Site icon Vistara News

IPL 2023 : ಮುಂಬಯಿ ವಿರುದ್ಧ 172 ರನ್ ಬಾರಿಸಿದ ಡೆಲ್ಲಿ ಕ್ಯಾಪಿಟಲ್ಸ್​

#image_title

ನವ ದೆಹಲಿ: ಐಪಿಎಲ್​ 16ನೇ ಆವೃತ್ತಿಯ 16ನೇ ಪಂದ್ಯದಲ್ಲಿ (IPL 2023) ಮುಂಬಯಿ ಇಂಡಿಯನ್ಸ್ ವಿರುದ್ದ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮತ್ತೆ ಬ್ಯಾಟಿಂಗ್​ ವೈಫಲ್ಯ ಎದುರಿಸಿತು. ಆದಾಗ್ಯೂ ನಾಯಕ ಡೇವಿಡ್​ ವಾರ್ನರ್​ (51) ಹಾಗೂ ಅಕ್ಷರ್ ಪಟೇಲ್​ (54) ಅವರ ಅರ್ಧ ಶತಕಗಳ ನೆರವಿನಿಂದ 19.4 ಓವರ್​ಗಳಲ್ಲಿ 172 ರನ್​ ಬಾರಿಸಿತು. ಅಕ್ಷರ್​ ಪಟೇಲ್​ ಹೊರತುಪಡಿಸಿದರೆ ಉಳಿದ ಬ್ಯಾಟರ್​​ಗಳು ಕೆಚ್ಚೆದೆ ತೋರಲು ವಿಫಲಗೊಂಡ ಕಾರಣ ಎದುರಾಳಿ ತಂಡಕ್ಕೆ ಸಣ್ಣ ಮೊತ್ತದ ಸವಾಲು ನೀಡುವಂತಾಯಿತು.

ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಹಣಾಹಣಿಯಲ್ಲಿ ಟಾಸ್​ ಗೆದ್ದ ಮುಂಬಯಿ ಇಂಡಿಯನ್ಸ್​ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 172 ರನ್​ಗಳ ಸಾಧಾರಣ ಮೊತ್ತ ಪೇರಿಸಿ ಆಲ್​ಔಟ್​ ಆಯಿತು.

ಬ್ಯಾಟಿಂಗ್ ಆಹ್ವಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕರಾಗಿ ಬ್ಯಾಟ್​ ಮಾಡಲು ಇಳಿದ ಡೇವಿಡ್​ ವಾರ್ನರ್​ ಹಾಗೂ ಪೃಥ್ವಿ ಶಾ (15) ಹೆಚ್ಚು ಹೊತ್ತು ಜತೆಯಾಟ ನೀಡಲಿಲ್ಲ. ಮತ್ತೊಮ್ಮೆ ವಿಫಲ ಪ್ರದರ್ಶನ ನೀಡಿದ ಪೃಥ್ವಿ ಬೆಹ್ರೆನ್​ಡಾರ್ಫ್​​ಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್​ ಮನೀಶ್ ಪಾಂಡೆ ಮತ್ತೊಮ್ಮೆ ತಮ್ಮ ಮೇಲೆ ಭರವಸೆಯನ್ನು ಹುಸಿಗೊಳಿಸಿ 18 ಎಸೆತದಲ್ಲಿ 26 ರನ್ ಬಾರಿಸಿ ಔಟಾದರು. ಇದಾದ ಬಳಿಕ ಡೆಲ್ಲಿ ತಂಡ ಮೂರು ವಿಕೆಟ್​ಗಳ ಸತತವಾಗಿ ಉರುಳಿದವು. ಯಶ್​ ಧುಲ್​ (2), ರೊವ್ಮನ್​ ಪೊವೆಲ್​ (4) ಹಾಗೂ ಲಲಿತ್​ ಯಾದವ್​ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್​ಗೆ ಮರಳಿದರು.

ಸಿಡಿದ ಅಕ್ಷರ್​ ಪಟೇಲ್​

98 ರನ್​​ಗಳಿಗೆ ಐದು ವಿಕೆಟ್​ ಉರುಳಿದ ಕಾರಣ ಡೆಲ್ಲಿ ತಂಡ ಹಿನ್ನೆಡೆಗೆ ಒಳಗಾಯಿತು. ಈ ವೇಳೆ ಆಡಲು ಬಂದ ಅಕ್ಷರ್ ಪಟೇಲ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 22 ಎಸೆತಗಳಿಗೆ ತಮ್ಮ ಅರ್ಧ ಶತಕ ಪೂರೈಸಿದ ಎಡಗೈ ಬ್ಯಾಟರ್​ 25 ಎಸೆತಗಳಲ್ಲಿ 54 ರನ್ ಬಾರಿಸಿದರು. ಇವರ ಇನಿಂಗ್ಸ್​​ನಲ್ಲಿ 4 ಫೋರ್​ ಹಾಗೂ ಐದು ಸಿಕ್ಸರ್​ಗಳು ಸೇರಿಕೊಂಡಿದ್ದವು. ಇವರ ಅಬ್ಬರದ ಬ್ಯಾಟಿಂಗ್ ಬಲದಿಂದಾಗಿ ಡೆಲ್ಲಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.

ಇದನ್ನೂ ಓದಿ : IPL 2023 : ಹರ್ಷಲ್​ ಎಡವಟ್ಟು ಮಾಡದಿದ್ದರೆ ಆರ್​ಸಿಬಿಗೆ ಇತ್ತು ಇನ್ನೂ ಗೆಲುವಿನ ಚಾನ್ಸ್​!

ಈ ವೇಳೆ ಮಾರಕ ದಾಳಿ ಸಂಘಟಿಸಿದ ಮುಂಬಯಿ ಬೌಲರ್​ ಬೆಹ್ರೆನ್​ಡಾರ್ಫ್​, ಅಕ್ಷರ್​ ಪಟೇಲ್ ಹಾಗೂ ಡೇವಿಡ್​ ವಾರ್ನರ್ ವಿಕೆಟ್ ಪಡೆದ ಜತೆಯಾಟವನ್ನು ಮುರಿದರು. 18.1 ಓವರ್​ಗಳಲ್ಲಿ 165 ರನ್​ಗೆ ಡೆಲ್ಲಿ ತಂಡ ಏಳನೇ ವಿಕೆಟ್​ ಕಳೆದುಕೊಂಡರೆ 172 ರನ್​ಗಳಾಗುವಷ್ಟರಲ್ಲಿ ತನ್ನೆಲ್ಲ ವಿಕೆಟ್​​ಗಳನ್ನು ಕಳೆದುಕೊಂಡಿತು.

ಮುಂಬಯಿ ಪರ ಬೌಲಿಂಗ್​ನಲ್ಲಿ ಜೇಸನ್​ ಬೆಹ್ರೆನ್​ಡಾರ್ಫ್ 23 ರನ್​ಗಳಿಗೆ 3 ವಿಕೆಟ್​ ಪಡೆದರೆ, ಸ್ಪಿನ್ನರ್ ಪಿಯೂಶ್ ಚಾವ್ಲಾ 22 ರನ್​ಗಳಿಗೆ 3 ವಿಕೆಟ್​ ಪಡೆದರು. ರೀಲಿ ಮೆರಿಡಿತ್​ 34 ರನ್​ಗಳಿಗೆ 2 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version