1. Siddheshwar Swamiji | ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ? ಚೇತರಿಕೆಗೆ ಕೋಟ್ಯಂತರ ಭಕ್ತರ ಪ್ರಾರ್ಥನೆ
ವಿಜಯಪುರ ಜ್ಞಾನಯೋಗಾಶ್ರಮದಲ್ಲೇ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಸ್ವಾಮೀಜಿಯವರ ಆರೋಗ್ಯ ಚೇತರಿಕೆಗಾಗಿ ಕೋಟ್ಯಂತರ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸ್ವಾಮೀಜಿ ದರ್ಶನಕ್ಕಾಗಿ ಸಾವಿರಾರು ಭಕ್ತರು ಜ್ಞಾನಯೋಗಾಶ್ರಮದತ್ತ ಧಾವಿಸುತ್ತಿದ್ದಾರೆ. ಈ ಕುರಿತ ಸಮಗ್ರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ…
2. KMF Nandini | ನಂದಿನಿಗಿದೆ ಪ್ರತ್ಯೇಕ ಅಸ್ತಿತ್ವ; ಶಾ ಹೇಳಿದ್ದೇ ಒಂದು, ಅರ್ಥೈಸಿಕೊಂಡಿದ್ದೇ ಇನ್ನೊಂದು: ಸಿಎಂ ಬೊಮ್ಮಾಯಿ
ಅಮೂಲ್-ಕೆಎಂಎಫ್ ವಿಲೀನ ವಿವಾದದ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ…
3. Road Accident | ಹಲವರ ಬಾಳಲ್ಲಿ ಕತ್ತಲೆ ತಂದ ಹೊಸ ವರ್ಷದ ಮೊದಲ ದಿನ; ವಿವಿಧೆಡೆ ಅಪಘಾತಗಳಿಗೆ 10 ಮಂದಿ ಸಾವು
ಕೊರೊನಾ ಸಹಿತ ಕಹಿ ಘಟನೆಗಳನ್ನು ಮರೆತು ೨೦೨೩ರ ನೂತನ ವರ್ಷಕ್ಕೆ ಕಾಲಿಡಲಾಗಿದೆ. ಆದರೆ, ಹೊಸ ವರ್ಷದ ಮೊದಲ ದಿನವೇ ಹಲವರ ಬಾಳಲ್ಲಿ ಕತ್ತಲೆ ಕವಿಯುವಂತೆ ಮಾಡಿದೆ. ರಾಜ್ಯದ ಹಲವು ಕಡೆ ಭಾನುವಾರ (ಜ.೧) ಅಪಘಾತಗಳು ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಈ ಮೂಲಕ ಹಲವರ ಬಾಳಲ್ಲಿ ಕರಾಳ ಭಾನುವಾರವಾಗಿ (Road Accident) ಈ ದಿನ ಪರಿಣಮಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
4. Food Security Scheme | 80 ಕೋಟಿಗೂ ಅಧಿಕ ಮಂದಿಗೆ ಉಚಿತ ಆಹಾರ ಧಾನ್ಯ!
ನರೇಂದ್ರ ಮೋದಿ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಸಮಗ್ರ ಆಹಾರ ಭದ್ರತಾ ಯೋಜನೆಯನ್ನು 2023 ಜನವರಿ 1ರಿಂದ ಮುಂದುವರಿಸಲಾಗಿದೆ. ಈ ಯೋಜನೆಯಡಿ ದೇಶದ 80 ಕೋಟಿಗೂ ಅಧಿಕ ಜನರು ಉಚಿತ ಆಹಾರ ಧಾನ್ಯವನ್ನು ಪಡೆಯಲಿದ್ದಾರೆ. ಈ ಕುರಿತ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
5. India Pakistan Exchange List | ಅಣ್ವಸ್ತ್ರ, ಕೈದಿಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಂಡ ಭಾರತ-ಪಾಕಿಸ್ತಾನ
ಭಾರತ ಹಾಗೂ ಪಾಕಿಸ್ತಾನವು ಒಪ್ಪಂದದಂತೆ ಪರಸ್ಪರ ಅಣ್ವಸ್ತ್ರ ಘಟಕಗಳು, ಬಂಧಿತ ನಾಗರಿಕರು ಹಾಗೂ ಮೀನುಗಾರರ ಪಟ್ಟಿಯನ್ನು (India Pakistan Exchange List) ಹಂಚಿಕೊಂಡಿವೆ. “ಅಣ್ವಸ್ತ್ರ ಘಟಕಗಳು, ಅಣ್ವಸ್ತ್ರ ಸೇರಿ ಹಲವು ಮಾಹಿತಿಯುಳ್ಳ ಪಟ್ಟಿಯನ್ನು ಇಸ್ಲಾಮಾಬಾದ್‌ನಲ್ಲಿರುವ ಭಾರತದ ಹೈಕಮಿಷನ್‌ನಲ್ಲಿ ಹಂಚಿಕೊಳ್ಳಲಾಗಿದೆ” ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ. ಹಾಗೆಯೇ, ಭಾರತ ಕೂಡ ಮಾಹಿತಿ ಹಂಚಿಕೊಂಡಿರುವುದನ್ನು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
6. WhatsApp error | ವಿರೂಪಗೊಳಿಸಿದ ಭಾರತದ ಭೂಪಟ ಪ್ರಕಟಿಸಿದ್ದಕ್ಕಾಗಿ ಕ್ಷಮೆಯಾಚಿಸಿದ ವಾಟ್ಸ್ ಆ್ಯಪ್
ವಿರೂಪಗೊಳಿಸಿದ ಭಾರತದ ಭೂಪಟವನ್ನು ಪ್ರಕಟಿಸಿದ್ದಕ್ಕಾಗಿ ವಾಟ್ಸ್ ಆ್ಯಪ್ (WhatsApp error) ಕ್ಷಮೆಯಾಚಿಸಿದೆ. ವಿರೂಪಗೊಳಿಸಿದ ಭೂಪಟವನ್ನು ಪ್ರಕಟಿಸಿದ್ದನ್ನು ಗಮನಿಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ತಕ್ಷಣ ಸರಿಪಡಿಸುವಂತೆ ವಾಟ್ಸ್ ಆ್ಯಪ್‌ಗೆ ಸೂಚಿಸಿದ್ದರು. ಭಾರತದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಕಂಪನಿ ಸರಿಯಾದ ಭೂಪಟವನ್ನು ಬಳಸಬೇಕು ಎಂದು ಟ್ವೀಟ್ ಮಾಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
7. Tirumala Tirupati Hundi | 2022ರಲ್ಲಿ ತಿರುಮಲ ತಿರುಪತಿ ಹುಂಡಿಯಲ್ಲಿ 1,451 ಕೋಟಿ ರೂ. ಕಾಣಿಕೆ ಸಂಗ್ರಹ!
2022ರ ಸಾಲಿನಲ್ಲಿ ತಿರುಮಲ ತಿರುಪತಿ ವೆಂಕಟೇಶ್ವರ ಹುಂಡಿಯಿಂದ (Tirumala Tirupati Hundi) ಒಟ್ಟು 1,451.15 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕಾಣಿಕೆಯ ಪ್ರಮಾಣವೂ ಹೆಚ್ಚಳವಾಗಿದೆ. ಕಳೆದ ವರ್ಷ 833.41 ಕೋಟಿ ರೂ. ಕಾಣಿಕೆ ಸಂಗ್ರಹವಾಗಿತ್ತು ಎಂದು ಶ್ರೀಕ್ಷೇತ್ರದ ನಿರ್ವಹಣೆಯ ಹೊಣೆಯನ್ನು ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್(TTD) ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
8. LPG Price Hike | ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ; ಹೊಸ ವರ್ಷದ ಮೊದಲ ದಿನವೇ ದರ ಏರಿಕೆ ಹೊರೆ
ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಹೊಸ ವರ್ಷದ ಮೊದಲನೇ ದಿನವೇ ಒಂದು ಬ್ಯಾಡ್ನ್ಯೂಸ್ ಕೊಟ್ಟಿವೆ. 19 ಕೆಜಿ, ವಾಣಿಜ್ಯ ಬಳಕೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನು 25 ರೂಪಾಯಿ ಏರಿಸಿವೆ. ಈ ಮಧ್ಯೆ ಸಮಾಧಾನಕರ ಸಂಗತಿಯೆಂದರೆ, 14 ಕೆಜಿಯ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಏರಿಕೆ ಮಾಡದೆ ಇರುವುದು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
9. Nyoma Airfiled | ಚೀನಾಕ್ಕೆ ಪ್ರತ್ಯುತ್ತರ ನೀಡಲು ಲಡಾಕ್‌ನಲ್ಲಿ ನ್ಯೋಮಾ ಏರ್‌ಫೀಲ್ಡ್ ನಿರ್ಮಾಣ
ಲಡಾಕ್‌ನ ನ್ಯೋಮಾದಲ್ಲಿ ಭಾರತ ಹೊಸ ಏರ್‌ಫೀಲ್ಡ್ ಅನ್ನು ನಿರ್ಮಾಣ ಮಾಡುತ್ತಿದ್ದು, ಗಡಿ ಭಾಗದಲ್ಲಿ ಎಲ್‌ಒಸಿಯ ಆಚೆಗೆ ಮೂಲಸೌಕರ್ಯಗಳನ್ನು ಹೆಚ್ಚಿಸುತ್ತಿರುವ ಚೀನಾಕ್ಕೆ ಪ್ರತ್ಯುತ್ತರ ನೀಡಲು (Nyoma Airfiled) ಸಹಕಾರಿಯಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
10. New Year liquor sale | 9 ದಿನಗಳಲ್ಲಿ 1262 ಕೋಟಿ ರೂ. ಮದ್ಯ ಮಾರಾಟ, ಅಬಕಾರಿ ಇಲಾಖೆಗೆ 657 ಕೋಟಿ. ರೂ. ಆದಾಯ
ಹೊಸ ವರ್ಷದ ಸಂಭ್ರಮದಲ್ಲಿ ಲಕ್ಷಾಂತರ ಲೀಟರ್ ಮದ್ಯ ಮಾರಾಟವಾಗಿದ್ದು, ಅಬಕಾರಿ ಇಲಾಖೆ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ಹರಿದು ಬಂದಿದೆ. ಅದರಲ್ಲೂ ಕ್ರಿಸ್ ಮಸ್ ಮತ್ತು ಹೊಸ ವರ್ಷದ ನಡುವೆ ಭರ್ಜರಿ ಲಿಕ್ಕರ್ ಸೇಲ್ಸ್ ದಾಖಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇತರ ಪ್ರಮುಖ ಸುದ್ದಿಗಳು
೧. ಪಂತ್ ಆರೋಗ್ಯ ಚೇತರಿಕೆ
೨. ಇಬ್ಬರು ಒಟ್ಟಿಗೆ ವಾಸಿಸುವುದು ಅನೈತಿಕವಲ್ಲ: ಅಲಹಾಬಾದ್ ಹೈಕೋರ್ಟ್
೩. ನವ ಭಾರತ ಪಿತಾಮಹ ಏನು ಮಾಡಿದ್ದಾರೆ? ಮೋದಿಗೆ ನಿತೀಶ್ ಕುಮಾರ್ ಟಾಂಗ್
೪. ಕೇಸರಿ ತುಂಡುಡುಗೆ ತೊಟ್ಟ ಅಗ್ನಿಹೋತ್ರಿ ಪುತ್ರಿ
೫. ಹರಿಯಾಣ ಕ್ರೀಡಾ ಸಚಿವ ರಾಜೀನಾಮೆ
೬. ಅಂಕಣ: ಪೋಸ್ಟ್ ಬಾಕ್ಸ್ 143