ಫೈನಲ್​ನಲ್ಲಿ ಆಸೀಸ್ ​2 ವಿಕೆಟ್​ಗೆ 450, ಭಾರತ 65ಕ್ಕೆ ಆಲೌಟ್​: ಭವಿಷ್ಯ ನುಡಿದ ಮಿಚೆಲ್​ ಮಾರ್ಷ್ Vistara News

ಕ್ರಿಕೆಟ್

ಫೈನಲ್​ನಲ್ಲಿ ಆಸೀಸ್ ​2 ವಿಕೆಟ್​ಗೆ 450, ಭಾರತ 65ಕ್ಕೆ ಆಲೌಟ್​: ಭವಿಷ್ಯ ನುಡಿದ ಮಿಚೆಲ್​ ಮಾರ್ಷ್

ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 385 ರನ್ ಗೆಲುವು ಸಾಧಿಸಲಿದೆ ಎಂದು ಮಿಚೆಲ್​ ಮಾರ್ಷ್​ ಭವಿಷ್ಯ ನುಡಿದಿದ್ದಾರೆ.

VISTARANEWS.COM


on

India vs Australia, Final
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ(India vs Australia, Final) ಮತ್ತು 2 ಬಾರಿಯ ಚಾಂಪಿಯನ್ ಭಾರತ ತಂಡ ಈ ಬಾರಿಯ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯವನ್ನಾಡಲು ಸಜ್ಜಾಗಿ ನಿಂತಿದೆ. ಇತ್ತಂಡಗಳ ಈ ಫೈನಲ್​ ಮುಖಾಮುಖಿ ಭಾನುವಾರ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುಲಿದೆ. ಇದಕ್ಕೂ ಮುನ್ನವೇ ಆಸೀಸ್​ ಆಲ್​ರೌಂಡರ್​ ಮಿಚೆಲ್​ ಮಾರ್ಷ್(Mitchell Marsh)​ ಫೈನಲ್ ಪಂದ್ಯದ ಭವಿಷ್ಯ ನುಡಿದಿದ್ದಾರೆ.

ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್​ ನಡೆಸಿ 2 ವಿಕೆಟ್​ಗೆ 450 ಬಾರಿಸಲಿದೆ. ಬೃಹತ್​ ಮೊತ್ತವನ್ನು ಬೆನ್ನಟ್ಟುವ ಭಾರತ ತಂಡ ಕೇವಲ 65 ರನ್​ಗೆ ಆಲೌಟ್​ ಆಗಲಿದೆ. ಆಸ್ಟ್ರೇಲಿಯಾ 385 ರನ್ ಗೆಲುವು ಸಾಧಿಸಲಿದೆ ಎಂದು ಮಿಚೆಲ್​ ಮಾರ್ಷ್​ ಹೇಳಿದ್ದಾರೆ. ಐಪಿಎಲ್​ನ ಡೆಲ್ಲಿ ಕ್ಯಾಪಿಟಲ್ಸ್​ ತಂಡ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್​ ಆಗಿದೆ. ಅಲ್ಲದೆ ನೆಟ್ಟಿಗರು ತಕ್ಕ ಉತ್ತರವನ್ನು ನೀಡಿದ್ದಾರೆ.

ಇದನ್ನೂ ಓದಿ ಫೈನಲ್​ ಪಂದ್ಯಕ್ಕೆ ಅಂಪೈರ್ ಪಟ್ಟಿ ಬಿಡುಗಡೆ; ಟೀಮ್​ ಇಂಡಿಯಾ ಅಭಿಮಾನಿಗಳಲ್ಲಿ ನಡುಕ!​

ಮೊದಲು ನೀವು ಖಾತೆ ತೆರೆಯಿರಿ. ಆ ಬಳಿಕ ಮಾತನಾಡಿ ಎಂದಿದ್ದಾರೆ. ಲೀಗ್​ ಪಂದ್ಯದಲ್ಲಿ ಭಾರತ ವಿರುದ್ಧ ಮಾರ್ಷ್​ ಶೂನ್ಯಕ್ಕೆ ಔಟ್ ಆಗಿದ್ದರು. ಇನ್ನು ಕೆಲವರು ಈ ನೀವು ಸರಿಯಾದ ಭವಿಷ್ಯವನ್ನೇ ನುಡಿದಿದ್ದೀರಿ. ಆದರೆ, ಇಲ್ಲೊಂದು ಸಣ್ಣ ಬದಲಾವಣೆ ಇದೆ. 2 ವಿಕೆಟ್​ಗೆ 450 ಬಾರಿಸುವ ತಂಡ ಭಾರತ, 65 ರನ್​ಗೆ ಆಲೌಟ್ ಆಗುವ ತಂಡ ಆಸ್ಟ್ರೇಲಿಯಾ ಎಂದು ತಿರುಗೇಟು ನೀಡಿದ್ದಾರೆ.​

ಇದನ್ನೂ ಓದಿ ಫೈನಲ್​ ಫೈಟ್​ಗೆ ಸಿದ್ಧತೆ ಆರಂಭಿಸಿದ ಟೀಮ್​ ಇಂಡಿಯಾ; ಹೇಗಿತ್ತು ಇಂದಿನ ಕಸರತ್ತು?

ಆಸೀಸ್​ ತಂಡದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಭಾರತವನ್ನು ಸೋಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಮಿಫೈನಲ್​ ಪಂದ್ಯ ಗೆದ್ದ ಬಳಿಕ ಮಾತನಾಡಿದ ಸ್ಟಾರ್ಕ್​, ಭಾರತ ಎಲ್ಲ ಹತ್ತು ಪಂದ್ಯಗಳನ್ನು ಗೆದ್ದಿರಬಹುದು. ಆದರೆ, ಫೈನಲ್​ನಲ್ಲಿ ಗೆಲ್ಲುವುದು ಮುಖ್ಯ. ಫೈನಲ್ ಪಂದ್ಯಕ್ಕೆ ನಮ್ಮ ಪ್ರದರ್ಶನವೇ ಬೇರೆ ರೀತಿಯಲ್ಲಿರುತ್ತದೆ ಇದನ್ನೂ ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದ್ದರು. ಒಟ್ಟಾರೆ ಇತ್ತಂಡಗಳ ಈ ಫೈನಲ್​ ಫೈಟ್​ ಮಾತ್ರ ರೋಚಕವಾಗಿ ಕೂಡಿರುವುದರಲ್ಲಿ ಯಾವುವೇ ಅನುಮಾನವಿಲ್ಲ.

ಆಸ್ಟ್ರೇಲಿಯಾಗೇ ಸೋಲುಣಿಸಿದ್ದ ಭಾರತ…

ಭಾರತ ತಂಡ ವಿಶ್ವಕಪ್​ ಅಭಿಯಾನ ಆರಂಭಿಸಿದ್ದು 5 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ. ಅಕ್ಟೋಬರ್​ 8ರಂದು ಚೆನ್ನೈಯ ಚಿದಂಬರಂ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಆಸ್ಟ್ರೇಲಿಯಾ ಡೇವಿಡ್​ ವಾರ್ನರ್​ ಮತ್ತು ಸ್ಟೀವನ್​ ಸ್ಮಿತ್​ ಅವರ ಬ್ಯಾಟಿಂಗ್​ ನೆರವಿನಿಂದ 49.3 ಓವರ್​ಗಳಲ್ಲಿ 199 ರನ್​ಗೆ ಕುಸಿಯಿತು. ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತ ಎದುರಿಸಿತು. 2 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಈ ವೇಳೆ ಜತೆಯಾದ ವಿರಾಟ್ ಕೊಹ್ಲಿ(85) ಮತ್ತು ಕೆ.ಎಲ್​ ರಾಹುಲ್(ಅಜೇಯ 97)​ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕ ಸ್ಮರಣೀಯ ಗೆಲುವು ತಂದು ಕೊಟ್ಟರು. ಭಾರತ 41.2 ಓವರ್​ಗಳಲ್ಲಿ 4 ವಿಕೆಟ್​ಗೆ 201 ರನ್​ ಬಾರಿಸಿ ಗೆಲುವಿನ ನಗೆ ಬೀರಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

ವುಮೆನ್ಸ್​ ಪ್ರೀಮಿಯರ್ ಲೀಗ್‌ ಆಟಗಾರ್ತಿಯರ ಮಿನಿ ಹರಾಜು ಡಿಸೆಂಬರ್ 9 ರಂದು ನಡೆಯಲಿದೆ. ಹರಾಜು ಪ್ರಕ್ರಿಯೆಗಾಗಿ ಈಗಾಗಲೇ ಒಟ್ಟು 165 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.

VISTARANEWS.COM


on

WPL Auction 2024
Koo

ಮುಂಬಯಿ: ಪ್ರತಿಷ್ಠಿತ ವುಮೆನ್ಸ್​ ಪ್ರೀಮಿಯರ್ ಲೀಗ್‌ (WPL Auction 2024) ಸೀಸನ್-2 ಆಟಗಾರ್ತಿಯರ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಆಟಗಾರ್ತಿಯರ ಮಿನಿ ಹರಾಜು ಡಿಸೆಂಬರ್ 9 ರಂದು ನಡೆಯಲಿದೆ. ಹರಾಜು ಪ್ರಕ್ರಿಯೆಗಾಗಿ ಈಗಾಗಲೇ ಒಟ್ಟು 165 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಹರಾಜಿಗೂ ಮುನ್ನ ಐದು ಫ್ರಾಂಚೈಸಿಗಳು ಒಟ್ಟು 60 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು, 29 ಮಂದಿಯನ್ನು ರಿಲೀಸ್ ಮಾಡಿದೆ.

ಡಿಸೆಂಬರ್ 9 ರಂದು ನಡೆಯುವ ಹರಾಜಿನಲ್ಲಿ ಖಾಲಿ ಉಳಿದಿರುವ 30 ಸ್ಲಾಟ್​ಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ. ಈ ಸದ್ಯ ಯಾವ ತಂಡಕ್ಕೆ ಒಟ್ಟು ಆಟಗಾರ್ತಿಯನ್ನು ಖರೀದಿ ಮಾಡಬಹುದು ಮತ್ತು ಅವರ ಬಳಿ ಇರುವ ಹಣದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ತಂಡದಲ್ಲಿ ಒಟ್ಟು 18 ಆಟಗಾರ್ತಿಯರಿಗೆ ಮಾತ್ರ ಅವಕಾಶ.

ಬಿಡ್ಡಿಂಗ್ ಪ್ರಾರಂಭ?

ಬಿಡ್ಡಿಂಗ್ ಪ್ರಕ್ರಿಯೆ ಮಧ್ಯಾಹ್ನ 2.30 ರಿಂದ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಪೋರ್ಟ್ಸ್​-18 ಚಾನೆಲ್​ನಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ ಜಿಯೋ ಸಿನಿಮಾ ಆ್ಯಪ್​ನಲ್ಲಿ ಮತ್ತು ವೆಬ್​ಸೈಟ್​ನಲ್ಲಿ ಈ ಹರಾಜು ಪ್ರಕ್ರಿಯೆಯ ಲೈವ್ ಸ್ಟ್ರೀಮಿಂಗ್​ ಇರಲಿದೆ.

ಒಟ್ಟು 5 ತಂಡಗಳು

ಪುರುಷರ ಐಪಿಎಲ್​ನಲ್ಲಿ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳು ಭಾಗವಹಿಸಲಿದೆ. ಇದು ಎರಡನೇ ಆವೃತ್ತಿಯಾಗಿದೆ. ಎಎಲ್ಲ 5 ತಂಡಗಳ ತವರಿನಲ್ಲಿ ಪಂದ್ಯಗಳು ನಡೆಯಲಿದೆ. ಚೊಚ್ಚಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್​ ಸಾರಥ್ಯದ ಮುಂಬೈ ಇಂಡಿಯನ್ಸ್​ ತಂಡ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮಣಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಬಾರಿ ಚಾಂಪಿಯನ್​ ಯಾರಗಲಿದ್ದಾರೆ ಎನ್ನುವುದು ಟೂರ್ನಿಯ ಕುತೂಹಲವಾಗಿದೆ.

ತಂಡಗಳು

ಮುಂಬೈ ಇಂಡಿಯನ್ಸ್

ಡೆಲ್ಲಿ ಕ್ಯಾಪಿಟಲ್ಸ್

ಯುಪಿ ವಾರಿಯರ್ಸ್

ಗುಜರಾತ್ ಜೈಂಟ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಯಾವ ತಂಡಕ್ಕೆ ಎಷ್ಟು ಆಟಗಾರ್ತಿಯನ್ನು ಖರೀದಿ ಮಾಡಬಹುದು?

ಮುಂಬೈ ಇಂಡಿಯನ್ಸ್​

ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ತಂಡಕ್ಕೆ ಇನ್ನು 5 ಆಟಗಾರ್ತಿಯನ್ನು ಖರೀದಿ ಮಾಡಬಹುದು. ಸದ್ಯ 13 ಆಟಗಾರರನ್ನು ಉಳಿಸಿಕೊಂಡಿದ್ದು 4 ಆಟಗಾರರನ್ನು ಬಿಡುಗಡೆ ಮಾಡಿದೆ. ಮುಂಬೈ ಬಳಿಯಿರುವ ಮೊತ್ತ 2.1 ಕೋಟಿ ರೂ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸ್ಟಾರ್​ ಆಟಗಾರ್ತಿಯರ ಪಡೆಯನ್ನೇ ಹೊಂದಿದ್ದರೂ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 11 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು 8 ಆಟಗಾರ್ತಿಯನ್ನು ಖರೀದಿ ಮಾಡಬಹುದಾಗಿದೆ. ಸದ್ಯ ಫ್ರಾಂಚೈಸಿ ಬಳಿ ಉಳಿದಿರುವ ಮೊತ್ತ 3.35 ಕೋಟಿ ರೂ.

ಯುಪಿ ವಾರಿಯರ್ಸ್

ಯುಪಿ ವಾರಿಯರ್ಸ್ ತಂಡದ ಬಳಿ ಇನ್ನು 4 ಕೋಟಿ ರೂ. ಉಳಿದಿದೆ. 5 ಆಟಗಾರರನ್ನು ಬಿಡುಗಡೆ ಮಾಡಿದೆ. 13 ಆಟಗಾರ್ತಿಯನ್ನು ಖರೀದಿ ಮಾಡಬೇಕಿದೆ. ಬಲಿಷ್ಠ ಆಟಗಾರ್ತಿಯನ್ನು ಕಳೆದ ಬಾರಿ ಹೊಂದಿದ್ದರೂ ನಿರೀಕ್ಷಿತ ಪ್ರದರ್ಶನ ಮಾತ್ರ ಕಂಡು ಬಂದಿರಲಿಲ್ಲ. ಹೀಗಾಗಿ ಕೇವಲ 5 ಆಟಗಾರ್ತಿಯನ್ನು ಉಳಿಸಿಕೊಂಡು ಉಳಿದ ಎಲ್ಲ ಆಟಗಾರ್ತಿಯನ್ನು ತಂಡದಿಂದ ಕೈಬಿಟ್ಟಿದೆ.

ಡೆಲ್ಲಿ ಕ್ಯಾಪಿಟಲ್ಸ್

ಇತ್ತೀಚೆಗೆ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಆಸೀಸ್​ ತಂಡದ ಮೆಗ್​ ಲ್ಯಾನಿಂಗ್​ ಸಾರಥ್ಯದ ಡೆಲ್ಲಿ ಕ್ಯಾಪಿಟಲ್ಸ್​ 15 ಆಟಗಾರರನ್ನು ಉಳಿಸಿಕೊಂಡಿದ್ದಾರೆ. 2.25 ಕೋಟಿ ರೂ. ಹರಾಜು ಮೊತ್ತ ಹೊಂದಿದೆ. ಮೂರು ಆಟಗಾರ್ತಿಯನ್ನು ಖರೀದಿ ಮಾಡಬಹುದಾಗಿದೆ.

ಗುಜರಾತ್ ಜೈಂಟ್ಸ್

ಗುಜರಾತ್ ಜೈಂಟ್ಸ್ ಗರಿಷ್ಠ 11 ಆಟಗಾರರನ್ನು ಬಿಡುಗಡೆ ಮಾಡಿದ್ದು ಕೇವಲ 7 ಆಟಗಾರ್ತಿಯನ್ನು ಮಾತ್ರ ಉಳಿಸಿಕೊಂಡಿದೆ. ಗುಜರಾತ್ ಜೈಂಟ್ಸ್ ಬಳಿ 5.95 ಕೋಟಿ ರೂ. ಹರಾಜು ಮೊತ್ತವಿದೆ. ಈ ಹಣದಲ್ಲಿ ಮತ್ತೆ 11 ಆಟಗಾರ್ತಿಯರನ್ನು ಖರೀದಿ ಮಾಡಬೇಕಿದೆ.

Continue Reading

ಐಪಿಎಲ್ 2023

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

ನ್ಯೂಜಿಲ್ಯಾಂಡ್​ ತಂಡದ ಯುವ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರನ್ನು ಖರೀದಿ ಮಾಡಲು ಸನ್ ರೈಸರ್ಸ್ ಹೈದರಾಬಾದ್(SunRisers Hyderabad) ತಂಡ ಮುಂದಾಗಿದೆ ಎಂದು ಇರ್ಫಾನ್​ ಪಠಾಣ್​ ಹೇಳಿದ್ದಾರೆ.

VISTARANEWS.COM


on

kavya maran
Koo

ಹೈದರಾಬಾದ್​: ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಿನಿ-ಆಕ್ಷನ್ ಡಿ.19ರಂದು ದುಬೈನಲ್ಲಿ ನಡೆಯಲಿದೆ. ಎಲ್ಲ ಫ್ರಾಂಚೈಸಿಗಳು ಸ್ಟಾರ್​ ಆಟಗಾರರ ಪಟ್ಟಿಯನ್ನು ಸಿದ್ಧ ಪಡಿಸಿದ್ದು ಅವರ ಖರೀದಿಗಾಗಿ ಕಾದು ಕುಳಿತಿದೆ. ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿ ಗಮನಸೆಳೆದ ನ್ಯೂಜಿಲ್ಯಾಂಡ್​ ತಂಡದ ಯುವ ಆಟಗಾರ ರಚಿನ್​ ರವೀಂದ್ರ(Rachin Ravindra) ಅವರನ್ನು ಖರೀದಿ ಮಾಡಲು ಸನ್ ರೈಸರ್ಸ್ ಹೈದರಾಬಾದ್(SunRisers Hyderabad) ತಂಡ ಮುಂದಾಗಿದೆ ಎಂದು ಇರ್ಫಾನ್​ ಪಠಾಣ್​ ಹೇಳಿದ್ದಾರೆ.

ಸ್ಟಾರ್​ ಸ್ಪೋರ್ಟ್ಸ್​ ಜತೆಗಿನ ಸಂವಾದದಲ್ಲಿ ಮಾತನಾಡಿದ ಇರ್ಫಾನ್​, ಈ ಬಾರಿ ಮಿನಿ ಹರಾಜಿನಲ್ಲಿ ರಚಿನ್​ ರವೀಂದ್ರ ಅವರನ್ನು ಎಷ್ಟೇ ಮೊತ್ತ ನೀಡಿಯಾದರೂ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿ ಮಾಡಲಿದೆ. ಇದಕ್ಕೆ ಬೇಕಾದ ಎಲ್ಲ ತಯಾರಿಯನ್ನು ತಂಡದ ಮಾಲಕಿ ಕಾವ್ಯಾ ಮಾರನ್ ಯೋಜನೆ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.

ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರು ಸನ್​ ರೈಸರ್ಸ್​ ಹೈದರಾಬಾದ್​ ತಂಡದ ಮಾಲಕಿಯಾದಿನಿಂದ ಪ್ರತಿ ಐಪಿಎಲ್​ ಸೀಸನ್​ನಲ್ಲೂ ಅವರು ಟ್ರೆಂಡಿಂಗ್​ನಲ್ಲಿರುತ್ತಾರೆ. ಎಲ್ಲರ ಗಮನ ಸೆಳೆದು ಸುದ್ದಿಯಾಗುತ್ತಾರೆ. ಐಪಿಎಲ್ ಹರಾಜಿನಲ್ಲಿಯೂ ಹಾಜರಿದ್ದು ಗಮನಸೆಳೆಯುತ್ತಾರೆ.

ಕಾವ್ಯ ಚೆನ್ನೈ ಮೂಲದ ಮಾಧ್ಯಮ ಮತ್ತು ಟಿವಿ ಸಮೂಹ ಸನ್ ಟಿವಿ ನೆಟ್‌ವರ್ಕ್‌ನ ಮಾಲಕ ಕಲಾನಿತಿ ಮಾರನ್ ಅವರ ಪುತ್ರಿ. ಹರಾಜಿನಲ್ಲಿ ಅವರು ವಿಶೇಷವಾಗಿ ಭಾಗಿಯಾಗುವ ಮೂಲಕ ಸ್ಟಾರ್​ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಕೊಳ್ಳುವ ತನಕ ತಮ್ಮ ಹಠ ಬಿಟ್ಟುಕೊಡದೆ ಬಿಡ್ಡಿಂಗ್​ ಮಾಡಬಲ್ಲರು. ಕಳೆದ ಬಾರಿ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿ ರೂ. ನೀಡಿ ಖರೀದಿ ಮಾಡುವ ಮೂಲಕ ಭಾರಿ ಸುದ್ದಿಯಾಗಿದ್ದರು. ಇದೀಗ ಈ ಬಾರಿ ರಚಿನ್​ ರವೀಂದ್ರ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

31ರ ಹರೆಯದ ಕಾವ್ಯಾ ಯಾವಾಗಲೂ ಐಪಿಎಲ್ ಹರಾಜಿನಲ್ಲಿ ತನ್ನ ಉಪಸ್ಥಿತಿ ತೋರುತ್ತಾರೆ. ತನ್ನ ಅದ್ಭುತ ನೋಟ ಮತ್ತು ಆಟದ ಮೇಲಿನ ಅಪಾರ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ. ಕಾವ್ಯಾ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪದವೀಧರರಾಗಿದ್ದಾರೆ.

ಒಂದು ಬಾರಿಯ ಚಾಂಪಿಯನ್​ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ 6 ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ತಲಾ ಮೂರು ಭಾರತೀಯ ಮತ್ತು ವಿದೇಶಿ ಆಟಗಾರರನ್ನು ಬಿಡ್​ ಮಾಡಬಹುದು. ತಂಡದ ಬಳಿ 34 ಕೋಟಿ ರೂ. ಹಣವಿದೆ. ಹೀಗಾಗಿ ರಚಿನ್​ ಅವರನ್ನು ಖರೀದಿ ಮಾಡಬಹುದು.

ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್​ ಆಟಗಾರ ರಚಿನ್​ ರವೀಂದ್ರ ಅವರು ಈ ಬಾರಿಯ ವಿಶ್ವಕಪ್​ನಲ್ಲಿ ಅಮೋಘ ಬ್ಯಾಟಿಂಗ್​ ನಡೆಸಿ ಮಿಂಚಿದ್ದರು. ಚೊಚ್ಚಲ ಬಾರಿ ವಿಶ್ವಕಪ್​ನಲ್ಲಿ ಆಡಲಿಳಿದ ಅವರು 3 ಶತಕ ಬಾರಿಸಿ ಗಮನಸೆಳೆದರು. ಅಲ್ಲದೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಸೇರಿ ಅನೇಕರ ದಾಖಲೆಗಳನ್ನು ಮುರಿದಿದ್ದರು. ಒಟ್ಟಾರೆ ಅವರು 10 ಪಂದ್ಯಗಳನ್ನು ಆಡಿ 578 ರನ್​ ಬಾರಿಸಿದ್ದರು.

ಆರ್​ಸಿಬಿ ಬಗ್ಗೆ ಒಲವು

ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕೂಡ ರಚಿನ್​ ಅವರನ್ನು ಖರಿದೀಸುವ ರೇಸ್​ನಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ವಿಶ್ವಕಪ್​ ಆಡುವ ವೇಳೆ ಸ್ವತಃ ರಚಿನ್​ ಅವರು ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಆಸೆ ಇದೆ ಎಂದು ಹೇಳಿದ್ದರು. ರಚಿನ್​ ಅವರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಡಿ.10ಕ್ಕೆ ನಿರ್ಧಾರವಾಗಲಿದೆ.

Continue Reading

ಕರ್ನಾಟಕ

VISTARA TOP 10 NEWS : ಮೌಲ್ವಿ ಐಸಿಸ್‌ ಸಂಪರ್ಕ ನಿಜವೇ? ಹಳೆಪಿಂಚಣಿ ಮರುಜಾರಿ ಖಚಿತವೇ? ಇತರ ಪ್ರಮುಖ ಸುದ್ದಿ

VISTARA TOP 10 NEWS :ಮೌಲ್ವಿ ತನ್ವೀರ್‌ ಪೀರಾ ಅವರ ಬಗ್ಗೆ NIA ತನಿಖೆಗೆ ಒತ್ತಡ ಹೆಚ್ಚಾಗಿದೆ. ರಾಜ್ಯದಲ್ಲಿ ಹಳೆ ಪಿಂಚಣಿ ಮರುಜಾರಿ ಚಿಂತನೆಗೆ ಭರವಸೆ ಸಿಕ್ಕಿದೆ.. ಹೀಗೆ ಪ್ರಮುಖ ಸುದ್ದಿಗಳ ಸುತ್ತು ನೋಟ ಇಲ್ಲಿದೆ.

VISTARANEWS.COM


on

Vistara Top 10 News 7-12
Koo

1.ತನ್ವೀರ್‌ ಪೀರಾ ಐಸಿಸ್‌ ಸಂಬಂಧ: ಪರ ವಿರೋಧ ಚರ್ಚೆ ತಾರಕಕ್ಕೆ, NIA ತನಿಖೆಗೆ ಸವಾಲು
ವಿಜಯಪುರ ಮೂಲದ ಮೌಲ್ವಿ, ಸೂಫಿ ಸಂತರೆಂದು ಹೇಳಲಾಗುವ ತನ್ವೀರ್‌ ಪೀರಾ ಅವರಿಗೆ ಐಸಿಸ್‌ ಸಂಪರ್ಕವಿದೆ ಎಂಬ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪದ ವಿರುದ್ಧ ಕಾಂಗ್ರೆಸ್‌ ಸಿಡಿದೆದ್ದಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಕೂಡಾ ಧ್ವನಿ ಎತ್ತಿದ್ದಾರೆ. ಈ ನಡುವೆ ತನ್ವೀರ್‌ ಪೀರಾ ಅವರು ಸಾರೇ ಜಹಾಂ ಸೇ ಅಚ್ಛಾ ಹಾಡಿನ ವಿಡಿಯೊ ಮೂಲಕ ತನ್ನ ದೇಶಭಕ್ತಿ ಪ್ರದರ್ಶನ ಮಾಡಿದ್ದಾರೆ.

ಸಂಬಂಧಿತ ವರದಿ 1. ಸಿಎಂ ಜತೆ ಐಸಿಸ್‌ ಸಂಪರ್ಕಿತ ಮೌಲ್ವಿ; ಎನ್‌ಐಎ ತನಿಖೆಗೆ ಬೊಮ್ಮಾಯಿ ಆಗ್ರಹ
ಸಂಬಂಧಿತ ವರದಿ 2: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲ್‌
ಸಂಬಂಧಿತ ವರದಿ 3: ಸಾರೇ ಜಹಾಂ ಸೇ ಅಚ್ಛಾ ಹಾಡಿನ ಮೂಲಕ ತಿರುಗೇಟು ನೀಡಿದ ತನ್ವೀರ್‌ ಪೀರಾ
ಸಂಬಂಧಿತ ವರದಿ 4: ತನ್ವೀರ್‌ ಪೀರಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿಯೇ ಭಾಗವಹಿಸಿದ್ದರು!?

2. ಚೀನಾದಿಂದ ಬಂದೇ ಬಿಟ್ಟಿತು ನ್ಯುಮೋನಿಯಾ ಸೋಂಕು, ದಿಲ್ಲಿಯಲ್ಲಿ 7 ಮಂದಿಗೆ ಪಾಸಿಟಿವ್‌
ಕೋವಿಡ್ ಬಳಿಕ ಚೀನಾದಲ್ಲಿ ಕೋಲಾಹಲ ಸೃಷ್ಟಿಸಿರುವ ನ್ಯುಮೋನಿಯಾ ರೀತಿಯ ಸೋಂಕು (Pneumonia Outbreak) ಇದೀಗ ಭಾರತಕ್ಕೂ ಹರಡಿರುವುದು ಖಚಿತವಾಗಿದೆ. ದೆಹಲಿಯ ಏಮ್ಸ್ (AIIMS Delhi) ಆಸ್ಪತ್ರೆಯಲ್ಲಿ ಇದರ 7 ಪ್ರಕರಣ ಪತ್ತೆಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ರಾಜ್ಯದಲ್ಲಿ ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ
ರಾಜ್ಯದಲ್ಲಿ ಹಳೇ ಪಿಂಚಣಿ ಪದ್ಧತಿಯನ್ನೇ (Old Pension Scheme) ಮರು ಜಾರಿಗೆ ಆಗ್ರಹಿಸುತ್ತಿರುವ ಸರ್ಕಾರಿ ನೌಕರರಿಗೆ ಈ ಬಾರಿ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌ ಸಿಗಲಿದೆಯೇ? ಹೌದು ಎನ್ನುತ್ತಾರೆ ಸಚಿವ ಕೃಷ್ಣ ಭೈರೇಗೌಡ. ಈ ಸಂಬಂಧ ಇರುವ ಸಮಿತಿಯನ್ನು 10 ದಿನದೊಳಗೆ ಪುನಾರಚನೆ ಮಾಡುವುದಾಗಿ ಅವರು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. 2000 ರೂ. ನೋಟು ಬದಲಾವಣೆ ದಂಧೆ; ವಿಸ್ತಾರ ನ್ಯೂಸ್‌ನಲ್ಲಿ ಬಯಲು
2000 ರೂ. ನೋಟುಗಳನ್ನು ಬದಲಾಯಿಸಲು ಜನ ಸಾಮಾನ್ಯರಿಗೆ ಇನ್ನೂ ಅವಕಾಶವಿದೆ. ಹೀಗಾಗಿ ಜನಸಾಮಾನ್ಯರನ್ನು ಬಳಸಿಕೊಂಡು ವಿನಿಮಯ ಮಾಡುವ ದಂಧೆಯೊಂದು ಹುಟ್ಟಿಕೊಂಡಿದೆ. ಇದನ್ನು ವಿಸ್ತಾರ ನ್ಯೂಸ್‌ ಬಯಲಿಗೆಳೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.ಇನ್ನು ಮುಂದೆ ಮೋದಿಯನ್ನೂ ಯಾರೂ ಹೀಗೆ ಕರೆಯುವಂತಿಲ್ಲ!
ತಮ್ಮನ್ನು ಮೋದಿಜಿ(modiji), ಆದರಣೀಯ ಮೋದಿಜಿ(aadarniya modiji), ಶ್ರೀ ಮೋದಿಜಿ(Shri Modiji) ಎಂದು ಕರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆ ತಿಳಿಸಿದ್ದಾರೆ. ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಾರ್ಟಿಯ (Bharatiya Janata Party) ಸಂಸದೀಯ ಸಭೆಯಲ್ಲಿ ಅವರು ಈ ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಮತ್ತೆ ನಂದಿನಿ ಹಾಲಿನ ದರ ಏರಿಕೆ? ಯಾವಾಗ? ಎಷ್ಟು ಮಾಡಬಹುದು?
ಕಳೆದ ಆಗಸ್ಟ್‌ನಲ್ಲಿ ನಂದಿನಿ ಹಾಲಿನ (Nandini Milk) ಹಾಗೂ ಮೊಸರಿನ ದರ ಸೇರಿದಂತೆ ಇನ್ನಿತರ ಉತ್ಪನ್ನಗಳ ದರವನ್ನು ಏರಿಸಲಾಗಿತ್ತು. ಇದು ಜನಸಾಮಾನ್ಯರ ಜೇಬಿಗೆ ಹೊರೆಯಾಗಿ ಪರಿಣಮಿಸಿತ್ತು. ಇದೀಗ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಕೆಎಂಎಫ್‌ (KMF) ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ, ಇದಕ್ಕೆ ಸರ್ಕಾರ ಒಪ್ಪುತ್ತದೆಯೇ? ಒಪ್ಪಿದರೂ ಎಷ್ಟು ರೂಪಾಯಿ ಏರಿಕೆ ಆಗಲಿದೆ ಎಂಬುದು ಮಾತ್ರ ಇನ್ನೂ ನಿರ್ಧಾರ ಆಗಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಲಕ್ಷ ಕೋಟಿ ರೂ. ತೆರಿಗೆ ವಂಚಿಸಿ ಚೀನಾಗೆ ಸಾಗಿಸಿದ ವಿವೊ ಕಂಪನಿ! ಹೇಗೆ ಸಾಧ್ಯವಾಯ್ತು?
2014 ಮತ್ತು 2021ರ ನಡುವೆ ಭಾರತದಿಂದ ಹೊರಗೆ ₹1 ಲಕ್ಷ ಕೋಟಿ ಹಣವನ್ನು ರವಾನೆ ಮಾಡಲು ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ED probe) ಚೀನಾದ ಫೋನ್ ತಯಾರಕ ವಿವೋ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ನಾಳೆಯಿಂದ ಅಂಡರ್‌ 19 ಏಷ್ಯಾ ಕಪ್‌; ಭಾರತ-ಪಾಕ್‌ ಮುಖಾಮುಖಿ ಯಾವಾಗ?
ದುಬೈ (Dubai) ಆತಿಥ್ಯನಲ್ಲಿ ನಡೆಯುವ ಪುರುಷರ ಅಂಡರ್​-19 ಏಷ್ಯಾಕಪ್ (ACC Men’s U19 Asia Cup 2023) ಟೂರ್ನಿಯ ಪಂದ್ಯಾವಳಿಗಳು ಡಿಸೆಂಬರ್ 8 ರಿಂದ ಆರಂಭಗೊಳ್ಳಲಿದೆ. ಟೂರ್ನಿ ಡಿಸೆಂಬರ್ 17 ರವರೆಗೆ ನಡೆಯಲಿದೆ. ಡಿ.8ರ ಉದ್ಘಾಟನ ಪಂದ್ಯದಲ್ಲಿ ಭಾರತ ಅಫಘಾನಿಸ್ತಾನ​ ವಿರುದ್ಧ ಅಭಿಯಾನ ಆರಂಭಿಸಲಿದೆ. ಪಾಕಿಸ್ತಾನ ವಿರುದ್ಧ ಭಾರತ ಡಿ.10 ರಂದು ಕಣಕಿಳಿಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಕಿಂಗ್‌ ಕೊಹ್ಲಿ ಕೈಬಿಟ್ಟ ಬಿಸಿಸಿಐ; ಟಿ20 ವಿಶ್ವಕಪ್‌ಗೆ ನೂತನ ಆಟಗಾರನ ಆಯ್ಕೆ

9. ನೋವು ವಿವಾರಕ ಮೆಫ್ಟಾಲ್‌ ಮಾತ್ರೆ ಸೇವನೆಯಿಂದ ಗಂಭೀರ ಪರಿಣಾಮ!
ಮೆಫ್ಟಾಲ್ (Meftal) ಬ್ರ್ಯಾಂಡ್‌ ಹೆಸರಿನಲ್ಲಿ ಜನಪ್ರಿಯವಾಗಿ ಮಾರಾಟವಾಗುವ, ಸಾಮಾನ್ಯವಾಗಿ ಬಳಸುವ ನೋವು ನಿವಾರಕ (Painkiller) ಔಷಧ, ಮಾತ್ರೆಯ ಬಳಕೆಯ ಬಗ್ಗೆ ಇಂಡಿಯನ್ ಫಾರ್ಮಾಕೊಪೊಯಿಯಾ ಕಮಿಷನ್ (Indian Pharmacopoeia Commission-IPC) ಎಚ್ಚರಿಕೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಗಂಡನ ಮೇಲಿನ ಸಿಟ್ಟಿಗೆ ಫೇಕ್‌ ಬಾಂಬ್‌ ಇಟ್ಟಳು! ಇದರ ಹಿಂದಿತ್ತು love ಕಹಾನಿ
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಇರದೇ ಅದು ಸೇಡಾಗಿ ಮುಂದುವರಿದ ಪರಿಣಾಮ ಠಾಣೆ ಮೆಟ್ಟಿಲೇರುವಂತೆ ಮಾಡಿದೆ. ಮೊಬೈಲ್‌ ಹೊಡೆದು ಹಾಕಿದ ಸಿಟ್ಟಿಗೆ ಪತ್ನಿಯೊಬ್ಬಳು ಪ್ರಿಯಕರನ ಮಾತು ಕೇಳಿ ಆರ್‌ಡಿಎಕ್ಸ್‌ ಬಾಂಬ್‌ ಸ್ಫೋಟಿಸುವುದಾಗಿ (Bomb Threat) ಸಂದೇಶ ರವಾನೆ ಮಾಡಿ ಜೈಲುಪಾಲಾಗಿದ್ದಾಳೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕ್ರಿಕೆಟ್

ಸಚಿನ್ ಅವರ ಈ ದಾಖಲೆ ಮುರಿಯಲು ವಿರಾಟ್​ ಕೊಹ್ಲಿಗೆ ಅಸಾಧ್ಯ; ಲಾರಾ ವಿಶ್ವಾಸ ​

ಸಚಿನ್​ ಅವರ 100ನೇ ಶತಕದ(Tendulkar’s 100 centuries) ದಾಖಲೆಯನ್ನು ಮುರಿಯಲು ವಿರಾಟ್​ ಕೊಹ್ಲಿ ಅಸಾಧ್ಯ ವೆಂದು ವಿಂಡೀಸ್​ ಮಾಜಿ ಆಟಗಾರ ಬ್ರಿಯಾನ್ ಲಾರಾ(Brian Lara) ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

sachin tendulkar virat kohli
Koo

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ಅವರು ಸಚಿನ್​ ತೆಂಡೂಲ್ಕರ್(Sachin Tendulkar)​ ಅವರ ಅದಷ್ಟೋ ವಿಶ್ವ ದಾಖಲೆಗಳನ್ನು ಮುರಿದಿದ್ದಾರೆ. ಇತ್ತೀಚೆಗ ಮುಕ್ತಾಯ ಕಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ ಅವರು ಸಚಿನ್​ ಅವರ ಏಕದಿನ ಕ್ರಿಕೆಟ್​ನ 49 ಶತಕದ ದಾಖಲೆಯನ್ನು ಮುರಿದಿದ್ದರು. ಆದರೆ ಸಚಿನ್​ ಅವರ ಈ ಒಂದು ದಾಖಲೆ ಮುರಿಯಲು ಅವರಿಗೆ ಅಸಾಧ್ಯ ಎಂದು ವಿಂಡೀಸ್​ ಮಾಜಿ ಆಟಗಾರ ಬ್ರಿಯಾನ್ ಲಾರಾ(Brian Lara) ಅಭಿಪ್ರಾಯಪಟ್ಟಿದ್ದಾರೆ.

ಸದ್ಯ 80 ಅಂತಾರಾಷ್ಟ್ರೀಯ ಶತಕ ಬಾರಿಸಿ ದ್ವಿತೀಯ ಸ್ಥಾನದಲ್ಲಿರುವ ಕೊಹ್ಲಿ ಅವರು ಸಚಿನ್​ ಅವರ 100ನೇ ಶತಕದ(Tendulkar’s 100 centuries) ದಾಖಲೆಯನ್ನು ಕೂಡ ಮುರಿಯಲಿದ್ದಾರೆ ಎಂಬ ಕುರಿತು ಈಗಾಗಲೇ ಚರ್ಚೆಗಳು ನಡೆಯುತ್ತಿದೆ. ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಲಾರಾ, ಇದು ಅಸಾಧ್ಯ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಲ್ಲದೆ ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

ವಯಸ್ಸು ನಿಲ್ಲದು

ಕೊಹ್ಲಿಗೆ ಈಗ 35 ವರ್ಷ. ಅವರಿಗೆ ಸಚಿನ್​ ಅವರ 100 ಶತಕದ ದಾಖಲೆ ಮುರಿಯಲು ಇನ್ನೂ 20 ಶತಕದ ಅಗತ್ಯವಿದೆ. ಮುಂದಿನ ವರ್ಷ ಟೀಮ್ ಇಂಡಿಯಾಕ್ಕೆ ಹೆಚ್ಚು ಏಕದಿನ ಸರಣಿಗಳು ಇಲ್ಲ. ಹೆಚ್ಚಾಗಿ ಟಿ20 ಸರಣಿಗಳೇ ಇವೆ. ಟಿ20ಯಲ್ಲಿ ವಿರಾಟ್ ಅವರ ಭವಿಷ್ಯದ ಬಗ್ಗೆ ಇನ್ನೂ ಗೊಂದಲಗಳಿವೆ. ಒಂದೊಮ್ಮೆ ಏಕದಿನ ಸರಣಿಗಳು ಇದ್ದರೂ, ಪ್ರತಿ ವರ್ಷ ಐದು ಶತಕಗಳನ್ನು ಗಳಿಸಬೇಕು. ಇದಕ್ಕೆ ನಾಲ್ಕು ವರ್ಷಗಳು ಬೇಕಾಗುತ್ತವೆ. ಆಗ ಕೊಹ್ಲಿಗೆ 39 ವರ್ಷವಾಗುತ್ತದೆ. ಇದು ತುಂಬಾ ಕಠಿಣ. ಹೀಹಾಗಿ ಕೊಹ್ಲಿ ಕನಿಷ್ಠ 90 ಸನಿಹಕ್ಕೆ ಶತಕದ ಸಂಖೆಯನ್ನು ಏರಿಸಬಹುದು” ಎಂದು ಲಾರ ಹೇಳಿದ್ದಾರೆ.

ಇದನ್ನೂ ಓದಿ ಕಿಂಗ್​ ಕೊಹ್ಲಿ ಕೈಬಿಟ್ಟ ಬಿಸಿಸಿಐ; ಟಿ20 ವಿಶ್ವಕಪ್​ಗೆ ನೂತನ ಆಟಗಾರನ ಆಯ್ಕೆ!

400 ರನ್​ ದಾಖಲೆ ಗಿಲ್​ ಮುರಿಯಬಹುದು

ಟೀಮ್​ ಇಂಡಿಯಾದ ಯುವ ಆಟಗಾರ ಶುಭಮನ್​ ಗಿಲ್​ ಅವರು ಈಗಾಗಕೇ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಅವರ ಕ್ರಿಕೆಟ್​ ಪ್ರದರ್ಶನಕ್ಕೆ ಲಾರಾ ಕೂಡ ಮನಸೋತಿದ್ದು, ತಮ್ಮ ಟೆಸ್ಟ್​ ಕ್ರಿಕೆಟ್​ನ 400 ರನ್​ಗಳ ವಿಶ್ವ ದಾಖಲೆಯನ್ನು ಗಿಲ್​ ಅವರಿಗೆ ಮಾತ್ರ ಮುರಿಯಲು ಸಾಧ್ಯವಿದೆ ಎಂದು ಭವಿಷ್ಯ ನುಡಿದ್ದಾರೆ.

“ಶುಭಮನ್ ಗಿಲ್ ಅವರು ಹೊಸ ಪೀಳಿಗೆಯ ಅತ್ಯಂತ ಪ್ರತಿಭಾವಂತ ಆಟಗಾರ. ನನ್ನ ಎರಡು ಪ್ರಮುಖ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಅವರಿಗಿದೆ. ಮುಂದಿನ ದಿನಗಳಲ್ಲಿ ಆತ ಕ್ರಿಕೆಟ್ ಲೋಕವನ್ನು ಸುದೀರ್ಘವಾಗಿ ಆಳುವುದರಲ್ಲಿ ಯಾವುದೇ ಅನುಮಾನ ಬೇಡ. ಜತೆಗೆ ಆತ ನನ್ನ ವೃತ್ತಿ ಜೀವನದ ಬಹುದೊಡ್ಡ ದಾಖಲೆಯನ್ನು ಮುರಿಯುತ್ತಾರೆ ಎಂಬ ಭರವಸೆ ನನಗಿದೆ. ಗಿಲ್ ಕೌಂಟಿ ಕ್ರಿಕೆಟ್ ಆಡಿದರೆ ನನ್ನ 501* ರನ್ ಮತ್ತು ಟೆಸ್ಟ್ ಕ್ರಿಕೆಡ್‌ನಲ್ಲಿ ನನ್ನ ವೈಯಕ್ತಿಕ 400 ರನ್ ಗಳನ್ನು ಮುರಿಯಬಲ್ಲರು” ಎಂದು ಲಾರಾ ಹೇಳಿದ್ದಾರೆ.

Continue Reading
Advertisement
Vistara News impact, Governmet to scrap 7 d rule of SCSP and TSP act
ಕರ್ನಾಟಕ5 hours ago

ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ‌ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ

WPL Auction 2024
ಕ್ರಿಕೆಟ್5 hours ago

WPL Auction 2024: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ಕೇವಲ 2 ದಿನ ಬಾಕಿ

Supreme Court will deliver judgment on Dece 11 about J and K Special Status scrap
ಕೋರ್ಟ್6 hours ago

ಆರ್ಟಿಕಲ್ 370 ರದ್ದು ಸಿಂಧುವೇ?; ಡಿ.11ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು

Pro Kabaddi
ಕ್ರೀಡೆ6 hours ago

Pro Kabaddi: ಗುಜರಾತ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಪಾಟ್ನಾ

Is 500 note with star symbol is fake, What Fact Check says?
Fact Check7 hours ago

Fact Check: ಸ್ಟಾರ್ ಗುರುತಿರುವ 500 ರೂಪಾಯಿ ನೋಟು ನಕಲಿಯೇ?

kavya maran
ಐಪಿಎಲ್ 20237 hours ago

ಸ್ಟಾರ್​​ ಆಟಗಾರನ ಖರೀದಿಗೆ ಸ್ಕೆಚ್​ ಹಾಕಿದ ಸಖತ್ ಕ್ಯೂಟ್ ಓನರ್ ಕಾವ್ಯ ಮಾರನ್

Inauguration of Hulleshwar Jnana vikas Center at Yakshi Village
ಶಿವಮೊಗ್ಗ7 hours ago

Shivamogga News: ಯಕ್ಷಿ ಗ್ರಾಮದಲ್ಲಿ ಹುಲ್ಲೇಶ್ವರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

14 Medium and Large Irrigation Projects Completed in Kalyana Karnataka says Minister Ramalinga reddy
ಕರ್ನಾಟಕ7 hours ago

ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಮಧ್ಯಮ, ಬೃಹತ್ ನೀರಾವರಿ ಯೋಜನೆಗಳು ಪೂರ್ಣ: ರಾಮಲಿಂಗಾರೆಡ್ಡಿ

More than a hundred people from Kiravatti have joined the Congress party
ಉತ್ತರ ಕನ್ನಡ7 hours ago

Uttara Kannada News: ಕಿರವತ್ತಿ ಭಾಗದ 100ಕ್ಕೂ ಹೆಚ್ಚು ಜನ ಕಾಂಗ್ರೆಸ್‌ಗೆ ಸೇರ್ಪಡೆ

Vistara Top 10 News 7-12
ಕರ್ನಾಟಕ8 hours ago

VISTARA TOP 10 NEWS : ಮೌಲ್ವಿ ಐಸಿಸ್‌ ಸಂಪರ್ಕ ನಿಜವೇ? ಹಳೆಪಿಂಚಣಿ ಮರುಜಾರಿ ಖಚಿತವೇ? ಇತರ ಪ್ರಮುಖ ಸುದ್ದಿ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ10 hours ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ11 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ17 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ24 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ1 day ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ2 days ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ2 days ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ2 days ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ2 days ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ2 days ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌