Site icon Vistara News

Neymar: ಮಗು ಜನಿಸಿದ ಬೆನ್ನಲ್ಲೇ ಗೆಳತಿ ಜತೆ ಫುಟ್ಬಾಲ್‌ ಆಟಗಾರ ನೇಮರ್ ಬ್ರೇಕಪ್‌; ಕಾರಣ?

Neymar With Girlfriend

Footballer Neymar Breaks Up With Girlfriend Bruna Biancardi

ಬ್ರೆಸಿಲಿಯಾ: ಬ್ರೆಜಿಲ್​​ ತಂಡದ ಸ್ಟಾರ್​ ಫುಟ್ಬಾಲ್​ ಆಟಗಾರ ನೇಮರ್ (Neymar) ಅವರು ‌ತಮ್ಮ ಗರ್ಲ್‌ಫ್ರೆಂಡ್‌ ಬ್ರೂನಾ ಬಿಯಾಂಕಾರ್ಡಿ (Bruna Biancardi‌) ಜತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ. ಬ್ರೆಜಿಲ್‌ ರೂಪದರ್ಶಿ ಬ್ರೂನಾ ಬಿಯಾಂಕಾರ್ಡಿ ಅವರು ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನೇಮರ್‌ ಹಾಗೂ ಬ್ರೂನಾ ಬಿಯಾಂಕಾರ್ಡಿ ಪ್ರೀತಿಗೆ ಸಾಕ್ಷಿಯಾಗಿ ಪುತ್ರಿ ಜನಿಸಿದ್ದಳು. ಆಕೆಗೆ ಮಾವೀ ಎಂದು ಹೆಸರಿಡಲಾಗಿತ್ತು. ಮಗು ಜನಿಸಿದ ಖುಷಿಯ ಬೆನ್ನಲ್ಲೇ ನೇಮರ್‌ ಅವರು ಬ್ರೂನಾ ಬಿಯಾಂಕಾರ್ಡಿ ಜತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನೇಮರ್‌ ಜತೆಗಿನ ಬ್ರೇಕಪ್‌ ಕುರಿತು ಬ್ರೂನಾ ಬಿಯಾಂಕಾರ್ಡಿ ಮಾಹಿತಿ ನೀಡಿದ್ದಾರೆ. “ಇದು ನಮ್ಮ ಖಾಸಗಿ ವಿಷಯ. ಆದರೂ, ನನ್ನ ಹಾಗೂ ನೇಮರ್‌ ಜತೆಗಿನ ಸಂಬಂಧದ ಕುರಿತು ಟ್ರೋಲ್‌ಗಳು, ಜೋಕ್‌ಗಳು ಹರಿದಾಡುತ್ತಿವೆ. ಇದು ಔಚಿತ್ಯ ಎಂದು ನನಗೆ ಅನಿಸಿಲ್ಲ. ನಾನು ಹಾಗೂ ನೇಮರ್‌ ಪ್ರೀತಿಗಾಗಿ ಮಾವೀ ಜನಿಸಿದ್ದಾಳೆ. ನಾವಿಬ್ಬರೂ ಆಕೆಯ ಪೋಷಕರು. ಆದರೀಗ ನಾನು ಯಾರ ಜತೆಗೂ ಸಂಬಂಧ, ಪ್ರೀತಿ ಹೊಂದಿಲ್ಲ. ದಯಮಾಡಿ ಯಾವುದೇ ವದಂತಿಗಳೊಂದಿಗೆ ನನ್ನನ್ನು ತಳಕು ಹಾಕಬೇಡಿ” ಎಂದು ಮನವಿ ಮಾಡಿದ್ದಾರೆ.

ಮಗಳ ಜತೆ ಬ್ರೂನಾ

ಬ್ರೇಕಪ್‌ಗೆ ಕಾರಣ ಏನು?

ಬ್ರೆಜಿಲ್‌ನ ಗೋಲ್ಡನ್‌ ಬಾಯ್‌ ಎಂದೇ ಖ್ಯಾತಿಯಾಗಿರುವ ನೇಮರ್‌ ಅವರ ಸಂಬಂಧಗಳ ಕುರಿತು ಇತ್ತೀಚೆಗೆ ಭಾರಿ ಚರ್ಚೆಗಳು ನಡೆದಿದ್ದವು. ಇತ್ತೀಚೆಗಷ್ಟೇ ಒಬ್ಬ ಮಾಡೆಲ್‌ಗೆ ತನ್ನ ಖಾಸಗಿ ಫೋಟೊಗಳನ್ನು ಕಳುಹಿಸು ಎಂಬುದಾಗಿ ನೇಮರ್‌ ಚಾಟ್‌ ಮಾಡಿದ್ದ ಸ್ಕ್ರೀನ್‌ಶಾಟ್‌ಗಳು ಭಾರಿ ವೈರಲ್‌ ಆಗಿದ್ದವು. ಅಲ್ಲದೆ, ಇಬ್ಬರು ಮಹಿಳೆಯರ ಜತೆ ನೇಮರ್‌ ಇರುವ ಫೋಟೊಗಳು ಕೂಡ ಕೆಲ ತಿಂಗಳ ಹಿಂದೆ ಹರಿದಾಡಿದ್ದವು. ನೇಮರ್‌ ಹಲವು ಮಾಡೆಲ್‌ಗಳ ಜತೆ ಸಂಬಂಧ ಹೊಂದಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಇದೇ ಕಾರಣಕ್ಕೆ ಇಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Neymar Fined: ಪರಿಸರ ನಿಯಮ ಉಲ್ಲಂಘನೆ; ನೇಮರ್​ಗೆ ಭಾರಿ ದಂಡದ ಬಿಸಿ

ಕೆಲ ವಾರಗಳ ಹಿಂದೆ ಮಂಡಿ ಶಸ್ತ್ರಚಿಕಿತ್ಸಗೆ ಒಳಗಾಗಿರುವ ನೇಮರ್‌, ಇನ್ನೂ ಕೆಲ ತಿಂಗಳು ಫುಟ್ಬಾಲ್‌ ಆಡುವುದಿಲ್ಲ. ಕೆಲ ತಿಂಗಳ ಹಿಂದಷ್ಟೇ ನೇಮರ್‌ ಫ್ರಾನ್ಸ್​ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್(Paris Saint-Germain Football Club)​ ತೊರೆದು ಸೌದಿ ಅರೇಬಿಯಾದ ಅಲ್‌-ಹಿಲಾಲ್‌ ಫುಟ್ಬಾಲ್‌ ಕ್ಲಬ್‌ಗೆ(Al Hilal Saudi Club) ಸೇರ್ಪಡೆಗೊಂಡಿದ್ದರು. 100 ಮಿಲಿಯನ್ ಯುರೋ (ಸುಮಾರು 1455ಕೋಟಿ ರೂ.) ಮೊತ್ತಕ್ಕೆ ಎರಡು ವರ್ಷಗಳ ಕಾಲ ನೇಯ್ಮರ್‌​ ಈ ಕ್ಲಬ್ ಆಡಲು ಒಪ್ಪಂದ ಮಾಡಿಕೊಂಡಿದ್ದರು. 2017 ರಲ್ಲಿ ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಮರ್ ಅವರನ್ನು ಟ್ರಾನ್ಸ್​ಫರ್ ಆಯ್ಕೆಯ ಮೂಲಕ ಪಿಎಸ್​ಜಿ ತಂಡ ಖರೀದಿಸಿತ್ತು. 6 ವರ್ಷಗಳ ಕಾಲ ಪಿಎಸ್​ಜಿ ತಂಡದ ಪರ ಆಡಿದ್ದ ನೇಮರ್, 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ಬಾರ್ಸಿಲೋನಾ(FC Barcelona) ಪರ 186 ಪಂದ್ಯಗಳಲ್ಲಿ 105 ಗೋಲುಗಳಿಸಿದ್ದರು.

Exit mobile version