Delhi team won the toss against Mumbai and chose fielding WPL 2023 : ಮುಂಬಯಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್​ ಆಯ್ಕೆ - Vistara News

ಕ್ರಿಕೆಟ್

WPL 2023 : ಮುಂಬಯಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್​ ಆಯ್ಕೆ

ಚೇಸ್​ ಮಾಡಿ ಗೆಲ್ಲುವುದು ಸುಲಭ ಎಂಬ ಕಾರಣಕ್ಕೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡೆ ಎಂಬುದಾಗಿ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಹೇಳಿದ್ದಾರೆ.

VISTARANEWS.COM


on

Delhi team won the toss against Mumbai and chose fielding
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮಹಿಳೆಯರ ಪ್ರಿಮಿಯರ್ ಲೀಗ್​ (WPL 2023) ಸೋಮವಾರದ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಡೆಲ್ಲಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇವೆರಡೂ ಟೂರ್ನಿಯ ಬಲಿಷ್ಠ ತಂಡಗಳೆನಿಸಿಕೊಂಡಿವೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆಯಿದೆ. ಮೊದಲ ಸುತ್ತಿನ ಹಣಾಹಣಿಯಲ್ಲಿ ಡೆಲ್ಲಿ ತಂಡವನ್ನು ಮುಂಬಯಿ ತಂಡದ ಸೋಲಿಸಿತ್ತು. ಹೀಗಾಗಿ ಈ ಬಾರಿ ಪ್ರತಿಕಾರ ತೀರಿಸುವ ನಿರೀಕ್ಷೆಯಿದೆ.

ಡಿವೈ ಪಾಟೀಲ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿದ್ದು, ಎರಡೂ ತಂಡಕ್ಕೆ ಗೆಲುವು ಪ್ರಮುಖ ಎನಿಸಿದೆ. ಟಾಸ್​ ಗೆದ್ದ ಮೆಗ್​ಲ್ಯಾನಿಂಗ್ ಮಾತನಾಡಿ, ಫೀಲ್ಡಿಂಗ್ ಆಯ್ಕೆಗೆ ಯಾವುದೇ ಕಾರಣಗಳು ಇಲ್ಲ. ಆದರೆ, ಪರಿಸ್ಥಿತಿಯನ್ನು ನೋಡಿದರೆ ಚೇಸ್​ ಮಾಡಿ ಗೆಲ್ಲುವುದೇ ಉತ್ತಮ ಎಂದು ಅನಿಸುತ್ತದೆ. ನಮ್ಮ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ : WPL 2023 : ಗುಜರಾತ್ ಜಯಂಟ್ಸ್​ ವಿರುದ್ಧ 3 ವಿಕೆಟ್​ ವಿಜಯ ಸಾಧಿಸಿದ ಯುಪಿ ವಾರಿಯರ್ಸ್​​

ಮುಂಬಯಿ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​ ಮಾತನಾಡಿ, ಬ್ಯಾಟಿಂಗ್​ನಲ್ಲಿ ನಾವು ಹೆಚ್ಚಿನ ಜವಾಬ್ದಾರಿ ಪ್ರದರ್ಶಿಸಲು ಇಚ್ಛೆಪಡುತ್ತಿದ್ದೇವೆ ಎಂದು ಹೇಳಿದರು.

ತಂಡಗಳ ಇಂತಿವೆ

ಡೆಲ್ಲಿ ಕ್ಯಾಪಿಟಲ್ಸ್​ : ಮೆಗ್ ಲ್ಯಾನಿಂಗ್ (ಕ್ಯಾಪ್ಟನ್), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಮರಿಜನೆ ಕಪ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ , ತಾನಿಯಾ ಭಾಟಿಯಾ , ರಾಧಾ ಯಾದವ್, ಶಿಖಾ ಪಾಂಡೆ.

: 1 ಮೆಗ್ ಲ್ಯಾನಿಂಗ್ (ಕ್ಯಾಪ್ಟನ್), 2 ಶಫಾಲಿ ವರ್ಮಾ, 3 ಜೆಮಿಮಾ ರಾಡ್ರಿಗಸ್, 4 ಮರಿಜಾನ್ನೆ ಕಪ್, 5 ಆಲಿಸ್ ಕ್ಯಾಪ್ಸೆ, 6 ಜೆಸ್ ಜೊನಾಸೆನ್, 7 ಅರುಂಧತಿ ರೆಡ್ಡಿ , 8 ತಾನಿಯಾ ಭಾಟಿಯಾ (WK), 9 ರಾಧಾ ಯಾದವ್, 10 ಶಿಖಾ 11 ಪಾಂಡೆ,

ಮುಂಬಯಿ ಇಂಡಿಯನ್ಸ್​: ಹೇಲಿ ಮ್ಯಾಥ್ಯೂಸ್ ಯಸ್ತಿಕಾ ಭಾಟಿಯಾ, ನ್ಯಾಟ್ ಸೀವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಇಸ್ಸಿ ವಾಂಗ್, ಪೂಜಾ ವಸ್ತ್ರಾಕರ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ ಜಿಂತಿಮಾನಿ ಕಲಿತಾ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

IPL 2024: ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಿದ ಆರ್​.ಅಶ್ವಿನ್​ ಅವರ ಬಗ್ಗೆಯೂ ಶಿವರಾಮಕೃಷ್ಣನ್ ಗಂಭೀರ ಆರೋಪ ಮಾಡಿದ್ದರು. ಅಶ್ವಿನ್​ ಹಿರಿಯ ಆಟಗಾರರಿಗೆ ಗೌರವ ನೀಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಕೂಡ ಮಾಡಿದ್ದರು.

VISTARANEWS.COM


on

IPL 2024
Koo

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮತ್ತು ತಮಿಳುನಾಡು ಮೂಲದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್(Laxman Sivaramakrishnan) ಅವರು ಕ್ರಿಕೆಟ್ ವೀಕ್ಷಕ ವಿವರಣೆಗಾರ ಮತ್ತು ವಿಶ್ಲೇಷಕ ಹರ್ಷ ಭೋಗ್ಲೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಹರ್ಷ ಭೋಗ್ಲೆ(Harsha Bhogle) ಅವರು ಚೆನ್ನೈ ಸೂಪರ್​ ಸಿಂಗ್ಸ್ ತಂಡದ(IPL 2024)​ ವಿರುದ್ಧ ಮಾಡಿದ ಒಂದು ಟ್ವೀಟ್​.

ಭಾನುವಾರ ಚೆನ್ನೈ ಮತ್ತು ಮುಂಬೈ(MI vs CSK) ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ 6 ವಿಕೆಟ್​ಗೆ 206 ರನ್​ ಬಾರಿಸಿತು. ಈ ವೇಳೆ ಟ್ವೀಟ್​ ಮಾಡಿದ ಭೋಗ್ಲೆ, “206 ಉತ್ತಮ ಸ್ಕೋರ್. ಆದರೆ, ಈ ಸ್ಟೇಡಿಯಂನಲ್ಲಿ ಸ್ವಲ್ಪ ಇಬ್ಬನಿ ಸಮಸ್ಯೆಯಿದೆ. ಚೆನ್ನೈ ತಂಡದಲ್ಲಿ ಹೆಚ್ಚಿನ ಬೌಲಿಂಗ್ ಆಯ್ಕೆಗಳಿಲ್ಲದಿರುವುದರಿಂದ ತಂಡಕ್ಕೆ ಇನ್ನೂ 20ರನ್​ಗಳ ಅಗತ್ಯವಿತ್ತು ಎಂದು ಭಾವಿಸುತ್ತದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.


ಈ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ್ ಶಿವರಾಮಕೃಷ್ಣನ್, ನೀವು ಚೆನ್ನೈ ಆಟಗಾರರನ್ನು ಯಾವಾಗಲೂ ಕಡೆಗಣಿಸುತ್ತೀರಿ. ಭಾರತೀಯ ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಏನು ಎಂದು ನಿಜವಾಗಿಯೂ ಆಶ್ಚರ್ಯವಾಗುತ್ತದೆ” ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಈ ಟ್ವೀಟ್​ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಶಿವರಾಮಕೃಷ್ಣನ್ ಅವರು ಇದನ್ನು ಡಿಲಿಟ್​ ಮಾಡಿದ್ದಾರೆ. ಆದರೂ ಕೆಲವು ಸ್ಕ್ರೀನ್​ ಶಾಟ್​ಗಳು ಈಗ ವೈರಲ್​ ಆಗುತ್ತಿದೆ.

ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಿದ ಆರ್​.ಅಶ್ವಿನ್​ ಅವರ ಬಗ್ಗೆಯೂ ಶಿವರಾಮಕೃಷ್ಣನ್ ಗಂಭೀರ ಆರೋಪ ಮಾಡಿದ್ದರು. ಅಶ್ವಿನ್​ ಹಿರಿಯ ಆಟಗಾರರಿಗೆ ಗೌರವ ನೀಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಕೂಡ ಮಾಡಿದ್ದರು.

“100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್​ಗೆ ಶುಭ ಕೋರಲು ನಾನು ಹಲವು ಕರೆಗಳನ್ನು ಮಾಡಿದೆ. ಆದರೆ ಅವರು ಈ ಕರೆಗಳನ್ನು ಸ್ವೀಕರಿಸಿಲ್ಲ. ನ್ನನ ಕರೆಗಳನ್ನು ಕಟ್​ ಮಾಡುವ ಮೂಲಕ ಅಗೌರವ ತೋರಿದ್ದಾರೆ ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಆರೋಪಿಸಿದ್ದಾರೆ. “ನನ್ನ ಕರೆಯನ್ನು ಕಟ್ ಮಾಡಿದ ಬಳಿಕ ನಾನು ಆತನಿಗೆ ಸಂದೇಶ ಕಳುಹಿಸಿದೆ, ಅದಕ್ಕೂ ಯಾವುದೇ ಉತ್ತರವಿಲ್ಲ. ಇದು ನಮ್ಮಂತಹ ಮಾಜಿ ಕ್ರಿಕೆಟಿಗರು ಪಡೆಯುತ್ತಿರುವ ಗೌರವ” ಎಂದು ಪೋಸ್ಟ್​ನಲ್ಲಿ ಬರೆದಿದ್ದರು.

ಇದನ್ನೂ ಓದಿ IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್‌; ಫೋಟೊ ವೈರಲ್​

ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಭಾರತ ಪರ 9 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ 130, ಏಕದಿನದಲ್ಲಿ ಕೇವಲ 5 ರನ್​ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ ಒಟ್ಟು 41 ವಿಕೆಟ್​ ಉರುಳಿಸಿದ್ದಾರೆ. ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಯಿಂದಲೇ ಇವರು ಗುರುತಿಸಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ಕಾಮೆಂಟರಿಯಲ್ಲಿ ಹರ್ಷ ಭೋಗ್ಲೆ ಚಿರಪರಿಚಿತ ಹೆಸರು. ಕಂಚಿನ ಕಂಠದ ಮೂಲಕ ವಿಶ್ಲೇಷಣೆ ಮಾಡುವ ಚಾಕಚಕ್ಯತೆ, ಭಾಷೆಯ ಮೇಲಿನ ಹಿಡಿತ ಅತ್ಯದ್ಭುತ. ಇವರ ಧ್ವನಿಯನ್ನು ಹೈವೋಲ್ಟೇಜ್​ ಪಂದ್ಯಗಳಲ್ಲಿ ಕೇಳುವುದೇ ಒಂದು ಸೌಭಾಗ್ಯ ಎಂದರೂ ತಪ್ಪಾಗಲಾರದು. ಮೂಲತಃ ಹೈದರಾಬಾದ್ ನವರಾದ ಹರ್ಷ ಭೋಗ್ಲೆ ತನ್ನ 19ನೇ ವಯಸ್ಸಿನಲ್ಲೇ ಕ್ರಿಕೆಟ್ ಕಾಮೆಂಟರಿ ಆರಂಭಿಸಿದ್ದರು. ಅಂದು ಆಲ್ ಇಂಡಿಯಾ ರೇಡಿಯೋದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ಹರ್ಷ ಆ ಬಳಿಕ ಟಿವಿ ವೀಕ್ಷಕ ವಿವರಣೆಯಲ್ಲಿ ದೊಡ್ಡ ಹೆಸರು ಮಾಡಿದರು.

Continue Reading

ಕ್ರೀಡೆ

Rohit Sharma: ಸ್ಮರಣೀಯ ಪಂದ್ಯವನ್ನಾಡಲು ಸಜ್ಜಾದ ರೋಹಿತ್​ ಶರ್ಮ

Rohit Sharma: ಪಂಜಾಬ್​ ವಿರುದ್ಧ ಕಣಕ್ಕಿಳಿಯುವ ಮೂಲಕ ರೋಹಿತ್ ಐಪಿಎಲ್​ನಲ್ಲಿ​ 250ನೇ ಪಂದ್ಯವನ್ನಾಡಿದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

VISTARANEWS.COM


on

Rohit sharma
Koo

ಚಂಡೀಗಢ:​ ಮುಂಬೈ ಇಂಡಿಯನ್ಸ್(Mumbai Indians) ತಂಡ ಇಂದು ನಡೆಯುವ ಐಪಿಎಲ್​(IPL 2024) ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​​ ವಿರುದ್ಧ ಆಡಲಿದೆ. ಈ ಪಂದ್ಯ ರೋಹಿತ್​ ಶರ್ಮ(Rohit Sharma) ಅವರಿಗೆ ಸ್ಮರಣೀಯ ಪಂದ್ಯವಾಗಿದೆ. ಪಂಜಾಬ್​ ವಿರುದ್ಧ ಕಣಕ್ಕಿಳಿಯುವ ಮೂಲಕ ರೋಹಿತ್ ಐಪಿಎಲ್​ನಲ್ಲಿ​ 250ನೇ ಪಂದ್ಯವನ್ನಾಡಿದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಅತ್ಯಧಿಕ ಐಪಿಎಲ್​ ಪಂದ್ಯಗಳನ್ನಾಡಿದ ಆಟಗಾರ. ಧೋನಿ ಇದುವರೆಗೆ 256* ಐಪಿಎಲ್​ ಪಂದ್ಯಗಳನ್ನಾಡಿದ್ದಾರೆ. ಆರ್​ಸಿಬಿ ತಂಡದ ದಿನೇಶ್ ಕಾರ್ತಿಕ್​ 249 ಪಂದ್ಯ ಆಡಿ ಮೂರನೇ ಸ್ಥಾನದಲ್ಲಿದ್ದಾರೆ. ಮುಂದಿನ ಪಂದ್ಯ ಅವರಿಗೂ 250ನೇ ಪಂದ್ಯವಾಗಲಿದೆ. ವಿರಾಟ್​ ಕೊಹ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಒಟ್ಟು 244 ಪಂದ್ಯಗಳನ್ನಾಡಿದ್ದಾರೆ. ಇನ್ನು 6 ಪಂದ್ಯ ಆಡಿದರೆ ಅವರು ಕೂಡ 250 ಪಂದ್ಯಗಳ ಕ್ಲಬ್​ಗೆ ಸೇರ್ಪಡೆಗೊಳ್ಳಲಿದ್ದಾರೆ.

ರೋಹಿತ್​ ಅವರು ಡೆಕ್ಕನ್​ ಚಾರ್ಜಸ್​ ಪರ ಆಡುವ ಮೂಲಕ ಐಪಿಎಲ್​ ಪದಾರ್ಪಣೆ ಮಾಡಿದರು. ಈ ತಂಡ ತೊರೆದ ವಳಿಕ ಇದುವರೆಗೂ ಮುಂಬೈ ಇಂಡಿಯನ್ಸ್​ ಪರವೇ ಆಡುತ್ತಿದ್ದಾರೆ. ಇವರ ನಾಯಕತ್ವದಲ್ಲಿ ಮುಂಬೈ ಒಟ್ಟು 5 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಒಟ್ಟು 6 ಐಪಿಎಲ್ ಟ್ರೋಫಿ​ ಗೆದ್ದ ಆಟಗಾರನಾಗಿದ್ದಾರೆ. ಡೆಕ್ಕನ್​ ಪರವೂ ಆಟಗಾರನಾಗಿ ಒಂದು ಕಪ್​ ಗೆದ್ದಿದ್ದಾರೆ. 249 ಐಪಿಎಲ್​ ಪಂದ್ಯಗಳಲ್ಲಿ 6472 ರನ್​, 15 ವಿಕೆಟ್​ ಕಡೆವಿದ್ದಾರೆ. ಒಂದು ಬಾರಿ ಹ್ಯಾಟ್ರಿಕ್​ ವಿಕೆಟ್​ ಕೂಡ ಪಡೆದಿದ್ದಾರೆ. 2 ಶತಕ ಹಾಗೂ 42 ಅರ್ಧಶತಕ ಕೂಡ ಬಾರಿಸಿದ್ದಾರೆ.

ಇದನ್ನೂ ಓದಿ IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ

ಪಂಜಾಬ್​ vs ಮುಂಬೈ


ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ(Maharaja Yadavindra Singh International Cricket Stadium) ಮುಲ್ಲನ್ಪುರ್​ನಲ್ಲಿ(Mullanpur) ಇಂದು ಮುಂಬೈ ಮತ್ತು ಪಂಜಾಬ್​ ಮುಖಾಮುಖಿಯಾಗಲಿವೆ. ಅದೃಷ್ಟದ ವಿಚಾರದಲ್ಲಿ ಉಭಯ ತಂಡಗಳು ಒಂದೇ ದೋಣಿಯ ಪಯಣಿಗರು. ಪಂಜಾಬ್​ 7 ನೇ ಸ್ಥಾನದಲ್ಲಿದ್ದರೆ, ಮುಂಬೈ 8 ನೇ ಸ್ಥಾನದಲ್ಲಿದೆ. ಉಭಯ ತಂಡಗಳು 6 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆದ್ದು 4ರಲ್ಲಿ ಸೋಲು ಕಂಡಿವೆ. ಎರಡೂ ತಂಡಗಳು ತಲಾ 4 ಅಂಕಗಳನ್ನು ಹೊಂದಿದೆ. ನಿವ್ವಳ ರನ್ ರೇಟ್ ಆಧಾರದಲ್ಲಿ ಮುಂದಿರುವ ಕಾರಣ ಪಂಜಾಬ್​ ತಂಡ ಮುಂಬೈಗಿಂತ ಒಂದು ಸ್ಥಾನ ಮೇಲಿದೆ. ಅಂಕಪಟ್ಟಿಯಲ್ಲಿ ಮೇಲೇರಬೇಕಾದರೆ ನಾಳಿನ ಪಂದ್ಯದಲ್ಲಿ ದೊಡ್ಡ ಗೆಲುವು ಅತ್ಯಗತ್ಯ. ದೊಡ್ಡ ಅಂತರದಿಂದ ಗೆದ್ದರೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆರುವ ಅವಕಾಶವಿದೆ.

ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ತಮ್ಮ ತವರು ಅಂಗಳದಲ್ಲಿ ಸೋತಿದ್ದವು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಹಾರ್ದಿಕ್​ ಪಡೆ ತನ್ನ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್‌ಗಳಿಂದ ಸೋತಿತ್ತು. ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್​ ವಿರುದ್ಧ ಥ್ರಿಲ್ಲರ್ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಸೋತಿತ್ತು.

Continue Reading

ಕ್ರೀಡೆ

Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Shubman Gill: ಡೆಲ್ಲಿ ತಂಡ ಗೆಲುವು ಸಾಧಿಸಿದನ್ನು ಕಂಡು ಗ್ಯಾಲರಿಯಲ್ಲಿದ್ದ ಹುಡುಗಿಯೊಬ್ಬಳು ಚಪ್ಪಾಳೆ ತಟ್ಟುತ್ತಾ ತಂಡಕ್ಕೆ ಅಭಿನಂದಿಸಿದ್ದಾಳೆ. ಇದೇ ವೇಳೆ ಗಿಲ್​ ಈ ಹುಡುಗಿಯನ್ನು ಕಂಡು ವಾಹ್​… ಎಂಬ ಸನ್ನೆ ಮಾಡಿದರು. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Shubman Gill
Koo

ಅಹಮದಾಬಾದ್​: ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಗುಜರಾತ್​ ತಂಡ 6 ವಿಕೆಟ್​ಗಳ ಸೋಲು ಕಂಡಿತು. ಇದೇ ಪಂದ್ಯದಲ್ಲಿ ಶುಭಮನ್​ ಗಿಲ್(Shubman Gill)​ ಅವರು ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಜೊಲ್ಲು ಸುರಿಸಿದ ವಿಡಿಯೊ ವೈರಲ್(viral video)​ ಆಗಿದೆ. ಈ ವಿಡಿಯೊಗೆ ‘ಮೆನ್​ ವಿಲ್​ ಬಿ ಮೆನ್​” ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಡೆಲ್ಲಿ ತಂಡ ಗೆಲುವು ಸಾಧಿಸಿದನ್ನು ಕಂಡು ಗ್ಯಾಲರಿಯಲ್ಲಿದ್ದ ಹುಡುಗಿಯೊಬ್ಬಳು ಚಪ್ಪಾಳೆ ತಟ್ಟುತ್ತಾ ತಂಡಕ್ಕೆ ಅಭಿನಂದಿಸಿದ್ದಾಳೆ. ಇದೇ ವೇಳೆ ಗಿಲ್​ ಈ ಹುಡುಗಿಯನ್ನು ಕಂಡು ವಾಹ್​… ಎಂಬ ಸನ್ನೆ ಮಾಡಿದರು. ಈ ದೃಶ್ಯ ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಂದ್ಯ ಸೋತರೂ ಈ ಹುಡಿಯನ್ನು ಕಂಡ ಗಿಲ್​ ಎಲ್ಲ ಚಿಂತೆಯನ್ನು ಮರೆತರು.

ಗಿಲ್​ ಅವರ ಈ ವಿಡಿಯೊ ಕಂಡ ಕೆಲ ನೆಟ್ಟಿಗರು ಸಾರಾ ತೆಂಡೂಲ್ಕರ್​ ಕಂಡರೆ ನಿಮಗೆ ಮಾರಿ ಹಬ್ಬ ಕಂಡಿತ ಎಂದು ತಮಾಷೆಯ ಕಮೆಂಟ್​ ಮಾಡಿದ್ದಾರೆ. ಪಂದ್ಯಕ್ಕೂ ಮುನ್ನವೇ ನಿಮ್ಮ ತಂಡದ ಆಟಗಾರರು ಈ ಹುಡುಗಿಯನ್ನು ಕಂಡಿರಬೇಕು, ಹೀಗಾಗಿ ಆಟದಲ್ಲಿ ಏಕಾಗ್ರತೆ ಕಳೆದುಕೊಂಡು ಕಳಪೆ ಪ್ರದರ್ಶನ ತೋರಿ ಸೋಲು ಕಂಡಿದ್ದು ಎಂದು ಕಾಲೆಳೆದಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡ ಡೆಲ್ಲಿ(Delhi Capitals) ತಂಡಕ್ಕೆ. ಬೌಲರ್​ಗಳು ತಮ್ಮ ಘಾತಕ ದಾಳಿಯ ಮೂಲಕ ಎದುರಾಳಿ ಗುಜರಾತ್​ ತಂಡವನ್ನು 89 ರನ್​ಗಳಿಗೆ ಆಲೌಟ್​ ಮಾಡಿದರು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ 8.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ IPL 2024 POINTS TABLE: ಗುಜರಾತ್​​ ಮಣಿಸಿ ಅಂಕಪಟ್ಟಿಯಲ್ಲಿ 3 ಸ್ಥಾನ ಜಿಗಿತ ಕಂಡ ಡೆಲ್ಲಿ

ಚೇಸಿಂಗ್​ ವೇಳೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಬಿರುಸಿನ ಬ್ಯಾಟಿಂಗ್​ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ 2 ಓವರ್​ ಮುಕ್ತಾಯಗೊಳ್ಳುವ ಮುನ್ನವೇ ತಂಡಕ್ಕೆ 25 ರನ್​ ಹರಿದುಬಂತು. ಆದರೆ ಇವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಪೆನ್ಸರ್ ಜಾನ್ಸನ್ ಎಸೆದ ವೈಡ್​ ಲೆಂತ್​ ಬಾಲ್​ನ ಮರ್ಮವನರಿಯದೆ ಕ್ಯಾಚ್​ ನೀಡಿ ವಿಕೆಟ್​ ಕಳೆದುಕೊಂಡರು. ಅವರ ಗಳಿಕ 10 ಎಸೆತಗಳಿಂದ 20 ರನ್. ಈ ವಿಕೆಟ್​ ಪತನದ ಬಳಿಕ ಆಡಲಿಳಿದ ಅಭಿಷೇಕ್​ ಪೋರೆಲ್(15)​ ಮತ್ತು ಶಾಯ್ ಹೋಪ್(19)​ ಬೇಗನೆ​ ವಿಕೆಟ್​ ಕಳೆದುಕೊಂಡು ತಂಡಕ್ಕೆ ಆತಂಕ ತಂದೊಡ್ಡಿದರು. ಈ ವೇಳೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ನಾಯಕ ಪಂತ್​(16) ಮತ್ತು ಸುಮೀತ್​ ಕುಮಾರ್​(9) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್​ ಪರ ಸಂದೀಪ್​ ವಾರಿಯರ್​ 2 ವಿಕೆಟ್​ ಕಿತ್ತರು.

ಇನಿಂಗ್ಸ್​ ಆರಂಭಿಸಿದ ಗುಜರಾತ್​ ತಂಡದ ಬ್ಯಾಟರ್​ಗಳು ಡೆಲ್ಲಿ ಬೌಲರ್​ಗಳಾದ ಇಶಾಂತ್​ ಶರ್ಮ, ಮುಕೇಶ್​ ಕುಮಾರ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ನಾಯಕ ಶುಭಮನ್​​ ಗಿಲ್​(8), ವೃದ್ಧಿಮಾನ್​ ಸಾಹಾ(2), ಡೇವಿಡ್​ ಮಿಲ್ಲರ್​(2), ಅಭಿನವ್​ ಮನೋಹರ್​(8) ಮತ್ತು ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾನ್ನಾಡಿದ ಶಾರುಖ್ ಖಾನ್(0) ಸಿಂಗಲ್​ ಡಿಜಿಟ್​ಗೆ ಸೀಮಿತರಾಗಿ ಪೆವಿಲಿಯನ್​ ಪರೇಡ್​ ನಡೆಸಿದರು. 8ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್​ ಖಾನ್​ ಏಕಾಂಗಿ ಹೋರಾಟ ನಡೆಸಿ 24 ಎಸೆತಗಳಿಂದ 31 ರನ್​ ಚಚ್ಚಿ ತಂಡದ ಮೊತ್ತವನ್ನು 80ರ ಗಡಿ ದಾಟಿಸಿ ಮಾನ ಉಳಿಸಿದರು. 

Continue Reading

ಕ್ರಿಕೆಟ್

KL Rahul: 32ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಕೆ.ಎಲ್​ ರಾಹುಲ್​; ಬಿಸಿಸಿಐಯಿಂದ ವಿಶೇಷ ಶುಭ ಹಾರೈಕೆ

KL Rahul: ಕೆ.ಎಲ್​ ರಾಹುಲ್​ ಅವರು ಭಾರತ ಪರ ಪದಾರ್ಪಣೆ ಮಾಡಿದ್ದು ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಚೊಚ್ಚಲ ಏಕದಿನ ಪಂದ್ಯವನ್ನು 2016ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿ ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದರು.

VISTARANEWS.COM


on

kl rahul
Koo

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ, ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರಿಗೆ ಇಂದು(ಗುರುವಾರ) 32ನೇ ವರ್ಷದ ಜನ್ಮದಿನದ ಸಂಭ್ರಮ. ಹುಟ್ಟು ಹಬ್ಬದ(Happy Birthday KL Rahul) ಸಂತಸದಲ್ಲಿರುವ ರಾಹುಲ್​ಗೆ ಅವರ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಆಟಗಾರರು ಸೇರಿ ಬಿಸಿಸಿಐ(BCCI) ಕೂಡ ಶುಭ ಹಾರೈಸಿದೆ.

ಕೆ.ಎಲ್‌. ರಾಹುಲ್‌ ಅವರು ಹುಟ್ಟಿದ್ದು ಏಪ್ರಿಲ್​ 18, 1992ರಲ್ಲಿ. ಬೆಂಗಳೂರಿನಲ್ಲಿ ಜನಿಸಿದ ಅವರು ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ನ ಎನ್‌ಐಟಿಕೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ವಿದ್ಯಾಬ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದರು. ಬಳಿಕ ಕ್ರಿಕೆಟ್​ಗಾಗಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಎಲ್ಲೇ ಇದ್ದರೂ ಕನ್ನಡದ ಪ್ರೇಮವನ್ನು ಅವರು ಮರೆತಿಲ್ಲ. ಕರ್ನಾಟಕ ಮೂಲದ ಕ್ರಿಕೆಟಿಗರಲ್ಲಿ ಕನ್ನಡವನ್ನೇ ಮಾತನಾಡಿ ಹಲವು ಬಾರಿ ಕನ್ನಡಿಗರ ಮನ ಗೆದ್ದಿದ್ದರು.

ಮಂಗಳೂರಿನಲ್ಲಿ ಅಂಡರ್‌- 13 ಕ್ರಿಕೆಟ್‌ ಪಂದ್ಯಾಟದಲ್ಲಿ ದ್ವಿಶತಕ ಬಾರಿಸಿ ಗಮನಸೆಳೆದಿದ್ದ ರಾಹುಲ್​ ಬಳಿಕ ಕರ್ನಾಟಕ ತಂಡ, ಭಾರತ ಪರ ಆಡಿ ಹಲವು ಸಾಧನೆ ಮಾಡಿದ್ದಾರೆ. ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್​ ನಡೆಸಬಲ್ಲ ಏಕೈಕ ಆಟಗಾರ ಎಂದರೆ ಅದು ರಾಹುಲ್​. ಜತೆಗೆ ಕೀಪಿಂಗ್​ ಕೂಡ ಮಾಡಬಲ್ಲರು. ಇದುವರೆಗೆ ಭಾರತ ಪರ ಒಟ್ಟು 197 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 7948 ರನ್​ ಬಾರಿಸಿದ್ದಾರೆ. ಇದರಲ್ಲಿ 17 ಶತಕ ಕೂಡ ಒಳಗೊಂಡಿದೆ.

ಇದನ್ನೂ ಓದಿ KL Rahul: ತುಮಕೂರಿನ ಸಿದ್ದಗಂಗಾ ಮಠಕ್ಕೆ ಕೆ.ಎಲ್. ರಾಹುಲ್ ಭೇಟಿ

ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ


ಕೆ.ಎಲ್​ ರಾಹುಲ್​ ಅವರು ಭಾರತ ಪರ ಪದಾರ್ಪಣೆ ಮಾಡಿದ್ದು ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಚೊಚ್ಚಲ ಏಕದಿನ ಪಂದ್ಯವನ್ನು 2016ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿ ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಇದೇ ವರ್ಷ ಜಿಂಬಾವ್ವೆ ವಿರುದ್ಧವೇ ಟಿ20 ಕ್ರಿಕೆಟ್​ಗೂ ಅಡಿಯಿರಿಸಿದ್ದರು. ಹಲವು ಸರಣಿಗಳಲ್ಲಿ ಹಂಗಾಮಿ ನಾಯಕನಾಗಿ ಸರಣಿ ಗೆದ್ದ ಸಾಧನೆಯೂ ಇವರದ್ದಾಗಿದೆ. ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ನಾಯಕನಾಗಿ ಆಡುತ್ತಿದ್ದಾರೆ.

ಟ್ಯಾಟು ಪ್ರಿಯ, ಅಪಾದ ದೈವ ಭಕ್ತ


ಕ್ರಿಕೆಟ್ ಅಂಗಳದಲ್ಲಿ ರಾಹುಲ್ ಎಷ್ಟು ಸಾಧನೆ ಮಾಡಿದ್ದಾರೋ ಅಂಗಳದಾಚೆ ಅಷ್ಟೇ ಸ್ಟೈಲಿಶ್. ಕೆಎಲ್ ರಾಹುಲ್‌ಗೆ ಟ್ಯಾಟೂಗಳೆಂದರೆ ಪಂಚಪ್ರಾಣ. ರಾಹುಲ್ ಮೈಮೇಲೆ 7 ಟ್ಯಾಟೂಗಳು ಇದ್ದು, ಈ ಏಳೂ ಟ್ಯಾಟೂಗಳ ಹಿಂದೆಯೂ ಕುತೂಹಲಕಾರಿ ಕತೆಯೂ ಇದೆ. ಅಪಾರ ದೈವ ಭಕ್ತರಾಗಿರುವ ರಾಹುಲ್​ ಕ್ರಿಕೆಟ್​ ಬಿಡುವಿನ ವೇಳೆ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ. ಧರ್ಮಸ್ಥಳ ದೇವಾಸ್ಥಾನಕ್ಕೆ ಆಗಾಗ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ.

Continue Reading
Advertisement
Abhradeep Saha
ಸಿನಿಮಾ5 mins ago

Abhradeep Saha: ʻಕೆಜಿಎಫ್ʼ ಸಿನಿಮಾವನ್ನು ಕಿರುಚಾಡುತ್ತಲೇ ಹಾಡಿ ಹೊಗಳಿದ್ದ ಯೂಟ್ಯೂಬರ್ ನಿಧನ

Aamir Khan Deepfake video promoting a political party viral
ಬಾಲಿವುಡ್7 mins ago

Aamir Khan: ಕಾಂಗ್ರೆಸ್‌ಗೆ ಮತ ನೀಡಿ ಎಂದು ಆಮೀರ್ ಖಾನ್ ಮನವಿ ಮಾಡಿದರೆ? ಎಫ್‌ಐಆರ್‌ ಏಕೆ?

VVPAT Verification
ದೇಶ18 mins ago

VVPAT Verification: ಇವಿಎಂ-ವಿವಿಪ್ಯಾಟ್‌ ತಾಳೆಯ ಪ್ರಕ್ರಿಯೆ ತಿಳಿಸಿ; ಆಯೋಗಕ್ಕೆ ಸುಪ್ರೀಂ ಸೂಚನೆ

Jai Shree Ram slogan Siddaramaiah and DK Shivakumar are nurturing terrorists in Bengaluru accuses Ashok
ಕರ್ನಾಟಕ20 mins ago

Jai Shree Ram slogan: ಬೆಂಗಳೂರಿನಲ್ಲಿ ಭಯೋತ್ಪಾದಕರನ್ನು ಬೆಳೆಸುತ್ತಿರುವ ಸಿದ್ದರಾಮಯ್ಯ, ಡಿಕೆಶಿ: ಅಶೋಕ್‌ ಆರೋಪ

IPL 2024
ಕ್ರಿಕೆಟ್24 mins ago

IPL 2024: ಭಾರತ ಕ್ರಿಕೆಟ್​ಗೆ ನಿಮ್ಮ ಕೊಡುಗೆ ಏನು? ಹರ್ಷ ಭೋಗ್ಲೆಗೆ ಪ್ರಶ್ನೆ ಮಾಡಿದ ಮಾಜಿ ಆಟಗಾರ

Self Harming In chitradurga
ಚಿತ್ರದುರ್ಗ46 mins ago

Self Harming : ಮಕ್ಕಳಾಗಿಲ್ಲವೆಂದು ಕಿರುಕುಳ; ಶೌಚಾಲಯದಲ್ಲಿ ನೇಣು ಬಿಗಿದುಕೊಂಡ ಗೃಹಿಣಿ

Saffron Row
ದೇಶ50 mins ago

ಕೇಸರಿ ಬಟ್ಟೆ ಧರಿಸಿದ್ದಕ್ಕೆ ಪ್ರಾಂಶುಪಾಲ ಆಕ್ಷೇಪ; ತೆರೆಸಾ ಶಾಲೆ ಮೇಲೆ ಹಿಂದು ಕಾರ್ಯಕರ್ತರ ದಾಳಿ!

gold rate today 18
ಚಿನ್ನದ ದರ1 hour ago

Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

Rohit sharma
ಕ್ರೀಡೆ1 hour ago

Rohit Sharma: ಸ್ಮರಣೀಯ ಪಂದ್ಯವನ್ನಾಡಲು ಸಜ್ಜಾದ ರೋಹಿತ್​ ಶರ್ಮ

summer special trains
ಬೆಂಗಳೂರು1 hour ago

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌