Fifth win for Mumbai team, 55 run crushing defeat for Gujarat Giants WPL 2023 : ಮುಂಬಯಿ ತಂಡಕ್ಕೆ ಐದನೇ ಗೆಲುವು, ಗುಜರಾತ್​ ಜಯಂಟ್ಸ್​ಗೆ 55 ರನ್​ ಹೀನಾಯ ಸೋಲು - Vistara News

ಕ್ರಿಕೆಟ್

WPL 2023 : ಮುಂಬಯಿ ತಂಡಕ್ಕೆ ಐದನೇ ಗೆಲುವು, ಗುಜರಾತ್​ ಜಯಂಟ್ಸ್​ಗೆ 55 ರನ್​ ಹೀನಾಯ ಸೋಲು

ಸತತ ಗೆಲುವಿನ ಸವಿ ಉಂಡಿರುವ ಮುಂಬಯಿ ಇಂಡಿಯನ್ಸ್​ ತಂಡ ಡಬ್ಲ್ಯುಪಿಎಲ್​ (WPL 2023) ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿಯಿತು.

VISTARANEWS.COM


on

Fifth win for Mumbai team, 55 run crushing defeat for Gujarat Giants
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ನಾಯಕಿ ಹರ್ಮನ್​ಪ್ರೀತ್ ಕೌರ್​ (51 ರನ್​) ಅವರ ಅರ್ಧ ಶತಕ ಹಾಗೂ ಬೌಲರ್​ಗಳ ಪರಿಶ್ರಮದ ಫಲ ಪಡೆದ ಮುಂಬಯಿ ಇಂಡಿಯನ್ಸ್ ತಂಡ ಮಹಿಳೆಯರ ಪ್ರಿಮಿಯರ್​ ಲೀಗ್​ನ (WPL 2023) 12ನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್​ ವಿರುದ್ಧ 55 ರನ್​ಗಳ ಭರ್ಜರಿ ವಿಜಯ ಸಾಧಿಸಿತು. ಇದು ಮುಂಬಯಿ ತಂಡಕ್ಕೆ ಸತತ ಐದನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಮುಂದುವರಿಸಿತು. ಅತ್ತ ಗುಜರಾತ್ ತಂಡ ಮತ್ತೊಮ್ಮೆ ತನ್ನ ವೈಫಲ್ಯ ಪ್ರದರ್ಶಿಸಿ ನಾಲ್ಕನೇ ಸೋಲಿಗೆ ಒಳಗಾಯಿತು.

ಮಹಿಳೆಯರ ಪ್ರಿಮಿಯರ್​ ಲೀಗ್​ನ ಟ್ವೀಟ್​ ಇಲ್ಲಿದೆ

ಇಲ್ಲಿನ ಬ್ರಬೊರ್ನ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಗುಜರಾತ್​ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೆ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 162 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್​ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ಕಳೆದುಕೊಂದು 107 ರನ್​ ಬಾರಿಸಲು ಮಾತ್ರ ಶಕ್ತಗೊಂಡಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಗುಜರಾತ್ ತಂಡದ ಪರ ಯಾವ ಬ್ಯಾಟರ್​ಗಳೂ ಪ್ರತಿರೋಧ ತೋರಲಿಲ್ಲ. ಹರ್ಲಿನ್​ ಡಿಯೋಲ್​ 22 ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ನಾಯಕಿ ಸ್ನೇಹಾ ರಾಣಾ 20 ರನ್​ಗಳಿಗೆ ಔಟಾದರು.

ಇದನ್ನೂ ಓದಿ : WPL 2023: ಸತತ 5ನೇ ಸೋಲು; ಟೂರ್ನಿಯಿಂದ ಬಹುತೇಕ ಹೊರಬಿದ್ದ ಆರ್​ಸಿಬಿ

ಮೊದಲು ಬ್ಯಾಟ್​ ಮಾಡಿದ ಮುಂಬಯಿ ಬಳಗ ಒಂದು ರನ್​ಗೆ ಮೊದಲ ವಿಕೆಟ್​ ಕಳೆದುಕೊಳ್ಳುವ ಮೂಲಕ ಆತಂಕ್ಕೆ ಬಿತ್ತು. ಸ್ಫೋಟಕ ಬ್ಯಾಟರ್​ ಹೇಲಿ ಮ್ಯಾಥ್ಯೂಸ್​ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಎದುರಿಸಿದರು. ಆದರೆ, ಯಸ್ತಿಕಾ ಹಾಗೂ ಬ್ರಂಟ್​ ಜೋಡಿ ಎರಡನೇ ವಿಕೆಟ್​ಗೆ 74 ರನ್​ ಜತೆಯಾಟ ನೀಡುವ ಮೂಲಕ ಆರಂಭಿಕ ಹಿನ್ನಡೆ ತಗ್ಗಿಸಿದರು. ಬಳಿಕ ಹರ್ಮನ್​ಪ್ರೀತ್​ ಕೌರ್​ ಏಳು ಫೋರ್​ ಹಾಗೂ 2 ಸಿಕ್ಸರ್​ಗಳ ನೆರವಿನಿಂದ ಅರ್ಧ ಶತಕ ಬಾರಿಸಿ ದೊಡ್ಡ ಮೊತ್ತ ಪೇರಿಲು ತಂಡಕ್ಕೆ ನೆರವಾದರು.

ಗುಜರಾತ್​ ತಂಡದ ಪರ ಆಶ್ಲೀ ಗಾರ್ಡ್ನರ್​ 34 ರನ್​ ವೆಚ್ಚದಲ್ಲಿ 3 ವಿಕೆಟ್​ ಕಬಳಿಸಿ ಮಿಂಚಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Rohit Sharma: ಯುಪಿಎಸ್ಸಿ ಕೋಚಿಂಗ್​ನಲ್ಲಿಯೂ ರೋಹಿತ್​ ಶರ್ಮ ಹವಾ; ವೈರಲ್​ ವಿಡಿಯೊ ಇಲ್ಲಿದೆ

Rohit Sharma: ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 398 ಏಕದಿನ ಪಂದ್ಯಗಳನ್ನಾಡಿ 351 ಸಿಕ್ಸರ್​ ಬಾರಿಸಿದ್ದಾರೆ.

VISTARANEWS.COM


on

Rohit Sharma
Koo

ಮುಂಬಯಿ: ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಅವರ ಸಾಧನೆ ಇದೀಗ ಯುಪಿಎಸ್ಸಿ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದೆ. ಹೌದು, ಯುಪಿಎಸ್ಸಿ(UPSC ) ಕೋಚಿಂಗ್​ ಸೆಂಟರ್​ ಒಂದರಲ್ಲಿ ಶಿಕ್ಷಕರೊಬ್ಬರು(UPSC teacher) ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ವೇಳೆ ರೋಹಿತ್​ ಅವರ ಬ್ಯಾಟಿಂಗ್​ ಬಗ್ಗೆ ಗುಣಗಾನ ಮಾಡಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(viral video) ಆಗಿದೆ.

ಪಾಠ ಮಾಡುತ್ತಿದ್ದ ಶಿಕ್ಷಕ, ರೋಹಿತ್ ಶರ್ಮ ಅವರ ಬ್ಯಾಟಿಂಗ್ ನೋಡುವಾಹ ರನ್​ ಗಳಿಸಲೆಂದೇ ಈ ಪಿಚ್​ ಮಾಡಿರುವಂತೆ ತೋರುತ್ತದೆ. ಆದರೆ, ಇತರ ಬ್ಯಾಟರ್‌ಗಳು ಕ್ರೀಸ್​ಗೆ ಬಂದಾಗ ಅದು ಕಠಿಣ ಎಂದು ಅನಿಸುತ್ತದೆ. ಅದು ಏಕೆ ಎಂಬುದು ನಿಜಕ್ಕೂ ಗೊಂದಲಮಯವಾಗಿದೆ ಎಂದು ಹೇಳುವ ಮೂಲಕ ಪರೀಕ್ಷೆ ಬರೆಯಲು ಸಜ್ಜಾಗಿ ನಿಂತಿರುವ ವಿದ್ಯಾರ್ಥಿಗಳು ರೋಹಿತ್​ ರನ್​ ಗಳಿಸಿದಂತೆ ಅಂಕ ಗಳಿಸಬೇಕು ಎನ್ನುವ ಉದಾಹರಣೆಯನ್ನು ನೀಡಿದ್ದಾರೆ. ಈ ವಿಡಿಯೊ ಕಂಡ ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ರೋಹಿತ್​ ಶೂನ್ಯಕ್ಕೆ ಔಟ್​ ಆದ ಹಲವು ನಿದರ್ಶನ ಇದೆ ಎಂದು ಹಾಸ್ಯ ಮಾಡಿದರೆ, ಇನ್ನು ಕೆಲವರು ರೋಹಿತ್​ ಏಕದಿನದಲ್ಲಿ ಮೂರು ಬಾರಿ ದ್ವಿಶತಕ ಬಾರಿಸಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

ಲಂಕಾ ವಿರುದ್ಧ ನಾಳೆ ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮ 2 ಸಿಕ್ಸರ್​ ಬಾರಿಸಿದರೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ(Most sixes in career in ODIs) ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್​ (331 ಸಿಕ್ಸರ್​) ದಾಖಲೆಯನ್ನು ಮುರಿಯಲಿದ್ದಾರೆ. ಸದ್ಯ ರೋಹಿತ್​ 330 ಸಿಕ್ಸರ್​ ಬಾರಿಸಿ ಮೂರನೇ ಸ್ಥಾನಿಯಾಗಿದ್ದಾರೆ. ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 398 ಏಕದಿನ ಪಂದ್ಯಗಳನ್ನಾಡಿ 351 ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಕನಿಷ್ಠ 2 ವರ್ಷಗಳ ಕಾಲ ಏಕದಿನ ಆಡಿದರೆ ಈ ದಾಖಲೆಯನ್ನು ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ Rohit Sharma: ಕ್ರಿಸ್​ ಗೇಲ್​ ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​

ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

Continue Reading

ಕ್ರೀಡೆ

IND vs SL 3rd ODI: ನಾಳೆ ಅಂತಿಮ ಏಕದಿನ; ರೋಹಿತ್​ ಪಡೆಗೆ ಗೆಲ್ಲಲೇ ಬೇಕಾದ ಒತ್ತಡ!

IND vs SL 3rd ODI: ದ್ವಿತೀಯ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿತ್ತು. ಆದರೆ, ಪಂದ್ಯಕ್ಕೆ ಯಾವುದೇ ಮಳೆ ಕಾಟ ಎದುರಾಗಿರಲಿಲ್ಲ. ಇದೀಗ ನಾಳೆ ನಡೆಯುವ ಮೂರನೇ ಪಂದ್ಯಕ್ಕೂ ಶೇ.77ರಷ್ಟು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

VISTARANEWS.COM


on

IND vs SL 3rd ODI
Koo

ಕೊಲಂಬೊ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಭಾರತ ತಂಡ ನಾಳೆ(ಬುಧವಾರ) ನಡೆಯುವ ಅಂತಿಮ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯಲಿದೆ. ದುರ್ಬಲ ಲಂಕಾ ವಿರುದ್ಧ ಸರಣಿ(IND vs SL 3rd ODI) ಸೋಲಿನ ಭೀತಿಯಲ್ಲಿರುವ ರೋಹಿತ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯ ಟೈ ಗೊಂಡಿತ್ತು.

ಭಾರತ ತಂಡಕ್ಕೆ ನಾಯಕ ರೋಹಿತ್​ ಶರ್ಮ ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸುತ್ತಿದ್ದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಯಾರು ಕೂಡ ತಂಡವನ್ನು ಆಧರಿಸಿ ನಿಲ್ಲುತ್ತಿಲ್ಲ. ಬ್ಯಾಟಿಂಗ್​ ಮರೆತವರಂತೆ ಬ್ಯಾಟ್​ ಬೀಸಿ ವಿಕೆಟ್​ ಕಳೆದುಕೊಳ್ಳುತ್ತಿದ್ದಾರೆ. ಕೊಹ್ಲಿ, ರಾಹುಲ್​, ದುಬೆ, ಅಯ್ಯರ್​ ಆಡಿದ 2 ಪಂದ್ಯಗಳಲ್ಲಿಯೂ ವೈಫಲ್ಯ ಕಂಡಿದ್ದಾರೆ. ಅಕ್ಷರ್​ ಪಟೇಲ್​​ ಕೆಳ ಕ್ರಮಾಂಕದಲ್ಲಿ ಸಣ್ಣ ಮಟ್ಟಿನ ಬ್ಯಾಟಿಂಗ್​ ಹೋರಾಟ ನಡೆಸಿದರೂ ಕೂಡ ಅವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ಸಿಗದ ಕಾರಣ ಪಂದ್ಯವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗುತ್ತಿಲ್ಲ. ಭಾರತದ ಸೋಲಿಗೆ ಪ್ರಮುಖ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ವೈಫಲ್ಯ. ನಿರ್ಣಾಯ ಪಂದ್ಯದಲ್ಲಾದರೂ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಇದೆ.

ಸರಣಿ ಆರಂಭಕ್ಕೂ ಮುನ್ನ ಲಂಕಾ ತಂಡವನ್ನು ದುರ್ಬಲ ತಂಡ, ಭಾರತಕ್ಕೆ ಸವಾಲೊಡ್ಡುವುದು ಕಷ್ಟ ಎಂದು ಊಹಿಸಲಾಗಿತ್ತು. ಜತೆಗೆ ಅನುಭವಿ ಆಟಗಾರರು ಕೂಡ ಗಾಯದಿಂದ ಅಲಭ್ಯರಾಗಿದ್ದರು. ಆದರೆ, ಸನತ್​ ಜಯಸೂರ್ಯ ಮಾರ್ಗದರ್ಶನದಲ್ಲಿ ಲಂಕಾ ತಂಡದ ಯುವ ಆಟಗಾರರು ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ ಬಲಿಷ್ಠ ಭಾರತ ತಂಡಕ್ಕೆ ನೀರು ಕುಡಿಸಿತು. ಭಾರತ ತಂಡದ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯಿತು.

ಇದನ್ನೂ ಓದಿ IND vs SL: ಮೂರನೇ ಏಕದಿನ ಪಂದ್ಯಕ್ಕೆ ರಾಹುಲ್​ ಅನುಮಾನ​; ಪಂತ್​ಗೆ ಅವಕಾಶ?

ಪಿಚ್ ರಿಪೋರ್ಟ್

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಇದುವರೆಗೆ 150 ಏಕದಿನ ಪಂದ್ಯಗಳು ನಡೆದಿವೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡ ಕೇವಲ 59 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಸ್ಪಿನ್ನರ್​ಗಳು ಪ್ರಭಾವ ಬೀರಿದ್ದರು. ಹೀಗಾಗಿ ಎರಡನೇ ಏಕದಿನ ಪಂದ್ಯದಲ್ಲಿಯೂ ಸ್ಪಿನ್​ ಬೌಲರ್​ಗಳು ಪ್ರಾಬಲ್ಯ ತೋರುವ ನಿರೀಕ್ಷೆ ಇದೆ. ಪಂದ್ಯ ಸಾಗಿದಂತೆ ಈ ಪಿಚ್​ ಅತ್ಯಂತ ತಿರುವ ಪಡೆದುಕೊಳ್ಳಲಿದೆ. ಬ್ಯಾಟಿಂಗ್​ ನಡೆಸುವುದೇ ಒಂದು ಸವಾಲಾಗಿರಲಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಆಯ್ದುಕೊಳ್ಳಬಹುದು.

ಹವಾಮಾನ ವರದಿ


ದ್ವಿತೀಯ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿತ್ತು. ಆದರೆ, ಪಂದ್ಯಕ್ಕೆ ಯಾವುದೇ ಮಳೆ ಕಾಟ ಎದುರಾಗಿರಲಿಲ್ಲ. ಇದೀಗ ನಾಳೆ ನಡೆಯುವ ಮೂರನೇ ಪಂದ್ಯಕ್ಕೂ ಶೇ.77ರಷ್ಟು ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಸಂಭಾವ್ಯ ತಂಡಗಳು


ಭಾರತ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್​ ಪಂತ್​ (ವಿಕೀ), ರಿಯಾನ್​ ಪರಾಗ್​, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಅವಿಷ್ಕ ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿಕೀ), ಸದೀರ ಸಮರವಿಕ್ರಮ, ಚರಿತ್ ಅಸಲಂಕ (ನಾಯಕ), ಕಾಮಿಂದು ಮೆಂಡಿಸ್, ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಅಕಿಲ ದನಂಜಯ, ಅಸಿತ ಫೆರ್ನಾಂಡೋ, ಜೆಫ್ರಿ ವಂಡರ್ಸೆ.

Continue Reading

ಕ್ರೀಡೆ

Rohit Sharma: ಕ್ರಿಸ್​ ಗೇಲ್​ ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​

Rohit Sharma: ಲಂಕಾ ವಿರುದ್ಧದ ನಾಳಿನ ಪಂದ್ಯದಲ್ಲಿ ರೋಹಿತ್​ ಶರ್ಮ 2 ಸಿಕ್ಸರ್​ ಬಾರಿಸಿದರೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ(Most sixes in career in ODIs) ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್​ (331 ಸಿಕ್ಸರ್​) ದಾಖಲೆಯನ್ನು ಮುರಿಯಲಿದ್ದಾರೆ.

VISTARANEWS.COM


on

Koo

ಕೊಲಂಬೊ: ಈಗಾಗಲೇ ಶ್ರೀಲಂಕಾ(india vs sri lanka) ವಿರುದ್ಧದ ಏಕದಿನ ಸರಣಿಯಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸುವ ಮೂಲಕ ನಾಯಕನಾಗಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿರುವ ರೋಹಿತ್​ ಶರ್ಮ(Rohit Sharma) ಇದೀಗ ಮತ್ತೊಂದು ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ನಾಳೆ(ಬುಧವಾರ) ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್​ 2 ಸಿಕ್ಸರ್​ ಬಾರಿಸಿದರೆ ವಿಂಡೀಸ್​ ದಿಗ್ಗಜ ಕ್ರೀಸ್​ ಗೇಲ್(chris gayle)​ ದಾಖಲೆಯೊಂದು ಪತನಗೊಳ್ಳಲಿದೆ.

ಹೌದು, ಲಂಕಾ ವಿರುದ್ಧದ ನಾಳಿನ ಪಂದ್ಯದಲ್ಲಿ ರೋಹಿತ್​ ಶರ್ಮ 2 ಸಿಕ್ಸರ್​ ಬಾರಿಸಿದರೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ(Most sixes in career in ODIs) ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್​ (331 ಸಿಕ್ಸರ್​) ದಾಖಲೆಯನ್ನು ಮುರಿಯಲಿದ್ದಾರೆ. ಸದ್ಯ ರೋಹಿತ್​ 330 ಸಿಕ್ಸರ್​ ಬಾರಿಸಿ ಮೂರನೇ ಸ್ಥಾನಿಯಾಗಿದ್ದಾರೆ. ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 398 ಏಕದಿನ ಪಂದ್ಯಗಳನ್ನಾಡಿ 351 ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಕನಿಷ್ಠ 2 ವರ್ಷಗಳ ಕಾಲ ಏಕದಿನ ಆಡಿದರೆ ಈ ದಾಖಲೆಯನ್ನು ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಲಂಕಾ ವಿರುದ್ಧ ಆಡಿದ 2 ಏಕದಿನ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ರೋಹಿತ್​ ಅಂತಿಮ ಏಕದಿನದಲ್ಲಿಯೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ರೋಹಿತ್ 58 ರನ್‌ಗಳ ಇನಿಂಗ್ಸ್‌ ಆಡಿದ್ದರು. ಎರಡನೇ ಪಂದ್ಯದಲ್ಲಿ ಹಿಟ್‌ಮ್ಯಾನ್ 64 ರನ್‌ಗಳನ್ನು ಕಲೆ ಹಾಕಿದ್ದರು. ಮೊದಲ ಪಂದ್ಯ ಟೈ ಗೊಂಡು ದ್ವಿತೀಯ ಪಂದ್ಯದಲ್ಲಿ ಸೋಲು ಕಂಡಿರುವ ಭಾರತಕ್ಕೆ ಸರಣಿ ಸೋಲು ತಪ್ಪಿಸಲು ನಾಳೆಯ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.

ಮೂರನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಕಂಡುಬಂದಿದೆ. ಮೂಲಗಳ ಪ್ರಕಾರ ಆಯ್ಕೆ ಸಮಿತಿ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರನ್ನು ಕೈ ಬಿಟ್ಟು ರಿಷಭ್​ ಪಂತ್​ಗೆ(Rishabh Pant) ಅವಕಾಶ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ರಾಹುಲ್​ ಕಳೆದ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಮೊದಲ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಇದೀಗ ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಎದುರಾಳಿ ಬೌಲರ್​ಗಳ ಲೆಕ್ಕಾಚಾರವನ್ನು ಬುಡಮೇಲು ಮಾಡುವಂತಹ ಪಂತ್​ ಅವರನ್ನು ಮೂರನೇ ಪಂದ್ಯದಲ್ಲಿ ಆಡಿಸಲು ತಂಡ ಮುಂದಾಗಿದೆ ಎಂದು ತಿಳಿದುಬಂದಿದೆ.

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನ ಪಿಚ್​ ಸಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಬದಲಿಗೆ ಸ್ಪಿನ್​ ಆಲ್​ರೌಂಡರ್​ ಆಗಿರುವ ರಿಯಾನ್ ಪರಾಗ್ ಸ್ಥಾನ ಪಡೆಯಬಹುದು. ಟಿ20 ಸರಣಿಯಲ್ಲಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಪರಾಗ್​ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಇವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ.

Continue Reading

ಕ್ರೀಡೆ

IND vs SL: ಮೂರನೇ ಏಕದಿನ ಪಂದ್ಯಕ್ಕೆ ರಾಹುಲ್​ ಅನುಮಾನ​; ಪಂತ್​ಗೆ ಅವಕಾಶ?

IND vs SL: ರಾಹುಲ್​ ಬ್ಯಾಟಿಂಗ್​ ವೈಫಲ್ಯಕ್ಕೆ ತಂಡದ ಕೆಲ ನಿರ್ಧಾರವೇ ಕಾರಣ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಅನುಭವಿ ಆಟಗಾರನಾಗಿದ್ದರೂ ಕೂಡ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದು ಕೂಡ ಅವರ ವೈಫಲ್ಯಕ್ಕೆ ಕಾರಣ ಎಂದು ಅನೇಕ ಮಾಜಿ ಆಟಗಾರರು ಟೀಕೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

IND vs SL
Koo

ಕೊಲಂಬೊ: ಶ್ರೀಲಂಕಾ(IND vs SL) ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹೀನಾಯವಾ್ಗಿ ಸೋಲು ಕಂಡಿದ್ದ ಭಾರತ ನಾಳೆ ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಪಂದ್ಯಕ್ಕೆ ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಕಂಡುಬಂದಿದೆ. ಮೂಲಗಳ ಪ್ರಕಾರ ಆಯ್ಕೆ ಸಮಿತಿ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರನ್ನು ಕೈ ಬಿಟ್ಟು ರಿಷಭ್​ ಪಂತ್​ಗೆ(Rishabh Pant) ಅವಕಾಶ ನೀಡಲಿದೆ ಎನ್ನಲಾಗಿದೆ.

ರಾಹುಲ್​ ಕಳೆದ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಮೊದಲ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಇದೀಗ ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಎದುರಾಳಿ ಬೌಲರ್​ಗಳ ಲೆಕ್ಕಾಚಾರವನ್ನು ಬುಡಮೇಲು ಮಾಡುವಂತಹ ಪಂತ್​ ಅವರನ್ನು ಮೂರನೇ ಪಂದ್ಯದಲ್ಲಿ ಆಡಿಸಲು ತಂಡ ಮುಂದಾಗಿದೆ ಎಂದು ತಿಳಿದುಬಂದಿದೆ.

ರಾಹುಲ್​ ಬ್ಯಾಟಿಂಗ್​ ವೈಫಲ್ಯಕ್ಕೆ ತಂಡದ ಕೆಲ ನಿರ್ಧಾರವೇ ಕಾರಣ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಅನುಭವಿ ಆಟಗಾರನಾಗಿದ್ದರೂ ಕೂಡ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದು ಕೂಡ ಅವರ ವೈಫಲ್ಯಕ್ಕೆ ಕಾರಣ ಎಂದು ಅನೇಕ ಮಾಜಿ ಆಟಗಾರರು ಟೀಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ನೆಟ್ಟಿಗರು ರಾಹುಲ್​ ವಿಷಯದಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಬಿಸಿಸಿಐ ಮತ್ತು ಆಯ್ಕೆ ಸಮಿತಿಗೆ ಪ್ರಶ್ನೆ ಮಾಡಿದ್ದಾರೆ.

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನ ಪಿಚ್​ ಸಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಬದಲಿಗೆ ಸ್ಪಿನ್​ ಆಲ್​ರೌಂಡರ್​ ಆಗಿರುವ ರಿಯಾನ್ ಪರಾಗ್ ಸ್ಥಾನ ಪಡೆಯಬಹುದು. ಟಿ20 ಸರಣಿಯಲ್ಲಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಪರಾಗ್​ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಇವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ.

ಇದನ್ನೂ ಓದಿ IND vs SL ODI : ಎರಡನೇ ಏಕ ದಿನ ಪಂದ್ಯದಲ್ಲಿ ಭಾರತ ತಂಡಕ್ಕೆ32 ರನ್ ಸೋಲು, ಸರಣಿಯಲ್ಲಿ ಲಂಕಾಗೆ ಮುನ್ನಡೆ

ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್​ ಪರ ಘಾತಕ ಬೌಲಿಂಗ್​ ಮೂಲಕ ಹಲವು ವಿಕೆಟ್​ ಕಿತ್ತಿದ್ದ ಹರ್ಷಿತ್ ರಾಣಾ ಕೂಡ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. ದುಬಾರಿಯಾಗಿ ಕಂಡು ಬರುತ್ತಿರುವ ಮೊಹಮ್ಮದ್​ ಸಿರಾಜ್​ ಬದಲಿಗೆ ಇವರು ಆಡುವ ಸಾಧ್ಯತೆ ಇದೆ. ಗಂಭೀರ್​ ಅವರ ಮಾರ್ಗದರ್ಶನಲ್ಲಿ ಆಡಿದ ಅನುಭವ ಕೂಡ ಹರ್ಷಿತ್ ರಾಣಾಗೆ ಇದೆ.

ಮೂರನೇ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್​ ಪಂತ್​ (ವಿಕೀ), ರಿಯಾನ್​ ಪರಾಗ್​, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ.

Continue Reading
Advertisement
ಕ್ರೀಡೆ2 hours ago

Paris Olympics 2024 : ಸೆಮಿಫೈನಲ್​​​​ನಲ್ಲಿ ಭಾರತ ಹಾಕಿ ತಂಡಕ್ಕೆ ಆಘಾತಕಾರಿ ಸೋಲು, ಇನ್ನೂ ಇದೆ ಪದಕ ಗೆಲ್ಲುವ ಅವಕಾಶ

Shira News
ತುಮಕೂರು3 hours ago

Shira News: ವರ್ಗಾವಣೆಗೊಂಡ ಶಿರಾ ತಾ.ಪಂ ಇಓ ಅನಂತ್‌ರಾಜ್‌ಗೆ ಬೀಳ್ಕೊಡುಗೆ

Rekha Sharma
ದೇಶ3 hours ago

Rekha Sharma: ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮಾ ಅಧಿಕಾರಾವಧಿ ಪೂರ್ಣ

Bangladesh unrest
ದೇಶ3 hours ago

Bangladesh Unrest: ಶೇಖ್ ಹಸೀನಾ ಬೆಂಬಲಿಗನ ಫೈವ್‌ ಸ್ಟಾರ್‌ ಹೊಟೇಲ್‌ಗೆ ಬೆಂಕಿ; 24 ಜನ ಸಜೀವ ದಹನ

Paris Olympics
ಕ್ರೀಡೆ4 hours ago

Paris Olympics: ಫೈನಲ್​ ಪ್ರವೇಶಿಸಿ ಐತಿಹಾಸಿಕ ಪದಕ ಖಾತ್ರಿಪಡಿಸಿದ ಕುಸ್ತಿಪಟು ವಿನೇಶ್ ಫೋಗಟ್

Bangladesh unrest
ದೇಶ4 hours ago

Bangladesh Unrest: ಶೇಖ್‌ ಹಸೀನಾಗೆ 8 ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ಭಾರತದ ಜ್ಯೋತಿಷಿ; ಆತನ ಭವಿಷ್ಯವಾಣಿ ಏನು?

Pralhad Joshi
ದೇಶ4 hours ago

Pralhad Joshi: 2030ರಲ್ಲೂ ನಾವಿಲ್ಲೇ ಇರುತ್ತೇವೆ, ನೀವಲ್ಲೇ ಇರುತ್ತೀರಿ; ಸಂಸತ್‌ನಲ್ಲಿ ಪ್ರತಿಪಕ್ಷಗಳಿಗೆ ಜೋಶಿ ಟಾಂಗ್

Bangladesh Protest
ವಿದೇಶ4 hours ago

Bangladesh Chronology: 1971ರ ದೇಶ ಉದಯದಿಂದ ಹಿಡಿದು 2024ರ ದಂಗೆಯವರೆಗೆ; ಇಲ್ಲಿದೆ ಬಾಂಗ್ಲಾದೇಶದ ಸಂಪೂರ್ಣ ರಕ್ತ ಚರಿತ್ರೆ!

Reliance Foundation
ಕರ್ನಾಟಕ4 hours ago

Reliance Foundation: ವಯನಾಡಿನ ಭೂಕುಸಿತ ಸಂತ್ರಸ್ತರಿಗೆ ರಿಲಯನ್ಸ್ ಫೌಂಡೇಷನ್ ನೆರವು

B.Ed Exam Scam
ಕರ್ನಾಟಕ4 hours ago

B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು9 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ10 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌