Site icon Vistara News

Mitchell Marsh: ವಿಶ್ವಕಪ್​ ಟ್ರೋಫಿ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್ ವಿರುದ್ಧ ಎಫ್​ಐಆರ್​ ದಾಖಲು

mitchell marsh

ಉತ್ತರ ಪ್ರದೇಶ: ಏಕದಿನ ವಿಶ್ವಕಪ್​ ಟ್ರೋಫಿ(icc world cup 2023) ಮೇಲೆ ಕಾಲಿಟ್ಟು ವಿಶ್ರಾಂತಿ(feet on World Cup Trophy) ಪಡೆದಿದ್ದ ಆಸ್ಟ್ರೇಲಿಯಾದ ಮಿಚೆಲ್​ ಮಾರ್ಷ್(Mitchell Marsh)​ ವಿರುದ್ಧ ಭಾರತದಲ್ಲಿ ಎಫ್‌ಐಆರ್(FIR registered against Marsh) ದಾಖಲಾಗಿದೆ. ಉತ್ತರ ಪ್ರದೇಶದ ಅಲಿಘರ್‌ನ ಆರ್‌ಟಿಐ ಕಾರ್ಯಕರ್ತ ಪಂಡಿತ್ ಕೇಶವ್(Pandit Keshav) ನೀಡಿದ ದೂರಿನ ಮೇರೆಗೆ ದೆಹಲಿ ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

140 ಕೋಟಿ ಭಾರತೀಯರ ಭಾವನೆಗಳಿಗೆ ಧಕ್ಕೆ

ಮಾರ್ಷ್​ ಅವರು ವಿಶ್ವಕಪ್‌ ಗೆದ್ದ ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿ ಟ್ರೋಫಿ ಮೇಲೆ ತಮ್ಮ ಕಾಲುಗಳನ್ನು ಇಟ್ಟು ವಿಶ್ರಾಂತಿ ಪಡೆಯುವ ಶೈಲಿಯಲ್ಲಿ ಕುಳಿತ ಫೋಟೊವೊಂದು ವೈರಲ್​ ಆಗಿತ್ತು. ಈ ಫೋಟೊ ಕಂಡ ಅನಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳು, ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಪಂಡಿತ್ ಕೇಶವ್ ಅವರು 140 ಕೋಟಿ ಭಾರತೀಯರ ಭಾವನೆಗಳಿಗೆ ಮಾರ್ಷ್​ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೇಸರ ವ್ಯಕ್ತಪಡಿಸಿದ್ದ ಶಮಿ

ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟೀಮ್ ಇಂಡಿಯಾದ ಬೌಲರ್​ ಮೊಹಮ್ಮದ್​ ಶಮಿ(Mohammed Shami) ಕೂಡ ಮಾರ್ಷ್ ಅವರ ಈ ಉದ್ದಟತನಕ್ಕೆ ಟೀಕೆ ಮತ್ತು ಬೇಸರ ವ್ಯಕ್ತಪಡಿಸಿದ್ದರು. ನಿಜಕ್ಕೂ ಮಾರ್ಷ್ ಅವರ ಈ ನಡೆ ತುಂಬಾ ನೋವಾಯಿತು ಎಂದಿದ್ದರು.

ಇದನ್ನೂ ಓದಿ ಫೈನಲ್​ನಲ್ಲಿ ಆಸೀಸ್ ​2 ವಿಕೆಟ್​ಗೆ 450, ಭಾರತ 65ಕ್ಕೆ ಆಲೌಟ್​: ಭವಿಷ್ಯ ನುಡಿದ ಮಿಚೆಲ್​ ಮಾರ್ಷ್

ವಿಶ್ವಕಪ್​ ಪ್ರದರ್ಶನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಶಮಿ ಅವರು ಮಿಚೆಲ್​ ಮಾರ್ಷ್​ ನಡೆಯನ್ನು ಕುಟುವಾಗಿ ಟೀಕಿಸಿದ್ದಾರೆ. “ನನಗೆ ತುಂಬಾ ಬೇಸರವಾಯಿತು. ವಿಶ್ವದ ಎಲ್ಲ ತಂಡಗಳು ಈ ಟ್ರೋಫಿಗಾಗಿ ಹೋರಾಡುತ್ತವೆ. ಗೆದ್ದರೆ ಟ್ರೋಫಿಯನ್ನು ತಲೆಯ ಮೇಲೆ ಹೊತ್ತು ಸಂಭ್ರಮಿಸಲು ಬಯಸುತ್ತಾರೆ. ಹೀಗಿರುವಾಗ ಈ ಪ್ರತಿಷ್ಠಿತ ಟ್ರೋಫಿ ಮೇಲೆ ಕಾಲು ಇಟ್ಟಿದ್ದು, ನನಗೆ ಸಂತೋಷ ನೀಡಲಿಲ್ಲ. ಇದು ಕ್ರಿಕೆಟ್​ಗೆ ಮಾಡಿದ ಅವಮಾನ” ಎಂದು ಶಮಿ ಹೇಳಿದ್ದರು.

ಇದನ್ನೂ ಓದಿ Mitchell Marsh: ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಿಚೆಲ್​ ಮಾರ್ಷ್

ಭಾನುವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟಡಿಯಂನಲ್ಲಿ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್​ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.

Exit mobile version