Site icon Vistara News

WPL 2023 : ಮುಂಬಯಿ ತಂಡಕ್ಕೆ ಐದನೇ ಗೆಲುವು, ಗುಜರಾತ್​ ಜಯಂಟ್ಸ್​ಗೆ 55 ರನ್​ ಹೀನಾಯ ಸೋಲು

Fifth win for Mumbai team, 55 run crushing defeat for Gujarat Giants

#image_title

ಮುಂಬಯಿ: ನಾಯಕಿ ಹರ್ಮನ್​ಪ್ರೀತ್ ಕೌರ್​ (51 ರನ್​) ಅವರ ಅರ್ಧ ಶತಕ ಹಾಗೂ ಬೌಲರ್​ಗಳ ಪರಿಶ್ರಮದ ಫಲ ಪಡೆದ ಮುಂಬಯಿ ಇಂಡಿಯನ್ಸ್ ತಂಡ ಮಹಿಳೆಯರ ಪ್ರಿಮಿಯರ್​ ಲೀಗ್​ನ (WPL 2023) 12ನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್​ ವಿರುದ್ಧ 55 ರನ್​ಗಳ ಭರ್ಜರಿ ವಿಜಯ ಸಾಧಿಸಿತು. ಇದು ಮುಂಬಯಿ ತಂಡಕ್ಕೆ ಸತತ ಐದನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಮುಂದುವರಿಸಿತು. ಅತ್ತ ಗುಜರಾತ್ ತಂಡ ಮತ್ತೊಮ್ಮೆ ತನ್ನ ವೈಫಲ್ಯ ಪ್ರದರ್ಶಿಸಿ ನಾಲ್ಕನೇ ಸೋಲಿಗೆ ಒಳಗಾಯಿತು.

ಮಹಿಳೆಯರ ಪ್ರಿಮಿಯರ್​ ಲೀಗ್​ನ ಟ್ವೀಟ್​ ಇಲ್ಲಿದೆ

ಇಲ್ಲಿನ ಬ್ರಬೊರ್ನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಗುಜರಾತ್​ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೆ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 162 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್​ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ಕಳೆದುಕೊಂದು 107 ರನ್​ ಬಾರಿಸಲು ಮಾತ್ರ ಶಕ್ತಗೊಂಡಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ತಂಡದ ಪರ ಯಾವ ಬ್ಯಾಟರ್​ಗಳೂ ಪ್ರತಿರೋಧ ತೋರಲಿಲ್ಲ. ಹರ್ಲಿನ್​ ಡಿಯೋಲ್​ 22 ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ನಾಯಕಿ ಸ್ನೇಹಾ ರಾಣಾ 20 ರನ್​ಗಳಿಗೆ ಔಟಾದರು.

ಇದನ್ನೂ ಓದಿ : WPL 2023: ಸತತ 5ನೇ ಸೋಲು; ಟೂರ್ನಿಯಿಂದ ಬಹುತೇಕ ಹೊರಬಿದ್ದ ಆರ್​ಸಿಬಿ

ಮೊದಲು ಬ್ಯಾಟ್​ ಮಾಡಿದ ಮುಂಬಯಿ ಬಳಗ ಒಂದು ರನ್​ಗೆ ಮೊದಲ ವಿಕೆಟ್​ ಕಳೆದುಕೊಳ್ಳುವ ಮೂಲಕ ಆತಂಕ್ಕೆ ಬಿತ್ತು. ಸ್ಫೋಟಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಎದುರಿಸಿದರು. ಆದರೆ, ಯಸ್ತಿಕಾ ಹಾಗೂ ಬ್ರಂಟ್​ ಜೋಡಿ ಎರಡನೇ ವಿಕೆಟ್​ಗೆ 74 ರನ್​ ಜತೆಯಾಟ ನೀಡುವ ಮೂಲಕ ಆರಂಭಿಕ ಹಿನ್ನಡೆ ತಗ್ಗಿಸಿದರು. ಬಳಿಕ ಹರ್ಮನ್​ಪ್ರೀತ್​ ಕೌರ್​ ಏಳು ಫೋರ್​ ಹಾಗೂ 2 ಸಿಕ್ಸರ್​ಗಳ ನೆರವಿನಿಂದ ಅರ್ಧ ಶತಕ ಬಾರಿಸಿ ದೊಡ್ಡ ಮೊತ್ತ ಪೇರಿಲು ತಂಡಕ್ಕೆ ನೆರವಾದರು.

ಗುಜರಾತ್​ ತಂಡದ ಪರ ಆಶ್ಲೀ ಗಾರ್ಡ್ನರ್​ 34 ರನ್​ ವೆಚ್ಚದಲ್ಲಿ 3 ವಿಕೆಟ್​ ಕಬಳಿಸಿ ಮಿಂಚಿದರು.

Exit mobile version