Site icon Vistara News

French Open 2023: ಕನಿಷ್ಠ 20 ವರ್ಷ ದುಡಿದರೂ ಫ್ರೆಂಚ್​ ಓಪನ್​ ಪ್ರಶಸ್ತಿ ಮೊತ್ತ ಗಳಿಸಲು ಅಸಾಧ್ಯ!

french open 2023 prize money

ಪ್ಯಾರಿಸ್​: ವರ್ಷದ ದ್ವಿತೀಯ ಗ್ರ್ಯಾನ್ ಸ್ಲಾಮ್ ಫ್ರೆಂಚ್‌ ಓಪನ್‌ ಟೆನಿಸ್‌(French Open 2023) ಟೂರ್ನಿಗೆ ಭಾನುವಾರ ತರೆ ಬೀಳಲಿದೆ. ಇಂದು ನಡೆಯುವ ಪುರುಷರ ಸಿಂಗಲ್ಸ್​ ಫೈನಲ್​ ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಜೊಕೋವಿಕ್‌ (novak djokovic) ಮತ್ತು ಕ್ಯಾಸ್ಪರ್‌ ರೂಡ್‌(Casper Ruud) ಅವರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್​ ಫೈನಲ್​ನಲ್ಲಿ ಇಗಾ ಸ್ವಿಯಾಟೆಕ್(iga swiatek)​ ಅವರು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ. ಆದರೆ ಕುತೂಹಲಕಾರಿ ಸಂಗತಿ ಎಂದರೆ ಇಲ್ಲಿ ಗೆದ್ದವರಿಗೆ ಸಿಗುವ ಮೊತ್ತ ಕನಿಷ್ಠ ಪಕ್ಷ ನಾವು 20 ವರ್ಷ ದುಡಿದರೂ ಗಳಿಸಲು ಅಸಾಧ್ಯ. ಅದರಲ್ಲೂ ಮಧ್ಯಮ ವರ್ಗವದವರಂತೂ ಜೀವಿತಾವಧಿಯವರೆಗೆ ದುಡಿದರೂ ರನ್ನರ್​ ಅಪ್​ಗೆ ಸಿಗುವ ಪ್ರಶಸ್ತಿ ಮೊತ್ತವನ್ನು ಸಂಗ್ರಹಿಸಲು ಅಸಾಧ್ಯ ಎನ್ನಲಡ್ಡಿಯಿಲ್ಲ.

ಹೌದು, ಈ ಬಾರಿ ಫ್ರೆಂಚ್​ ಓಪನ್​ ಟೂರ್ನಿಯಲ್ಲಿ ಬಹುಮಾನ ಮೊತ್ತವನ್ನು ಸಂಘಟಕರು ಈ ಬಾರಿ ಹೆಚ್ಚಿಸಿದ್ದಾರೆ. ಅದರಂತೆ ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದ ವಿಜೇತರಿಗೆ ತಲಾ 20.60 ಕೋಟಿ ರೂ. ಸಿಗಲಿದೆ. ರನ್ನರ್​ ಅಪ್​ ಆದವರಿಗೆ 10.20 ಕೋಟಿ ಸಿಗಲಿದೆ. ಟೂರ್ನಿಯು ಒಟ್ಟು 444 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿರಲಿದೆ.

ಇದನ್ನೂ ಓದಿ French Open Final: ಚಾಂಪಿಯನ್ ಪಟ್ಟ ಉಳಿಸಿಕೊಂಡ ಸ್ವಿಯಾಟೆಕ್‌​

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಹುಮಾನ ಮೊತ್ತ ಶೇ 12.3 ಹೆಚ್ಚಳವಾಗಿದೆ. 2022ರ ಟೂರ್ನಿಯ ಸಿಂಗಲ್ಸ್‌ ವಿಭಾಗದ ಚಾಂಪಿಯನ್ನರು 19.69 ಕೋಟಿ ರೂ. ನಗದು ಬಹುಮಾನ ಪಡೆದುಕೊಂಡಿದ್ದರು. ಸಿಂಗಲ್ಸ್‌ ವಿಭಾಗದ ಒಟ್ಟು ಬಹುಮಾನ ಮೊತ್ತವನ್ನು ಕಳೆದ ಬಾರಿಗಿಂತ ಶೇ 9.1 ಹೆಚ್ಚಿಸಲಾಗಿದೆ. ಮೊದಲ ಮೂರು ಸುತ್ತುಗಳಲ್ಲಿ ಸೋಲು ಅನುಭವಿಸುವ ಆಟಗಾರರು ಪಡೆಯುವ ಮೊತ್ತ ಈ ವರ್ಷ ಶೇ 11 ರಿಂದ 13 ಏರಿಕೆಯಾಗಿದೆ. ಕಳೆದ ವರ್ಷದ ಟೂರ್ನಿಯಲ್ಲಿ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸೋತಿದ್ದ ಆಟಗಾರರು 55 ಲಕ್ಷ ನಗದು ಬಹುಮಾನ ಗಳಿಸಿದ್ದರು.

Exit mobile version