ಮುಂಬಯಿ: ಮಹಿಳೆಯರ ಪ್ರಿಮಿಯರ್ ಲೀಗ್ (WPL 2023) ಸೋಮವಾರದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇವೆರಡೂ ಟೂರ್ನಿಯ ಬಲಿಷ್ಠ ತಂಡಗಳೆನಿಸಿಕೊಂಡಿವೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆಯಿದೆ. ಮೊದಲ ಸುತ್ತಿನ ಹಣಾಹಣಿಯಲ್ಲಿ ಡೆಲ್ಲಿ ತಂಡವನ್ನು ಮುಂಬಯಿ ತಂಡದ ಸೋಲಿಸಿತ್ತು. ಹೀಗಾಗಿ ಈ ಬಾರಿ ಪ್ರತಿಕಾರ ತೀರಿಸುವ ನಿರೀಕ್ಷೆಯಿದೆ.
ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿದ್ದು, ಎರಡೂ ತಂಡಕ್ಕೆ ಗೆಲುವು ಪ್ರಮುಖ ಎನಿಸಿದೆ. ಟಾಸ್ ಗೆದ್ದ ಮೆಗ್ಲ್ಯಾನಿಂಗ್ ಮಾತನಾಡಿ, ಫೀಲ್ಡಿಂಗ್ ಆಯ್ಕೆಗೆ ಯಾವುದೇ ಕಾರಣಗಳು ಇಲ್ಲ. ಆದರೆ, ಪರಿಸ್ಥಿತಿಯನ್ನು ನೋಡಿದರೆ ಚೇಸ್ ಮಾಡಿ ಗೆಲ್ಲುವುದೇ ಉತ್ತಮ ಎಂದು ಅನಿಸುತ್ತದೆ. ನಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ : WPL 2023 : ಗುಜರಾತ್ ಜಯಂಟ್ಸ್ ವಿರುದ್ಧ 3 ವಿಕೆಟ್ ವಿಜಯ ಸಾಧಿಸಿದ ಯುಪಿ ವಾರಿಯರ್ಸ್
ಮುಂಬಯಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾತನಾಡಿ, ಬ್ಯಾಟಿಂಗ್ನಲ್ಲಿ ನಾವು ಹೆಚ್ಚಿನ ಜವಾಬ್ದಾರಿ ಪ್ರದರ್ಶಿಸಲು ಇಚ್ಛೆಪಡುತ್ತಿದ್ದೇವೆ ಎಂದು ಹೇಳಿದರು.
ತಂಡಗಳ ಇಂತಿವೆ
ಡೆಲ್ಲಿ ಕ್ಯಾಪಿಟಲ್ಸ್ : ಮೆಗ್ ಲ್ಯಾನಿಂಗ್ (ಕ್ಯಾಪ್ಟನ್), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಮರಿಜನೆ ಕಪ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ , ತಾನಿಯಾ ಭಾಟಿಯಾ , ರಾಧಾ ಯಾದವ್, ಶಿಖಾ ಪಾಂಡೆ.
: 1 ಮೆಗ್ ಲ್ಯಾನಿಂಗ್ (ಕ್ಯಾಪ್ಟನ್), 2 ಶಫಾಲಿ ವರ್ಮಾ, 3 ಜೆಮಿಮಾ ರಾಡ್ರಿಗಸ್, 4 ಮರಿಜಾನ್ನೆ ಕಪ್, 5 ಆಲಿಸ್ ಕ್ಯಾಪ್ಸೆ, 6 ಜೆಸ್ ಜೊನಾಸೆನ್, 7 ಅರುಂಧತಿ ರೆಡ್ಡಿ , 8 ತಾನಿಯಾ ಭಾಟಿಯಾ (WK), 9 ರಾಧಾ ಯಾದವ್, 10 ಶಿಖಾ 11 ಪಾಂಡೆ,
ಮುಂಬಯಿ ಇಂಡಿಯನ್ಸ್: ಹೇಲಿ ಮ್ಯಾಥ್ಯೂಸ್ ಯಸ್ತಿಕಾ ಭಾಟಿಯಾ, ನ್ಯಾಟ್ ಸೀವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ ಜಿಂತಿಮಾನಿ ಕಲಿತಾ.