ind vs eng : ಟೆಸ್ಟ್​ ಪಂದ್ಯದ ಮೊದಲ ದಿನ ಭಾರತ ತಂಡದ ಮೇಲುಗೈ - Vistara News

ಕ್ರಿಕೆಟ್

ind vs eng : ಟೆಸ್ಟ್​ ಪಂದ್ಯದ ಮೊದಲ ದಿನ ಭಾರತ ತಂಡದ ಮೇಲುಗೈ

ind vs eng : ಯಶಸ್ವಿ ಜೈಸ್ವಾಲ್​ ಮೊದಲ ದಿನದ ಅಂತ್ಯಕ್ಕೆ 76 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದು, ಭಾರತ ತಂಡ

VISTARANEWS.COM


on

Yashaswi jaiswal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್​ : ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ (ind vs eng) ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ರೋಹಿತ್​ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್ ತಂಡವನ್ನು 246 ರನ್​ಗಳಿಗೆ ನಿಯಂತ್ರಿಸಿದ ಭಾರತ, ಬ್ಯಾಟಿಂಗ್​ನಲ್ಲಿ 1 ವಿಕೆಟ್ ನಷ್ಟ ಮಾಡಿಕೊಂಡು 119 ರನ್ ಬಾರಿಸಿದೆ. ಯಶಸ್ವಿ ಜೈಸ್ವಾಲ್​ ಅಜೇಯ 76 ರನ್​ ಗಳಿಸಿ ಮಿಂಚಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡದ ಪರ ಆರಂಭಿಕ ಆಟಗಾರರಾದ ಜಾಕ್ ಕ್ರಾವ್ಲಿ ಮತ್ತು ಬೆನ್ ಡಕೆಟ್ 55 ರನ್​ಗಳ ಭರ್ಜರಿ ಆರಂಭ ತಂದುಕೊಟ್ಟರು. ಈ ಮೂಲಕ ತಮ್ಮ ನಾಯಕನ ಕರೆಯನ್ನು ಸಮರ್ಥಿಸಿಕೊಂಡರು. ನಂತರ ಭಾರತದ ಸ್ಪಿನ್ನರ್​ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜಂಟಿಯಾಗಿ ಮೂರು ವಿಕೆಟ್​ಗಳನ್ನು ಉರುಳಿಸುವ ಮೂಲಕ ಇಂಗ್ಲೆಂಡ್​ ತಂಡದ ಬಜ್​ಬಾಲ್​ ತಂತ್ರವನ್ನು ಅಡಗಿಸಿದರು.

ಜೋ ರೂಟ್ ಮತ್ತು ಜಾನಿ ಬೇರ್​ಸ್ಟೋವ್​ ನಾಲ್ಕನೇ ವಿಕೆಟ್ಗೆ 61 ರನ್​ಗಳ ಜೊತೆಯಾಟದ ಮೂಲಕ ಭರವಸೆ ಮೂಡಿಸಿದರು. ಬೇರ್​ಸ್ಟೋವ್​ ಅವರನ್ನು ಅಕ್ಷರ್ ಪಟೇಲ್ 37 ರನ್​ಗಳಿಗೆ ಔಟ್ ಮಾಡಿದರೆ, ಜೋ ರೂಟ್ 29 ರನ್ ಮಾಡಿ ಜಸ್ಪ್ರೀತ್ ಬುಮ್ರಾಗೆ ಒಂದು ವಿಕೆಟ್ ಒಪ್ಪಿಸಿದರು.

ಆರಂಭಿಕ ಸ್ಪೆಲ್​ನ್ಲಲಿ ವಿಕೆಟ್ ಪಡೆಯದ ಬುಮ್ರಾ, ರೆಹಾನ್ ಅಹ್ಮದ್ ಅವರನ್ನು ಮೊದಲ ವಿಕೆಟ್​ ರೂಪದಲ್ಲಿ ಪಡೆದರು. ಹೀಗಾಗಿ ಇಂಗ್ಲೆಂಡ್​ನ ಹೋರಾಟ 155 ರನ್​ಗಳಿಗೆ 7ವಿಕೆಟ್​ ಕಳೆದುಕೊಳ್ಳುವಷ್ಟು ಮಟ್ಟಿಗೆ ಕಳೆಗುಂದಿತು. ಪ್ರವಾಸಿ ತಂಡದ ನಾಯಕ ಬೆನ್ ಸ್ಟೋಕ್ಸ್ ಕೇವಲ 88 ಎಸೆತಗಳಲ್ಲಿ 70 ರನ್ ಗಳಿಸುವ ಮೂಲಕ ಸೆಡ್ಡು ಹೊಡೆದರು. ಆದರೆ, ಬುಮ್ರಾ ಅವರನ್ನು ಬೌಲ್ಡ್ ಮಾಡಿದರು. ಹೀಗಾಗಿ 64.3 ಒವರ್​ಗಳಿಗೆ ಇಂಗ್ಲೆಂಡ್ 246 ರನ್ ಬಾರಿಸಿ ಆಲೌಟ್ ಆಯಿತು. ಅಶ್ವಿನ್ ಮತ್ತು ಜಡೇಜಾ ವಿಕೆಟ್ ಪಡೆದರೆ, ಅಕ್ಷರ್ ಸದ್ದಿಲ್ಲದೆ 33 ರನ್​ ನೀಡಿ 2 ವಿಕೆಟ್​ ಪಡೆದರು.

ಪ್ರಾಬಲ್ಯ ವಿಸ್ತರಿಸಿದ ಜೈಸ್ವಾಲ್​


ಭಾರತದ ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಅಜೇಯ 76 ರನ್ ಗಳಿಸುವ ಮೂಲಕ ಭಾರತ ತಂಡಕ್ಕೆ ಬ್ಯಾಟಿಂಗ್​ನಲ್ಲಿ ಪ್ರಾಬಲ್ಯ ಸಾಧಿಸಲು ನೆರವಾದರು. ಹೀಗಾಗಿ ಭಾಋತ 119 ರನ್​ ಬಾರಿಸಿ ದಿನದಂತ್ಯಕ್ಕೆ 1 ವಿಕೆಟ್​ ಕಳೆದುಕೊಂಡಿದೆ. ಆರಂಭಿಕ ಪಾಲುದಾರ ಮತ್ತು ನಾಯಕ ರೋಹಿತ್ ಶರ್ಮಾ (24) ಜೈಸ್ವಾಲ್ ಅವರೊಂದಿಗೆ 80 ರನ್​ಗಳ ಜತೆಯಾಟವಾಡಿದರು.

ಇಂಗ್ಲೆಂಡ್​ದ ಮೊದಲ ಇನ್ನಿಂಗ್ಸ್​ನ ಮೊತ್ತವನ್ನು ದಾಟಲು ಭಾರತಕ್ಕೆ 127 ರನ್​ಗಳ ಅಗತ್ಯವಿದೆ. ಜೈಸ್ವಾಲ್ 3ನೇ ದಿನದಂದು ಶುಭ್ಮನ್ ಗಿಲ್ (14*) ಅವರೊಂದಿಗೆ ಭಾರತದ ಬ್ಯಾಟಿಂಗ್ ಆರಂಭಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

KL Rahul : ಕೆ. ಎಲ್ ರಾಹುಲ್​ ಎಲ್​ಎಸ್​ಜಿ ತಂಡದಿಂದ ಹೊರಕ್ಕೆ, ಆಂತರಿಕ ಗುಟ್ಟು ಬಿಟ್ಟುಕೊಟ್ಟ ಅಮಿತ್ ಮಿಶ್ರಾ

KL Rahul : ತಂಡಕ್ಕಾಗಿ ಆಡುವ ಆಟಗಾರ ನಾಯಕನಾಗಿರಬೇಕು ಎಂದು ಹೇಳುವ ಮೂಲಕ ರಾಹುಲ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮುಂದಿನ ಐಪಿಎಲ್ ಋತುವಿಗೆ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ನಾಯಕನನ್ನು ಹುಡುಕುತ್ತಿದೆ ಎಂದು ಅವರು ಹೇಳಿದ್ದಾರೆ.

VISTARANEWS.COM


on

Koo

ಬೆಂಗಳೂರು: ಇತ್ತೀಚಿನ ದಿನಗಳ ಪರಿಸ್ಥಿತಿ ನೋಡಿದರೆ ಶುಬ್ಮನ್ ಗಿಲ್ ಅವರನ್ನು ರಾಷ್ಟ್ರೀಯ ಆಯ್ಕೆದಾರರು ಭವಿಷ್ಯದ ನಾಯಕನಾಗಿ ನೇಮಕ ಮಾಡುವ ಸಾಧ್ಯತೆಗಳಿವೆ. ಜತೆಗೆ ಅವರು ಮುಂದಿನ ಆವೃತ್ತಿಯ ಐಪಿಎಲ್​ನಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡಕ್ಕೂ ಸೇರ್ಪಡೆಗೊಳ್ಳಬಹುದು. ಇದರಿಂದಾಗಿ ಕೆ.ಎಲ್​ ರಾಹುಲ್​ (KL Rahul) ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ ನಡೆದ ಐದು ಪಂದ್ಯಗಳ ಟಿ20 ಐ ಸರಣಿಯಲ್ಲಿ ಯುವ ಭಾರತೀಯ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಬಲಗೈ ಬ್ಯಾಟ್ಸ್ಮನ್ಗೆ ನೀಡಲಾಗಿತ್ತು. ಶುಬ್ಮನ್ ಗಿಲ್ ನಾಯಕನಾಗಿ ಉತ್ತಮ ಚೊಚ್ಚಲ ಸರಣಿಯನ್ನು ಉತ್ತಮವಾಗಿ ಮುಗಿಸಿದ್ದರು. ಅವರು ಭಾರತವನ್ನು 4-1 ಸರಣಿ ಗೆಲುವಿನ ಕಡೆಗೆ ಮುನ್ನಡೆಸಿದ್ದರು. ಭಾರತವು ಸೋಲಿನೊಂದಿಗೆ ಸರಣಿಯನ್ನು ಪ್ರಾರಂಭಿಸಿತು ಆದರೆ ನಾಲ್ಕು ಗೆಲುವುಗಳೊಂದಿಗೆ ಪುಟಿದೆದ್ದಿತು.

ಶುಬ್ಮನ್ ಗಿಲ್ ಅವರು ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. 5 ಪಂದ್ಯಗಳಲ್ಲಿ, ಬಲಗೈ ಬ್ಯಾಟ್ಸ್ಮನ್ ಎರಡು ಅರ್ಧಶತಕಗಳ ಸಹಾಯದಿಂದ 170 ರನ್ ಗಳಿಸಿದ್ದರು. ಶುಬ್ಮನ್ ಗಿಲ್ ನಾಯಕತ್ವಕ್ಕೆ ಹೊಸಬರಾಗಿರುವ ಕಾರಣ ಅವರಿಗೆ ಈ ಪ್ರಯಾಣ ವಿಶೇಷ. ಆದರೆ, ಭಾರತದ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಯುವ ಆಟಗಾರ ನಾಯಕತ್ವಕ್ಕೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶುಭಂಕರ್ ಮಿಶ್ರಾ ಅವರ ಪಾಡ್​ಕಾಸ್ಟ್​​ನಲ್ಲಿ ಮಾತನಾಡಿದ ಮಾಜಿ ಲೆಗ್ ಸ್ಪಿನ್ನರ್, ಶುಭ್ಮನ್ ಗಿಲ್ ಅವರನ್ನು ನಾಯಕನನ್ನಾಗಿ ಮಾಡಬಾರದು ಎಂದು ಹೇಳಿದ್ದಾರೆ. ಕಾರ್ಯಕ್ರಮದ ನಿರೂಪಕರು ಕಾರಣವನ್ನು ಕೇಳಿದಾಗ, ಅಮಿತ್ ಮಿಶ್ರಾ ಅವರು ಐಪಿಎಲ್ ಸಮಯದಲ್ಲಿ ಆರಂಭಿಕ ಬ್ಯಾಟರ್​​ನ ನಾಯಕತ್ವವನ್ನು ಹತ್ತಿರದಿಂದ ನೋಡಿದ್ದೇನೆ ಎಂದು ಹೇಳಿದ್ದಾರೆ.

“ನಾನು ಗಿಲ್ ಅವರನ್ನು ಐಪಿಎಲ್​ನಲ್ಲಿ ಹತ್ತಿರದಿದ ನೋಡಿದ್ದೇನೆ. ಅವರಿಗೆ ತಂಡವನ್ನು ಹೇಗೆ ಮುನ್ನಡೆಸಬೇಕೆಂದು ತಿಳಿದಿಲ್ಲ. ಅವರಿಗೆ ನಾಯಕತ್ವದ ಬಗ್ಗೆ ಯಾವುದೇ ಕಲ್ಪನೆ ಇಲ್ಲ. ಇದಕ್ಕೂ ಮೊದಲು ಅವರು ಹೆಚ್ಚು ನಾಯಕತ್ವ ವಹಿಸಿರಲಿಲ್ಲ. ಆಗ ಅವರನ್ನು ನಾಯಕನನ್ನಾಗಿ ಏಕೆ ಮಾಡಲಾಯಿತು? ನಿರ್ಧಾರ ತೆಗೆದುಕೊಂಡವರನ್ನು ನೀವು ಕೇಳಬೇಕು, “ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: IND vs PAK : ಪಾಕಿಸ್ತಾನಕ್ಕೆ ಬರದಿರುವುದಕ್ಕೆ ಲಿಖಿತ ಕಾರಣ ನೀಡುವಂತೆ ಬಿಸಿಸಿಐಗೆ ಒತ್ತಾಯಿಸಿದ ಪಿಸಿಬಿ

ಭಾರತವನ್ನು ಮುನ್ನಡೆಸುವ ಮೊದಲು ಶುಬ್ಮನ್ ಗಿಲ್ ಈ ವರ್ಷದ ಐಪಿಎಲ್​​ನಲ್ಲಿ ಗುಜರಾತ್​ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ ಪ್ರಭಾವ ಬೀರಲು ವಿಫಲರಾದರು. 2022 ರಲ್ಲಿ ಪಂದ್ಯಾವಳಿಯನ್ನು ಗೆದ್ದ ನಂತರ ಮತ್ತು ಕಳೆದ ವರ್ಷ ರನ್ನರ್ಸ್ ಅಪ್ ಸ್ಥಾನ ಪಡೆದ ನಂತರ, ಟೈಟಾನ್ಸ್ ಐಪಿಎಲ್​ನ ಪ್ಲೇಆಫ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. 5 ಗೆಲುವು ಹಾಗೂ 7 ಸೋಲಿನೊಂದಿಗೆ 8ನೇ ಸ್ಥಾನ ಪಡೆಯಿತು.

ಕೆಎಲ್ ರಾಹುಲ್​ಗೆ ಕೊಕ್​

ಸಂದರ್ಶನದಲ್ಲಿ ಕೆಎಲ್ ರಾಹುಲ್ ತಮ್ಮ ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವವನ್ನು ಉಳಿಸಿಕೊಳ್ಳುತ್ತಾರೆಯೇ ಎಂದು ಅಮಿತ್ ಮಿಶ್ರಾ ಅವರನ್ನು ಕೇಳಿದಾಗ, ವಿಶ್ವದಾದ್ಯಂತದ ಟಿ 20 ಲೀಗ್​ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಿಕೋಲಸ್ ಪೂರನ್ ಅವರಂತಹ ವಿಭಿನ್ನ ಆಯ್ಕೆಗಳನ್ನು ಫ್ರಾಂಚೈಸಿ ಹೊಂದಿದೆ ಎಂದು ಅವರು ಹೇಳಿದರು. ಆದರೆ ರಾಹುಲ್ ಭಾರತೀಯ ಟಿ 20 ಐ ತಂಡದಲ್ಲಿಯೂ ಇಲ್ಲ. ಹೀಗಾಗಿ ಲಕ್ನೊ ತಂಡದಿಂದ ಹೊರಕ್ಕೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತಂಡಕ್ಕಾಗಿ ಆಡುವ ಆಟಗಾರ ನಾಯಕನಾಗಿರಬೇಕು ಎಂದು ಹೇಳುವ ಮೂಲಕ ರಾಹುಲ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮುಂದಿನ ಐಪಿಎಲ್ ಋತುವಿಗೆ ಮುಂಚಿತವಾಗಿ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ನಾಯಕನನ್ನು ಹುಡುಕುತ್ತಿದೆ ಎಂದು ಅವರು ಹೇಳಿದ್ದಾರೆ.

“ಅವರು ತಂಡದಲ್ಲಿದ್ದಾರೋ ಇಲ್ಲವೋ ಎಂಬುದು ನನಗೆ ಮುಖ್ಯವಲ್ಲ, ಆದರೆ ತಂಡಕ್ಕೆ ಉತ್ತಮವಾಗಿ ಯೋಚಿಸುವವರು ನಾಯಕನಾಗಿರಬೇಕು. ರಾಹುಲ್, ಋತುರಾಜ್ ಅಥವಾ ಕೆಎಲ್ ರಾಹುಲ್ ಆಗಿರಲಿ ತಂಡಕ್ಕಾಗಿ ಆಡುವವರು, ತಂಡಕ್ಕಾಗಿ ಪ್ರದರ್ಶನ ನೀಡುವವರು ನಾಯಕನಾಗಿರಬೇಕು. ಅವರು ಖಂಡಿತವಾಗಿಯೂ 100 ಪ್ರತಿಶತ ಉತ್ತಮ ನಾಯಕನನ್ನು ಹುಡುಕುತ್ತಾರೆ, “ಎಂದು ಅಮಿತ್ ಮಿಶ್ರಾ ಹೇಳಿದರು.

Continue Reading

ಕ್ರಿಕೆಟ್

IND vs PAK : ಪಾಕಿಸ್ತಾನಕ್ಕೆ ಬರದಿರುವುದಕ್ಕೆ ಲಿಖಿತ ಕಾರಣ ನೀಡುವಂತೆ ಬಿಸಿಸಿಐಗೆ ಒತ್ತಾಯಿಸಿದ ಪಿಸಿಬಿ

IND vs PAK : ಭಾರತ ಸರ್ಕಾರ ಕ್ರಿಕೆಟ್ ತಂಡವನ್ನು ಕಳುಹಿಸಲು ಅನುಮತಿ ನಿರಾಕರಿಸಿದರೆ, ಅದು ಲಿಖಿತವಾಗಿರಬೇಕು. ಬಿಸಿಸಿಐ ಈಗ ಆ ಪತ್ರವನ್ನು ಐಸಿಸಿಗೆ ಒದಗಿಸುವುದು ಕಡ್ಡಾಯ ಎಂದು ಸಂಘಟನಾ ಸಮಿತಿಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಪಿಸಿಬಿ ಮೂಲಗಳು ಪಿಟಿಐಗೆ ತಿಳಿಸಿವೆ. “ಪಂದ್ಯಾವಳಿಗೆ ಕನಿಷ್ಠ 5-6 ತಿಂಗಳ ಮೊದಲು ಮತ್ತು ಲಿಖಿತವಾಗಿ ಪಾಕಿಸ್ತಾ

VISTARANEWS.COM


on

Koo

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವನ್ನು ಪಾಕಿಸ್ತಾನಕ್ಕೆ (IND vs PAK) ಕಳುಹಿಸಲು ಬಿಸಿಸಿಐ ನಿರಾಕರಿಸಿದರೆ ಅದಕ್ಕೆ ಲಿಖಿತವಾಗಿ ಕಾರಣ ನೀಡಬೇಕು ಎಂಬುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ. ಪ್ರಮುಖವಾಗಿ ಭಾರತ ಸರ್ಕಾರದ ಅನುಮತಿ ಸಿಗುತ್ತಿಲ್ಲ ಎಂಬ ಬಿಸಿಸಿಐನ ಹೇಳಿಕೆಗೆ ದಾಖಲೆ ಕೊಡುವಂತೆ ಅದು ಕೋರಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿ-ಮಾರ್ಚ್​ನಲ್ಲಿ ಪಂದ್ಯಾವಳಿ ನಿಗದಿಪಡಿಸಿದೆ. ಭಾರತ ತಂಡ ಬರದಿರುವ ವಿಷಯವನ್ನು ಆದಷ್ಟು ಬೇಗ ಇತ್ಯರ್ಥ ಮಾಡಬೇಕು ಎಂದು ಪಾಕಿಸ್ತಾನದ ಆತಿಥೇಯ ಮಂಡಳಿ ಒತ್ತಾಯಿಸಿದೆ. ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಭೆಯಲ್ಲಿ ‘ಹೈಬ್ರಿಡ್ ಮಾದರಿ’ ಬಗ್ಗೆ ಯಾವುದೇ ಚರ್ಚೆಯ ಅಜೆಂಡಾ ಹೊಂದಿಲ್ಲ. ಭಾರತವು ಯುಎಇಯಲ್ಲಿ ತಮ್ಮ ಪಂದ್ಯಗಳನ್ನು ಆಡುವ ಬಗ್ಗೆ ತನ್ನ ಕಾರ್ಯಸೂಚಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಆದಾಗ್ಯೂ ಪಿಸಿಬಿ ಈ ಬಗ್ಗೆ ಸ್ಪಷ್ಟತೆ ಕೇಳಿದೆ.

ಭಾರತ ಸರ್ಕಾರ ಕ್ರಿಕೆಟ್ ತಂಡವನ್ನು ಕಳುಹಿಸಲು ಅನುಮತಿ ನಿರಾಕರಿಸಿದರೆ, ಅದು ಲಿಖಿತವಾಗಿರಬೇಕು. ಬಿಸಿಸಿಐ ಈಗ ಆ ಪತ್ರವನ್ನು ಐಸಿಸಿಗೆ ಒದಗಿಸುವುದು ಕಡ್ಡಾಯ ಎಂದು ಸಂಘಟನಾ ಸಮಿತಿಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಪಿಸಿಬಿ ಮೂಲಗಳು ಪಿಟಿಐಗೆ ತಿಳಿಸಿವೆ.

“ಪಂದ್ಯಾವಳಿಗೆ ಕನಿಷ್ಠ 5-6 ತಿಂಗಳ ಮೊದಲು ಮತ್ತು ಲಿಖಿತವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವ ಯೋಜನೆಗಳ ಬಗ್ಗೆ ಬಿಸಿಸಿಐ ಐಸಿಸಿಗೆ ತಿಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಪಿಸಿಬಿಯ ಉನ್ನತ ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವುದು ಸಂಪೂರ್ಣವಾಗಿ ಸರ್ಕಾರದ ಕರೆ ಎಂದು ಬಿಸಿಸಿಐ ದೃಢವಾಗಿ ಸಮರ್ಥಿಸಿಕೊಂಡಿದೆ. ಪಿಸಿಬಿ ಆಯೋಜಿಸಿದ್ದ 2023 ರ ಏಕದಿನ ಏಷ್ಯಾ ಕಪ್ ಕೂಡ ಭಾರತವು ಶ್ರೀಲಂಕಾದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ‘ಹೈಬ್ರಿಡ್ ಮಾದರಿ’ ಆಧಾರದ ಮೇಲೆ ಆಡಿತ್ತು.

ಇದನ್ನೂ ಓದಿ: Harbhajan Singh : ಅಂಗವಿಕಲರಿಗೆ ಅವಮಾನ ಮಾಡಿ ಕ್ಷಮೆ ಕೋರಿದ ಹರ್ಭಜನ್​ ಸಿಂಗ್​!

ಪಿಸಿಬಿ ಈಗಾಗಲೇ ತನ್ನ ಕರಡು ವೇಳಾಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ. ಅಲ್ಲಿ ಸಂಭವನೀಯ ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್​​ನಲ್ಲಿ ನಿಗದಿಪಡಿಸಲಾಗಿದೆ. ಮಾರ್ಚ್ 1 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಿಗದಿಯಾಗಿದೆ ಎಂದು ಹೇಳಲಾಗಿದೆ.

ಟೂರ್ನಿಯು ಫೆಬ್ರವರಿ 19 ರಂದು ಕರಾಚಿಯಲ್ಲಿ ಪ್ರಾರಂಭವಾಗಲಿದ್ದು, ಮಾರ್ಚ್ 9ರಂದು ಲಾಹೋರ್​ನಲ್ಲಿ ಫೈನಲ್​ ನಡೆಯಲಿದೆ. ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಫೈನಲ್ ಪಂದ್ಯವು ಮಾರ್ಚ್ 10 ರಂದು ಮೀಸಲು ದಿನವನ್ನು ಹೊಂದಿರುತ್ತದೆ. ರಾವಲ್ಪಿಂಡಿಯಲ್ಲೂ ಕೆಲವು ಪಂದ್ಯಗಳು ನಡೆಯಲಿವೆ.

ಬಿಸಿಸಿಐ ಮೂಲಗಳನ್ನು ನಂಬುವುದಾದರೆ ಸದ್ಯ ಪಾಕಿಸ್ತಾನಕ್ಕೆ ಪ್ರಯಾಣಿಸಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಐಸಿಸಿ ಯಾವುದೇ ಅನುಕೂಲಕರ ಯೋಜನೆಗೆ ಹೆಚ್ಚುವರಿ ಬಜೆಟ್ ಅನ್ನು ನಿಗದಿಪಡಿಸಿದೆ.

“ಪಾಕಿಸ್ತಾನದ ಹೊರಗೆ ಕೆಲವು ಪಂದ್ಯಗಳನ್ನು ಆಡುವುದು ಅಗತ್ಯವಿದ್ದರೆ ಐಸಿಸಿ ಮ್ಯಾನೇಜ್ಮೆಂಟ್ ಹೆಚ್ಚುವರಿ ವೆಚ್ಚವನ್ನು ಶಿಫಾರಸು ಮಾಡುತ್ತಿದೆ” ಎಂದು ಮೂಲಗಳು ದೃಢಪಡಿಸಿವೆ

Continue Reading

ಕ್ರಿಕೆಟ್

Harbhajan Singh : ಅಂಗವಿಕಲರಿಗೆ ಅವಮಾನ ಮಾಡಿ ಕ್ಷಮೆ ಕೋರಿದ ಹರ್ಭಜನ್​ ಸಿಂಗ್​!

Harbhajan Singh : ಮಾನಸಿ ಜೋಶಿ ಅವರು ಆಟಗಾರರನ್ನು ಟೀಕಿಸಿದ್ದರು. ಅಲ್ಲದೆ, ದೈಹಿಕವಾಗಿ ವಿಶೇಷಚೇತನರನ್ನು ಅಣಕಿಸದಂತೆ ಕೋರಿಕೊಂಡಿದ್ದರು. ಹರ್ಭಜನ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು ಮತ್ತು ಆಟಗಾರರು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Harbhajan Singh
Koo

ನವದೆಹಲಿ: ಲೆಜೆಂಡ್ಸ್ ವಿಶ್ವ ಕಪ್​ ಗೆದ್ದ ಖುಷಿಯಲ್ಲಿ ಅಂಗವಿಕಲರ ರೀತಿ ಡಾನ್ಸ್​ ಮಾಡಿದ್ದಕ್ಕೆ ಟೀಕೆಗಳನ್ನು ಎದುರಿಸಿದ್ದ ಭಾರತ ತಂಡದ ಮಾಜಿ ಸ್ಪಿನ್ನರ್​​ ಹರ್ಭಜನ್​ ಸಿಂಗ್ (Harbhajan Singh) ಕ್ಷಮೆ ಕೋರಿದ್ದಾರೆ. ಅವರು ಮಾಡಿರುವ ‘ತೌಬಾ-ತೌಬಾ’ ರೀಲ್ ಟೀಕೆಗಳನ್ನು ಎದುರಿಸಿದ ನಂತರ ಅವರು ಕ್ಷಮೆ ಕೋರಬೇಕಾಯಿತು. ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರ ಕ್ರಮವನ್ನು ಟೀಕಿಸಿದ್ದರು. ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​ನಲ್ಲಿ ಜಯಗಳಿಸಿದ ನಂತರ ಭಾರತ ಚಾಂಪಿಯನ್ಸ್ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಉಲ್ಲಾಸದ ವೀಡಿಯೊ ಹಂಚಿಕೊಂಡಿದ್ದರು. ಅದರಲ್ಲಿ ಯುವರಾಜ್ ಸಿಂಗ್, ರೈನಾ, ಹರ್ಭಜನ್ ಸಿಂಗ್ ಮತ್ತು ಗುರ್ಕೀರತ್ ಸಿಂಗ್ ಕುಂಟುತ್ತಾ ಡಾನ್ಸ್ ಮಾಡಿದ್ದರು. ಇದು ಟೀಕೆಗೆ ಒಳಗಾಯಿತು.

15 ದಿನಗಳ ಲೆಜೆಂಡ್ಸ್ ಕ್ರಿಕೆಟ್​ ಬಳಿಕ ದೇಹದ ಪ್ರತಿಯೊಂದು ಭಾಗವೂ ನೋಯುತ್ತಿದೆ ಎಂಬ ಅರ್ಥದ ಹಾಡಿಗೆ ಡಾನ್ಸ್ ಮಾಡಿದ್ದರು. ಅದನ್ನು ವಿಕ್ಕಿ ಕೌಶಲ್ ಮತ್ತು ಗಾಯಕ ಕರಣ್ ಔಜ್ಲಾ ಗೆ ಟ್ಯಾಗ್ ಮಾಡಿದ್ದರು. ಸತತ ಕ್ರಿಕೆಟ್ ವೇಳಾಪಟ್ಟಿಯು ನಮ್ಮ ದೇಹದ ಮೇಲೆ ಪರಿಣಾಮ ಬೀರಿದೆ. ನಮ್ಮ ದೇಹದ ಭಾಗಗಳು ನೋಯುತ್ತಿವೆ ಎಂದು ಭಾರತದ ಮಾಜಿ ಆಟಗಾರ ವಿವರಿಸಿದ್ದರು. ಆದಾಗ್ಯೂ, ಮಾನಸಿ ಜೋಶಿ ಅವರು ಆಟಗಾರರನ್ನು ಟೀಕಿಸಿದ್ದರು. ಅಲ್ಲದೆ, ದೈಹಿಕವಾಗಿ ವಿಶೇಷಚೇತನರನ್ನು ಅಣಕಿಸದಂತೆ ಕೋರಿಕೊಂಡಿದ್ದರು. ಹರ್ಭಜನ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು ಮತ್ತು ಆಟಗಾರರು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಚಾಂಪಿಯನ್​ಶಿಪ್​ ಗೆದ್ದ ನಂತರ ನಾವು ಮಾಡಿದ ವಿಡಿಯೊ ಬಗ್ಗೆ ದೂರು ನೀಡುತ್ತಿರುವ ನಮ್ಮ ಜನರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಯಾರ ಭಾವನೆಗಳನ್ನೂ ನೋಯಿಸಲು ಬಯಸಲಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಈ ವೀಡಿಯೊ 15 ದಿನಗಳ ಕಾಲ ಕ್ರಿಕೆಟ್ ಆಡಿದ ನಂತರ ನಮ್ಮ ದೇಹಕ್ಕೆ ಆಗಿರುವ ನೋವನ್ನು ಹೇಳಲು ಬಯಸಿದೆ. ನಾವು ಯಾರನ್ನೂ ಅವಮಾನಿಸಲು ಅಥವಾ ನೋಯಿಸಲು ಪ್ರಯತ್ನಿಸುತ್ತಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದೇವೆ ಎಂದು ಜನರು ಭಾವಿಸಿದರೆ. ನನ್ನ ಕಡೆಯಿಂದ ನಾನು ಹೇಳಬಹುದಾದುದೆಂದರೆ ಎಲ್ಲರಿಗೂ ಕ್ಷಮಿಸಿ. ಇದನ್ನು ಇಲ್ಲಿಗೆ ನಿಲ್ಲಿಸಿ ಮುಂದೆ ಸಾಗೋಣ ಎಂದು ಹರ್ಭಜನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

ಮಾನಸಿಗೆ ಬೇಸರ

ಅಂಗವಿಕಲ ವ್ಯಕ್ತಿಗಳ ನಡಿಗೆಯ ರೀತಿಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಮಾನಸಿ ಆಟಗಾರರನ್ನು ತೀವ್ರವಾಗಿ ಟೀಕಿಸಿದ್ದರು. “ನಿಮ್ಮಂಥ ಕ್ರೀಡಾಪಟುಗಳಿಂದ ಹೆಚ್ಚಿನ ಜವಾಬ್ದಾರಿಯ ನಡೆಯನ್ನು ಬಯಸುತ್ತೇನೆ. ದಯವಿಟ್ಟು ಅಂಗವಿಕಲರ ನಡಿಗೆಯನ್ನು ಅಪಹಾಸ್ಯ ಮಾಡಬೇಡಿ. ಇದು ತಮಾಷೆಯಲ್ಲ.” ಎಂದು ಮಾನಸಿ ಇನ್ಸ್ಟಾಗ್ರಾಮ್ ಪೋಸ್ಟ್​ಗೆ ಕಾಮೆಂಟ್ ಮಾಡಿದ್ದರು.

“ನಿಮ್ಮ ನಡವಳಿಕೆಯಿಂದ ಎಷ್ಟು ಹಾನಿಯಾಗಬಹುದು ಎಂದು ನಿಮಗೆ ತಿಳಿದಿಲ್ಲ. ಸುತ್ತಮುತ್ತಲಿನ ಜನರಿಂದ ನೀವು ಪಡೆಯುತ್ತಿರುವ ಮೆಚ್ಚುಗೆ ನೋಡಲು ಬೇಸರವಾಗಿದೆ. ನಿಮ್ಮ ಈ ರೀಲ್ ವಿಶೇಷಚೇತನರ ನಡಿಗೆಯ ರೀತಿಯನ್ನು ಗೇಲಿ ಮಾಡಿದೆ. ಈ ರೀಲ್ ಅನ್ನು ಬಳಸುವ ಮೂಲಕ ವಿಶೇಷಚೇತನ ಚಿಕ್ಕ ಮಕ್ಕಳಿಗೆ ಬೇಸರವಾಗಲಿದೆ. ನಿಮ್ಮಲ್ಲಿ ಯಾರಾದರೂ ಕ್ರೀಡಾಪಟುಗಳು ವಿಶೇಷಚೇತನ ಸಮುದಾಯ ಸೇವೆಯನ್ನು ಮಾಡಿದ್ದರೆ ನೀವು ರೀಲ್ ಮಾಡುತ್ತಿರಲಿಲ್ಲ. ಈ ಕ್ರೀಡಾಪಟುಗಳ ಪಿಆರ್ ಏಜೆನ್ಸಿಗಳು ಈ ರೀಲ್ ಅನ್ನು ಸೋಶಿಯಲ್ ಮೀಡಿಯಾಗೆ ಅಪ್​ಲೋಡ್​ ಮಾಡಿದವು ಎಂಬುದೇ ಅಚ್ಚರಿ, ಎಂದು ಮಾನಸಿ ಬರೆದಿದ್ದರು.

ಹರ್ಭಜನ್ ಸಿಂಗ್ ಮತ್ತು ಸುರೇಶ್​ ರೈನಾ ಈ ರೀಲ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾಮೆಂಟ್ ವಿಭಾಗದ ಎಲ್ಲಾ ಜನರ ಬಗ್ಗೆ ನಾನು ನಿಜವಾಗಿಯೂ ನಿರಾಶೆಗೊಂಡಿದ್ದೇನೆ ಎಂದು ಮಾನಸಿ ಹೇಳಿದ್ದಾರೆ. ಇದಕ್ಕೂ ದೊಡ್ಡ ಪ್ರಮಾಣದಲ್ಲಿ ಲೈಕ್​ ಹಾಗೂ ಕಾಮೆಂಟ್​ಗಳು ಬಂದಿವೆ.

Continue Reading

ಕ್ರೀಡೆ

IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆ ಸಾಧ್ಯತೆ

IND vs SL: ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

VISTARANEWS.COM


on

IND vs SL
Koo

ಮುಂಬಯಿ: ಇದೇ ತಿಂಗಳಾಂತ್ಯದಲ್ಲಿ ಟಿ20 ಮತ್ತು ಏಕದಿನ ಸರಣಿಯನ್ನಾಡಲು ಟೀಮ್​ ಇಂಡಿಯಾ ಶ್ರೀಲಂಕಾ(IND vs SL) ಪ್ರವಾಸ ಕೈಗೊಳ್ಳಲಿದೆ. ಈ ಸರಣಿಗೆ ಮೊಹಮ್ಮದ್ ಶಮಿ(Mohammed Shami) ಕೂಡ ಆಯ್ಕೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ಶಮಿ ಅವರು ಈ ಸರಣಿಯಲ್ಲಿ ಆಡುವ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಲಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿಗೆ ಲಂಡನ್​ನಲ್ಲಿ ಪಾದದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ವಿಶ್ವಕಪ್​ ಬಳಿಕ ಶಮಿ ಇದುವರೆಗೂ ಯಾವುದೇ ಕ್ರಿಕೆಟ್​ ಪಂದ್ಯ ಆಡಿಲ್ಲ. ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿರುವ ಶಮಿ ಈಗಾಗಲೇ ಬೌಲಿಂಗ್​ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಬೌಲಿಂಗ್​ ಮತ್ತು ವ್ಯಾಯಾಮ ನಡೆಸುತ್ತಿರುವ ವಿಡಿಯೊವನ್ನು ಶಮಿ ಕೆಲವು ವಾರಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ Mohammed Shami : ಐಸಿಸಿ ಪ್ರಶಸ್ತಿಗೆ ಮೊಹಮ್ಮದ್ ಶಮಿಯ ಹೆಸರು ನಾಮನಿರ್ದೇಶನ

ಶ್ರೀಲಂಕಾ ವಿರುದ್ಧ ಭಾರತ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿದೆ. ಈ ಸರಣಿಗೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಜಸ್​ಪ್ರೀತ್​ ಬುಮ್ರಾಗೆ ಬಿಸಿಸಿಐ ವಿಶ್ರಾಂತಿ ನೀಡ ಬಯಸಿದೆ ಎನ್ನಲಾಗಿದೆ. ಹೀಗಾಗಿ ಶಮಿ ಈ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಅಧಿಕವಾಗಿದೆ. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Continue Reading
Advertisement
7th Pay Commission
ಕರ್ನಾಟಕ15 mins ago

7th Pay Commission: 7ನೇ ವೇತನ ಆಯೋಗ ಜಾರಿ; ನೌಕರರ ಸಂಬಳ ಎಷ್ಟು ಹೆಚ್ಚಾಗಲಿದೆ? ಇಲ್ಲಿದೆ ಪಟ್ಟಿ

ಕ್ರಿಕೆಟ್20 mins ago

KL Rahul : ಕೆ. ಎಲ್ ರಾಹುಲ್​ ಎಲ್​ಎಸ್​ಜಿ ತಂಡದಿಂದ ಹೊರಕ್ಕೆ, ಆಂತರಿಕ ಗುಟ್ಟು ಬಿಟ್ಟುಕೊಟ್ಟ ಅಮಿತ್ ಮಿಶ್ರಾ

Assembly Session
ಕರ್ನಾಟಕ30 mins ago

Assembly Session: ಜುಲೈ 18ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ

Viral Video
ವೈರಲ್ ನ್ಯೂಸ್42 mins ago

Viral Video: ಬಾಂಬ್‌ ಇಡಲು ಮುಸ್ಲಿಮರು ಬೇಕು, ಉನ್ನತ ಸ್ಥಾನ ಮಾತ್ರ ಹಿಂದೂಗಳಿಗೆ; ಟಿಎಂಸಿ ನಾಯಕನ ಸ್ಫೋಟಕ ಹೇಳಿಕೆ!

ಕ್ರಿಕೆಟ್51 mins ago

IND vs PAK : ಪಾಕಿಸ್ತಾನಕ್ಕೆ ಬರದಿರುವುದಕ್ಕೆ ಲಿಖಿತ ಕಾರಣ ನೀಡುವಂತೆ ಬಿಸಿಸಿಐಗೆ ಒತ್ತಾಯಿಸಿದ ಪಿಸಿಬಿ

Dengue Fever
ಕರ್ನಾಟಕ1 hour ago

Dengue Fever: ರಾಜ್ಯದಲ್ಲಿ ಸೋಮವಾರ 435 ಡೆಂಗ್ಯೂ ಪ್ರಕರಣ ಪತ್ತೆ; ಹಾಸನದಲ್ಲಿ ಬಾಲಕ ಸಾವು

7th Pay Commission
ಕರ್ನಾಟಕ1 hour ago

7th Pay Commission: 7ನೇ ವೇತನ ಆಯೋಗದ‌ ಶಿಫಾರಸು ಜಾರಿಗೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್; ನೌಕರರಿಗೆ ಗುಡ್‌ ನ್ಯೂಸ್

Hit and Run Case
Latest1 hour ago

Hit and Run Case: ಮೊಬೈಲ್‌ನಲ್ಲಿ ಮಾತನಾಡುತ್ತ ರಸ್ತೆ ದಾಟಿದರೆ ಏನಾಗುತ್ತದೆ ನೋಡಿ; ಬೆಚ್ಚಿ ಬೀಳಿಸುವ ವಿಡಿಯೊ

Harbhajan Singh
ಕ್ರಿಕೆಟ್1 hour ago

Harbhajan Singh : ಅಂಗವಿಕಲರಿಗೆ ಅವಮಾನ ಮಾಡಿ ಕ್ಷಮೆ ಕೋರಿದ ಹರ್ಭಜನ್​ ಸಿಂಗ್​!

House arrest
ದೇಶ2 hours ago

House Arrest: ಯುಪಿ ಶಾಸಕ ರಾಜಾಭಯ್ಯಾರ ತಂದೆಗೆ ಗೃಹ ಬಂಧನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ11 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ16 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ1 day ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ1 day ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌