ಸೇಂಟ್ ಕಿಟ್ಸ್ : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ವೆಸ್ಟ್ ಇಂಡೀಸ್ ವಿರುದ್ಧ ಟಿ೨೦ ಸರಣಿಯ (Ind vs WI T20) ಮೂರನೇ ಪಂದ್ಯದ ವೇಳೆ ಅವರು ರಿಟೈರ್ಡ್ ಹರ್ಟ್ ಆದ ಬಳಿಕ ಈ ಚರ್ಚೆ ಶುರುವಾಗಿದೆ.
ವಿಂಡೀಸ್ ವಿರುದ್ಧ ಪಂದ್ಯದಲ್ಲಿ ಅವರು ಆರಂಭಿಕರಾಗಿ ಬ್ಯಾಟ್ ಮಾಡಿದ ರೋಹಿತ್ ಶರ್ಮ ಅವರು ಒಂದು ಸಿಕ್ಸರ್, ಒಂದು ಫೋರ್ ಸಮೇತ ೫ ಎಸೆತಗಳಲ್ಲಿ ೧೧ ರನ್ ಬಾರಿಸಿ ಸ್ಫೋಟಕ ಪ್ರದರ್ಶನ ನೀಡುವ ಮುನ್ಸೂಚನೆ ಕೊಟ್ಟಿದ್ದರು. ಈ ವೇಳೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಫಿಸಿಯೊ ಮೈದಾನಕ್ಕೆ ಇಳಿದು ಅವರಿಗೆ ಪುನಶ್ಚೇತನ ಕೊಡುವ ಪ್ರಯತ್ನ ಮಾಡಿದರೂ ಅದರಿಂದ ಪ್ರಯೋಜನ ಸಿಗಲಿಲ್ಲ. ಹೀಗಾಗಿ ಅವರು ರಿಟೈರ್ಟ್ ಹರ್ಟ್ ಅಗಿ ಕ್ರೀಸ್ ತೊರೆಯಬೇಕಾಯಿತು.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಶರ್ಮ ಅವರ ಫಿಟ್ನೆಸ್ ಬಗ್ಗೆ ಚರ್ಚೆ ಆರಂಭಗೊಂಡಿತು. ರೋಹಿತ್ ಅವರು ಕಳೆದೆರಡು ವರ್ಷಗಳಿಂದ ಸಾಕಷ್ಟು ಸರಣಿಗಳಿಂದ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆಗಾಗ ಗಾಯಗೊಳ್ಳುತ್ತಿದ್ದಾರೆ. ಕಾಯಂ ನಾಯಕರಾಗಿರುವ ಹೊರತಾಗಿಯೂ ಅವರ ಸೇವೆ ಟೀಮ್ ಇಂಡಿಯಾಗೆ ಎಲ್ಲ ಕಾಲದಲ್ಲೂ ದೊರೆಯುತ್ತಿಲ್ಲ,” ಎಂಬುದಾಗಿ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
“ಏಷ್ಯಾ ಕಪ್ ಟಿ೨೦ ಕ್ರಿಕೆಟ್ ಟೂರ್ನಿ ಹಾಗೂ ಟಿ೨೦ ವಿಶ್ವ ಕಪ್‌ಗೆ ಮೊದಲು ರೋಹಿತ್ ಶರ್ಮ ಗಾಯಗೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಅವರ ಸೇವೆ ವಿಶ್ವ ಕಪ್ ಆಡುವ ಭಾರತ ತಂಡಕ್ಕೆ ದೊರೆಯಬೇಕಾಗಿದೆ,” ಎಂದು ಕೆಲವರು ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ | IND v/s WI T20| ಬೆಳಗಿದ ಸೂರ್ಯ; ಭಾರತಕ್ಕೆ ಅಧಿಕಾರಯುತ ಜಯ, ಸರಣಿ 2-1 ಮುನ್ನಡೆ