Ind vs WI T20 | ರೋಹಿತ್‌ ಫಿಟ್ನೆಸ್‌ ಬಗ್ಗೆ ಮತ್ತೆ ಚರ್ಚೆ, ಗಾಯಗೊಂಡರೇ ಹಿಟ್‌ಮ್ಯಾನ್‌ - Vistara News

ಕ್ರಿಕೆಟ್

Ind vs WI T20 | ರೋಹಿತ್‌ ಫಿಟ್ನೆಸ್‌ ಬಗ್ಗೆ ಮತ್ತೆ ಚರ್ಚೆ, ಗಾಯಗೊಂಡರೇ ಹಿಟ್‌ಮ್ಯಾನ್‌

Ind vs WI T20 ಮೂರನೇ ಟಿ20 ಪಂದ್ಯದಲ್ಲಿ ಗಾಯಗೊಂಡಿರುವ ಭಾರತ ತಂಡದ ಕಾಯಂ ನಾಯಕ ರೋಹಿತ್‌ ಶರ್ಮ ಅವರ ಫಿಟ್ನೆಸ್‌ ಕುರಿತು ಮತ್ತೆ ಚರ್ಚೆ ಆರಂಭಗೊಂಡಿದೆ.

VISTARANEWS.COM


on

ind vs wi t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೇಂಟ್‌ ಕಿಟ್ಸ್‌ : ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ವೆಸ್ಟ್‌ ಇಂಡೀಸ್‌ ವಿರುದ್ಧ ಟಿ೨೦ ಸರಣಿಯ (Ind vs WI T20) ಮೂರನೇ ಪಂದ್ಯದ ವೇಳೆ ಅವರು ರಿಟೈರ್ಡ್‌ ಹರ್ಟ್‌ ಆದ ಬಳಿಕ ಈ ಚರ್ಚೆ ಶುರುವಾಗಿದೆ.

ವಿಂಡೀಸ್‌ ವಿರುದ್ಧ ಪಂದ್ಯದಲ್ಲಿ ಅವರು ಆರಂಭಿಕರಾಗಿ ಬ್ಯಾಟ್‌ ಮಾಡಿದ ರೋಹಿತ್‌ ಶರ್ಮ ಅವರು ಒಂದು ಸಿಕ್ಸರ್‌, ಒಂದು ಫೋರ್‌ ಸಮೇತ ೫ ಎಸೆತಗಳಲ್ಲಿ ೧೧ ರನ್‌ ಬಾರಿಸಿ ಸ್ಫೋಟಕ ಪ್ರದರ್ಶನ ನೀಡುವ ಮುನ್ಸೂಚನೆ ಕೊಟ್ಟಿದ್ದರು. ಈ ವೇಳೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಫಿಸಿಯೊ ಮೈದಾನಕ್ಕೆ ಇಳಿದು ಅವರಿಗೆ ಪುನಶ್ಚೇತನ ಕೊಡುವ ಪ್ರಯತ್ನ ಮಾಡಿದರೂ ಅದರಿಂದ ಪ್ರಯೋಜನ ಸಿಗಲಿಲ್ಲ. ಹೀಗಾಗಿ ಅವರು ರಿಟೈರ್ಟ್‌ ಹರ್ಟ್ ಅಗಿ ಕ್ರೀಸ್‌ ತೊರೆಯಬೇಕಾಯಿತು.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್‌ ಶರ್ಮ ಅವರ ಫಿಟ್ನೆಸ್‌ ಬಗ್ಗೆ ಚರ್ಚೆ ಆರಂಭಗೊಂಡಿತು. ರೋಹಿತ್‌ ಅವರು ಕಳೆದೆರಡು ವರ್ಷಗಳಿಂದ ಸಾಕಷ್ಟು ಸರಣಿಗಳಿಂದ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಆಗಾಗ ಗಾಯಗೊಳ್ಳುತ್ತಿದ್ದಾರೆ. ಕಾಯಂ ನಾಯಕರಾಗಿರುವ ಹೊರತಾಗಿಯೂ ಅವರ ಸೇವೆ ಟೀಮ್‌ ಇಂಡಿಯಾಗೆ ಎಲ್ಲ ಕಾಲದಲ್ಲೂ ದೊರೆಯುತ್ತಿಲ್ಲ,” ಎಂಬುದಾಗಿ ಕ್ರಿಕೆಟ್‌ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

“ಏಷ್ಯಾ ಕಪ್‌ ಟಿ೨೦ ಕ್ರಿಕೆಟ್‌ ಟೂರ್ನಿ ಹಾಗೂ ಟಿ೨೦ ವಿಶ್ವ ಕಪ್‌ಗೆ ಮೊದಲು ರೋಹಿತ್‌ ಶರ್ಮ ಗಾಯಗೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಅವರ ಸೇವೆ ವಿಶ್ವ ಕಪ್‌ ಆಡುವ ಭಾರತ ತಂಡಕ್ಕೆ ದೊರೆಯಬೇಕಾಗಿದೆ,” ಎಂದು ಕೆಲವರು ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ | IND v/s WI T20| ಬೆಳಗಿದ ಸೂರ್ಯ; ಭಾರತಕ್ಕೆ ಅಧಿಕಾರಯುತ ಜಯ, ಸರಣಿ 2-1 ಮುನ್ನಡೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

James Anderson: 2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ

VISTARANEWS.COM


on

James Anderson
Koo

ಲಂಡನ್​: ಇಂಗ್ಲೆಂಡ್​ ತಂಡದ ಹಿರಿಯ ವೇಗಿ ಜೇಮ್ಸ್​ ಆ್ಯಂಡರ್ಸನ್(James Anderson)​ ಅವರು ತಮ್ಮ 22 ವರ್ಷಗಳ ಸುದೀರ್ಘ ಅಂತಾರಾಷ್ಟೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ತೆರೆ ಎಳೆದಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧ ಇಂದು(ಶುಕ್ರವಾರ) ಮುಕ್ತಾಯ ಕಂಡ ಟೆಸ್ಟ್​ ಪಂದ್ಯ ಅವರಿಗೆ ಕೊನೆಯ ಪಂದ್ಯವಾಯಿತು. ಈ ಪಂದ್ಯವನ್ನು ಇಂಗ್ಲೆಂಡ್​ ಇನಿಂಗ್ಸ್​ ಹಾಗೂ 114 ರನ್​ಗಳಿಂದ ಗೆದ್ದು ಬೀಗಿತು. ಆ್ಯಂಡರ್ಸನ್​ಗೂ ಗೆಲುವಿನ ವಿದಾಯ ಲಭಿಸಿತು. ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ 41 ವರ್ಷದ ಆ್ಯಂಡರ್ಸನ್, ವಿದಾಯಕ್ಕೆ ಸಚಿನ್​ ತೆಂಡೂಲ್ಕರ್(Sachin Tendulkar) ಭಾವನಾತ್ಮಕ​ ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.

‘ಹೇ ಜಿಮ್ಮಿ!.. ನಿಮ್ಮ ಆ ನಂಬಲಾಗದ 22 ವರ್ಷಗಳ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದೀರಿ. ನೀಮ್ಮ ವಿದಾಯದ ಸಂದರ್ಭದಲ್ಲಿ ನನ್ನದೊಂದು ಸಣ್ಣ ಹಾರೈಕೆ ಇದೆ. ನೀವು ಬೌಲಿಂಗ್ ಮಾಡುವುದನ್ನು ವೀಕ್ಷಿಸುವುದೇ ಒಂದು ರೀತಿಯ ಸಂತೋಷ. ಆ ನಿಮ್ಮ ಶೈಲಿ, ವೇಗ, ನಿಖರತೆ, ಸ್ವಿಂಗ್ ಮತ್ತು ಫಿಟ್ನೆಸ್ ಮುಂದಿನ ಪೀಳಿಗೆಯ ಬೌಲರ್​ಗಳಿಗೆ ಸ್ಫೂರ್ತಿ. ಮುಂದಿನ ಜೀವನವನ್ನು ಕುಟುಂಬದೊಂದಿಗೆ ಆನಂದಿಸಿ” ಎಂದು ಹಾರೈಸಿದ್ದಾರೆ.

ಆ್ಯಂಡರ್ಸನ್​ ಇಂಗ್ಲೆಂಡ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ, ಟೆಸ್ಟ್ ಕ್ರಿಕೆಟ್‌ನಲ್ಲಿ 700ಕ್ಕೂ ಅಧಿಕ ವಿಕೆಟ್‌ ಪಡೆದ ವಿಶ್ವದ ಮೊದಲ ವೇಗಿ ಹಾಗೂ ಒಟ್ಟಾರೆ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. ವಿದಾಯ ಪಂದ್ಯದಲ್ಲೇ ಆ್ಯಂಡರ್ಸನ್​ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದು ಕೂಡ ವಿಶೇಷ. ದ್ವಿತೀಯ ಇನಿಂಗ್ಸ್​ನಲ್ಲಿ 10 ಓವರ್​ ಪೂರ್ತಿಗೊಳಿಸುವ ಮೂಲಕ ಜೇಮ್ಸ್​ ಆ್ಯಂಡರ್ಸನ್ 40 ಸಾವಿರ ಚೆಂಡೆಸೆದ ದಾಖಲೆ ನಿರ್ಮಿಸಿದರು. ಈ ದಾಖಲೆ ಮಾಡಿದ ವಿಶ್ವದ ಮೊದಲ ವೇಗಿ ಎನಿಸಿಕೊಂಡರು. ಅತಿ ಹೆಚ್ಚು ಎಸೆತಗಳನ್ನು ಎಸೆದ ವಿಶ್ಚ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದೆ. ಮುರಳೀಧರನ್ 44039 ಎಸೆತಗಳನ್ನು ಎಸೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ 40850 ಎಸೆತಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿದಾಯ ಪಂದ್ಯದಲ್ಲಿ ಆ್ಯಂಡರ್ಸನ್​ ಒಟ್ಟು 4 ವಿಕೆಟ್​ ಕಿತ್ತು ಮಿಂಚಿದರು.

ಇದನ್ನೂ ಓದಿ Viral Video: ಆ್ಯಂಡರ್ಸನ್ ಬೌಲಿಂಗ್​ಗೆ ನೆಟ್​ ಫ್ರಾಕ್ಟೀಸ್ ಮಾಡಿ ತಂಡ ಸೇರುವ ಬಯಕೆ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ

3 ತಿಂಗಳ ಹಿಂದೆ ಆ್ಯಂಡರ್ಸನ್​ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. “ಎಲ್ಲರಿಗೂ ನಮಸ್ಕಾರ, ಈ ಬೇಸಿಗೆಯಲ್ಲಿ ಲಾರ್ಡ್ಸ್‌ನಲ್ಲಿ ನಡೆಯುವ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್ ಪಂದ್ಯ, ನನ್ನ ಕೊನೆಯ ಪಂದ್ಯವಾಗಿರಲಿದೆ. ಬಾಲ್ಯದಿಂದ ಇಷ್ಟಪಟ್ಟಿದ ಆಟವನ್ನು ಆಡಲು, ನನ್ನ ದೇಶವನ್ನು ಪ್ರತಿನಿಧಿಸಿದ 20 ಅದ್ಭುತ ವರ್ಷಗಳಿವು. ಇಂಗ್ಲೆಂಡ್ ತಂಡಕ್ಕಾಗಿ ಆಡುವುದನ್ನು ನಾನು ಮಿಸ್‌ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದರು. 

2003ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆ್ಯಂಡರ್ಸನ್‌, ಈವರೆಗೂ 188 ಪಂದ್ಯಗಳಲ್ಲಿ 704 ವಿಕೆಟ್‌ ಗಳಿಸಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್‌ ಹಾಗೂ ಆಸ್ಟ್ರೇಲಿಯಾದ ಶೇನ್‌ ವಾರ್ನ್‌ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಸ್ಥಾನದಲ್ಲಿ ಆ್ಯಂಡರ್ಸನ್‌ ಇದ್ದಾರೆ. 194 ಏಕದಿನ ಪಂದ್ಯಗಳನ್ನು ಆಡಿರುವ ಅವರು, 269 ವಿಕೆಟ್‌ಗಳನ್ನು ಪಡೆದಿದ್ದಾರೆ.

 

Continue Reading

ಕ್ರೀಡೆ

Champions Trophy 2025: ಚಾಂಪಿಯನ್ಸ್‌ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?

Champions Trophy 2025: ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ

VISTARANEWS.COM


on

Champions Trophy 2025
Koo

ಮುಂಬಯಿ: ಮುಂದಿನ ವರ್ಷ(2025ರ) ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಬೇಕಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯನ್ನು(Champions Trophy 2025) ಪಾಕಿಸ್ತಾನದಿಂದ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ICC) ಮೇಲೆ ಬಿಸಿಸಿಐ(BCCI) ಒತ್ತಡ ಹೇರುತ್ತಿದೆ ಎಂಬ ಮಾತುಗಳು ಈಗಾಗಲೇ ಕೇಳಿಬಂದಿವೆ. ಭಾರತ ತಂಡ(Team India) ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಟೂರ್ನಿ ಸ್ಥಳಾಂತರಕ್ಕೆ ಒತ್ತಡ ಹೇರಲಾಗುತ್ತಿದೆ ಎಂದು ಗೊತ್ತಾಗಿದೆ. ಆದರೆ ಐಸಿಸಿ ಇದಕ್ಕೆ ಸಮ್ಮತಿ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.

ಒಂದೊಮ್ಮೆ ಟೂರ್ನಿ ಪಾಕ್​ನಲ್ಲಿಯೇ ನಡೆದು, ಭಾರತ ತಂಡ ಪಾಲ್ಗೊಳ್ಳಲಿದ್ದರೆ ಆಗ ಯಾವ ತಂಡಕ್ಕೆ ಅವಕಾಶ ಸಿಗಲಿದೆ ಎಂಬ ಪ್ರಶ್ನೆ ಕ್ರಿಕೆಟ್​ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ. ಐಸಿಸಿ ನಿಯಮಗಳ ಪ್ರಕಾರ 2023ರ ಸಾಲಿನ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯ ಅಗ್ರ 7ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಆತಿಥೇಯ ದೇಶಕ್ಕೆ ನೇರವಾಗಿ ಅರ್ಹತೆ ಸಿಗುತ್ತದೆ. ಒಟ್ಟು 8 ತಂಡಗಳು ಅರ್ಹತೆ ಪಡೆದಿದೆ.

ಲಂಕಾಗೆ ಸಿಗಲಿದೆ ಅವಕಾಶ

ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿದರೆ, 9ನೇ ಸ್ಥಾನಿಯಾಗಿರುವ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಯಾವುದೇ ತಂಡವು ಐಸಿಸಿ ಟೂರ್ನಿಯಿಂದ ಹಿಂದೆ ಸರಿದರೆ ಅಂಕಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿರುವ ತಂಡ ತಂಡಕ್ಕೆ ಅರ್ಹತೆ ನೀಡಲಾಗುತ್ತದೆ. ಪ್ರಸ್ತುತ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್​, ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್​ ಮತ್ತು ಬಾಂಗ್ಲಾದೇಶ ಅರ್ಹತೆ ಪಡೆದ ತಂಡಗಳಾಗಿವೆ.

ಇದನ್ನೂ ಓದಿ Champions Trophy 2025: ಪಾಕ್​ನಲ್ಲೇ ನಡೆಯಲಿದೆ ಚಾಂಪಿಯನ್ಸ್​ ಟ್ರೋಫಿ; ಸಾಗರೋತ್ತರ ತಟಸ್ಥ ತಾಣದಲ್ಲಿ ಭಾರತದ ಪಂದ್ಯ?

ಹಿಂದಿನ ನಿಯಮ ಹೇಗಿತ್ತು?

ಆರಂಭದಲ್ಲಿ ಅಂದರೆ 2013 ಮತ್ತು 2017ರ ಸಾಲಿನ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ವೇಳೆ ಅರ್ಹತೆಯ ನಿಯಮಗಳು ಬೇರೆ ರೀತಿಯಲ್ಲಿತ್ತು. ಟೂರ್ನಿ ಆರಂಭದ ನಿಗಧಿತ ಅವಧಿಯ ಅಂತ್ಯಕ್ಕೆ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 8ರಲ್ಲಿ ಸ್ಥಾನ ಪಡೆಯುವ ತಂಡಗಳು ನೇರವಾಗಿ ಅರ್ಹತೆ ಪಡೆಯುತ್ತಿದ್ದವು. ಆದರೆ ಈ ಬಾರಿ ಮಾತ್ರ ವಿಶ್ವಕಪ್‌ ಟೂರ್ನಿಯ ಅಂಕಪಟ್ಟಿಯನ್ನು ಆಧರಿಸಿ ಅರ್ಹತೆಯನ್ನು ನೀಡಲಾಗಿದೆ.

ಹೊರಬೀಳುವ ಆತಂಕದಲ್ಲಿತ್ತು ಇಂಗ್ಲೆಂಡ್​!

ಕ್ರಿಕೆಟ್​ ಜನಕರ ನಾಡು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್​ ತಂಡ ಕಳೆದ ಬಾರಿಯ ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಚಾಂಪಿಯನ್ಸ್​ ಟ್ರೋಫಿಗೆ ಅರ್ಹತೆ ಕಳೆದುಕೊಳ್ಳುವ ಆತಂಕದಲ್ಲಿತ್ತು. ಆದರೆ ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್​ ವಿರುದ್ಧ ಗೆದ್ದು 7ನೇ ಸ್ಥಾನ ಸಂಪಾದಿಸಿ ಕೊನೆಯ ಹಂತದಲ್ಲಿ ಅವಕಾಶ ಗಿಟ್ಟಿಸಿಕೊಂಡಿತ್ತು.

ಕಳೆದ ವರ್ಷ ಪಾಕ್​ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡವು ಪಾಕ್​ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು.

Continue Reading

ಕ್ರೀಡೆ

Team India Bowling Coach: ಮಾರ್ನೆ ಮಾರ್ಕೆಲ್​ ಟೀಮ್​ ಇಂಡಿಯಾದ ಬೌಲಿಂಗ್​ ಕೋಚ್​​?

Team India Bowling Coach: ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ.

VISTARANEWS.COM


on

Team India Bowling Coach
Koo

ಮುಂಬಯಿ: ಟೀಮ್​ ಇಂಡಿಯಾದ(Team India) ನೂತನ ಬೌಲಿಂಗ್​ ಕೋಚ್(Team India Bowling Coach)​ ಆಗಿ ಜಹೀರ್​ ಖಾನ್(Zaheer Khan)​ ಅಥವಾ ಲಕ್ಷ್ಮೀಪತಿ ಬಾಲಾಜಿ(Lakshmipathy Balaji) ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮುಖ್ಯ ಕೋಚ್​ ಗೌತಮ್​ ಗಂಭೀರ್(Gautam Gambhir)​ ಅವರು ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನೆ ಮಾರ್ಕೆಲ್​(Morne Morkel) ಅವರನ್ನು ಬೌಲಿಂಗ್​ ಕೋಚ್​ ಆಗಿ ನೇಮಿಸುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮಾರ್ಕೆಲ್​ ಅವರು ಪಾಕಿಸ್ತಾನದ ಬೌಲಿಂಗ್‌ ಕೋಚ್‌ ಹುದ್ದೆಗೆ ಕಳೆದ ವರ್ಷ ರಾಜೀನಾಮೆ ನೀಡಿದ್ದರು. ಸದ್ಯ ಅವರು ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಕೆಲ್​, ಗಂಭೀರ್ ಜತೆ ಐಪಿಎಲ್​ನಲ್ಲಿ ಹಲವು ವರ್ಷ ಜತೆಯಾಗಿ ಆಡಿದ ಮತ್ತು ಕೋಚಿಂಗ್​ ಮಾಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇವರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸಹಾಯಕ ಕೋಚ್ ಆಗಿ ನೆದರ್ಲೆಂಡ್‌ನ ಮಾಜಿ ಕ್ರಿಕೆಟಿಗ ಡ್ಯಾನ್ ಟೆನ್ ಡೊಶ್ಚಾಟೆ ಅವರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಬ್ಯಾಟಿಂಗ್​ ಕೋಚ್​ ಆಗಿ ಅಭಿಷೇಕ್ ನಾಯರ್ ಆಯ್ಕೆಯಾಗುವ ಸಾಧ್ಯತೆ ಇದೆ.

ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ. ಜುಲೈ 26, 27 ಹಾಗೂ 29 ರಂದು ಟಿ20 ಪಂದ್ಯಗಳು ನಡೆಯಲಿದೆ. ಟಿ20 ಪಂದ್ಯಗಳಿಗೆ ಪಲ್ಲೆಕೆಲ್ಲೆ ಆತಿಥ್ಯ ವಹಿಸಲಿದೆ. ಏಕದಿನ ಸರಣಿ ಆಗಸ್ಟ್​ 1, 4 ಹಾಗೂ 7 ರಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ.

ಇದನ್ನೂ ಓದಿ Shahid Afridi: ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತ ತಂಡವನ್ನು ಪಾಕ್​ಗೆ ಕರೆತರುವ ಉಪಾಯ ಮಾಡಿದ ಮಾಜಿ ನಾಯಕ

ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಸೇರಿ ಕೆಲ ಆಟಗಾರರಿಗೆ ವಿಶ್ರಾಂತಿ ಸಿಗಲಿದೆ ಎಂದು ತಿಳಿದುಬಂದಿದೆ. ಏಕದಿನ ಸರಣಿಯಲ್ಲಿ ಕೆ.ಎಲ್​ ರಾಹುಲ್, ಟಿ20 ಸರಣಿಯಲ್ಲಿ ಹಾರ್ದಿಕ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

ಕೋಚ್​ ಹುದ್ದೆಗೆ ಗಂಭೀರ್​ ಅವರನ್ನು ಆಯ್ಕೆ ಮಾಡುವ ಮುನ್ನ ತಂಡದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿವೆ.​

ಹೌದು ವಿರಾಟ್​ ಕೊಹ್ಲಿ ಮತ್ತು ಗಂಭೀರ್​ ಐಪಿಎಲ್​ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್​ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಬಿಸಿಸಿಐ ಗಂಭೀರ್​ ಅವರನ್ನು ಕೋಚ್​ ಆಗಿ ನೇಮಕ ಮಾಡುವಾಗ ಕೊಹ್ಲಿಯನ್ನು ಒಂದು ಮಾತು ಕೂಡ ಕೇಳದೇ ಇರುವುದು ಕೊಹ್ಲಿ ಮತ್ತು ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Continue Reading

ಕ್ರೀಡೆ

Shahid Afridi: ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾರತ ತಂಡವನ್ನು ಪಾಕ್​ಗೆ ಕರೆತರುವ ಉಪಾಯ ಮಾಡಿದ ಮಾಜಿ ನಾಯಕ

Shahid Afridi: ನಾವು ನೀಡುವ ಆತಿಥ್ಯದಿಂದ ಭಾರತದ ಆತಿಥ್ಯವನ್ನೇ ಕೊಹ್ಲಿ ಮರೆಯಬೇಕು. ಅಷ್ಟರಮಟ್ಟಿಗೆ ನಾವು ಅವರನ್ನು ನೋಡಿಕೊಳ್ಳುತ್ತೇವೆ. ವಿರಾಟ್ ಯಾವಾಗ ಪಾಕಿಸ್ತಾನಕ್ಕೆ ಬರುತ್ತಾರೆ ಎಂದು ಇಲ್ಲಿನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎಂದು ಶಾಹಿದ್‌ ಅಫ್ರಿದಿ ಹೇಳಿದ್ದಾರೆ.

VISTARANEWS.COM


on

Shahid Afridi
Koo

ಕರಾಚಿ: ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್​ ಟ್ರೋಫಿ(Champions Trophy 2025) ಟೂರ್ನಿಗೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲಿದೆಯಾ?, ಭಾರತ ಪಂದ್ಯಗಳು ತಟಸ್ಥ ತಾಣದಲ್ಲಿ ನಡೆಯಲಿದೆಯಾ? ಎಂದು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶಾಹಿದ್‌ ಅಫ್ರಿದಿ(Shahid Afridi) ಅವರು ವಿರಾಟ್​ ಕೊಹ್ಲಿ(Virat Kohli) ಕುರಿತು ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಭಾರತ ತಂಡವನ್ನು ಹೇಗಾದರೂ ಪಾಕಿಗೆ ಕರೆತರಲು ಶತ ಪ್ರಯತ್ನ ಮಾಡುತ್ತಿದೆ. ಜತೆಗೆ ಕೆಲ ಮಾಜಿ ಆಟಗಾರರು ಭಾರತೀಯ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ, ಇದೀಗ ಈ ಸಾಲಿಗೆ ಅಫ್ರಿದಿ ಕೂಡ ಸೇರಿಕೊಂಡಿದ್ದಾರೆ. ಕೊಹ್ಲಿ ಬಗ್ಗೆ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಇದನ್ನೂ ಓದಿ Champions Trophy 2025: ಚಾಂಪಿಯನ್ಸ್​ ಟ್ರೋಫಿ ಹೈಬ್ರಿಡ್ ಮಾದರಿಗೆ ಒತ್ತಾಯಿಸಿದ ಬಿಸಿಸಿಐ

ಹೌದು, ಸಂರ್ದಶನವೊಂದರಲ್ಲಿ ಮಾತನಾಡಿದ ಅಫ್ರಿದಿ, ‘ಸಚಿನ್​ ತೆಂಡೂಲ್ಕರ್​ ಅವರಿಗೆ ಪಾಕಿಸ್ತಾನದಲ್ಲಿ ಇರುವ ಅಭಿಮಾನಿಗಳಂತೆ ವಿರಾಟ್​ ಕೊಹ್ಲಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಈ ವಿಚಾರವನ್ನು ನಾನು ಮತ್ತೆ ಹೇಳಬೇಕೆಂದಿಲ್ಲ. ಏಕೆಂದರೆ ಈಗಾಗಲೇ ಕೊಹ್ಲಿ ಆಟವನ್ನು ನೋಡಲು ಪಾಕ್​ ಅಭಿಮಾನಿಗಳು ಸ್ಟ್ರೇಡಿಯಂನಲ್ಲಿ ಕಾಣಿಸಿಕೊಂಡ ಹಲವು ನಿದರ್ಶನಗಳಿವೆ. ಕೊಹ್ಲಿ ಚಾಂಪಿಯನ್ಸ್​ ಟ್ರೋಫಿ ಆಡಲು ನಮ್ಮ ದೇಶಕ್ಕೆ ಬರಬೇಕು ಎನ್ನುವುದು ನನ್ನ ಹಾಗು ಅವರ ಅಭಿಮಾನಿಗಳ ಬಯಕೆಯಾಗಿದೆ” ಎಂದು ಹೇಳಿದರು.

“ನಾವು ನೀಡುವ ಆತಿಥ್ಯದಿಂದ ಭಾರತದ ಆತಿಥ್ಯವನ್ನೇ ಕೊಹ್ಲಿ ಮರೆಯಬೇಕು. ಅಷ್ಟರಮಟ್ಟಿಗೆ ನಾವು ಅವರನ್ನು ನೋಡಿಕೊಳ್ಳುತ್ತೇವೆ. ವಿರಾಟ್ ಯಾವಾಗ ಪಾಕಿಸ್ತಾನಕ್ಕೆ ಬರುತ್ತಾರೆ ಎಂದು ಇಲ್ಲಿನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ” ಎಂದು ಹೇಳಿದ್ದಾರೆ.

ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಇದಾದ ಬಳಿಕ ಪಾಕ್​ಗೆ ಭಾರತ ತಂಡ ಕಾಲಿಟ್ಟಿಲ್ಲ.

 ಭಾರತದ ಪಂದ್ಯಗಳು ಮಾತ್ರ ಸಾಗರೋತ್ತರ ತಟಸ್ಥ ಸ್ಥಳದಲ್ಲಿ ನಡೆಸುವಂತೆ ಬಿಸಿಸಿಐ, ಐಸಿಸಿಗೆ ಮನವಿ ಸಲ್ಲಿಸಿದೆ ಎಂದು ಎಎನ್​ಐ ವರದಿ ಮಾಡಿದೆ. ದುಬೈ ಅಥವಾ ಶ್ರೀಲಂಕಾದಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಐಸಿಸಿಗೆ ಕೇಳಿಕೊಂಡಿರುವುದಾಗಿ ವರದಿಯಾಗಿದೆ.

ಕಳೆದ ವರ್ಷ ಪಾಕ್​ ಆತಿಥ್ಯದಲ್ಲಿಯೇ ನಡೆದಿದ್ದ ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ ತಂಡವು ಪಾಕ್​ಗೆ ಪ್ರಯಾಣಿಸಲು ನಿರಾಕರಿಸಿದ ಕಾರಣ, ಟೂರ್ನಿಯನ್ನು ಹೈಬ್ರಿಡ್(champions trophy hybrid model) ಮಾದರಿಯಲ್ಲಿ ಆಯೋಜಿಸಲಾಯಿತ್ತು. ಕೇವಲ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು. ಭಾರತ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಿತ್ತು. ಇದೀಗ ಚಾಂಪಿಯನ್ಸ್​ ಟ್ರೋಫಿಯನ್ನೂ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಸಿ ಭಾರತದ ಪಂದ್ಯಗಳನ್ನು ಪಾಕ್​ನಿಂದ ಹೊರಗೆ ನಡೆಸುವಂತೆ ಐಸಿಸಿಗೆ ಬಿಸಿಸಿಐ ಕೇಳಿಕೊಂಡಿರುವುದಾಗಿ ವರದಿಯಾಗಿದೆ.

Continue Reading
Advertisement
James Anderson
ಕ್ರೀಡೆ18 mins ago

James Anderson: 22 ವರ್ಷಗಳ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಹೇಳಿದ ಜೇಮ್ಸ್​ ಆ್ಯಂಡರ್ಸನ್; ಭಾವನಾತ್ಮಕವಾಗಿ ಹಾರೈಸಿದ ಸಚಿನ್

Bear Attack
ವಿಜಯನಗರ39 mins ago

Bear Attack : ವಿಜಯನಗರದ ಪಾರ್ಕ್‌, ಸ್ಟೇಡಿಯಂ‌ನಲ್ಲಿ ಸುತ್ತಾಡಿದ ಕರಡಿ; ದಿಕ್ಕಾಪಾಲಾಗಿ ಓಡಿದ ಜನರು

ED Raid
ಕರ್ನಾಟಕ44 mins ago

ED Raid: ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ; ಕೋರ್ಟ್‌ಗೆ ಹಾಜರುಪಡಿಸಲು ಸಿದ್ಧತೆ

Emergency
ದೇಶ49 mins ago

Emergency: ತುರ್ತು ಪರಿಸ್ಥಿತಿ ಕರಾಳ ನೆನಪು; ಜೂನ್‌ 25ಅನ್ನು ‘ಸಂವಿಧಾನ ಹತ್ಯಾ ದಿವಸ’ ಎಂದು ಘೋಷಿಸಿದ ಕೇಂದ್ರ

Shiva Rajkumar karataka damanaka In ott
ಸ್ಯಾಂಡಲ್ ವುಡ್54 mins ago

Shiva Rajkumar: ಶಿವಣ್ಣನ ಬರ್ತ್‌ಡೇ ದಿನ, ಬರೋಬ್ಬರಿ 4 ತಿಂಗಳ ಬಳಿಕ ಒಟಿಟಿಗೆ ʻಕರಟಕ ದಮನಕʼ ಎಂಟ್ರಿ!

Champions Trophy 2025
ಕ್ರೀಡೆ55 mins ago

Champions Trophy 2025: ಚಾಂಪಿಯನ್ಸ್‌ ಟ್ರೋಫಿಯಿಂದ ಭಾರತ ಹಿಂದೆ ಸರಿದರೆ ಯಾವ ತಂಡಕ್ಕೆ ಸಿಗಲಿದೆ ಅವಕಾಶ?

BS Yediyurappa
ಕರ್ನಾಟಕ1 hour ago

BS Yediyurappa: ಪೋಕ್ಸೊ ಕೇಸ್‌ನಲ್ಲಿ ಖುದ್ದು ಹಾಜರಿಯಿಂದ ಬಿಎಸ್‌ವೈಗೆ ವಿನಾಯ್ತಿ; ಕೇಸ್‌ ರದ್ದು ಕೋರಿದ್ದ ಅರ್ಜಿ ವಿಚಾರಣೆ ಜು.26ಕ್ಕೆ

Earthquake
ದೇಶ1 hour ago

Earthquake: ಜಮ್ಮು-ಕಾಶ್ಮೀರದಲ್ಲಿ 4.1 ತೀವ್ರತೆಯ ಭೂಕಂಪ; ಮನೆಯಿಂದ ಓಡಿಬಂದ ಜನ

ಬೆಂಗಳೂರು2 hours ago

KEA : ಜು.13,14ಕ್ಕೆ ವಿವಿಧ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ; ಅಕ್ರಮ ತಡೆಯಲು ಮೊದಲ ಬಾರಿಗೆ ವೆಬ್ ಕಾಸ್ಟಿಂಗ್

Prajwal Revanna Case
ಕರ್ನಾಟಕ2 hours ago

Prajwal Revanna Case: ರೇವಣ್ಣ ಜಾಮೀನು ರದ್ದು ಕೋರಿದ್ದ ಎಸ್‌ಐಟಿ ಅರ್ಜಿ ವಿಚಾರಣೆ 3 ವಾರ ಮುಂದೂಡಿಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain Effect
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ3 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

karnataka Rain
ಮಳೆ3 days ago

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka weather Forecast
ಮಳೆ3 days ago

Karnataka Weather : 11 ಜಿಲ್ಲೆಗಳಲ್ಲಿ ರಣಮಳೆ; ಕರಾವಳಿಗೆ ರೆಡ್‌, ಮಲೆನಾಡಿಗೆ ಆರೆಂಜ್‌ ಅಲರ್ಟ್‌

Rain Effect
ಮಳೆ4 days ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ4 days ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 days ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು4 days ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ5 days ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌