Site icon Vistara News

IPL 2023: ಡೆವೋನ್​ ಕಾನ್ವೆ ಅಬ್ಬರ, ಪಂಜಾಬ್​ ವಿರುದ್ಧ 200 ರನ್​ ಬಾರಿಸಿದ ಚೆನ್ನೈ ಸೂಪರ್ ಕಿಂಗ್ಸ್​​

Devon Conway spear batting; Chennai Super Kings score 200 runs against Punjab

CSK

ಚೆನ್ನೈ: ಡೇವೋನ್ ಕಾನ್ವೆ (92) ಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಐಪಿಎಲ್​ನ ಭಾನುವಾರದ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ 200 ರನ್​ ​ ಬಾರಿಸಿದೆ. ಇದರೊಂದಿಗೆ ಪ್ರವಾಸಿ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ 201 ರನ್​​ಗಳ ಗುರಿ ಎದುರಾಗಿದೆ. ಆರಂಭದಿಂದಲೂ ಏಕ ರೀತಿಯಲ್ಲಿ ಬ್ಯಾಟಿಂಗ್ ಮಾಡಿಕೊಂಡು ಬಂದ ಆತಿಥೇಯ ತಂಡ ಎದುರಾಳಿ ತಂಡಕ್ಕೆ ದೊಡ್ಡ ಮೊತ್ತದ ಸವಾಲೊಡ್ಡುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಚಿದಂಬರಮ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರಕ್ಕೆ ಪೂರಕವಾಗಿ ಆಡಿದ ಚೆನ್ನೈ ತಂಡದ ಬ್ಯಾಟರ್​ಗಳು 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 200 ರನ್​ ಬಾರಿಸಿತು.

ಬ್ಯಾಟಿಂಗ್ ಆರಂಭಿಸಿದ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಭದ್ರ ಅಡಿಪಾಯ ಪಡೆಯಿತು. ಡೆವೋನ್​ ಕಾನ್ವೆ ಹಾಗೂ ಋತುರಾಜ್ ಗಾಯಕ್ವಾಡ್​ (37) ಮೊದಲ ವಿಕೆಟ್​ಗೆ 86 ರನ್ ಬಾರಿಸಿದರು. ಆದರೆ, 9.4 ಓವರ್​ಲ್ಲಿ ಈ ಜೋಡಿ ಬೇರ್ಪಟ್ಟಿತು. ಸ್ಪಿನ್ನರ್ ಸಿಕಂದರ್​ ರಾಜಾ ಎಸೆತಕ್ಕೆ ಗಾಯಕ್ವಾಡ್ ಸ್ಟಂಪ್​ ಔಟ್​ ಆದರು. ಬಳಿಕ ಆಡಲು ಬಂದ ಶಿವಂ ದುಬೆ ಎಂದಿನಂತೆ ಸ್ಪೋಟಕ ಬ್ಯಾಟಿಂಗ್​ ಮಾಡಲು ಮುಂದಾದರು. 17 ಎಸೆತಕ್ಕೆ 28 ರನ್ ಬಾರಿಸಿದ ಅವರು ಸಿಕ್ಸರ್​ ಬಾರಿಸಲು ಹೋಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಸ್ಪಿನ್ನರ್ ಮೊಯೀನ್​ ಅಲಿ 10 ರನ್​ಗೆ ಸೀಮಿತಗೊಂಡರು. ರವೀಂದ್ರ ಜಡೇಜಾ (12) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಕಾನ್ವೆ ಅಬ್ಬರ

ನ್ಯೂಜಿಲ್ಯಾಂಡ್​ ತಂಡದ ಬ್ಯಾಟರ್ ಡೆವೋನ್ ಕಾನ್ವೆ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ನಡೆಸಿದರು. ಋತುರಾಜ್​ ಜತೆ ಉತ್ತಮ ಜತೆಯಾಟ ನೀಡಿದ ಅವರು 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಕೊನೇ ತನಕ ಔಟಾಗದೇ ಉಳಿದ ಅವರು 92 ರನ್ ಬಾರಿಸಿದರು. ಅವರು 8 ರನ್​ಗಳಿಂದ ಕೊರತೆಯಿಂದ ಟೂರ್ನಿಯ ಎರಡನೇ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಕಾನ್ವೆ ಇನಿಂಗ್ಸ್​ನಲ್ಲಿ 16 ಫೋರ್ ಹಾಗೂ 1 ಸಿಕ್ಸರ್ ಸೇರಿಕೊಂಡಿದೆ.

ಧೋನಿ ಸಿಕ್ಸರ್

41 ವರ್ಷದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಅಭಿಮಾನಿಗಳನ್ನು ಸತತ ಎರಡು ಸಿಕ್ಸರ್​ಗಳ ಮೂಲಕ ರಂಜಿಸಿದರು. ಇನಿಂಗ್ಸ್ ಮುಕ್ತಾಯಕ್ಕೆ ಐದು ಎಸೆತಗಳು ಬಾಕಿ ಇರುವಾಗ ಬಂದ ಅವರು ನಾಲ್ಕು ಎಸೆಗಳನ್ನು ಬಳಸಿಕೊಂಡು 13 ರನ್​ ಬಾರಿಸಿದರು, ಅದರಲ್ಲಿ ಎರಡು ಸಿಕ್ಸರ್​ಗಳು ಸೇರಿಕೊಂಡಿವೆ.

Exit mobile version