ನವದೆಹಲಿ: ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಮತ್ತು ಶೂಟರ್ ಮನು ಭಾಕರ್ (Manu Bhaker) ಕಾರ್ಯಕ್ರಮವೊಂದರಲ್ಲಿ ಗುಟ್ಟಾಗಿ ಮಾತನಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಭಾರತದ ಕ್ರೀಡಾ ಕ್ಷೇತ್ರ ನವ ತಾರೆಗಳಾಗಿರುವ ಅವರಿಬ್ಬರೂ ಪರಸ್ಪರ ಸ್ನೇಹದ ಬಲೆಯಲ್ಲಿ ಬಿದ್ದಿದ್ದಾರೆ ಎಂಬುದಾಗಿ ಅಭಿಮಾನಿಗಳ ಅನುಮಾನ. ಅವರಿಬ್ಬರೂ ಮಾತನಾಡುತ್ತಿರುವ ವಿಡಿಯೊವನ್ನು ವೈರಲ್ ಮಾಡಿರುವ ನೆಟ್ಟಿಗರು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ಇಬ್ಬರೂ ಮಾತನಾಡುವಾರ ಪರಸ್ಪರ ದೃಷ್ಟಿ ನೆಡದ ಕಾರಣ ಇವರೊಳಗೇನೋ ನಡಿತಾ ಇದೆ ಎಂಬುದಾಗಿ ನೆಟ್ಟಿಗರು ಅಂದಾಜಿಸಿದ್ದಾರೆ.
Look at the confidence of our medalists Neeraj Chopra and Manu Bhaker both can't look each other in the eyes while talking pic.twitter.com/fMc2ACDPaT
— Yanika_Lit (@LogicLitLatte) August 11, 2024
ಪ್ಯಾರಿಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ನೀರಜ್ ಇತಿಹಾಸ ನಿರ್ಮಿಸಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನ ಗೆದ್ದ ಕಾರಣ ಬೆಳ್ಳಿಯ ಪದಕ ಪಡೆಯಬೇಕಾಯಿತು. ಆದಾಗ್ಯೂ ಸತತ ಎರಡು ಒಲಿಂಪಿಕ್ಸ್ಗಳಲ್ಲಿ ಪದಕ ಗೆದ್ದ ಅವರ ಸಾಧನೆ ಅಮೋಘ. ಇನ್ನು ಮನು ಭಾಕರ್ ಭಾರತಕ್ಕಾಗಿ ಒಲಿಂಪಿಕ್ಸ್ನ ಒಂದೇ ಆವೃತ್ತಿಯಲ್ಲಿ ಎರಡು ಕಂಚಿನ ಪದಕಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಕೂಟ ಕ್ರೀಡಾ ಕ್ಷೇತ್ರದ ತಾರೆಯಾಗಿ ಮಿಂಚಿದ್ದಾರೆ. ಅವರು ಭಾರತ ಪಾಲಿಗೆ ಭರವಸೆಯ ಶೂಟರ್ ಎನಿಸಿಕೊಂಡಿದ್ದಾರೆ.
ನೀರಜ್ ಹಾಗೂ ಮನು ಹರಿಯಾಣದ ಮೂಲದವರು. ಇಬ್ಬರೂ ಕ್ರೀಡೆಯ ಪ್ರೇರಕ ಕುಟುಂಬಕ್ಕೆ ಸೇರಿದವರು. ಹೀಗಾಗಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಮಾತನಾಡಿದ್ದು ಅಭಿಮಾನಿಗಳಲ್ಲಿ ನೂರು ಪ್ರಶ್ನೆಗಳನ್ನು ಸೃಷ್ಟಿಸಿತು. ಅವರು ಡೇಟಿಂಗ್ ಮಾಡುತ್ತಿರಬಹುದು ಎಂದು ಹಲವರು ಅಂದಾಜಿಸಿದ್ದಾರೆ. ಅವರಿಬ್ಬರು ಸಂಬಂಧದಲ್ಲಿಲ್ಲ ಎಂದು ತಿಳಿದಿದ್ದರೂ ಅನೇಕ ನಿಷ್ಠಾವಂತ ಅಭಿಮಾನಿಗಳು ಅವರು ದಂಪತಿಗಳಾಗಬೇಕೆಂದು ಆಶಿಸಿದರು. ಇಬ್ಬರೂ ಮಾತನಾಡುವ ವೀಡಿಯೊದ ಬಗ್ಗೆ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.
ಪರಸ್ಪರ ಮಖ ನೋಡಿಕೊಳ್ಳದ ಅಥ್ಲೀಟ್ಗಳು
ಭಾರತೀಯ ಈ ನವ ಕ್ರೀಡಾ ತಾರೆಯರು ಪರಸ್ಪರ ಮಾತನಾಡುತ್ತಿರುವಾಗ ಮುಖ ನೋಡಿಕೊಳ್ಳುತ್ತಿರಲಿಲ್ಲ. ಹೀಗಾಗಿ ಇದು ಪ್ರೀತಿಯಲ್ಲಿ ಮಾತ್ರ ಸಾಧ್ಯ ಎಂಬ ರೀತಿಯಲ್ಲಿ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ವಿರುದ್ಧ ಲಿಂಗದವರೊಂದಿಗೆ ಸಂವಹನ ನಡೆಸುವಾಗ ಇಂತಹ ನಾಚಿಕೆ ಭಾರತದಲ್ಲಿ ಸಾಮಾನ್ಯ ಎಂದು ಕೆಲವರು ವಾದಿಸಿದಿರೆ ಇತರರು ಕ್ರೀಡಾಪಟುಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚೋಪ್ರಾ ಸಭ್ಯ ಹಾಗೂ ನಾಚಿಕೆ ಸ್ವಭಾವದವರು. ಅವರು ಜಾಗತಿಕ ಮಟ್ಟದಲ್ಲಿ ತಮ್ಮ ವಿಶ್ವಾಸ ತೋರಿಸಿದ್ದಾರೆ. ಇಲ್ಲೆಲ್ಲ ಅಗತ್ಯವೇ ಇಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
Manu Bhaker’s Mother with Neeraj Chopra. pic.twitter.com/SDWbaWeOG7
— Avinash Aryan (@avinasharyan09) August 11, 2024
ಇದೇ ರೀತಿ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ನೀರಜ್ ಅವರ ಕೈ ಹಿಡಿದುಕೊಂಡು ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಕರ್ ಅವರ ತಾಯಿ ನೀರಜ್ ಅವರನ್ನು ತಮ್ಮ ಮಗಳಿಗೆ ಸಂಭಾವ್ಯ ಜೋಡಿಯಾಗಿ ನಿರ್ಣಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಪ್ರತಿಕ್ರಿಯೆ ಕೊಟ್ಟಿದ್ದಾರೆ.