ನವ ದೆಹಲಿ: ಐಪಿಎಲ್ 16ನೇ ಆವೃತ್ತಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹಿಂದಿನ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿರುವ ಆರ್ಸಿಬಿ ಮತ್ತೊಂದು ಗೆಲುವಿಗಾಗಿ ಹವಣಿಸಲಿದೆ. ಈ ಮೂಲಕ ಪ್ಲೇಆಫ್ ಹಂತಕ್ಕೇರಲು ಪ್ರಯತ್ನಿಸಲಿದೆ.
ನವ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಪಂದ್ಯ ನಡೆಯುತ್ತಿದೆ. ಒಣ ಹವೆ ಹಚ್ಚಿರುವ ಕಾರಣ ಪಿಚ್ ಹೆಚ್ಚು ಶುಷ್ಕಗೊಂಡಿದೆ. ಹೀಗಾಗಿ ಬೌಲರ್ಗಳಿಗೆ ಹೆಚ್ಚಿನ ಅವಕಾಶವಿದೆ. ದೊಡ್ಡ ಮೊತ್ತವನ್ನು ಪೇರಿಸಲು ಕೂಡ ಇಲ್ಲಿ ಸಾಧ್ಯವಿಲ್ಲ. ಈ ಸ್ಟೇಡಿಯಮ್ನ ಸರಾಸರಿ ಸ್ಕೋರ್ 165. ವೇಗಿಗಳು ಹಾಗೂ ಸ್ಪಿನ್ನರ್ಗಳಿಗೆ ಸಮಾನ ಅವಕಾಶ ಸೃಷ್ಟಿ ಮಾಡಿಕೊಡುವ ಪಿಚ್ ಇದಾಗಿದೆ. ಹಾಲಿ ಆವೃತ್ತಿಯಲ್ಲಿ ಈ ಪಿಚ್ನಲ್ಲಿ ನಡೆದ ಪಂದ್ಯದಲ್ಲಿ 29 ವಿಕೆಟ್ಗಳು ವೇಗಿಗಳ ಪಾಲಾಗಿದ್ದರೆ 23 ವಿಕೆಟ್ಗಳು ಸ್ಪಿನ್ನರ್ಗಳು ಕಬಳಿಸಿದ್ದಾರೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಪಿಚ್ ಒಣಗಿರುವ ಕಾರಣ ಬೌಲರ್ಗಳಿಗೆ ಹೆಚ್ಚು ಅವಕಾಶವಿದೆ. ಅಂತೆಯೇ ಇಬ್ಬನಿ ಪರಿಣಾಮವೂ ಇರುವುದಿಲ್ಲ. ಹೀಗಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ನಾವು ದೊಡ್ಡ ಮೊತ್ತ ಪೇರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇವೆ. ಕೇದಾರ್ ಜಾಧವ್ ಆಡಲಿದ್ದಾರೆ ಎಂದು ಹೇಳಿದರು.
ಟಾಸ್ ಗೆದ್ದಿದ್ದರೆ ನಾವು ಕೂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆವು, ನಾವು ಕೂಡ ಹೊಸ ನಂಬಿಕೆಯೊಂದಿಗೆ ಆಡಲು ಬಂದಿದ್ದೇವೆ. ಹಗಲಲ್ಲಿ ಮಳೆಯಾಗಿರುವ ಕಾರಣ ಇಬ್ಬನಿ ಪರಿಣಾಮ ಉಂಟಾಗದು. ಮುಕೇಶ್ ಕುಮಾರ್ ಹಾಗೂ ಮಿಚೆಲ್ ಮಾರ್ಷ್ ತಂಡಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.
ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೌ, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್ (ಸಿ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ (ವಿಕೆ), ಕೇದಾರ್ ಜಾಧವ್, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್ವುಡ್.