ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಯ 44ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ಗುಜರಾತ್ ಟೈಟನ್ಸ್ ಬಳಗ ಫೀಲ್ಡಿಂಗ್ ಮಾಡಿ ಎದುರಾಳಿ ತಂಡವನ್ನು ಕಟ್ಟಿ ಹಾಕಬೇಕಾಗಿದೆ. ಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯ ಗುಜರಾತ್ ತಂಡ ಮೊದಲ ಸ್ಥಾನ ಪಡೆದುಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ 10ನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಅಗ್ರ ಸ್ಥಾನಿ ಮತ್ತು ಕೊನೇ ಸ್ಥಾನಿಗಳ ನಡುವಿನ ಪಂದ್ಯದಂತಾಗಿದೆ.
ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಈ ಹಣಾಹಣಿ ನಡೆಯುತ್ತಿದ್ದು, ಮತ್ತೊಂದು ದೊಡ್ಡ ಮೊತ್ತದ ಹಣಾಹಣಿ ನಡೆಯಲಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್, ಈ ವಿಕೆಟ್ ದೊಡ್ಡ ಮೊತ್ತ ಪೇರಿಸಲು ನೆರವು ನೀಡುವಂತಿದೆ. ಈ ಪಂದ್ಯದಲ್ಲಿ ಬಿಗ್ ಸ್ಕೋರ್ ದಾಖಲಿಸಿ ಎದುರಾಳಿ ತಂಡವನ್ನು ಕಟ್ಟಿ ಹಾಕಲಿದ್ದೇವೆ. ನಮ್ಮ ತಂಡದಲ್ಲೂ ಉತ್ತಮ ಪ್ರತಿಭೆಗಳಿವೆ. ಮಿಚೆಲ್ ಮಾರ್ಷ್ ಅನಾರೋಗ್ಯದ ಕಾರಣ ಆಡುತ್ತಿಲ್ಲ. ಅವರ ಬದಲಿಗೆ ರೀಲಿ ರೊಸ್ಸು ಆಡುತ್ತಿದ್ದಾರೆ. ಮೊಹಮ್ಮದ್ ಖಲೀಲ್ ಬೆನ್ನು ಗಾಯದ ಸಮಸ್ಯೆಯಿಂದ ಸುಧಾರಣೆಗೊಂಡಿದ್ದಾರೆ ಎಂದು ಹೇಳಿದರು.
ನಾವು ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ಉದ್ದೇಶವನ್ನೇ ಹೊಂದಿದ್ದೆವು. ಈ ಪಿಚ್ನಲ್ಲಿ ಚೇಸಿಂಗ್ ಮಾಡುವುದೇ ಸುಲಭ. ಹೀಗಾಗಿ ಈ ಹಿಂದಿನ ಪಂದ್ಯಗಳನ್ನು ಆಡಿರುವ ತಂಡದೊಂದಿಗೆ ಈ ಪಂದ್ಯದಲ್ಲೂ ಆಡಲಿದ್ದೇವೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.
ತಂಡಗಳು ಇಂತಿವೆ
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ , ಮನೀಶ್ ಪಾಂಡೆ, ರಿಲೀ ರೊಸೌ, ಪ್ರಿಯಂ ಗರ್ಗ್, ಅಕ್ಷರ್ ಪಟೇಲ್, ರಿಪಾಲ್ ಪಟೇಲ್, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ.
ಗುಜರಾತ್ ಟೈಟನ್ಸ್: ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ನೂರ್ ಅಹ್ಮದ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ಜೋಶುವಾ ಲಿಟಲ್.