ಹೈದರಾಬಾದ್: ಭಾರತ ಹಾಗೂ ಇಂಗ್ಲೆಂಡ್(India vs England 1st Test) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮ(Rohit Sharma) ಅವರ ಕಾಲಿಗೆ ಬಿದ್ದಿದ್ದಾನೆ. ಅಚ್ಚರಿ ಎಂದರೆ ಆತ ವಿರಾಟ್ ಕೊಹ್ಲಿಯ(Virat Kohli) ಜೆರ್ಸಿ ಧರಿಸಿ ರೋಹಿತ್ ಕಾಲಿಗೆ ಬಿದ್ದದ್ದು. ಈ ವಿಡಿಯೊ ವೈರಲ್(Viral Video) ಆಗಿದೆ.
ಭಾರತ ತಂಡದ ಬ್ಯಾಟಿಂಗ್ ಇನಿಂಗ್ಸ್ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಈ ಅಭಿಮಾನಿ ಮೈದಾನಕ್ಕೆ ನೇರವಾಗಿ ನುಗ್ಗಿದ್ದಾನೆ. ಬ್ಯಾಟಿಂಗ್ ನಡೆಸುತ್ತಿದ್ದ ರೋಹಿತ್ ಶರ್ಮ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾನೆ. ಬಳಿಕ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ. ಅಲ್ಲದೆ ಆತನ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದಾರೆ. ಈ ಅಭಿಮಾನಿ ರೋಹಿತ್ ಪಾದಕ್ಕೆರಗಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
Lucky Fan Meeted Rohit 🥲🥹#INDvENG #RohitSharma pic.twitter.com/7IN2yYsRmH
— Kiran (@KIRANPSPK45) January 25, 2024
ಅಚ್ಚರಿ ಎಂದರೆ ಆತ ವಿರಾಟ್ ಕೊಹ್ಲಿಯ ಅಭಿಮಾನಿಯಂತೆ ಕಾಣುತ್ತಿದ್ದ. ಏಕೆಂದರೆ ಆತ ವಿರಾಟ್ ಕೊಹ್ಲಿಯ ಜೆರ್ಸಿಯನ್ನು ಹಾಕಿದ್ದ. ವಿರಾಟ್ ಕೊಹ್ಲಿಯ ಆಟ ನೋಡಲೆಂದೇ ಆತ ಬಂದಿದ್ದ ಎನಿಸುತ್ತದೆ. ಆದರೆ, ಕೊಹ್ಲಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ರೋಹಿತ್ ಶರ್ಮ ಅವರು ಈ ಪಂದ್ಯದಲ್ಲಿ ಮೂರು ಬೌಂಡರಿ ನೆರವಿನಿಂದ 24 ರನ್ ಬಾರಿಸಿ ಜಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ ind vs eng : ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ತಂಡದ ಮೇಲುಗೈ
ಸಿಕ್ಸರ್ ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್
5 ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮ ಅವರು ಸಿಕ್ಸರ್ಗಳ ಮೂಲಕ ದಾಖಲೆ ಬರೆಯಲು ಎದುರು ನೋಡುತ್ತಿದ್ದಾರೆ. ರೋಹಿತ್ ಶರ್ಮ ಅವರು 5 ಪಂದ್ಯಗಳ ಸರಣಿಯಲ್ಲಿ ಒಟ್ಟು 14 ಸಿಕ್ಸರ್ ಬಾರಿಸಿದರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ. ಸದ್ಯ ದಾಖಲೆ ಮಾಜಿ ಡ್ಯಾಶಿಂಗ್ ಆಟಗಾರ ವಿರೇಂದ್ರ ಸೆಹವಾಗ್ ಹೆಸರಿನಲ್ಲಿದೆ. ಸೆಹವಾಗ್ 104 ಟೆಸ್ಟ್ ಪಂದ್ಯ ಆಡಿ 91 ಸಿಕ್ಸರ್ ಬಾರಿಸಿ ಟೀಮ್ ಇಂಡಿಯಾ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ 78 ಸಿಕ್ಸರ್ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮ ಅವರು 2 ಸಿಕ್ಸರ್ ಬಾರಿಸಿದರೆ ಧೋನಿ ದಾಖಲೆ ಪತನಗೊಳ್ಳಲಿದೆ. 14 ಸಿಕ್ಸರ್ ಬಾರಿಸಿದರೆ ವೀರೇಂದ್ರ ಸೆಹವಾಗ್ ದಾಖಲೆ ಪತನಗೊಳ್ಳಲಿದೆ. ರೋಹಿತ್ ಸದ್ಯ 54 ಪಂದ್ಯ ಆಡಿ 77 ಸಿಕ್ಸರ್ ಬಾರಿಸಿದ್ದಾರೆ. ಟೆಸ್ಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ ದಾಖಲೆ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಸ್ಟೋಕ್ಸ್ 97 ಪಂದ್ಯ ಆಡಿ 124 ಸಿಕ್ಸರ್ ಬಾರಿಸಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ನಾಯಕನಾಗಿರುವ ಅವರು ಈ ಸಿಕ್ಸರ್ಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವ ಅವಕಾಶವಿದೆ.