Site icon Vistara News

Formula 2: ಭಾರತದ ಯುವ ರೇಸರ್​ ಕುಶ್‌ ಮೈನಿಗೆ ಮೂರನೇ ಸ್ಥಾನ

Formula 2: Third place for India's Kush Maini

Formula 2: Third place for India's Kush Maini

ಮೆಲ್ಬೋರ್ನ್​​: ಇಲ್ಲಿ ನಡೆದ ಫಾರ್ಮುಲಾ 2(formula 2) ರೇಸ್‌ನಲ್ಲಿ ಭಾರತದ ಯುವ ಚಾಲಕ ಕುಶ್‌ ಮೈನಿ(kush maini) ಅವರು ಮೂರನೇ ಸ್ಥಾನ ಪಡೆದರು. ಕ್ಯಾಂಪಸ್‌ ರೇಸಿಂಗ್‌ ತಂಡವನ್ನು ಪ್ರತಿನಿಧಿಸಿದ ಅವರು ಇದೇ ಮೊದಲ ಬಾರಿ ಫಾರ್ಮುಲಾ 2 ರೇಸ್‌ನಲ್ಲಿ ‘ಪೋಡಿಯಂ ಫಿನಿಶ್​’ ಮಾಡಿದ ಸಾಧನೆ ಮಾಡಿದರು. ಎಂಪಿ ಮೋಟರ್‌ಸ್ಪೋರ್ಟ್‌ ತಂಡವನ್ನು ಪ್ರತಿನಿಧಿಸಿದ ಭಾರತದ ಜೆಹಾನ್‌ ದಾರೂವಾಲಾ 17ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಶನಿವಾರ ನಡೆದ ಈ ರೇಸ್​ನಲ್ಲಿ ಕುಶ್‌ ಮೈನಿ ಗ್ರಿಡ್‌ನಲ್ಲಿ ಮೂರನೆಯವರಾಗಿ ಸ್ಪರ್ಧೆ ಆರಂಭಿಸಿದರು. ಹಲವು ಲ್ಯಾಪ್‌ಗಳವರೆಗೆ ಇದೇ ಸ್ಥಾನದಲ್ಲಿ ಮುಂದುವರಿದಿದ್ದ ಅವರನ್ನು ಡಿಎಎಂಎಸ್‌ ತಂಡದ ಆರ್ಥರ್‌ ಲೆಕ್ಲರ್ಕ್‌ ಅವರು ಹಿಂದಿಕ್ಕಿದರು. ಆದರೆ ಅಂತಿಮ ಹಂತದ ಕೆಲವು ಲ್ಯಾಪ್‌ಗಳ ರೇಸ್‌ ಬಾಕಿಯಿರುವಾಗ ವೇಗದ ರೇಸ್​ ಮೂಲಕ ಮತ್ತೆ ಮೇಲುಗೈ ಸಾಧಿಸಿ ಮೂರನೇ ಸ್ಥಾನ ಪಡೆದರು.

ಇದನ್ನೂ ಓದಿ Moto GP : ಫೋರ್ಚುಗಲ್​ನಲ್ಲಿ ಭಾನುವಾರ ಮೋಟೊ ಜಿಪಿ ಮೊದಲ ಸುತ್ತಿನ ಫೈನಲ್​ ರೇಸ್​

ಮೂರನೇ ಸ್ಥಾನ ಪಡೆದ ಬಳಿಕ ಮಾತನಾಡಿದ ಕುಶ್‌ ಮೈನಿ ಈ ಹಿಂದೆ ಹಲವು ಸಲ ಫಾರ್ಮುಲಾ 2 ರೇಸ್‌ನಲ್ಲಿ ಪೋಡಿಯಂ ಫಿನಿಶ್​ನ​ ಸನಿಹ ಬಂದಿದ್ದರೂ ಇದನ್ನು ಫಿನಿಶ್​ ಮಾಡುವಲ್ಲಿ ವಿಫಲನಾಗಿದ್ದೆ ಆದರೆ ಈ ಬಾರಿ ಈ ಕೊರಗನ್ನು ನೀಗಿಸಿದ್ದೇನೆ. ಈ ಸಾಧನೆ ಮಾಡಿರುವುದು ಸಂತಸ ತಂದಿದೆ. ಈ ಋತುವಿನಲ್ಲಿ ಇನ್ನೂ ಹಲವು ರೇಸ್‌ಗಳು ಇರುವುದರಿಂದ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಬಹು ಮುಖ್ಯ ಎಂದು ಹೇಳಿದರು.

ಈ ರೇಸ್​ನಲ್ಲಿ ಎಂಪಿ ಮೋಟರ್‌ಸ್ಪೋರ್ಟ್‌ ತಂಡದ ಡೆನಿಸ್‌ ಹಾಗೆರ್‌ ಮತ್ತು ಹೈಟೆಕ್‌ ಪಲ್ಸ್‌ ಎಯ್ಟ್‌ ತಂಡದ ಜಾಕ್‌ ಕ್ರಾಫರ್ಡ್‌ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದುಕೊಂಡರು.

Exit mobile version