Site icon Vistara News

IPL 2023 : ಐಪಿಎಲ್​ 16 ಆವೃತ್ತಿಗಳ ಚಾಂಪಿಯನ್​, ರನ್ನರ್ ಅಪ್​ ತಂಡಗಳ ವಿವರ

IPL 2023 Champion CSK

#image_title

ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಐಪಿಎಲ್​ 16ನೇ ಆವೃತ್ತಿಯ ಫೈನಲ್​ ಪಂದ್ಯದಲ್ಲಿ ಡಕ್​ವರ್ತ್​ ಲೂಯಿಸ್​ ಪ್ರಕಾರ ಗುಜರಾತ್​ ಟೈಟನ್ಸ್​ ತಂಡವನ್ನು ಐದು ವಿಕೆಟ್​ಗಳಿಂದ ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್​ಪಟ್ಟ ಅಲಂಕರಿಸಿದೆ. ಈ ಮೂಲಕ ಐದು ಬಾರಿ ಐಪಿಎಲ್​ ಟ್ರೋಫಿ ಗೆದ್ದ ತಂಡ ಎಂಬ ಖ್ಯಾತಿ ಪಾತ್ರವಾಗಿದ್ದು, ಈ ಹಿಂದೆ ಐದು ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿರುವ ಮುಂಬೈ ಜತೆ ಅಗ್ರ ಸ್ಥಾನ ಹಂಚಿಕೊಂಡಿದೆ. ಈ ಮೂಲಕ ಐಪಿಎಲ್​ 2023ನೇ ಆವೃತ್ತಿ ರೋಚಕ ಫೈನಲ್ ಪಂದ್ಯದೊಂದಿಗೆ ಮುಕ್ತಾಯಕಂಡಿದೆ. ಹಾಗಾದರೆ ಈ ಹಿಂದಿನ 15 ಐಪಿಎಲ್​ ಟ್ರೋಫಿಗಳು ಗೆದ್ದಿರುವ ತಂಡಗಳು ಯಾವುದು ಮತ್ತು ರನ್ನರ್ ಅಪ್​ ಸ್ಥಾನ ಪಡೆದ ಬಳಗ ಯಾವುದು ಎಂದು ನೋಡೋಣ.

2022ರಲ್ಲಿ ಗುಜರಾತ್​ ಟೈಟನ್ಸ್​

ಐಪಿಎಲ್​ನಲ್ಲಿ 15ನೇ ಆವೃತ್ತಿಯಲ್ಲಿ ​ರಾಜಸ್ಥಾನ್ ರಾಯಲ್ಸ್ ತಂಡವನ್ನು ಏಳು ವಿಕೆಟ್​​ಗಳಿಂದ ಸೋಲಿಸಿದ್ದ ಗುಜರಾತ್​ ಟೈಟನ್ಸ್ ತಂಡ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ಕೇವಲ 130 ರನ್​ ಕಲೆಹಾಕಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವು 18.1 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ 7 ವಿಕೆಟ್ ಜಯ ತನ್ನದಾಗಿಸಿಕೊಂಡಿತು.

2021ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​

ಐಪಿಎಲ್​ 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೋಫಿ ಗೆದ್ದಿತು. ಫೈನಲ್​ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ 27 ರನ್​ಗಳ ಅಂತರದ ವಿಜಯ ಸಾಧಿಸಿದ ಚಾಂಪಿಯನ್​ಪಟ್ಟ ಅಲಂಕರಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ 3 ವಿಕೆಟ್ ನಷ್ಟಕ್ಕೆ 192 ರನ್​ ಕಲೆಹಾಕಿತು. ಗುರಿ ಬೆನ್ನಟ್ಟಿದ್ದ ಕೆಕೆಆರ್​ 9 ವಿಕೆಟ್ ಕಳೆದುಕೊಂಡು 165 ರನ್​ಗಳಿಸಿ ಸೋಲೋಪ್ಪಿಕೊಂಡಿತು.

2020ರಲ್ಲಿ ಮುಂಬೈ ಇಂಡಿಯನ್ಸ್​​

2020ರ ಐಪಿಎಲ್ ಆವೃತ್ತಿಯಲ್ಲಿ ಮುಂಬಯಿ ಇಂಡಿಯನ್ಸ್​ ತಂಡ ಚಾಂಪಿಯನ್​ಪಟ್ಟ ಅಲಂಕರಿಸಿತು. ಮುಂಬಯಿ ಪಾಲಿಗೆ ಇದು ಐದನೇ ಟ್ರೋಫಿ. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್​ಗಳ ಸೋಲಿ ರೋಹಿತ್ ಶರ್ಮಾ ಬಳಗ ಸತತ ಎರಡನೇ ಬಾರಿ ಟ್ರೋಫಿ ಗೆದ್ದುಕೊಂಡಿತು.

2019ರಲ್ಲಿ ಮುಂಬಯಿ ಇಂಡಿಯನ್ಸ್​

ಇದು 12ನೇ ಆವೃತ್ತಿಯ ಐಪಿಎಲ್​. ಇದರ ಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಿದ್ದು ಬಲಿಷ್ಠ ತಂಡಗಳಾ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್. ಪಂದ್ಯದ ಕೊನೆಯ ಎಸೆತದಲ್ಲಿ 1 ರನ್​ಗಳಿಂದ ಜಯಗಳಿಸುವ ಮೂಲಕ ಮುಂಬಯಿ ತಂಡ ಟ್ರೋಫಿ ಗೆದ್ದುಕೊಂಡಿತು. ಈ ಮೂಲಕ ಚೆನ್ನೈಗೆ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲದಂತೆ ನೋಡಿಕೊಂಡಿತು.

2018ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​​

2018ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಸನ್​ ರೈಸರ್ಸ್​ ಹೈದರಾಬಾದ್​ ತಂಡ ಪರಸ್ಪರ ಮುಖಾಮುಖಿಯಾಗಿತ್ತು. ಅಂತಿಮವಾಗಿ ಚೆನ್ನೂ ತಂಡ 8 ವಿಕೆಟ್ ವಿಜಯ ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು.

2107ರಲ್ಲಿ ಮುಂಬಯಿ ಇಂಡಿಯನ್ಸ್​

ಹೈದರಾಬಾದ್​​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪುಣೆ ಸೂಪರ್​ ಜೈಂಟ್ಸ್ ತಂಡದ ವಿರುದ್ಧ ರೋಚಕ ಒಂದು ರನ್​ ಗೆಲುವು ಸಾಧಿಸಿದ ಮುಂಬೈ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.

2016ರಲ್ಲಿ ಎಸ್​ಆರ್​ಎಚ್​ ಚಾಂಪಿಯನ್​

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಫೈನಲ್ ಪಂದ್ಯ ನಡೆದಿತ್ತು. ಆತಿಥೇಯ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿದ್ದವು. ಆರ್​ಸಿಬಿಯನ್ನು 8 ರನ್​ಗಳಿಂದ ಮಣಿಸಿದ ಹೈದರಾಬಾದ್​ ತಂಡ ಟ್ರೋಫಿ ಗೆದ್ದಿತು.

2015ರಲ್ಲಿ ಮುಂಬಯಿ ಇಂಡಿಯನ್ಸ್​

ಕೋಲ್ಕೊತಾದ ಈಡನ್​ ಗಾರ್ಡನ್ಸ್​ನಲ್ಲಿ ಈ ಆವೃತ್ತಿಯ ಫೈನಲ್ ಪಂದ್ಯ ನಡೆದಿತ್ತು. ಚೆನ್ನೈ ಮತ್ತು ಮುಂಬಯಿ ತಂಡಗಳು ಪರಸ್ಪರ ಎದುರಾಗಿದ್ದವು. ಚೆನ್ನೈ ತಂಡವನ್ನು 41 ರನ್​ಗಳಿಂದ ಸೋಲಿಸಿದ ಮುಂಬಯಿ ಚಾಂಪಿಯನ್​ಪಟ್ಟ ಅಲಂಕರಿಸಿತು.

2014ರಲ್ಲಿ ಕೋಲ್ಕೊತಾ ನೈಟ್​ರೈಡರ್ಸ್​

ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆದಿತ್ತು. ಪಂಜಾಬ್ ಕಿಂಗ್ಸ್​ ಹಾಗೂ ಕೋಲ್ಕೊತಾ ನೈಟ್​ ರೈಡರ್ಸ್​ ತಂಡಗಳು ಎದುರಾಗಿದ್ದವು. ಕಿಂಗ್ಸ್​ ಬಳಗವನ್ನು 3 ವಿಕೆಟ್​ಗಳಿಂದ ಸೋಲಿಸಿದ ಕೆಕೆಅರ್​ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಕೆಕೆಆರ್​ ಪಾಲಿಗೆ ಇದು ಎರಡನೇ ಪ್ರಶಸ್ತಿ.

2013ರಲ್ಲಿ ಮುಂಬಯಿ ಇಂಡಿಯನ್ಸ್​

ರೋಹಿತ್ ಶರ್ಮಾ ನೇತೃತ್ವದ ಮುಂಬಯಿ ಇಂಡಿಯನ್ಸ್ ತಂಡ ಮೊದಲ ಬಾರಿಗೆ ಚಾಂಪಿಯನ್​ ಆಗಿದ್ದು ಇದೇ ವರ್ಷ. ಕೋಲ್ಕೊತಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು 23 ರನ್​ಗಳಿಂದ ಸೋಲಿಸಿದ್ದ ಮುಂಬಯಿ ಟ್ರೋಫಿ ತನ್ನದಾಗಿಸಿಕೊಂಡಿತ್ತು.

2012ಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​​

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್​ನಲ್ಲಿ ಫೈನಲ್​ ಹಣಾಹಣಿ ನಡೆದಿತ್ತು. ಆತಿಥೇಯ ಚೆನ್ನೈ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿದ ಕೆಕೆಆರ್ ಟ್ರೋಫಿ ಗೆದ್ದುಕೊಂಡಿತು.

2011ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​

ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಈ ಆವೃತ್ತಿಯ ಟ್ರೋಫಿಯನ್ನು ಗೆದ್ದುಕೊಂಡಿತು. ಫೈನಲ್ ಪಂದ್ಯ ಚನ್ನೈನಲ್ಲಿ ನಡೆದು ಬೆಂಗಳೂರು ತಂಡ 58 ರನ್​ಗಳ ಹೀನಾಯ ಸೋಲು ಕಂಡಿತ್ತು.

2010 ರಲ್ಲಿ ಚೆನ್ನೂ ಸೂಪರ್​ ಕಿಂಗ್ಸ್​

ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇದು ಐಪಿಎಲ್ ಇತಿಹಾಸದ ಮೊದಲ ಟ್ರೋಫಿ. ಮುಂಬಯಿಯ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದಿದ್ದ ಹಣಾಹಣಿಯಲ್ಲಿ ಮುಂಬಯಿ ಇಂಡಿಯನ್ಸ್​ ತಂಡವನ್ನು 22 ರನ್​ಗಳಿಂದ ಸೋಲಸಿದ್ದ ಚೆನ್ನೈ ಟ್ರೋಫಿ ಗೆದ್ದಿತ್ತು.

2009ರಲ್ಲಿ ಡೆಕ್ಕನ್​ ಚಾರ್ಜರ್ಸ್​​

ಈಗಿನ ಸನ್​ರೈಸರ್ಸ್​ ಹೈದರಾಬಾದ್​ ತಂಡ ಆಗ ಡೆಕ್ಕನ್​ ಚಾರ್ಜರ್ಸ್​ ಫ್ರಾಂಚೈಸಿಯಾಗಿತ್ತು. ಜೊಹಾನ್ಸ್​ಬರ್ಗ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು 6 ರನ್​ಗಳಿಂದ ಸೋಲಿಸಿದ್ದ ಡೆಕ್ಕನ್ ಚಾರ್ಜರ್ಸ್ ತಂಡ ಟ್ರೋಫಿ ಗೆದ್ದಿತ್ತು.

2008ರಲ್ಲಿ ರಾಜಸ್ಥಾನ್​ ರಾಯಲ್ಸ್​

ಇದು ಉದ್ಘಾಟನಾ ಆವೃತ್ತಿಯ ಐಪಿಎಲ್​. ಈ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು 3 ವಿಕೆಟ್​ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್​ ಟ್ರೋಫಿ ತನ್ನದಾಗಿಸಿಕೊಂಡಿತು.

Exit mobile version