ದೋಹಾ: ಕಾಲ್ಚೆಂಡಿನ ಕಲರವ ಫಿಪಾ ಫುಟ್ಬಾಲ್ ವಿಶ್ವ ಕಪ್ ಟೂರ್ನಿ(Fifa World Cup) ಆರಂಭಕ್ಕೆ ಕತಾರ್ನಲ್ಲಿ ಕ್ಷಣಗಣನೆ ಆರಂಭವಾಗಿದ್ದು ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಅಧಿಕೃತ ಚಾಲನೆ ದೊರೆಯಲಿದೆ. ಈ ಐತಿಹಾಸಿಕ ಸಮಾರಂಭಕ್ಕೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಕೂಡ ಸಾಕ್ಷಿಯಾಗಲಿದ್ದಾರೆ.
ಈಗಾಗಲೇ ಕತಾರ್ ತಲುಪಿರುವ ಜಗದೀಪ್ ಧನಕರ್ ಅವರಿಗೆ ಭವ್ಯ ಸ್ವಾಗತ ದೊರಕ್ಕಿದ್ದು, ಉದ್ಘಾಟನಾ ಸಮಾರಂಭದ ಜತೆಗೆ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ವಿರುದ್ಧದ ಉದ್ಘಾಟನಾ ಪಂದ್ಯವನ್ನು ಅವರು ವೀಕ್ಷಿಸಲಿದ್ದಾರೆ ಎಂದು ಕತಾರ್‌ನ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಕತಾರ್ ವಿಶ್ವ ಕಪ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದ ಬಳಿಕ ಎರಡು ದಿನದ ಕಾರ್ಯಕ್ರಮದಲ್ಲಿ ಜಗದೀಪ್ ಧನಕರ್ ಅವರು ಕತಾರ್‌ನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ | Fifa World Cup 2022 | ಫಿಫಾ ವಿಶ್ವ ಕಪ್ನ ಬಹುಮಾನ ಮೊತ್ತದ ವಿವರ