಸತತ ಐದು ಸೋಲುಗಳೊಂದಿಗೆ ಮುಖಭಂಗ ಅನುಭವಿಸಿತ್ತು. ಬಳಿಕ ಪುಟಿದೆದ್ದಿರುವ ತಂಡ ನಂತರದ ಎರಡು ಪಂದ್ಯಗಳಲ್ಲಿ ವಿಜಯ ಸಾಧಿಸಿದೆ. ಈ ಮೂಲಕ ಪ್ಲೇಆಫ್​​ಗೆ ಅರ್ಹತೆ ಪಡೆಯುವ ಸಾಧ್ಯತೆಗಳನ್ನು ಸೃಷ್ಟಿಸಿಕೊಂಡಿದೆ. ಆದರೂ ಆ ಹಂತಕ್ಕೇರುವುದು ಅಷ್ಟೊಂದು ಸುಲಭವಿಲ್ಲ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ನಂತರ, ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿತ್ತು. ಅದಕ್ಕಾಗಿಯೂ ತಂಡದ ದೊಡ್ಡ ಮೊತ್ತದ ದಂಡ ಕಟ್ಟಿಸಿಕೊಂಡಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಎಸ್ಆರ್​ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್​​ಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿತ್ತು.

Exit mobile version