Site icon Vistara News

French Open 2022 | ಟೈ ಬ್ರೇಕ್‌ ಮಾಡಿ ನಡಾಲ್‌ ಗೆಲುವು!

French Open 2022

French Open 2022 : ‌ಫ್ರೆಂಚ್‌ ಓಪನ್‌ 2022ರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ರಫಾಲ್‌ ನಡಾಲ್‌ ಗೆಲುವು ಸಾಧಿಸಿ ಚಾಂಪಿಯನ್‌ ಟ್ರೋಫಿಯತ್ತ ಸಮೀಪಿಸಿದ್ದಾರೆ. ಕಿಂಗ್‌ ಆಫ್‌ ಕ್ಲೇ ಕೋರ್ಟ್‌ ಎಂದೆ ಹೆಸರಾದ ನಡಾಲ್ ಈ ಪಂದ್ಯವನ್ನು ಗೆಲ್ಲುವ ಮೂಲಕ್‌ ʼಕಿಂಗ್‌ʼ ಪಟ್ಟವನ್ನು ಉಳಿಸಿಕೊಂಡಿದ್ದಾರೆ.‌

ಇಂದಿನ ಪಂದ್ಯ ನಿಜಕ್ಕೂ ಕುರ್ಚಿಯ ತುದಿಯಲ್ಲಿ ಕುಳಿತು ಉಗುರು ಕಡಿಯುವಂತೆ ಮಾಡಿತ್ತು.

ಒಂದೆಡೆ 13 ಬಾರಿ ಚಾಂಪಿಯನ್‌ ಆಗಿರುವ ನಡಾಲ್.‌ ಮತ್ತೊಂದೆಡೆ ಡಿಫೆಂಡಿಂಗ್‌ ಚಾಂಪಿಯನ್‌ ಜೊಕೊವಿಕ್. ಇಬ್ಬರ ನಡುವಿನ ಪಂದ್ಯ ನಿರೀಕ್ಷೆಯಂತೆ ರೋಚಕವಾಗಿತ್ತು. ಒಟ್ಟು 58 ಬಾರಿ ಈ ಎರಡೂ ದಿಗ್ಗಜರು ಮುಖಾಮುಖಿಯಾಗಿದ್ದಾರೆ. ಜೊಕೊವಿಕ್‌ ಹಾಗೂ ನಡಾಲ್‌ ಈವರೆಗೆ ಪಂದ್ಯಗಳಲ್ಲಿ ಜೊಕೊವಿಕ್‌ 30-28 ಅಂತರದಿಂದ ನಡಾಲ್‌ ವಿರುದ್ಧ ಲೀಡ್‌ನಲ್ಲಿದ್ದಾರೆ. ಆದರೆ ಕ್ಲೇ ಕೋರ್ಟ್‌ನಲ್ಲಿ ಆಡಿದ 27 ಪಂದ್ಯಗಳಲ್ಲಿ 19 ಪಂದ್ಯಗಳನ್ನು ನಡಾಲ್‌ ಗೆದ್ದಿದ್ದಾರೆ. ಹಾಗಾದರೆ ಇಬ್ಬರ ನಡುವಿನ ಪೈಪೋಟಿ ಈ ಬಾರಿ ಏನಾಗಲಿದೆ? ಎಂಬ ಕುತೂಹಲವೇ ಪಂದ್ಯವನ್ನು ನೋಡುವಂತೆ ಮಾಡಿತ್ತು.

ಈ ಪಂದ್ಯವನ್ನು ಗೆದ್ದ ರಫಾಲ್‌ ನಡಾಲ್ ಫ್ರೆಂಚ್‌ ಓಪನ್‌ 2022 ಚಾಂಪಿಯನ್‌ಶಿಪ್‌ ಪಟ್ಟಕ್ಕೇರಲು ಹತ್ತಿರವಾಗಿದ್ದಾರೆ.

ಮ್ಯಾಚ್‌ ವಿವರ:

ಸೆಟ್‌ 1: ನಡಾಲ್‌ ಬಹಳ ಚಾಣಾಕ್ಷ್ಯದಿಂದ ಆಟವನ್ನಾಡಿ ಮೊದಲ ಸೆಟ್‌ನಲ್ಲಿ 6-2 ಅಂತರದ ಭರ್ಜರಿ ಗೆಲುವು ಸಾಧಿಸಿದರು.

ಸೆಟ್‌ 2: ಎರಡನೇ ಸೆಟ್‌ನಲ್ಲಿ ಇಬ್ಬರ ನಡುವಿನ ಆಟ ಬಿಗುವಾಗಿತ್ತು. ಜೊಕೊವಿಕ್‌ ಹಂತಹಂತವಾಗಿ ನಡಾಲ್‌ ಮೇಲೆ ಒತ್ತಡವನ್ನು ಹೇರುತ್ತಿದ್ದರು. ನಡಾಲ್‌ ಆರಂಭದಲ್ಲಿ ಒಳ್ಳೆಯ ಆಟವನ್ನಾಡಿದರು. ಇಬ್ಬರ ನಡುವಿನ ಆಟ ರೋಚಕವಾಗಿ ಸಾಗುತ್ತಿತ್ತು. ಆದರೆ, ಅಂತಿಮ ಹತ್ತನೇ ಆಟದಲ್ಲಿ ಜೊಕೊವಿಕ್‌ ಬ್ರೇಕ್‌ ಪಾಯಿಂಟ್‌ ಗಳಿಸಿ 6-4 ಸ್ಕೋರ್‌ನ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ ಜೊಕೊವಿಕ್‌ ತಮ್ಮದಾಗಿಸಿಕೊಂಡರು.

ಈಗ ಸ್ಕೋರ್‌ ಸಮವಾಗಿತ್ತು. ಇಬ್ಬರೂ ಒಂದೊಂದು ಸೆಟ್‌ ಗೆದ್ದರು.

ಸೆಟ್‌ 3: ಮೂರನೇ ಸೆಟ್‌ನಲ್ಲಿ ನಡಾಲ್‌ ಆತ್ಮವಿಶ್ವಾಸದಿಂದ ಶುರು ಮಾಡಿದ್ದರು. ನಡಾಲ್‌ ಅವರ ಆಟದ ರಭಸಕ್ಕೆ ಮೂರನೇ ಸೆಟ್‌ ಗೆಲ್ಲುವುದು ತಡವಾಗಲಿಲ್ಲ. ಅತಿ ವೇಗದಲ್ಲಿ ಸ್ಕೋರ್‌ ಮಾಡಿ 6-2 ಅಂತರದಲ್ಲಿ ಮೂರನೇ ಸೆಟ್‌ ಗೆದ್ದರು.

ನಡಾಲ್ 2-1 ಪಂದ್ಯದಲ್ಲಿ ಲೀಡ್ ಮಾಡಿದ್ದರು.

ಸೆಟ್‌ 4: ಸತತ ಮೂರು ಸೆಟ್‌ನಲ್ಲಿ ಜೊವಿಕ್‌ ಮಾಡಿದ ಮೊದಲ ಸರ್ವ್‌ ಸೋತಿದ್ದರು. ಆದರೆ ಈ ಬಾರಿ ಸರ್ವ್‌ನಲ್ಲಿ ಸ್ಕೋರ್‌ ಮಾಡಿ 1-0 ಅಂಕ ಗಳಿಸಿದರು. ಈ ಸೆಟ್‌ನಲ್ಲಿ ನಡಾಲ್‌ ಅವರ ಆಟ ಸಪ್ಪೆಯಾಯಿತು. ಮ್ಯಾಚ್‌ ಜೊಕೊವಿಕ್‌ ಕಡೆ ತಿರುಗಿತ್ತು. ಜೊಕೊವಿಕ್‌ ತಮ್ಮ ಡ್ರಾಪ್‌ ಶಾಟ್‌ನಿಂದ ಕಮಾಲ್‌ ಮಾಡಿದರು. ಆದರೆ ಆಟ ರೋಚಕವಾಗಿ ಸಾಗಿತು. ನಡಾಲ್‌ ಹಾಗೂ ಜೊಕೊವಿಕ್‌ ನಡುವೆ ನೆಕ್‌ ಟು ನೆಕ್‌ ಫೈಟ್‌ ಕುತೂಹಲ ಹೆಚ್ಚಿಸಿತು. ವಾಹ್!‌ ಎನ್ನಿಸುವಂತೆ ಮಾಡಿದ್ದು ನಡಾಲ್‌ ಅವರ ಕಮ್‌ಬ್ಯಾಕ್‌. ಈ ರೀತಿಯ ಕಮ್‌ಬ್ಯಾಕ್‌ಗೆ ನಡಾಲ್‌ ಹೆಸರುವಾಸಿ. ಕೈತಪ್ಪಿ ಹೋದ ಪಂದ್ಯವನ್ನು 5-5 ಸ್ಕೋರ್‌ ಮಾಡುವ ಮೂಲಕ ಟೈ ಬ್ರೇಕರ್‌ ಹಂತಕ್ಕೆ ತಂದರು.

ಟೈ ಬ್ರೇಕರ್:‌ ಟೈ ಬ್ರೇಕರ್‌ ಆಟದಲ್ಲಿ ನಡಾಲ್‌ ಗೆಲ್ಲುವ ಜೋಶ್‌ನಿಂದ ಆಡಿದರು. ಅದಕ್ಕೆ ಸರಿಯಾಗಿ ಜೊಕೊವಿಕ್‌ ಕೂಡ ಪೈಪೋಟಿ ನೀಡಿದ್ದರು. ಆದರೆ ಅಂತಿಮದಲ್ಲಿ ನಡಾಲ್‌ ಟೈ ಬ್ರೇಕ್‌ ಮಾಡಿ ಜಯ ಸಾಧಿಸಿದರು.

ಈವರೆಗೆ ಇಬ್ಬರೂ ಆಟಗಾರರು ಎಟಿಪಿ ಚಾಂಪಿಯನ್‌ಶಿಪ್‌ ಗೆದಿರುವ ಪಟ್ಟಿ:

ನಡಾಲ್ಜೊಕೊವಿಕ್
ಒಟ್ಟು ಗೆಲುವು9187
ಗ್ರಾಂಡ್‌ ಸ್ಲಾಮ್2120
‌ಮಾಸ್ಟರ್ಸ್05
ಮಾಸ್ಟರ್ಸ್‌ 10003638
ಎಟಿಪಿ 5002314
ಎಟಿಪಿ 2501010

ಇದನ್ನೂ ಓದಿ: French Open 2022 | ಇಬ್ಬರು ಬಲಿಷ್ಠ ಆಟಗಾರರ ನಡುವೆ ಸೆಣೆಸಾಟ! ನಡಾಲ್‌-ಜಾಕೋ ನಡುವೆ ಗೆಲ್ಲೋರ‍್ಯಾರು?

Exit mobile version